For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಸಕ್ಕರೆ ಸೇವನೆ ನಿಯಂತ್ರಣ ಮಾಡುವುದು ಹೇಗೆ?

|

ಮಕ್ಕಳು ಹಾಗೂ ಸಿಹಿಯನ್ನು ಬೇರ್ಪಡಿಸಲು ತುಂಬಾ ಕಷ್ಟ. ಯಾಕೆಂದರೆ ಮಕ್ಕಳು ಯಾವಾಗಲೂ ಇಷ್ಟಪಡುವುದು ಸಿಹಿಯನ್ನು. ಅವರಿಗೆ ಖಾರ, ಹುಳಿ ಅಥವಾ ಕಹಿಯು ಇಷ್ಟವಾಗುವುದಿಲ್ಲ. ಹೀಗಾಗಿ ಸಿಹಿಯಿರುವಂತಹ ಯಾವುದೇ ತಿಂಡಿಯಾದರೂ ಅವರು ಅದನ್ನು ಇಷ್ಟಪಡುವರು. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಾ ಅಥವಾ ಇಲ್ಲವಾ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ನಾಲಗೆಗೆ ಯಾವುದು ಸಿಹಿ ಎಂದು ಅನಿಸುವುದೋ ಅದನ್ನು ಅವರು ತಿನ್ನುವರು.

Childs Sugar Intake

ಹೀಗಾಗಿ ಪೋಷಕರಿಗೆ ಮಕ್ಕಳು ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಲು ತುಂಬಾ ಕಷ್ಟವಾಗುತ್ತದೆ. ಪ್ರತಿಯೊಂದು ತಿಂಡಿಯಲ್ಲಿ ಸಕ್ಕರೆ ಇದ್ದರೆ ಮಾತ್ರ ಆಗ ಮಗು ಅದನ್ನು ತಿನ್ನುತ್ತದೆ. ಕ್ಯಾಂಡಿ, ಚಾಕಲೇಟ್, ಐಸ್ ಕ್ರೀಮ್ ಇತ್ಯಾದಿಗಳು. ಬೆಳಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿ ಊಟದ ತನಕ ಪ್ರತಿಯೊಂದು ಸಿಹಿಯಾಗಿರಬೇಕು. ಆದರೆ ಇಂತಹ ಸಕ್ಕರೆ ಸೇವೆಯು ತುಂಬಾ ಹಾನಿಕಾರಕ. ಇದರಿಂದಾಗಿ ದಂತಕುಳಿ, ಬೊಜ್ಜು, ಅಧಿಕ ರಕ್ತದೊತ್ತಡ, ಯಕೃತ್ ಉಬ್ಬುವುದು ಮತ್ತು ಮಧುಮೇಹ ಕೂಡ ಬರಬಹುದು. ಆದರೆ ಮಕ್ಕಳಿಗೆ ಆರೋಗ್ಯಕಾರಿ ಆಹಾರ ನೀಡುವುದು ಅಷ್ಟು ಸುಲಭದ ಮಾತಲ್ಲ. ಚಾಕಲೇಟ್ ಬಿಟ್ಟು ತರಕಾರಿ ತಿನ್ನಿ ಎನ್ನಲು ಆಗದು. ಇದಕ್ಕಾಗಿ ಮಕ್ಕಳಿಗೆ ಸಕ್ಕರೆ ಅಂಶ ಹೆಚ್ಚು ತಿನ್ನದೆ ಇರುವಂತಹ ಯಾವುದಾದರೂ ಮಾರ್ಗವನ್ನು ಕಂಡುಕೊಳ್ಳಬೇಕು. ಮಕ್ಕಳಿಗೆ ತಿಳಿಯದೆ ಇರುವಂತೆ ಅವರ ಆಹಾರ ಕ್ರಮದಲ್ಲಿ ಸಕ್ಕರೆ ಸೇವನೆ ಕಡಿಮೆ ಮಾಡುವಂತಹ ಕೆಲವು ವಿಧಾನವನ್ನು ನಾವು ನಿಮಗೆ ಇಲ್ಲಿ ಹೇಳಿಕೊಡಲಿದ್ದೇವೆ.

