For Quick Alerts
ALLOW NOTIFICATIONS  
For Daily Alerts

ಮಲಗುವ ಮೊದಲು ಮಕ್ಕಳ ಕೈಗೆ ಅಪ್ಪಿ ತಪ್ಪಿಯೂ ಮೊಬೈಲ್ ನೀಡಬೇಡಿ!

|

ಜೋಗುಳ ಹಾಡಿ, ಕಥೆ ಹೇಳಿ ಮಗುವನ್ನು ಮಲಗಿಸುವಂತಹ ಸಮಯವು ಈಗಿಲ್ಲ. ಪ್ರತಿಯೊಬ್ಬರಿಗೂ ಸಮಯದ ಅಭಾವ ಇರುವ ಕಾರಣದಿಂದಾಗಿ ಜೋಗುಳ ಎನ್ನುವುದನ್ನು ಮಕ್ಕಳು ಕೇಳುವುದೇ ಇಲ್ಲ. ಅದರಲ್ಲೂ ಈಗ ಒಂದುವರೆ ವರ್ಷ ದಾಟಿದ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಬಿಟ್ಟರೆ ಅಮ್ಮಂದಿರು ತಮ್ಮ ಕೆಲಸವನ್ನು ಸಲೀಸಾಗಿ ಮಾಡುತ್ತಿರಬಹುದು. ಮೊಬೈಲ್ ಎನ್ನುವ ಪೆಟ್ಟಿಗೆ ಅಷ್ಟರ ಮಟ್ಟಿಗೆ ತನ್ನ ಮಾಯಾಜಾಲವನ್ನು ಪಸರಿಸಿದೆ. ಮೊಬೈಲ್ ನಿಂದ ಜನರಿಗೆ ಎಷ್ಟು ಲಾಭಗಳು ಇದೆಯಾ ಅದರಿಂದ ಅಷ್ಟೇ ನಷ್ಟವು ಇದೆ. ಅದರಲ್ಲೂ ಮಲಗುವ ಮೊದಲು ಮಕ್ಕಳ ಕೈಗೆ ಮೊಬೈಲ್ ನೀಡುವಂತಹ ಅಮ್ಮಂದಿರು ತುಂಬಾ ಎಚ್ಚರಿಕೆಯಿಂದ ಈ ಲೇಖನವನ್ನು ಓದಬೇಕು. ಯಾಕೆಂದರೆ ಈ ಲೇಖನದಲ್ಲಿ ನಿಮಗೊಂದು ಕೆಟ್ಟ ಸುದ್ದಿಯಿದೆ. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಮ್ಮ ಕೆಲಸದಲ್ಲಿ ನಿರತರಾಗುವುದು ಇಂದು ಸಾಮಾನ್ಯ ಸಂಗತಿ.

ಮಲಗುವ ಮೊದಲು ಮೊಬೈಲ್ ಫೋನ್ ಬಳಕೆ ಮಾಡುವುದರಿಂದಾಗಿ ಆಗುವಂತಹ ಹಲವಾರು ಕೆಟ್ಟ ಪರಿಣಾಮಗಳ ಬಗ್ಗೆ ಈಗಾಗಲೇ ಹಲವಾರು ಅಧ್ಯಯನಗಳು ವರದಿಗಳನ್ನು ನೀಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಇದೆಯಾ ಎಂದು ನೋಡಲು ಜನರು ಮಲಗುವ ಮೊದಲು ಕೂಡ ಮೊಬೈಲ್ ತಡಕಾಡುವರು. ನೀವು ತುಂಬಾ ಆಲಸ್ಯ, ಕಿರಿಕಿರಿ ಮತ್ತು ನಿದ್ರಾಹೀನತೆಯಿಂದ ಎದ್ದರೆ ಆಗ ನೀವು ಯಾರನ್ನು ದೂರುತ್ತೀರಿ. ಮಕ್ಕಳು ಕೂಡ ತುಂಬಾ ಆಲಸ್ಯ ಹಾಗೂ ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಿದ್ದರೆ ಆಗ ನೀವು ಅವರು ಮೊಬೈಲ್ ನೋಡುವ ಅವಧಿಯ ಕಡೆ ಗಮನಹರಿಸಬೇಕು.

