For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಪ್ರೌಡಾವಸ್ಥೆಗೆ ಬರುವ ಮೊದಲೇ ಮಾನಸಿಕ ಅಸ್ವಸ್ಥತೆ! ಏನು ಮಾಡುವುದು ?

|

ನಮ್ಮ ಮನೆಯ ಮಗು ಎಂದಿಗೂ ನಮ್ಮ ಮನೆಗೆ ನಂದಾ ದೀಪ . ಮಗುವನ್ನು ಹೆತ್ತ ಮೇಲೆ ಅದನ್ನೊಂದು ಒಳ್ಳೆಯ ಶಾಲೆಗೆ ಸೇರಿಸಿ ಉನ್ನತವಾದ ಶಿಕ್ಷಣ ಕೊಡಿಸಿ ಸುಂದರ ಭವಿಷ್ಯ ರೂಪಿಸಬೇಕೆಂಬ ಕನಸು ಎಲ್ಲಾ ತಂದೆ ತಾಯಂದಿರಿಗೂ ಇದ್ದೆ ಇರುತ್ತದೆ . ಅದಕ್ಕಾಗಿ ಜೀವನದಲ್ಲಿ ತಮ್ಮ ಸುಖ ಸಂತೋಷಗಳನ್ನು , ಆಸೆಗಳನ್ನು ತ್ಯಾಗ ಮಾಡಿ ಕೇವಲ ಮಗುವಿನ ಉದ್ದಾರಕ್ಕಾಗಿ ಹಗಲು ಇರುಳು ಎನ್ನದೆ ಶ್ರಮಿಸುತ್ತಾರೆ . ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ. ಮಗುವಿನ ಮುಖದಲ್ಲಿ ಮಂದಹಾಸ ನೋಡಿ ತಮ್ಮ ಎಲ್ಲಾ ನೋವನ್ನೂ ಮರೆಯುತ್ತಾರೆ .

ತಂದೆ ತಾಯಂದಿರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಂಡು ಮಗು ಬೆಳೆದು ದೊಡ್ಡವನಾಗಿ ಜವಾಬ್ದಾರಿಯಿಂದ ನಮ್ಮನ್ನೂ ನೋಡಿಕೊಂಡು ಮುಂದೊಂದು ದಿನ ನಮಗೆ ಆಸರೆಯಾಗಿ ನಿಂತು ತನ್ನ ಜೀವನವನ್ನೂ ನಿರ್ವಹಣೆ ಮಾಡುವನೆಂಬ ಆಸೆಯಿಂದ ದಿನಗಳನ್ನು ದೂಡುತ್ತಿರುತ್ತಾರೆ . ಕೆಲ ಮಕ್ಕಳು ಇದಕ್ಕೆ ಪುಷ್ಟಿ ಕೊಟ್ಟು ತಂದೆ ತಾಯಿಯ ಆಸೆಯಂತೆ ಬದುಕಿದರೆ , ಇನ್ನೂ ಕೆಲವರು ಅವರ ಆಸೆಗೆ ತಣ್ಣೀರೆರೆಚುತ್ತಾರೆ . ಇಲ್ಲಿ ಮಕ್ಕಳು ಕೇವಲ ಕೆಟ್ಟ ದಾರಿಯನ್ನು ಹಿಡಿದು ತಂದೆ ತಾಯಿಗೆ ಮೋಸ ಮಾಡಬೇಕು ಎಂದೇನಿಲ್ಲ ಅಲ್ಲವೇ ? ಕೆಲವೊಂದು ಬಾರಿ ಪೋಷಕರ ಆಸೆ ಈಡೇರದಿರುವುದಕ್ಕೆ ವಿಧಿ ಲಿಖಿತವೂ ಕಾರಣವಾಗಬಹುದು . ಉದಾಹರಣೆಗೆ ತಮ್ಮ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಕ್ಕಳಿಗೆ ರಸ್ತೆಯಲ್ಲಿ ಅಪಘಾತವಾಗಬಹುದು , ಅಥವಾ ಯಾವುದಾದರೂ ಕೆಟ್ಟ ಭಯಂಕರ ಸಾಂಕ್ರಾಮಿಕ ರೋಗ ಬರಬಹುದು , ಅಥವಾ ಮಕ್ಕಳನ್ನು ಅಪಹರಿಸಿ ಪೋಷಕರಿಗೆ ಅವರ ಮಕ್ಕಳು ಇನ್ನೆಂದೂ ಕೈ ಗೆ ಸಿಗದಂತೆ ಮಾಡಬಹುದು . ಹೀಗೆ ಹಲವಾರು ರೀತಿಯಲ್ಲಿ ಮನುಷ್ಯರ ಬಾಳಲ್ಲಿ ಆ ವಿಧಿ ಆಟವಾಡುತ್ತದೆ . ನಾವು ಅಂದುಕೊಳ್ಳುವುದೇ ಒಂದಾದರೆ ದೈವ ಬಗೆಯುವುದೇ ಇನ್ನೊಂದು ಎಂಬ ಸತ್ಯ ಗೊತ್ತಿದ್ದರೆ ಅದೇ ಜೀವನವನ್ನು ಅರ್ಥ ಮಾಡಿಕೊಂಡು ನಡೆದಂತೆ .

