For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ಸೈನಸ್ ಸಮಸ್ಯೆಗೆ ಕೆಲವೊಂದು ಮನೆಮದ್ದುಗಳು

|

ಸೈನಸ್ ಎನ್ನುವುದು ಸೋಂಕಿನ ಸಮಸ್ಯೆಯಾಗಿದೆ. ಸೈನಸ್ ಎಂದರೆ ಮೂಗಿನ ಕುಳಿಗಳಲ್ಲಿ ಉಂಟಾಗುವ ಸೋಂಕು, ಊತ ಮತ್ತು ಉರಿಯೂತ. ಸೈನಸ್ ಸೋಂಕಿನಿಂದ ಬಳಲುತ್ತಿರುವಂತಹ ವ್ಯಕ್ತಿಯು ಮೂಗು ಮತ್ತು ಕಣ್ಣಿನ ಸುತ್ತಲಿನ ಭಾಗದಲ್ಲಿ ನೋವು ಮತ್ತು ಒತ್ತಡವನ್ನು ಅನುಭವಿಸುವನು. ದೊಡ್ಡವರಿಗಿಂತ ಮಕ್ಕಳಲ್ಲಿ ಸೈನಸ್ ಸಮಸ್ಯೆಯು ಹೆಚ್ಚಾಗಿ ಕಂಡುಬರುವುದು. ಯಾಕೆಂದರೆ ಮಕ್ಕಳು ಸೋಂಕಿಗೆ ತುಂಬಾ ಸೂಕ್ಷ್ಮವಾಗಿರುವರು. ನಿಮ್ಮ ಮಗುವಿಗೆ ಕೂಡ ಕಟ್ಟಿದ ಮೂಗು ಮತ್ತು ಮುಖದ ಭಾಗದಲ್ಲಿ ಸೈನಸ್ ಸೋಂಕಿನಿಂದ ನೋವು ಕಾಣಿಸುವುದು.

ದೊಡ್ಡವರಲ್ಲಿ ಸೈನಸ್ ಸಮಸ್ಯೆಗೆ ಆ್ಯಂಟಿಬಯೋಟಿಕ್ ಗಳನ್ನು ನೀಡಲಾಗುತ್ತದೆ. ಆದರೆ ಇದೇ ಚಿಕಿತ್ಸೆಯನ್ನು ಮಕ್ಕಳಿಗೆ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಆ್ಯಂಟಿಬಯೋಟಿಕ್ ನಿಂದಾಗಿ ಮಕ್ಕಳ ಮೇಲೆ ತುಂಬಾ ಹಾನಿಕಾರಕ ಪರಿಣಾಮ ಉಂಟಾಗಬಹುದು. ಆದರೆ ಮನೆಯಲ್ಲೇ ಮಕ್ಕಳ ಸೈನಸ್ ನಿವಾರಣೆ ಮಾಡಲು ನೀವು ಕೆಲವೊಂದು ವಿಧಾನಗಳನ್ನು ಕಂಡುಕೊಳ್ಳಬಹುದು. ನೈಸರ್ಗಿಕ ಚಿಕಿತ್ಸೆಗಳಿಂದ ಮಗುವಿಗೆ ಯಾವುದೇ ರೀತಿಯ ಹಾನಿಯಾಗದು. ಈ ಚಿಕಿತ್ಸೆ ಜತೆಗೆ ನೀವು ವೈದ್ಯರನ್ನು ಸಂಪರ್ಕ ಮಾಡಿ ಅವರಿಂದ ಸಲಹೆ ಪಡೆದುಕೊಂಡು ಮಗುವಿನ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಈ ಸಮಸ್ಯೆಯು ಮರುಕಳಿಸದಂತೆ ನೋಡಿಕೊಳ್ಳಬೇಕು.

ಸ್ಟೀಮ್(ಹಬೆ)

ಸ್ಟೀಮ್(ಹಬೆ)

ಸೈನಸ್ ಸೋಂಕು ಇದ್ದರೆ ಆಗ ಹಬೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಕಟ್ಟಿದ ಮೂಗಿನ ನಿವಾರಣೆಗೆ ಇದು ಮಗುವಿಗೆ ನೆರವಾಗುವುದು. ವಾರದಲ್ಲಿ ಎರಡು ಸಲ ಮಗು ಹಬೆಯನ್ನು ಮೂಗಿನ ಮೂಲಕ ಎಳೆದುಕೊಳ್ಳುವಂತೆ ನೀವು ಮಾಡಬೇಕು. ಹಬೆಯನ್ನು ಮೂಗಿನ ಬಳಿಕ ಎಳೆದುಕೊಂಡ ಬಳಿಕ ಮಗುವನ್ನು ನೇರವಾಗಿ ತಣ್ಣಗಿನ ಹವಾಮಾನಕ್ಕೆ ನೇರವಾಗಿ ಒಗ್ಗಿಕೊಳ್ಳಲು ಬಿಡಬೇಡಿ. ಹಬೆ ತೆಗೆದುಕೊಂಡ ಬಳಿಕ ಆಕೆ ಅಥವಾ ಆತನ ಮೂಗನ್ನು ಸ್ವಲ್ಪ ಕಾಲ ಮುಚ್ಚಿಟ್ಟುಕೊಳ್ಳಿ.