ಜರ್ನಲ್ ಪೀಡಿಯಾಟ್ರಿಕ್ಸ್ ನಲ್ಲಿ ಇತ್ತೀಚೆಗೆ ಪ್ರಕಟಗೊಂಡಿರುವಂತಹ ವರದಿಯೊಂದು ಹೇಳುವ ಪ್ರಕಾರ, ಮಲಗುವ ಮೊದಲು ಮಕ್ಕಳಿಗೆ ಮೊಬೈಲ್ ಫೋನ್ ಕೊಟ್ಟರೆ, ಅವರಲ್ಲಿ ನಿದ್ರಾಹೀನತೆ ಸಮಸ್ಯೆಯು ಕಂಡುಬರುವುದು. ಇದು ದೊಡ್ಡವರಿಗೂ ಅನ್ವಯ ಆಗುವುದು.

smartphones

ಮಕ್ಕಳ ಮೆದುಳು ಬೆಳವಣಿಗೆ ಹಂತದಲ್ಲಿ ಇರುವಂತಹ ಕಾರಣದಿಂದಾಗಿ ಮೊಬೈಲ್ ಅಥವಾ ಬೇರೆ ಇಂತಹ ಸಾಧನಗಳಿಂದ ಹೊರಸೂಸುವಂತಹ ನೀಲಿ ಬಣ್ಣದ ಬೆಳಕು ಆತ/ಆಕೆಯ ದೈಹಿಕ ಗಡಿಯಾರದ ಮೇಲೆ ಅತಿಯಾದ ಪರಿಣಾಮ ಬೀರುವುದು. ಇಲ್ಲಿ ಇನ್ನೊಂದು ಅಂಶವನ್ನು ತುಂಬಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇನೆಂದರೆ ಮಕ್ಕಳು ಬೆಳೆಯುತ್ತಾ ಇರುವಂತಹ ಅವರಿಗೆ ಬೆಳಕಿನ ಸೂಕ್ಷ್ಮತೆಯ ಸಮಸ್ಯೆಯು ಕಾಣಿಸಬಹುದು. ಈ ಎರಡು ಅಂಶಗಳು ಮಕ್ಕಳ ದೇಹದಲ್ಲಿ ಮೆಲಟೊನಿನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು. ದೇಹದಲ್ಲಿ ಮೆಲಟೊನಿನ್ ಹಾರ್ಮೋನು ನಿದ್ರೆಯ ಆವರ್ತನವನ್ನು ನಿವಾರಿಸುವುದು. ಅಕ್ಷಿಪಟವು ಹೆಚ್ಚಿನ ಪ್ರಮಾಣದಲ್ಲಿ ನೀಲಿ ಬೆಳಕನ್ನು ನೋಡಿದ ವೇಳೆ ದೇಹದಲ್ಲಿ ಮೆಲಟೊನಿನ್ ಹಾರ್ಮೋನು ಪ್ರಮಾಣ ತಗ್ಗುವುದು. ಮಕ್ಕಳು ಮೊಬೈಲ್ ನ ನೀಲಿ ಬೆಳಕನ್ನು ನೋಡುವುದು ಎಷ್ಟು ಹಾನಿಕಾರಕ ಎಂದು ನಿಮಗೆ ಈಗ ತಿಳಿದಿರಬಹುದು ಅಲ್ಲವೇ? ಮಕ್ಕಳಿಗೆ ಮಲಗುವ ಮೊದಲು ಮೊಬೈಲ್ ನೀಡುವುದರಿಂದ ಖಂಡಿತವಾಗಿಯೂ ಅವರ ನಿದ್ರೆಯ ಮೇಲೆ ಇದು ಪರಿಣಾಮ ಬೀರುವುದು.