Mental Health Disorder

ಇಂತಹದೇ ಒಂದು ನಾವು ಬಯಸದೆ ನಮ್ಮ ಮಕ್ಕಳ ಬಾಳಲ್ಲಿ ಆಟವಾಡುವ ವಿಷಯವೆಂದರೆ ಅದು ಮಕ್ಕಳು ಮಾನಸಿಕ ಅಸ್ವಸ್ಥತೆಗೆ ಬಲಿಯಾಗುವುದು . ಮನುಷ್ಯ ಸಾಮಾಜಿಕ ಜೀವಿ ಎಂದು ಎಲ್ಲರೂ ಹೇಳುತ್ತಾರೆ . ಅಂದರೆ ತನ್ನ ಇರುವಿಕೆಗೆ ಮತ್ತು ಈ ಸಮಾಜದಲ್ಲಿ ತನ್ನ ಸಂಸಾರದೊಂದಿಗೆ ಯಶಸ್ವಿಯಾಗಿ ಜೀವನ ನಡೆಸಲು ಆತ ಅನೇಕರ ಸಹಾಯ ತೆಗೆದುಕೊಳ್ಳಲೇ ಬೇಕಾಗುತ್ತದೆ . ಅದು ನೆಂಟರು , ಬಂದು ಬಾಂಧವರು ಅಥವಾ ಸ್ನೇಹಿತರೂ ಆಗಿರಬಹುದು . ಒಟ್ಟಿನಲ್ಲಿ ನನಗೆ ಯಾರೂ ಬೇಡ ನಾನೊಬ್ಬನೇ ಜೀವಿಸಬಲ್ಲೆ ಎನ್ನುವುದು ಅಸಾಧ್ಯದ ಮಾತು . ತನ್ನ ಸಂಸಾರ ಮಕ್ಕಳು ಮರಿ ಎಲ್ಲಾ ಸಂಗತಿಗಳನ್ನು ಈ ಸಮಾಜದಲ್ಲಿ ಇತರರ ಜೊತೆ ಬೆರೆಯುವಂತೆ ಮಾಡುವುದು ಅವನ ಕರ್ತವ್ಯ ಕೂಡ . ಆದರೂ ಕೆಲವೊಮ್ಮೆ ಎಡವಟ್ಟಾಗಿ ಬಿಡುತ್ತದೆ .

