For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಹಲ್ಲಿನ ಸೋಂಕು: ಲಕ್ಷಣಗಳು ಮತ್ತು ಅದನ್ನು ತಡೆಯುವ ವಿಧಾನಗಳು

|

ಹಲ್ಲಿನ ಸಮಸ್ಯೆಗಳು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಬರುತ್ತದೆ. ಈ ಹಲ್ಲು ನೋವು ಬಂದ ಮೇಲೆ ಅದಕ್ಕೆ ಪರಿಹಾರ ಹುಡುಕುವಷ್ಟರಲ್ಲಿ ಆ ನೋವು ನಿಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿರುತ್ತದೆ. ಇದೇ ನೋವು ನಿಮ್ಮ ಮಕ್ಕಳಿಗೆ ಬಂದರೆ ಹೇಗಿರುತ್ತದೆ ಆಲೋಚಿಸಿ! ನಿಮ್ಮಿಂದಲೆ ಸಹಿಸಲಾಸಾಧ್ಯವಾದ ನೋವನ್ನು ನಿಮ್ಮ ಮಕ್ಕಳು ಹೇಗೆ ಸಹಿಸಿಕೊಳ್ಳುತ್ತಾರೆ. ಅದಕ್ಕಾಗಿ ಪೋಷಕರಾಗಿ ಅವರ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲಹೆಗಳನ್ನು ನೀಡಬೇಕಾದುದು ನಿಮ್ಮ ಕರ್ತವ್ಯ. ನಿಮ್ಮ ಮಗುವಿಗೆ ಹಲ್ಲು ಬೆಳೆದ ನಂತರದಿಂದಲೆ ನೀವು ನಿಮ್ಮ ಮಗುವಿನ ಬಾಯಿಯ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ.

ಮಗು ಹಾಲು ಕುಡಿಯುತ್ತಿದ್ದರೆ ಪರವಾಗಿಲ್ಲ, ಅದು ಏನಾದರು ಆಹಾರವನ್ನು ಅಗೆದು ಸೇವಿಸಲು ಆರಂಭಿಸಿದಾಗಿನಿಂದ ನಿಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಆಹಾರದ ಕಣಗಳು ನಿಮ್ಮ ಮಗುವಿನ ಬಾಯಿಯಲ್ಲಿ ನೆಲೆಸಿ, ಹಲ್ಲುಗಳಿಗೆ ಮತ್ತು ಬಾಯಿಗೆ ಇನ್‌ಫೆಕ್ಷನ್ ಉಂಟು ಮಾಡುತ್ತವೆ. ಆಮೇಲೆ ಹಲ್ಲಿನ ಮೇಲೆ ಪಾಚಿಗಳು ಕಟ್ಟಲು ಆರಂಭಿಸಿ, ನಂತರ ಅದು ದಂತ ಸವಕಳಿಗೆ ಕಾರಣವಾಗುತ್ತದೆ. ಇದಕ್ಕೆ ಮಗುವು ಸಕ್ಕರೆ ಹಾಕಿರುವ ಹಾಲು, ಶಿಶು ಆಹಾರಗಳು ಮುಂತಾದವನ್ನು ಸೇವಿಸುವುದೇ ಕಾರಣವಾಗಿರುತ್ತದೆ. ಇದನ್ನು ಹೋಗಲಾಡಿಸಲು ಇರುವುದು ಒಂದೇ ಮಾರ್ಗ! ಬನ್ನಿ ಇಂದಿನ ಲೇಖನದಲ್ಲಿ ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹಲ್ಲಿನ ಸೋಂಕು ಮತ್ತು ಅದನ್ನು ತಡೆಯುವ ಕೆಲವೊಂದು ವಿಧಾನಗಳ ಬಗ್ಗೆ ಇಲ್ಲಿ ಹೇಳಲಾಗಿದೆ, ಮುಂದೆ ಓದಿ