Most Read: ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನವು ಮಗುವಿಗೆ ಹೆಚ್ಚಿನ ಪರಿಹಾರ ನೀಡುವುದು. ಮಗು ಬಿಸಿ ನೀರಿನ ಸ್ನಾನ ವೇಳೆ ಹಬೆಯನ್ನು ಕೂಡ ಮೂಗಿನ ಮೂಲಕ ಎಳೆದುಕೊಳ್ಳಬಹುದು. ಬಿಸಿ ನೀರಿನ ಸ್ನಾನಕ್ಕೆ ಬದಲಾಗಿ ನೀವು ಬಿಸಿ ಟವೆಲ್ ನ್ನು ಕೂಡ ಬಳಸಿಕೊಳ್ಳಬಹುದು. ಒಂದು ಬಿಸಿ ಟವೆಲ್ ನ್ನು ತೆಗೆದುಕೊಳ್ಳಿ ಮತ್ತು ಅದನ್ನು ಮೂಗು ಮತ್ತು ಮಗುವಿನ ಗಲ್ಲದ ಮೇಲೆ ಹಾಕಿಬಿಡಿ. ಅದು ತಣ್ಣಗಾದ ಕೂಡಲೇ ತೆಗೆದುಬಿಡಿ. ನೀವು ಒಂದೆರಡು ಟವೆಲ್ ಬಳಸಿಕೊಂಡು ಕೆಲವು ನಿಮಿಷ ಕಾಲ ಹೀಗೆ ಮಾಡಬಹುದು.

ತೇವಾಂಶದಿಂದ ಇರಿ

ತೇವಾಂಶದಿಂದ ಇರಿ

ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಯಿಂದಾಗಿ ದೀರ್ಘಕಾಲ ತನಕ ಸೈನಸ್ ಸೋಂಕು ಬರದಂತೆ ನಿಮ್ಮ ಮಗುವನ್ನು ಅದು ಕಾಪಾಡುವುದು. ಮಗು ಹೆಚ್ಚು ಹೆಚ್ಚು ನೀರು ಕುಡಿಯಲು ನೀವು ಪ್ರೇರೇಪಿಸಿ. ಇದರಿಂದ ದೇಹಕ್ಕೆ ಸರಿಯಾದ ತೇವಾಂಶ ಸಿಗುವುದು ಮತ್ತು ಕಫವು ಬೇಗನೆ ಕರಗಿ ಹೋಗಿ ಮಗುವಿನ ಸೈನಸ್ ಸಮಸ್ಯೆ ಪರಿಹಾರವಾಗುವುದು. ದೇಹಕ್ಕೆ ತೇವಾಂಶ ನೀಡಲು ಮಗುವಿನ ಹೆಚ್ಚಿನ ನೀರು ಮತ್ತು ಜ್ಯೂಸ್ ನೀಡಿ. ಮಗುವಿನ ಪ್ರತಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರವನ್ನು ಮಗುವಿಗೆ ನೀಡಿ. ಬಲಿಷ್ಠವಾದ ಪ್ರತಿರೋಧಕ ವ್ಯವಸ್ಥೆಯು ಮಗುವಿಗೆ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು ಮತ್ತು ಸೋಂಕು ಮುಂದುವರಿಯದಂತೆ ತಡೆಯುವುದು.

ಸಾರಭೂತ ತೈಲಗಳು

ಸಾರಭೂತ ತೈಲಗಳು

ಸಾರಭೂತ ತೈಲಗಳಾಗಿರುವಂತಹ ನೀಲಗಿರಿ, ಲಿಂಬೆ ಮತ್ತು ಲ್ಯಾವೆಂಡರ್ ಸೈನಸ್ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಾಕೆಂದರೆ ಈ ತೈಲಗಳಲ್ಲಿ ನೈಸರ್ಗಿಕವಾದ ಕಟ್ಟಿದ ಮೂಗು ನಿವಾರಣೆ ಮಾಡುವಂತಹ ಅಂಶಗಳು ಇವೆ. ಮಗುವಿನ ಚರ್ಮದ ಮೇಲೆ ನೇರವಾಗಿ ಸಾರಭೂತ ತೈಲವನ್ನು ಹಾಕಬೇಡಿ. ಒಂದು ಹತ್ತಿ ಉಂಡೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಸಾರಭೂತ ತೈಲ ಹಾಕಿ ಮತ್ತು ಮಗುವಿನಿಂದ ಕೆಲವು ಅಡಿ ದೂರದಲ್ಲಿ ಇದನ್ನು ಇಟ್ಟುಕೊಳ್ಳಿ. ಇದರ ಸುವಾಸನೆಯನ್ನು ಎಳೆದುಕೊಳ್ಳಲು ಹೇಳಿ. ಇದರಿಂದಾಗಿ ಸೋಂಕು ನಿವಾರಣೆ ಆಗುವುದು.

ಈ ಎಲ್ಲಾ ಮನೆಮದ್ದುಗಳು ಸೈನಸ್ ಸಮಸ್ಯೆಗೆ ಯಾವುದೇ ಪರಿಹಾರ ನೀಡದೆ ಇದ್ದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ನೀವು ಮಗುವಿಗೆ ಯಾವುದೇ ರೀತಿಯ ಮೂಗಿನ ಸ್ಪ್ರೇ ಅಥವಾ ಔಷಧಿಯನ್ನು ನೀಡಬಾರದು.

English summary

Remedies to Cure Sinus Infections in children

Sinus is a common problem in kids because kids are more sensitive to the infection. Your kid may experience stuffed nose and facial pain during a sinus infection. Antibiotics are usually given to cure sinus infection in adults. But this method cannot be applied to the kids because antibiotic use may lead to some harmful effects on your kid.
X
Desktop Bottom Promotion