ತಂದೆ ತಾಯಿಯ ಮಾತನ್ನು ಮಕ್ಕಳು ಕೆಲವೊಮ್ಮೆ ಕೇಳುವುದೇ ಇಲ್ಲ. ಇತರರ ಜೊತೆ ಬೆರೆಯುವುದೂ ಇಲ್ಲ. ತಮ್ಮ ನೋವು ಸಂಕಟಗಳನ್ನು ಬೇರೆಯವರ ಅಥವಾ ಮನೆಯವರ ಜೊತೆ ಹಂಚಿಕೊಳ್ಳುವುದೂ ಇಲ್ಲ. ಯಾವಾಗ ನೋಡಿದರೂ ಒಬ್ಬರೇ ಇರಲು ಬಯಸುತ್ತಾರೆ . ತಮ್ಮದೇ ಆದ ಪ್ರಪಂಚದಲ್ಲಿ ಜೀವಿಸುತ್ತಾರೆ . ಇಂತಹ ಹಠಾತ್ ಬದಲಾವಣೆ ಪೋಷಕರಲ್ಲಿ ಆತಂಕ ಹೆಚ್ಚುವಂತೆ ಮಾಡಿ ಏನು ಮಾಡಬೇಕೆಂದು ದಿಕ್ಕೇ ತೋಚದಂತೆ ಮಾಡುತ್ತದೆ . ಆರಂಭದಲ್ಲಿ ಯಾವುದೂ ಅರ್ಥ ಆಗುವುದಿಲ್ಲ . ಆದರೆ ದಿನ ಕಳೆದಂತೆ ಅದು ಹೆಚ್ಚಾಗಿ ತಂದೆ ತಾಯಿಯರ ಎದುರಿಗೇ ಮಕ್ಕಳ ಸುಂದರ ಭವಿಷ್ಯವನ್ನೇ ಬಲಿ ತೆಗೆದುಕೊಳ್ಳುತ್ತದೆ .

ಮಕ್ಕಳು ಪ್ರೌಡಾವಸ್ಥೆಗೆ ಬರುವ ಮೊದಲೇ ಈ ರೀತಿಯ ಮಾನಸಿಕ ಅಸ್ವಸ್ಥತೆ ಎದುರಾದರೆ ಅದನ್ನು ತಡಮಾಡದೆ ಮಾನಸಿಕ ತಜ್ಞರ ಬಳಿ ತೋರಿಸಿ ಸೂಕ್ತ ಚಿಕಿತ್ಸೆಯನ್ನು ಆದಷ್ಟು ಬೇಗನೆ ಪಡೆದುಕೊಳ್ಳ ಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಈ ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತಿತ್ತು
* ಉನ್ಮಾದ ವ್ಯತ್ಯಾಸಗಳು .
*ವರ್ಚಸ್ವೀ ಗುಣಲಕ್ಷಣಗಳು .
ಆದರೆ ಕಾಲ ಬದಲಾದಂತೆ ತಂತ್ರಜ್ಞಾನ ಮುಂದುವರೆದಂತೆ , ವಿಜ್ಞಾನಿಗಳ ಸಂಶೋಧನೆ ಹೆಚ್ಚಾದಂತೆ ಮಾನಸಿಕ ಅಸ್ವಸ್ಥತೆಯನ್ನು ಈ ಕೆಳಗಿನ ರೀತಿಯಲ್ಲಿ ವಿಂಗಡಣೆ ಮಾಡಿದ್ದಾರೆ.
*ಮಾನಸಿಕ ಯೋಗ ಕ್ಷೇಮ.
*ಮಾನಸಿಕ ಕಾಯಿಲೆ.
ಇಲ್ಲಿ ಗಮನಿಸಬೇಕು. ಇವೆರಡೂ ಬಹಳ ಅಪರೂಪದ ಸೂಕ್ತ ಗ್ರಹಿಸುವಿಕೆಗಾಗಿ ವಿಂಗಡಿಸಿದ ರೀತಿಗಳಷ್ಟೇ.

Most Read: ಖಿನ್ನತೆಯನ್ನು ಗುಣಪಡಿಸದಿದ್ದರೆ ಜೀವಕ್ಕೆ ಅಪಾಯ!