ಮಕ್ಕಳಲ್ಲಿ ಹಲ್ಲಿನ ಸೋಂಕಿನ ಲಕ್ಷಣಗಳು

ಮಕ್ಕಳಲ್ಲಿ ಹಲ್ಲಿನ ಸೋಂಕಿನ ಲಕ್ಷಣಗಳು

ಹಲ್ಲಿನ ನೋವಿನಿಂದಾಗಿ ಹಲ್ಲಿನ ಬಣ್ಣದಲ್ಲಿ ಬದಲಾವಣೆ ಆಗಬಹುದು, ತಿನ್ನುವಾಗ ಮತ್ತು ಕುಡಿಯುವ ವೇಳೆ ನೋವಾಗಬಹುದು, ದುರ್ವಾಸನೆ, ಕೆಟ್ಟ ರುಚಿ, ಹೊಟ್ಟೆ ತುಂಬಿದಂತೆ ಆಗುವುದು, ಕಾರಣವಿಲ್ಲದೆ ತೂಕ ಕಳೆದುಕೊಳ್ಳುವುದು, ಜ್ವರ ಇತ್ಯಾದಿಗಳು. ಈ ಎಲ್ಲಾ ಲಕ್ಷಣಗಳು ಕಂಡುಬಂದರೆ ಆಗ ಮಕ್ಕಳಲ್ಲಿ ಹಲ್ಲಿನ ಸೋಂಕು ಇದೆ ಎಂದು ಹೇಳಬಹುದು. ಇಂತಹ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ ಆಗ ನೀವು ತಕ್ಷಣವೇ ಹಲ್ಲಿನ ವೈದ್ಯರನ್ನು ಭೇಟಿ ಮಾಡಬೇಕು. ಮಕ್ಕಳಲ್ಲಿ ಹಲ್ಲಿನ ಸೋಂಕು ಉಂಟಾಗಲು ಕೆಟ್ಟ ಆಹಾರ ಕ್ರಮವೇ ಪ್ರಮುಖ ಕಾರಣವಾಗಿದೆ. ಆರಂಭದಲ್ಲೇ ಕೆಲವೊಂದು ಲಕ್ಷಣಗಳನ್ನು ಪತ್ತೆ ಮಾಡಿ ಗಂಭೀರ ಸಮಸ್ಯೆಯನ್ನು ತಪ್ಪಿಸಬಹುದು.

ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ತಪ್ಪಿಸುವುದು ಹೇಗೆ?

ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ತಪ್ಪಿಸುವುದು ಹೇಗೆ?

ಮಕ್ಕಳು ಯಾವಾಗಲೂ ಸಕ್ಕರೆ ಅಥವಾ ಸಕ್ಕರೆ ಅಂಶ ಇರುವಂತಹ ಆಹಾರವನ್ನು ಹೆಚ್ಚು ಸೇವನೆ ಮಾಡುವ ಪರಿಣಾಮವಾಗಿ ಅವರಲ್ಲಿ ಹಲ್ಲಿನ ಸಮಸ್ಯೆ ಕಂಡುಬರುವುದು. ಮಕ್ಕಳಲ್ಲಿ ಹಲ್ಲಿನ ಸೋಂಕು ಅಥವಾ ಕುಳಿ ನಿವಾರಣೆ ಮಾಡಲು ಯಾವುದೇ ಮನೆಮದ್ದುಗಳನ್ನು ಪ್ರಯೋಗ ಮಾಡಲೇಬಾರದು. ಇಂತಹ ಸಮಸ್ಯೆಗಳ ಬಗ್ಗೆ ದಂತ ವೈದ್ಯರಿಗೆ ತಿಳಿಸಬೇಕು. ಮಕ್ಕಳಿಗೆ ತಿನ್ನುವ ವೇಳೆ ಮತ್ತು ನೀರು ಕುಡಿಯುವ ವೇಳೆ ಸಮಸ್ಯೆಯಾಗುತ್ತಲಿದ್ದರೆ ಆಗ ಅದು ನೇರವಾಗಿ ಅವರ ಆಹಾರ ಕ್ರಮದ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಅವರಿಗೆ ಸರಿಯಾದ ಪೋಷಕಾಂಶಗಳು ಸಿಗುವುದಿಲ್ಲ.

Most Read:30 ವರ್ಷದೊಳಗಿನ ಮಹಿಳೆಯರಲ್ಲಿ ಏಕೆ ಬಂಜೆತನ ಕಾಡುವುದು?

ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ತಪ್ಪಿಸುವುದು ಹೇಗೆ?

ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ತಪ್ಪಿಸುವುದು ಹೇಗೆ?