ಕ್ರಿಯಾತ್ಮಕವಾಗಿ ಇರಬೇಕು

ಕ್ರಿಯಾತ್ಮಕವಾಗಿ ಇರಬೇಕು

ಆಹಾರವು ತುಂಬಾ ಪರಿಣಾಮ ಬೀರುವುದು. ಇದರಿಂದ ಚಾಕಲೇಟ್ ಸಿರಪ್ ಮತ್ತು ಹೆಚ್ಚುವರಿ ಸಿಹಿ ಹಾಕಿ ಕೊಡುವುದು ಮಾತ್ರ ಆಹಾರವನ್ನು ಆಕರ್ಷಕ ಮತ್ತು ರುಚಿಯಾಗಿಸದು. ಆಹಾರವನ್ನು ಮತ್ತಷ್ಟು ಸೆಳೆಯುವಂತೆ ಮಾಡಿ. ಕೇವಲ ತರಕಾರಿ ಮಾತ್ರ ಮಕ್ಕಳಿಗೆ ನೀಡಿದರೆ ಆಗ ಅವರಿಗೆ ಖಂಡಿತವಾಗಿಯೂ ಬೋರ್ ಆಗುವುದು. ಇದಕ್ಕಾಗಿ ನೀವು ಆಹಾರವನ್ನು ತುಂಬಾ ಆಕರ್ಷಕವಾಗಿಸಲು ಕೆಲವೊಂದು ತಂತ್ರಗಳನ್ನು ಅನುಸರಿಸಿಕೊಂಡು ಹೋಗಬೇಕು. ವಿವಿಧ ವಿನ್ಯಾಸಗಳು, ಇದರಲ್ಲಿ ನಕ್ಷತ್ರ ಮತ್ತು ಸ್ಮೈಲಿ ಬಳಸಿಕೊಳ್ಳಿ. ಬೇರೆ ಬೇರೆ ಖಾದ್ಯಗಳನ್ನು ಜತೆಯಾಗಿಸಿಕೊಂಡು ಅದು ಮಕ್ಕಳಿಗೆ ಇಷ್ಟವಾಗುವಂತೆ ಮಾಡಿ. ಬಣ್ಣ ಬಣ್ಣದ ತರಕಾರಿಗಳನ್ನು ಬಳಸಿಕೊಂಡು ಅದು ಮಕ್ಕಳು ಇಷ್ಟಪಡುವಂತೆ ಮಾಡಿ. ಇದರಲ್ಲಿ ಮುಖ್ಯವಾಗಿ ಬಟಾಣಿ, ಕ್ಯಾರೆಟ್, ಪಾಲಕ ತ್ಯಾದಿಗಳು. ಮಕ್ಕಳ ಆಹಾರ ಕ್ರಮದಲ್ಲಿ ತರಕಾರಿ ಕೂಡ ಸೇರಿಸುವ ಮೂಲಕ ಆರೋಗ್ಯಕಾರಿಯಾಗಿ ತಿನ್ನುವಂತೆ ಮಾಡಬಹುದು.

ಸಕ್ಕರೆ ಪಾನೀಯಗಳನ್ನು ಕಡೆಗಣಿಸಿ

ಸಕ್ಕರೆ ಪಾನೀಯಗಳನ್ನು ಕಡೆಗಣಿಸಿ

ತಂಪು ಪಾನೀಯಗಳಲ್ಲಿ ಅಧಿಕ ಮಟ್ಟದ ಸಕ್ಕರೆ ಇರುವುದು ಮತ್ತು ಅನಾರೋಗ್ಯಕಾರಿ ಕೂಡ. ಕಾರ್ಬೊನೇಟೆಡ್ ಸೊಡಾ, ಶಕ್ತಿ ಪೇಯ, ರುಚಿ ಹೊಂದಿರುವ ನೀರು ಮತ್ತು ಕೆಲವೊಂದು ಇತರ ಪಾನೀಯಗಳಲ್ಲಿ ಅಧಿಕ ಮಟ್ಟದ ಸಕ್ಕರೆ ಇರುವುದು. ಇದನ್ನು ಸೇವಿಸದಂತೆ ಮಕ್ಕಳನ್ನು ತಡೆಯಬೇಕು. ನೀವು ಅದನ್ನು ಖರೀದಿ ಮಾಡಬೇಡಿ ಮತ್ತು ಅದನ್ನು ಮಕ್ಕಳಿಂದ ತಪ್ಪಿಸಿಡಲು ಪ್ರಯತ್ನ ಮಾಡಬೇಡಿ. ಇದರ ಬದಲಿಗೆ ಮಕ್ಕಳಿಗೆ ತಾಜಾ ಹಣ್ಣಿನ ರಸವನ್ನು ನೀಡಿ. ಇದಕ್ಕೆ ಸಕ್ಕರೆ ಹಾಕಬೇಡಿ. ಹೆಚ್ಚು ಹಾಲು ಮತ್ತು ನೀರು ಕುಡಿಯುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡಿ. ಹೆಚ್ಚು ನೀರು ಕುಡಿಯುವುದು ಆರೋಗ್ಯಕಾರಿ ಕ್ರಮ ಮತ್ತು ಇದು ಅತಿಯಾಗಿ ಸಕ್ಕರೆ ಸೇವನೆ ಮಾಡದಂತೆ ತಡೆಯುವುದು.