ಅಮೇರಿಕಾದಲ್ಲಿ ಮಕ್ಕಳ ಮೇಲೆ ನಡೆಯಿತು ಮಾನಸಿಕ ಖಾಯಿಲೆ ಪತ್ತೆ ಹಚ್ಚುವ ಈ ಪ್ರಯೋಗ ಸದ್ಯದ ವರದಿಯ ಪ್ರಕಾರ ಅಮೇರಿಕಾದಲ್ಲಿ ನಡೆದ ಅತಿ ದೊಡ್ಡ ಮಟ್ಟದ ಸಂಶೋಧನೆ ಇದು . ಈ ಸಂಶೋಧನೆಗೆ ವಿಜ್ಞಾನಿಗಳು ಸುಮಾರು ನಲವತ್ತ ಆರು ಮಿಲಿಯನ್ ನಷ್ಟು ಶಾಲಾ ವಯಸ್ಸಿನ ಮಕ್ಕಳನ್ನು ಬಳಸಿಕೊಂಡರು . ಸಂಶೋಧನೆಯ ನಂತರ ಅವರಿಗೆ ಸಿಕ್ಕ ಉತ್ತರ ಅಷ್ಟೂ ಜನ ಮಕ್ಕಳಲ್ಲಿ ಸುಮಾರು ಏಳೂವರೆ ಮಿಲಿಯನ್ ನಷ್ಟು ಮಕ್ಕಳು ಗುಣ ಪಡಿಸಬಹುದಾದಂತ ಮಾನಸಿಕ ಖಾಯಿಲೆಗೆ ತುತ್ತಾಗಿ ಅದಾಗಲೇ ಬಳಲುತ್ತಿದ್ದರು . ವಿಜ್ಞಾನಿಗಳು ಆ ಮಕ್ಕಳನ್ನು ಬೇರೆ ಮಾಡಿ ಅವರು ಈ ರೀತಿಯ ಖಾಯಿಲೆಗೆ ತುತ್ತಾಗಿರುವುದಕ್ಕೆ ಕಾರಣ ಏನಿರಬಹುದು ಎಂದು ಕೋನ್ಸೆಲ್ಲಿಂಗ್ ಮುಖಾಂತರ ಬಗೆ ಹರಿಸಿಕೊಳ್ಳಲು ಮುಂದಾದರು . ಆಗ ಅವರಿಗೆ ಸಿಕ್ಕ ವಿಷಯಗಳು ಈ ರೀತಿ ಇವೆ .

ಮಕ್ಕಳಲ್ಲಿ

*ಮಾನಸಿಕ ಉದ್ವೇಗ ಮತ್ತು ಮಾನಸಿಕ ಚಿಂತೆ .
*ಮನಸ್ಸಿನಲ್ಲಿ ಅಸಮಾನತೆ ಮನೆಮಾಡಿ ತಳಮಳ ಉಂಟಾಗಿರುವುದು .
*ಯಾವ ಕೆಲಸದಲ್ಲಿಯೂ ಆಸಕ್ತಿ ಇಲ್ಲದೆ ಚೈತನ್ಯ ಶಕ್ತಿ ಕಳೆದು ಕೊಂಡಿರುವುದು ಬೆಳಕಿಗೆ ಬಂದಿತು .
ಈ ಸಂಶೋಧನೆ ಮುಗಿದ ಮೇಲೆ ವಿಜ್ಞಾನಿಗಳಿಗೆ ಒಂದು ಅಚ್ಚರಿ ಮತ್ತು ಆಘಾತ ಕಾದಿತ್ತು . ಏನೆಂದರೆ ಮಾನಸಿಕ ರೋಗದಿಂದ ಬಳಲುತ್ತಿದ್ದ ಆ ಮಕ್ಕಳು ಅದುವರೆಗೂ ಯಾವ ವೈದ್ಯಕೀಯ ಚಿಕಿತ್ಸೆಯನ್ನಾಗಲೀ ಅಥವಾ ಇನ್ನಾವುದೇ ವೈದ್ಯಕೀಯ ಆರೈಕೆಯನ್ನಾಗಲೀ ಪಡೆಯದಿರುವುದು ಬಹಳ ಆಶ್ಚರ್ಯ ಉಂಟು ಮಾಡಿತು .

ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಸಹಾಯ ಹಸ್ತ

ಕೆಲವು ಆರೋಗ್ಯ ತಜ್ಞರ ಪ್ರಕಾರ , ಮಕ್ಕಳ ಭವಿಷ್ಯದ ಹಿತಾಸಕ್ತಿಯ ದೃಷ್ಟಿಯಿಂದ ತಮ್ಮ ಮಕ್ಕಳಿಗೆ ಎದುರಾದ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಬಗೆಹರಿಸಲು ಪೋಷಕರಿಂದ ಮತ್ತು ಸಮಾಜದಿಂದ ಮಾನಸಿಕ ವೈದ್ಯರ ಮೇಲೆ ಬಹಳ ಒತ್ತಡ ಎದುರಾಗುತ್ತಿದೆಯಂತೆ . ಅದಕ್ಕೆ ಕಾರಣಗಳು ಈ ರೀತಿ ಇವೆ :

*ಸಮಾಜದಲ್ಲಿ ಹಲವಾರು ಜನ ಬಡ ಜನರೇ ಆಗಿದ್ದು , ಅವರ ಬಳಿ ಚಿಕಿತ್ಸೆಗೆ ಹಣವಿರುವುದಿಲ್ಲದಿರುವುದು .
*ಹಲವಾರು ಮಂದಿಯಲ್ಲಿ ಚಿಕೆತ್ಸೆ ಎಲ್ಲಿ ಹೇಗೆ ಎಂಬ ಅರಿವಿನ ಕೊರತೆ ಎದ್ದು ಕಾಣುತ್ತಿರುವುದು .
*ಮಾನಸಿಕ ರೋಗಿಗಳ ಅನುಪಾತಕ್ಕೆ ತಕ್ಕಂತೆ ಮಾನಸಿಕ ವೈದ್ಯರ ಕೊರತೆ ಎಲ್ಲಾ ಕಡೆ ಇರುವುದು .

ಒಂದು ವೇಳೆ ಮಾನಸಿಕ ಚಿಕಿತ್ಸೆ ಲಭ್ಯವಾದರೆ ಮಕ್ಕಳಿಗೆ ಅದನ್ನು ಯಾವ ರೀತಿಯಲ್ಲಿ ನೀಡುತ್ತಾರೆಂದರೆ ,

* ಮಗುವನ್ನು ಒಂದು ಕೊಠಡಿಯಲ್ಲಿ ಕೂರಿಸಿ ಅದರ ಮಾನಸಿಕ ವರ್ತನೆಯ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು . ಮತ್ತು ಅದೇ ಮಗುವನ್ನು ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯಲು ಬಿಟ್ಟು ಅಲ್ಲಿ ಅದರ ಮಾನಸಿಕ ಗುಣ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುವುದು.
* ಮಾನಸಿಕ ರೋಗಕ್ಕೆ ತುತ್ತಾಗಿರುವ ಮಕ್ಕಳ ಪೋಷಕರಿಗೆ ಮತ್ತು ಮಕ್ಕಳಿಗೆ ಸಂಬಂಧಪಟ್ಟ ದೊಡ್ಡವರಿಗೆ ಮಕ್ಕಳ ವರ್ತನೆಯ ಬಗ್ಗೆ ತಿಳಿ ಹೇಳಿ ಜಾಗ್ರತೆ ಮೂಡಿಸುವುದು .
* ಸಾಮಾನ್ಯವಾಗಿ ಮಾನಸಿಕ ರೋಗ ಲಕ್ಷಣದ ಮಕ್ಕಳು ಇತರ ಮಕ್ಕಳ ಜೊತೆ ಕೂರುವುದಿಲ್ಲ . ಅಂತಹ ಮಕ್ಕಳಿಗೆ ಬೇರೆ ಕಡೆ ಶಿಕ್ಷಣದ ಸಹಾಯ ಒದಗಿಸುವುದು.
* ಶಾಲೆಯ ಆಡಳಿತ ಮಂಡಳಿಯಿಂದ ಅಂತಹ ಮಕ್ಕಳಿಗೋಸ್ಕರ ಒಬ್ಬ ನುರಿತ ಕೌನ್ಸಿಲರ್ ಗಳನ್ನು ನೇಮಿಸುವುದು .
* ಅವರಿಗೆ ವೈದ್ಯಕೀಯ ನೆರವನ್ನು ನೀಡುವುದು .
* ಅನೇಕ ಚಿಕಿತ್ಸಾ ವಿಧಾನಗಳನ್ನು ಪ್ರಯೋಗಿಸುವುದು.