ಸರಿಯಾದ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಆಗ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಆರಂಭಿಕ ವರ್ಷಗಳಲ್ಲಿ ಮಕ್ಕಳ ಹಲ್ಲಿನ ಬಗ್ಗೆ ಸರಿಯಾದ ಆರೈಕೆ ಮಾಡಿದರೆ ಆಗ ಹೊಸ ಹಲ್ಲುಗಳು ಸರಿಯಾಗಿ ಬರುವುದು ಮತ್ತು ಜೀವಮಾನವಿಡಿ ಇರುತ್ತದೆ. ಇದರಿಂದ ಮಕ್ಕಳಲ್ಲಿ ಬರುವಂತಹ ಹಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು. ಮಕ್ಕಳಿಗೆ ದಿನದಲ್ಲಿ ಎರಡು ಸಲ ಹಲ್ಲುಜ್ಜುವಂತೆ ಪ್ರೋತ್ಸಾಹ ಮಾಡಬೇಕು. ಇದಕ್ಕಾಗಿ ದೊಡ್ಡವರು ಕೂಡ ದಿನದಲ್ಲಿ ಎರಡು ಸಲ ಹಲ್ಲುಜ್ಜಬೇಕು. ಪ್ರತೀ ಸಲ ಆಹಾರ ಸೇವಿಸಿದ ಬಳಿಕ ಸರಿಯಾಗಿ ಬಾಯಿ ತೊಳೆಯಲು ಸೂಚಿಸಬೇಕು. ಇದರಿಂದ ಮಕ್ಕಳ ಹಲ್ಲಿನಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿ ಆಗದು. ಮಕ್ಕಳು ಹೆಚ್ಚು ಸಿಹಿ, ಸಿಹಿ ತಿಂಡಿಗಳು, ಉಪಾಹಾರಕ್ಕೆ ಸಿಹಿ ಹೀಗೆ ಯಾವುದೇ ಸಿಹಿ ತಿಂಡಿ ತಿನ್ನುವುದನ್ನು ಕಡಿಮೆ ಮಾಡಲು ಪ್ರಯತ್ನಿಸಿ.

Most Read: ಮಲಗುವ ಮೊದಲು ಮಕ್ಕಳ ಕೈಗೆ ಅಪ್ಪಿ ತಪ್ಪಿಯೂ ಮೊಬೈಲ್ ನೀಡಬೇಡಿ!

ಇಂತಹ ಸಲಹೆಗಳನ್ನು ತಪ್ಪದೇ ಅನುಸರಿಸಿ

ಇಂತಹ ಸಲಹೆಗಳನ್ನು ತಪ್ಪದೇ ಅನುಸರಿಸಿ

* ಚಮಚ ಅಥವಾ ಪೆಸಿಫೈರ್ ಮುಂತಾದ ಜೊಲ್ಲುರಸವನ್ನು ಹೊಂದಿರುವ ಪದಾರ್ಥವನ್ನು ನಿಮ್ಮ ಮಗುವಿನ ಜೊತೆಗೆ ಹಂಚಿಕೊಳ್ಳಬೇಡಿ. ಜೊಲ್ಲಿನ ಮೂಲಕ ನಿಮ್ಮ ಬಾಯಿಯಲ್ಲಿರುವ ಇನ್‌ಫೆಕ್ಷನ್ ನಿಮ್ಮ ಮಗುವಿನ ಬಾಯಿಗೆ ವರ್ಗಾವಣೆಯಾಗಬಹುದು. * ಪ್ರತಿ ಬಾರಿ ಊಟ ಸೇವಿಸಿದ ನಂತರ ನಿಮ್ಮ ಮಗುವಿನ ಬಾಯಿಯನ್ನು ತೆಳುವಾದ ಬಟ್ಟೆಯಿಂದ ಒರೆಸಿ.

*3-6 ವರ್ಷಗಳವರೆಗೆ ಒಂದು ಬಟಾಣಿ ಕಾಳಿನಷ್ಟು ಗಾತ್ರದ ಫ್ಲೋರೈಡ್ ಟೂಥ್‌ಪೇಸ್ಟ್‌ನಿಂದ ಮಗುವಿನ ಹಲ್ಲುಗಳನ್ನು ಉಜ್ಜಿ.

* ಯಾವುದೇ ಕಾರಣಕ್ಕು ಪೆಸಿಫೈರ್‌ಗೆ ಸಕ್ಕರೆಯನ್ನು ಲೇಪಿಸಬೇಡಿ ಅಥವಾ ಸಕ್ಕರೆ ದ್ರಾವಣದಲ್ಲಿ ಅದ್ದಬೇಡಿ.

