For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವಿನ ನಿದ್ದೆ ಇನ್ನೂ ಉತ್ತಮವಾಗಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ

|

ಪಾಲಕರಾದ ಬಳಿಕ ಮಗುವಿನ ಲಾಲನೆ ಪಾಲನೆಯ ಕರ್ತವ್ಯಗಳಲ್ಲಿ ಮಗುವನ್ನು ಮಲಗಿಸುವುದೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿಲ್ಲದ ಮಕ್ಕಳಿಗೆ ದಿನಕ್ಕೆ ಹತ್ತರಿಂದ ಹದಿಮೂರು ಘಂಟೆ ನಿದ್ದೆಯ ಅಗತ್ಯವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆಯೇ ಈ ಅವಧಿಯೂ ಕಡಿಮೆಯಾಗುತ್ತಾ ಬರುತ್ತದೆ. 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಒಂಭತ್ತು ಘಂಟೆ ನಿದ್ದೆ ಅವಶ್ಯವಾಗಿದೆ.

ಒಂದು ವೇಳೆ ನಿಮಗೆ ನಿಮ್ಮ ಮಕ್ಕಳನ್ನು ಮಲಗಿಸುವುದು ಕಷ್ಟಕರವಾಗಿದ್ದರೆ the journal Scientific Researchಎಂಬ ಮಾಧ್ಯಮ ಕೆಲವು ಸಲಹೆಗಳನ್ನು ನೀಡುತ್ತಿದೆ. ಒಂದು ವೇಳೆ ಹಗಲಿನ ವೇಳೆಯಲ್ಲಿ ಮಕ್ಕಳು ಸಾಕಷ್ಟು ಆಟ ಹಾಗೂ ದೈಹಿಕ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಕಳೆದರೆ ಇದು ರಾತ್ರಿ ಅವರ ನಿದ್ದೆಯನ್ನು ಉತ್ತಮವಾಗಿಸಲು ನೆರವಾಗುತ್ತದೆ. ಈ ಸಂಶೋಧನೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಹಗಲಿನಲ್ಲಿ ಸಾಕಷ್ಟು ವ್ಯಾಯಾಮ ಮಾಡಿಸಲಾಗಿತ್ತು. ಈ ಮಕ್ಕಳು ತಮ್ಮ ನಿತ್ಯ ಮಲಗುವ ಸಮಯಕ್ಕಿಂತಲೂ ಸರಾಸರಿ ಹದಿನೆಂಟು ನಿಮಿಷ ಮೊದಲೇ ಮಲಗಿದ್ದುದನ್ನು ಗಮನಿಸಲಾಗಿದೆ ಹಾಗೂ ಈ ನಿದ್ದೆಯ ಗುಣಮಟ್ಟವೂ ಉತ್ತಮಗೊಂಡಿರುವುದನ್ನು ಗಮನಿಸಲಾಗಿದೆ. ವ್ಯಾಯಾಮ ಮಕ್ಕಳನ್ನು ಸಾಕಷ್ಟು ಆಯಾಸಗೊಳಿಸಿ ಶೀಘ್ರವೇ ಮಲಗುವಂತೆ ಮಾಡುತ್ತದೆ. ಇದರ ಹೊರತಾಗಿ ಮಕ್ಕಳಿಗೆ ಸುಖನಿದ್ದೆಯನ್ನು ನೀಡಲು ಕೆಲವು ಸಲಹೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ..

ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು

ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು

ನಿಮ್ಮ ಮಕ್ಕಳನ್ನು ಆದಷ್ಟೂ ಹಗಲಿನ ವೇಳೆಯಲ್ಲಿ ಹೊರಗಿನ ಆಟ ಮತ್ತು ಚಟುವಟಿಕೆಗಳಲ್ಲಿ ಒಳಗೊಳ್ಳುವಂತೆ ಮಾಡಿ. ಇದರಿಂದ ಹೆಚ್ಚು ಹೆಚ್ಚಾಗಿ ಸೂರ್ಯನ ಬೆಳಕನ್ನು ನೋಡುವಂತಾಗುತ್ತದೆ ಹಾಗೂ ಈ ಬೆಳಕಿನಲ್ಲಿ ಮೆದುಳಿನಲ್ಲಿ ಉತ್ಪತ್ತಿಯಾಗುವ ಮೆಲಟೋನಿನ್ ಪ್ರಮಾಣವನ್ನು ತಡೆಯುತ್ತದೆ. ಸಮಯಕ್ಕೆ ಸರಿಯಾಗಿ ನಮ್ಮ ನಿದ್ದೆ ಆವರಿಸಲು ಮತ್ತು ಎಚ್ಚರಾಗಲು ಈ ಮೆಲಟೋನಿನ್ ಪ್ರಮುಖ ಕಾರಣವಾಗಿದೆ. ಈ ವಿಧಾನದ ಮೂಲಕ ಮಕ್ಕಳು ಹಗಲಿನ ಹೊತ್ತು ಎಚ್ಚರಾಗಿದ್ದು ರಾತ್ರಿಯ ಸಮಯದಲ್ಲಿ ಬೇಗನೇ ಮಲಗತೊಡಗುತ್ತಾರೆ.