ನೀವು ಏನು ಮಾಡಬೇಕು?

ಮೊದಲನೇಯದಾಗಿ ಮತ್ತು ತುಂಬಾ ಮುಖ್ಯವಾಗಿ ನೀವು ಮಾಡಬೇಕಾಗಿರುವ ಕೆಲಸವೆಂದರೆ ಮಕ್ಕಳು ಮೊಬೈಲ್ ನಲ್ಲಿ ಗಂಟೆಗಟ್ಟಲೆ ಆಡುವುದು ಮತ್ತು ವಿಡಿಯೋ ನೋಡುವುದನ್ನು ನಿಲ್ಲಿಸಬೇಕು. ಇದರ ಬದಲಿಗೆ ನೀವು ಓದುವ ಹವ್ಯಾಸ ಬೆಳೆಸಲು ತಿಳಿಸಿ ಮತ್ತು ಹೊರಗಡೆ ಹೋಗಿ ಆಟವಾಡಲು ಪ್ರೋತ್ಸಾಹ ನೀಡಿ. ಎರಡನೇಯದಾಗಿ ನಿದ್ರಿಸಲು ಹೋಗುವ ಮೊದಲು ಅವರ ಕೈಯಲ್ಲಿ ಮೊಬೈಲ್ ಇದ್ದರೆ ಅದನ್ನು ತೆಗೆದುಕೊಳ್ಳಿ. ಇದರಿಂದ ಅವರು ಮಲಗುವ ವೇಳೆ ವಿಡಿಯೋ ನೋಡುವುದು ಅಥವಾ ಯೂ ಟೂಬ್ ನಲ್ಲಿ ಗಂಟೆಗಟ್ಟಲೆ ಹುಡುಕುತ್ತಾ ಇರುವುದು ತಪ್ಪುವುದು. ಇದೇ ವೇಳೆ ನೀವು ಮಕ್ಕಳು ಇರುವಂತಹ ಕೋಣೆಯಲ್ಲಿ ಮೊಬೈಲ್ ಇಡಬೇಡಿ. ಮಕ್ಕಳು ಮಲಗುವ ಕೋಣೆಯಲ್ಲಿ ಮೊಬೈಲ್ ಇಟ್ಟರೆ ಅದರಿಂದಲೂ ಅವರ ನಿದ್ರೆಯ ಮೇಲೆ ಪರಿಣಾಮವಾಗಿದೆ ಎಂದು ವರದಿಗಳು ಹೇಳಿವೆ.

smartphones

ಕೊನೆ ಮಾತು

ಮೊಬೈಲ್, ಲ್ಯಾಪ್ ಟಾಪ್ ನಂತಹ ಸಾಧನಗಳು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಮಗುವಿನ ಮೇಲೂ ಪರಿಣಾಮ ಉಂಟು ಮಾಡುವುದು. ಮಗು ಮಲಗಲು ತೆರಳುವ ಮೊದಲು ಎರಡು ಗಂಟೆಗೆ ಮೊದಲು ನೀವು ಇದನ್ನು ಮಕ್ಕಳ ಕೈಯಿಂದ ತೆಗೆದುಕೊಳ್ಳಿ. ಮಕ್ಕಳಿಗೆ ಮಾದರಿಯಾಗಬೇಕಿದ್ದರೆ ಆಗ ನೀವು ಮೊಬೈಲ್ ನಿಂದ ಸಾಕಷ್ಟು ದೂರವಿರುವುದು ತುಂಬಾ ಒಳ್ಳೆಯದು.

English summary

Do not give smartphones to your children before bed!

If you are one of those parents who hand over smartphones to your kids to cajole them, we have some bad news for you. In an increasingly popular trend, parents are seen giving smartphones to their children to distract them while they finish their work.While there are plenty of studies which already point out the side-effects of using a smartphone in bed, people still end up scrolling their night away on inane social media posts.
Story first published: Tuesday, March 12, 2019, 16:15 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more