Most Read: ಮಕ್ಕಳಿಗೆ ಹಲ್ಲಿನ ಸೋಂಕು: ಲಕ್ಷಣಗಳು ಮತ್ತು ಅದನ್ನು ತಡೆಯುವ ವಿಧಾನಗಳು

ಸಿಹಿ ಅನಿವಾರ್ಯ ಮಾಡಬೇಡಿ

ಸಿಹಿ ಅನಿವಾರ್ಯ ಮಾಡಬೇಡಿ

ಮಕ್ಕಳ ಆಹಾರ ಕ್ರಮಕ್ಕೆ ಮುಖ್ಯವಾಗಿ ಪೋಷಕರು ಕಾರಣರಾಗುತ್ತಾರೆ. ಇದರಿಂದ ಮಕ್ಕಳಲ್ಲಿ ಸಕ್ಕರೆ ಸೇವನೆಯನ್ನು ತಡೆಯುವುದು ಕೂಡ ಪೋಷಕರ ಕೈಯಲ್ಲಿದೆ. ರಾತ್ರಿ ಊಟದ ಬಳಿಕ ಸಿಹಿ ಸೇವನೆ ಅನಿವಾರ್ಯ ಮಾಡಬೇಡಿ. ಇದರಿಂದ ಸಕ್ಕರೆ ಸೇವನೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗುವುದು. ರಾತ್ರಿ ಊಟದ ಬಳಿಕ ಸಿಹಿಯು ನಿಮಗೆ ಅನಿವಾರ್ಯವಾಗಿದ್ದರೆ ಆಗ ನೀವು ಇದನ್ನು ಬದಲಿಸಿಕೊಳ್ಳಬೇಕು. ಇದರಿಂದ ಮಕ್ಕಳು ಸಿಹಿ ತಿನ್ನುವುದನ್ನು ಕಡೆಗಣಿಸುವರು. ಹೆಚ್ಚು ಹಣ್ಣುಗಳು ಹಾಗೂ ಸಲಾಡ್ ನ್ನು ಮಕ್ಕಳಿಗೆ ರಾತ್ರಿ ವೇಳೆ ನೀಡಿ. ಇದು ತುಂಬಾ ಆರೋಗ್ಯಕಾರಿ ಆಹಾರ ಕ್ರಮವಾಗಿದೆ.

ಅವರಿಗೆ ಬಹುಮಾನ ನೀಡಿ

ಅವರಿಗೆ ಬಹುಮಾನ ನೀಡಿ

ಮಕ್ಕಳಿಗೆ ಕೆಲವು ಮಂದಿ ಪೋಷಕರು ಸಿಹಿಯನ್ನು ಉಡುಗೊರೆಯಾಗಿ ನೀಡುವರು. ಇದು ಸರಿಯಾದ ವಿಧಾನವಲ್ಲ. ಇದರಿಂದ ಅವರು ಮತ್ತಷ್ಟು ಸಿಹಿ ಸೇವನೆ ಮಾಡುವರು. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಉಡುಗೊರೆ ನೀಡಿ ಮತ್ತು ಅದು ಅವರಿಗೆ ಯಾವಾಗಲೂ ಉಪಯೋಗಕ್ಕೆ ಬರುವಂತೆ ಇರಲಿ. ಕೇಕ್ ಅಥವಾ ಬಿಸ್ಕಟ್ ನ್ನು ನೀಡಿ ಅವರಿಗೆ ಕಲಿಯುವಂತೆ ಪ್ರೋತ್ಸಾಹ ನೀಡಬೇಡಿ. ಇದರಿಂದಾಗಿ ಅವರಲ್ಲಿ ಪರೋಕ್ಷವಾಗಿ ಸಿಹಿ ತಿನ್ನುವ ಸಾಧ್ಯತೆಯು ಹೆಚ್ಚಾಗುವುದು.

ಪ್ರೋಟೀನ್ ಸೇವನೆ ಹೆಚ್ಚು ಮಾಡಿಸಿ

ಪ್ರೋಟೀನ್ ಸೇವನೆ ಹೆಚ್ಚು ಮಾಡಿಸಿ

ಪ್ರೋಟೀನ್ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ಇದರಿಂದ ಕೊಬ್ಬು ರಹಿತವಾಗಿರುವ ಸ್ನಾಯುಗಳು ಬೆಳೆಯಲು ನೆರವಾಗುವುದು. ಸಮತೋಲಿತವಾಗಿರುವಂತಹ ಪ್ರೋಟೀನ್ ದೇಹಕ್ಕೆ ಸಿಕ್ಕಿದರೆ ಅದರಿಂದ ಸಕ್ಕರೆ ಸೇವನೆ ಬಯಕೆ ಕಡಿಮೆ ಆಗುವುದು ಮತ್ತು ಕಡಿಮೆ ಕಾರ್ಬ್ಸ್ ಸಿಗುವುದು. ಮೊಟ್ಟೆ, ಬಾದಾಮಿ, ಓಟ್ಸ್ ಮತ್ತು ಹಾಲು ಇತ್ಯಾದಿಗಳಲ್ಲಿ ಪ್ರೋಟೀನ್ ಹೆಚ್ಚಾಗಿದೆ.

English summary

Ways to Control your Child's Sugar Intake

It becomes a difficult task to control the sugar intake of your child because it is everywhere. Almost everything that a kid loves to eat has sugar in it. Not just in candies and chocolates, sugar is also present in juices, breakfast cereals, flavoured yogurts and many more. It is hard to keep children away from candies, cookies, muffins and cakes. decay but it is also ups the risk of obesity,hypertension, fatty liver and diabetes. Encouraging children to eat healthy is not easy. Swapping chocolates for vegetable may seem impossible.
X
Desktop Bottom Promotion