Most Read: ಮಕ್ಕಳಲ್ಲಿ ಬೊಜ್ಜು ದೇಹ ಮತ್ತು ಮಾನಸಿಕ ಸಮಸ್ಯೆಗಳು

" ಬಿ . ಎಂ . ಜೆ . ಓಪನ್ " ಎಂಬ ಜರ್ನಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ , ಇನ್ನೊಂದು ವಿಜ್ಞಾನಿಗಳ ಗುಂಪು ಕೇವಲ ೨೦ ಮಂದಿಯನ್ನು ಮಾನಸಿಕ ರೋಗಕ್ಕೆ ತುತ್ತಾಗಿರುವರೆಂಬ ಮೊದಲ ಲಕ್ಷಣಗಳಿಂದ ಪರೀಕ್ಷೆಗೆ ಅಂದರೆ ಸಂಶೋಧನೆಗೆ ಒಳಪಡಿಸಿತು . ಅಲ್ಲಿ ಅವರಿಗೆ ಕಂಡ ಸತ್ಯ ಏನೆಂದರೆ ಅವರೂ ಕೂಡ ಮಾನಸಿಕ ರೋಗಕ್ಕೆ ಗುರಿಯಾಗಿದ್ದರು . ಅವರಿಗೆ ಮಾನಸಿಕ ಖಾಯಿಲೆ ಬರಲು ಕಾರಣ ಗಳನ್ನು ಪತ್ತೆ ಹಚ್ಚಲು ಹೊರಟಾಗ ಅವರಿಗೆ ಸಿಕ್ಕ ಕೆಲವು ಸಂಗತಿಗಳು ಈ ರೀತಿ ಇವೆ :

ಮಾನಸಿಕ ರೋಗಿಗಳೆಂದು ದಾಖಲಾದವರು

* ಕುಡಿತದ ಚಟಕ್ಕೆ ದಾಸರಾಗಿದ್ದರು .
* ಕ್ಷಯ ರೋಗಕ್ಕೆ ತುತ್ತಾಗಿ ಸವೆದು ಹೋಗಿದ್ದರು .
* ಚಿಕ್ಕ ವಯಸ್ಸಿನಿಂದಲೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು .
* ಅಕಾಲಿಕ ಮತ್ತು ಶೀಘ್ರ ಸ್ಪಲನಕ್ಕೆ ಬಲಿಯಾದವರು .
* ದ್ವಿಲಿಂಗತ್ವ ಹೊಂದಿದವರು .
* ಡ್ರಗ್ಸ್ ಅಥವಾ ಮಾದಕ ವಸ್ತುಗಳಿಗೆ ದಾಸರಾಗಿದ್ದರು .
* ದೇಹದಲ್ಲಿ ಚೈತನ್ಯ ಶಕ್ತಿಯನ್ನೇ ಕಳೆದುಕೊಂಡವರು .
* ಹಠಾತ್ ಆಗಿ ಯಾವುದೋ ಆಘಾತಕ್ಕೆ ಒಳಗಾಗಿರುವವರು .
* ಬಾಜಿ ಕಟ್ಟಿ ಸೋತಿರುವವರು .
* ಭಿನ್ನ ವ್ಯಕ್ತಿತ್ವ ಹೊಂದಿರುವವರು .
* ಮಾನಸಿಕವಾಗಿ ಬಹಳ ಕುಗ್ಗಿ ಹೋಗಿರುವವರು .
* ಗಂಡು ಮತ್ತು ಹೆಣ್ಣು ಇಬ್ಬರ ಗುಣ ಲಕ್ಷಣ ಹೊಂದಿರುವವರು .
* ನಿದ್ದೆಯೇ ಬಾರದಿರುವವರು .