ಕೆಫೇನ್ ಇರುವ ಪೇಯಗಳನ್ನು ನೀಡದಿರಿ

ಕೆಫೇನ್ ಇರುವ ಪೇಯಗಳನ್ನು ನೀಡದಿರಿ

ಯಾವುದೇ ಕೆಫೀನ್ ಇರುವ ಪಾನೀಯ, ಉದಾಹರಣೆಗೆ, ಟೀ, ಕಾಫಿ, ಬುರುಗು ಪಾನೀಯ, ಸೋಡಾ ಮೊದಲಾದವುಗಳ ಸೇವನೆಯಿಂದ ಮಕ್ಕಳಲ್ಲಿ ನಿದ್ದೆ ಹಾರಿ ಹೋಗುತ್ತದೆ ಹಾಗೂ ಇವರನ್ನು ಮಲಗಿಸುವುದು ಭಾರೀ ಕಷ್ಟಕರವಾದ ಕೆಲಸವಾಗುತ್ತದೆ. ಹಾಗಾಗಿ ಸಂಜೆಯ ಬಳಿಕ ಈ ಯಾವುದೇ ಪಾನೀಯಗಳನ್ನು ನೀಡದಿರಿ.

ರಾತ್ರಿ ಮಲಗಲು ನಿರ್ದಿಷ್ಟ ಸಮಯವನ್ನು ಅನುಸರಿಸಿ

ರಾತ್ರಿ ಮಲಗಲು ನಿರ್ದಿಷ್ಟ ಸಮಯವನ್ನು ಅನುಸರಿಸಿ

ನಿಮ್ಮ ಮಕ್ಕಳು ಪ್ರತಿದಿನ ಒಂದೇ ಸಮಯಕ್ಕೆ ಸರಿಯಾಗಿ ಮಲಗುವಂತೆ ವೇಳಾಪಟ್ಟಿಯನ್ನು ನಿರ್ಧರಿಸಿ ಈ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಕ್ಕಳನ್ನು ಪ್ರೇರೇಪಿಸಿ. ಇದು ಮಕ್ಕಳಲ್ಲಿ ಆರೋಗ್ಯಕರ ವೇಳಾಪಟ್ಟಿಯನ್ನು ಅನುಸರಿಸುವ ಉತ್ತಮ ಅಭ್ಯಾಸ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ದೇಹದ ಜೈವಿಕ ಗಡಿಯಾರ ಈ ಸಮಯಗಳಿಗೆ ಅನುಸಾರವಾಗಿ ಸ್ಪಂದಿಸತೊಡಗುತ್ತದೆ.

ಮಕ್ಕಳು ಸುರಕ್ಷತಾ ಭಾವನೆ ಹೊಂದುವಂತೆ ಮಾಡಿ

ಮಕ್ಕಳು ಸುರಕ್ಷತಾ ಭಾವನೆ ಹೊಂದುವಂತೆ ಮಾಡಿ

ಸಂಜೆಯ ಬಳಿಕ ಮಕ್ಕಳಲ್ಲಿ ಹೆದರಿಕೆ ಹುಟ್ಟಿಸುವ ಯಾವುದೇ ಕಥೆಗಳನ್ನಾಗಲೀ, ಸಿನೇಮಾಗಳನ್ನಾಗಲೀ ಕೇಳುವುದಾಗಲೀ, ನೋಡುವುದಾಗಲೀ ಬೇಡ. ಈ ಹೆದರಿಕೆಯ ವಿಷಯಗಳು ಮಕ್ಕಳ ಮನದಲ್ಲಿ ಅಚ್ಚೊತ್ತಿದಂತೆ ನೆನಪಿನಲ್ಲಿ ಉಳಿಯುತ್ತವೆ ಹಾಗೂ ಈ ಹೆದರಿಕೆಯಿಂದಾಗಿ ಮಕ್ಕಳಿಗೆ ಬೇಗನೇ ಮಲಗಲು ಸಾಧ್ಯವಾಗದೇ ಹೋಗಬಹುದು.

ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿ

ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿ

ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸಿದರೆ ಇದು ನಿದ್ದೆಯ ವೇಳಾಪಟ್ಟಿಯನ್ನು ಏರುಪೇರುಗೊಳಿಸಬಹುದು. ಅಲ್ಲದೇ ಮಕ್ಕಳು ಸಂಜೆಯ ಬಳಿಕ ಕುಡಿಯುವ ನೀರಿನ ಪ್ರಮಾಣ ಅತಿಯಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಅತಿಯಾದರೆ ರಾತ್ರಿಯ ಸಮಯದಲ್ಲಿ ಮೂತ್ರವಿಸರ್ಜನೆಗೆ ಕೆಲವಾರು ಬಾರಿ ಏಳಬೇಕಾಗುತ್ತದೆ. ಇದು ನಿದ್ದೆಯನ್ನು ಭಂಗಗೊಳಿಸಬಹುದು. ಅಲ್ಲದೇ ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜಿಸಿದ ಬಳಿಕವೇ ಮಲಗುವಂತೆ ರೂಢಿ ಮಾಡಿಸಿ.

English summary

Follow these tips to improve the sleep quality of your kid

Making your child fall asleep on time is one the most challenging task of parenthood. As per the estimates of various researches, your little one (preschoolers) require around 10-13 hours of sleep every day, these numbers start to change once your kid grow up. From 6-13 years, nine hours of sleep/day is considered efficient for your kid. If you are having trouble making your child fall asleep, a recent study published in the journal Scientific Research says that if your children workout during the daytime, it can significantly enhance the quality of their sleep.
X
Desktop Bottom Promotion