* ಒಂದು ವರ್ಷದ ನಂತರ ನಿಮ್ಮ ಮಗುವಿಗೆ ಫೀಡಿಂಗ್ ಬಾಟಲ್ ಬದಲಿಗೆ ಬಟ್ಟಲಿನಲ್ಲಿ ಆಹಾರವನ್ನು ಸೇವಿಸಲು ಪ್ರೋತ್ಸಾಹಿಸಿ.

* ಹಲ್ಲುಗಳನ್ನಷ್ಟೇ ಅಲ್ಲ, ನಿಮ್ಮ ಮಗುವಿನ ದವಡೆಗಳನ್ನು ಸಹ ಬಟ್ಟೆಯಿಂದ ಒರೆಸಿ ಮತ್ತು ಮಸಾಜ್ ಮಾಡುವುದನ್ನು ಮರೆಯಬೇಡಿ.

* ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ದಂತ ವೈದ್ಯರ ಬಳಿಗೆ ನಿಮ್ಮ ಮಗುವನ್ನು ಕರೆದುಕೊಂಡು ಹೋಗುವುದನ್ನು ಮರೆಯಬೇಡಿ. ನಿಮ್ಮ ಮಗುವಿಗೆ ಹಲ್ಲಿನ ಸಮಸ್ಯೆ ಇದ್ದರು ಸಹ ತಪ್ಪದೆ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿ. ಒಂದು ವೇಳೆ ಮಕ್ಕಳಿಗೆ ಹಲ್ಲು ನೋವು ಜಾಸ್ತಿ ಆಗಿದ್ದರೆ ಹೀಗೆ ಮಾಡಿ-

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆಯು ಇನ್‍ಫೆಕ್ಷನ್ ನಿವಾರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ. ಇದು ದವಡೆಗಳ ನೋವು ಮತ್ತು ಹಲ್ಲು ನೋವುಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಸ್ವಲ್ಪ ಪ್ರಮಾಣದ ಲವಂಗದ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಿಂದ ಮೃದುವಾಗಿ ಬ್ರಷ್ ಮಾಡಿ. ಇದನ್ನು ನೋವಿರುವ ಭಾಗಕ್ಕೆ ಬಳಸುವಾಗ ಸ್ವಲ್ಪ ಜಾಗರೂಕರಾಗಿರಿ. ಹೆಚ್ಚು ಒತ್ತಡವನ್ನು ನೀಡದೆ ಬ್ರಷ್ ಮಾಡಿ, ಇಲ್ಲವಾದಲ್ಲಿ ನಿಮ್ಮ ನೋವು ಮತ್ತಷ್ಟು ಹೆಚ್ಚಾಗಬಹುದು. ಲವಂಗದ ಎಣ್ಣೆಯನ್ನು ದವಡೆಗಳ ಮೇಲೆ ಹಾಕಿ ಮೃದುವಾಗಿ ಮಸಾಜ್ ಮಾಡಿ.

ಒಂದೆರಡು ಚಮಚ ತೆಂಗಿನೆಣ್ಣೆ

ಒಂದೆರಡು ಚಮಚ ತೆಂಗಿನೆಣ್ಣೆ

ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಅನುಭವಿಸುವಿರಿ.

ಉಪ್ಪು

ಉಪ್ಪು

ಹಲ್ಲು ನೋವಿಗೆ ಉಪ್ಪು ತತ್‍ಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಇದಕ್ಕೆಲ್ಲ ಬೇಕಾಗಿರುವುದು ಕೇವಲ ಎರಡು ವಸ್ತುಗಳು ಒಂದು ಬೆಚ್ಚನೆಯ ನೀರು ಮತ್ತು ಎರಡು ಸ್ವಲ್ಪ ಉಪ್ಪು. ಇವೆರಡನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆ ಮಾಡಿಕೊಳ್ಳಿ.

English summary

Tooth Infection in Kids and Know the Prevention Methods

Tooth decay is the damage caused to the tooth by germs that produce acid in our mouth and attack the teeth. This can result in a hole in the tooth called cavity. The cavity causes pain, infection and tooth loss.When we eat food, some of the food particles get stuck in the teeth creating a sticky layer called ‘plaque’. This plaque has bacteria that feed on the sugar in the food we eat. Once the bacteria start feeding, it produces acids. These acids attack the teeth causing damage to the enamel which results in tooth decay.
Story first published: Tuesday, May 7, 2019, 12:47 [IST]
X
Desktop Bottom Promotion