ಇವರಲ್ಲಿ ಶೇಕಡಾವಾರು ರೋಗಿಗಳು ಮತ್ತು ಅವರಿಗೆ ಬಂದಿದ್ದಂತ ಖಾಯಿಲೆಗೆ ಕಾರಣಗಳನ್ನು ಗಮನಿಸುವುದಾದರೆ ,

* 75 ರಷ್ಟು ಮಂದಿ ಆಟಿಸಂ ಅನ್ನು ಮಾನಸಿಕ ರೋಗ ಲಕ್ಷಣ ಎಂದು ಒಪ್ಪಿಕೊಂಡರೆ ಇನ್ನು ಉಳಿದವರು ದ್ವಿ ಲಿಂಗತ್ವ ಮಾನಸಿಕ ರೋಗಕ್ಕೆ ಕಾರಣವಾಯಿತು ಎಂದು ಯೋಚನೆ ಮಾಡಲೂ ತಯಾರಿರಲಿಲ್ಲ .
* ಶೇಖಡಾ 50 ರಿಂದ 75 ಮಂದಿ ಹಠಾತ್ ಆಗಿ ಆದ ಆಘಾತ , ಅಸಮಾನತೆಯನ್ನು ಮಾನಸಿಕ ರೋಗಗಳಿಗೆ ಕಾರಣ ಗಳೆಂದು ಒಪ್ಪಿಕೊಂಡರು .
* ಇದರಲ್ಲಿ ಕೆಲ ಮಂದಿ ಕುಡಿತ , ಮಾದಕ ವ್ಯಸನ , ಗ್ಯಾಂಬಲಿಂಗ್ , ನಿದ್ರಾ ಹೀನತೆ ಮತ್ತು ಕೆಲಸದ ಒತ್ತಡ ಮಾನಸಿಕ ಖಾಯಿಲೆಗಳಿಗೆ ಕಾರಣವಾಯಿತು ಎಂದು ಸಮ್ಮತಿ ಸೂಚಿಸಿದರು .
* ಕೆಲವು ಮಂದಿ ಈ ಸಮೀಕ್ಷೆಗಳನ್ನು ಒಪ್ಪಿಕೊಂಡು ಅದಕ್ಕೆ ಇನ್ನಷ್ಟು ಬಲಗೊಳ್ಳುವಂತೆ ಮಾಡಿ ಕುಗ್ಗುವಿಕೆಗೆ ಕಾರಣ ಇತರ ವೈದ್ಯರು , ಉಸ್ತುವಾರಿ ಸದಸ್ಯರು ಮತ್ತು ಸಂಸತ್ತಿನ ಸದಸ್ಯರ ನಡವಳಿಕೆಗಳು ಎಂದು ಸೂಚಿಸಿದರು .

ತಂದೆ ತಾಯಂದಿರಿಗೆ ಕೆಲವು ಮಾರ್ಗದರ್ಶನಗಳು :

* ಮಾನಸಿಕ ಅಸ್ವಸ್ಥತೆ ವಾಸಿಯಾಗದ ಖಾಯಿಲೆಯೇನೂ ಅಲ್ಲ . ವಾಸಿಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಅಷ್ಟೇ . ಆದ್ದರಿಂದ ಭಯ ಪಡಬೇಡಿ .
* ಮಾನಸಿಕ ರೋಗಿಗಳನ್ನು ಸಮಾಜ ಬೇರೆ ತರವೇ ನೋಡುತ್ತದೆ . ಹಾಗಾಗಿ ನೀವೂ ಅವರಂತೆಯೇ ನಡೆದುಕೊಳ್ಳಬೇಡಿ .
* ನಿಮ್ಮ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಗುವಿಗೆ ತಕ್ಷಣಕ್ಕೆ ಬೇಕಾಗಿರುವುದು ಸಾಂತ್ವನದ ಮಾತುಗಳು . ಅದನ್ನು ಬಿಟ್ಟು ಆ ಮಗು ಬೇರೇನನ್ನೂ ಅಪೇಕ್ಷಿಸುವುದಿಲ್ಲ . ಆದ್ದರಿಂದ ಮಗುವಿನ ಜೊತೆ ಮಾತನಾಡಿ ಅದರ ಜೊತೆಯಲ್ಲಿ ಇದ್ದು ಅದಕ್ಕೆ ಸಮಾಧಾನ ಮಾಡಿ .
* ನಿಮ್ಮಲ್ಲಿ ಇಂತಹ ಸಂದರ್ಭದಲ್ಲಿ ತಾಳ್ಮೆ ಬಹಳ ಮುಖ್ಯ . ಯಾವುದೇ ಕಾರಣಕ್ಕೂ ಮಗುವಿನ ಮೇಲೆ ಮಾನಸಿಕವಾಗಿ ಅಥವಾ ದೈಹಿಕವಾಗಿ ಹಲ್ಲೆ ನಡೆಸಬೇಡಿ . ಇದರಿಂದ ಅವರ ಮಾನಸಿಕ ಖಾಯಿಲೆ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ .
* ಮಕ್ಕಳನ್ನು ಸ್ನೇಹಿತರಂತೆ ಕಾಣಿ . ಏಕೆಂದರೆ ನಿಮಗೆ ಅವರಿಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ . ನೀವು ಪ್ರತಿ ದಿನ ಕಷ್ಟ ಪಟ್ಟು ದುಡಿಯುವುದು ಅವರಿಗೋಸ್ಕರವೇ ತಾನೇ .
* ಮಾನಸಿಕ ಅಸ್ವಸ್ಥತೆಯ ಮಕ್ಕಳು ಮಾಡುವ ಅವಾಂತರಗಳನ್ನು ಸಹಿಸಿಕೊಳ್ಳಿ . ಅದನ್ನು ಖಂಡನೆ ಮಾಡುವ ಬದಲು ಆದಷ್ಟು ಅವರನ್ನು ಅರ್ಥ ಮಾಡಿಕೊಳ್ಳಿ .
* ಮಗುವಿನ ಚಲನ ವಲನಗಳನ್ನು ಆಗಾಗ ಗಮನಿಸುತ್ತಿರಿ . ಅವರ ಪ್ರತಿ ಕ್ಷಣದ ವರ್ತನೆಗಳನ್ನು ವೈದ್ಯರ ಬಳಿ ತಿಳಿಸಿ ಹೇಳಿ . ಅವರಿಂದ ಸೂಕ್ತ ಚಿಕಿತ್ಸೆಗಳನ್ನು ನಿಮ್ಮ ಮಗುವಿಗೆ ಕೊಡಿಸಿ .

English summary

Mental Health Disorder In Early Childhood

We humans are social animals and we can't live in isolation. We need people around us, whether they are friends or family. Therefore it's human beings belief of what is an illness and what is not. People set criteria and pass judgment on health and manner of conducting oneself. Especially, if one is talking about issues concerning the mind, then it becomes essential to classify among various other diseases and disarray.
X
Desktop Bottom Promotion