For Quick Alerts
ALLOW NOTIFICATIONS  
For Daily Alerts

ಮಕ್ಕಳ ಜೀರ್ಣಕ್ರಿಯೆ ಸಮಸ್ಯೆಗೆ ಆಯುರ್ವೇದ ವಿಧಾನದ ಪರಿಹಾರ

|

ಮಕ್ಕಳ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಮಕ್ಕಳ ಜೀರ್ಣಕ್ರಿಯೆಯು ತುಂಬಾ ಸೂಕ್ಷ್ಮವಾಗಿರುವುದು. ಶಿಶು ಬೆಳೆದಂತೆ ಅದರ ಜೀರ್ಣಕ್ರಿಯೆ ವ್ಯವಸ್ಥೆಯು ಬಲವಾಗುತ್ತಾ ಹೋಗುವುದು. ಇದರಿಂದ ಸುಮಾರು ಒಂದು ಆರು ತಿಂಗಳ ತನಕ ಮಗುವಿನ ಕೇವಲ ಎದೆ ಹಾಲು ಮಾತ್ರ ನೀಡಲಾಗುತ್ತದೆ. ಎದೆಹಾಲು ತುಂಬಾ ಸುಲಭವಾಗಿ ಕರಗುವಂತಹ ಹಾಲು ಎಂದು ಪರಿಗಣಿಸಲಾಗಿದೆ. ಅದೇ ಬೇರೆ ಯಾವುದೇ ಪ್ರಾಣಿಯ ಹಾಲು ಅಷ್ಟು ಬೇಗ ಕರಗುವುದಿಲ್ಲ. ಇದರಿಂದ ಆರು ತಿಂಗಳವರೆಗೆ ಮಗುವಿಗೆ ಬೇರೆ ಹಾಲು ಅಥವಾ ಆಹಾರ ನೀಡಲಾಗುವುದಿಲ್ಲ.

ಕೆಲವೊಂದು ಸಲ ಬೇರೆ ಆಹಾರ ನೀಡಿದರೂ ಅದು ಅಜೀರ್ಣಕ್ಕೆ ಕಾರಣವಾಗುವುದು. ಇದರಿಂದ ಸೋಂಕು ಅಥವಾ ಕಾಯಿಲೆಗಳು ಕೂಡ ಬರಬಹುದು. ಮಗುವಿನ ಆಹಾರದಲ್ಲಿ ಸಣ್ಣ ಬದಲಾವಣೆ ಅಥವಾ ಯಾವುದೇ ಬೇರೆ ಪದಾರ್ಥವು ಸೇರಿಕೊಂಡರೆ ಮಗುವಿನ ಜೀರ್ಣಕ್ರಿಯೆಗೆ ವ್ಯತಿರಿಕ್ತ ಪರಿಣಾಮವಾಗುವುದು. ಇದರಿಂದ ಹೆಚ್ಚಿನ ತಾಯಂದಿರು ಅದರಲ್ಲೂ ಮೊದಲ ಸಲ ತಾಯಿಯಾದವರು ಮಗುವಿನ ಜೀರ್ಣಕ್ರಿಯೆ ಬಗ್ಗೆ ಹೆಚ್ಚು ಚಿಂತೆ ಮಾಡುವರು.

ಶಿಶುಗಳಿಗೆ ಯಾವುದೇ ರೀತಿಯ ಔಷಧಿ ಕೊಡಲು ಈ ಸಮಯದಲ್ಲಿ ಸಾಧ್ಯವಿಲ್ಲದೆ ಇರುವುದರಿಂದ ಇದೊಂದು ಸವಾಲಿನ ಸಮಸ್ಯೆಯಾಗಿದೆ. ಮಗುವಿನ ಜೀರ್ಣಕ್ರಿಯೆಯು ಸರಿಯಾಗಿ ಇಲ್ಲವೆಂದು ತಿಳಿಯಲು ಕೆಲವೊಂದು ವಿಚಾರಗಳನ್ನು ಮುಖ್ಯವಾಗಿ ಗಮನಿಸಬೇಕು. ಅವುಗಳಲ್ಲಿ ಮುಖ್ಯವಾಗಿ ಮಲಬದ್ಧತೆ, ಗ್ಯಾಸ್, ಹೊಟ್ಟೆ ಉಬ್ಬರ, ವಾಂತಿ, ಭೇದಿ, ಸೋಂಕು ಅಥವಾ ಜ್ವರ ಪ್ರಮುಖವಾಗಿ ಬರಬಹುದು. ಮಗುವಿನ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡಲು ಇರುವ ಕೆಲವೊಂದು ಆಯುರ್ವೇದ ಚಿಕಿತ್ಸೆಗಳು.

 ಹಾಲುಣಿಸುವ ಭಂಗಿ ಸರಿಪಡಿಸಿ

ಹಾಲುಣಿಸುವ ಭಂಗಿ ಸರಿಪಡಿಸಿ

ಎದೆ ಹಾಲುಣಿಸುವ ವೇಳೆ ಭಂಗಿಯು ಸರಿಯಾಗಿ ಇಲ್ಲದೆ ಇದ್ದರೆ ಆಗ ಜೀರ್ಣಕ್ರಿಯೆ ಸಮಸ್ಯೆಯು ಕಾಡುವುದು. ಇದರಿಂದ ಗ್ಯಾಸ್ ಅಥವಾ ಆಮ್ಲೀಯ ಹಿಮ್ಮುಖವಾಗಬಹುದು. ಮಗುವಿಗೆ ಹಾಲುಣಿಸುವ ವೇಳೆ ಮಗುವಿನ ತಲೆಯು ಅದರ ಹೊಟ್ಟೆಗಿಂತ ಎತ್ತರದ ಭಾಗದಲ್ಲಿ ಇರಲಿ ಎನ್ನುವುದನ್ನು ನೀವು ನೋಡಿಕೊಳ್ಳಬೇಕು. ಈ ಭಂಗಿಯಿಂದ ಹಾಲು ಸರಿಯಾಗಿ ಹೊಟ್ಟೆಗೆ ತಲುಪುವುದು ಮತ್ತು ಗಾಳಿ ಬಂದರೆ ಅದು ಸುಲಭವಾಗಿ ಹೊರಗೆ ಹೋಗುವುದು. ಕಾಲಿನ ಮೇಲೆ ಮಗುವನ್ನು ಮಲಗಿಸಿದರೆ ಆಗ ಮಗುವಿನ ತಲೆಯು ಸ್ವಲ್ಪ ಮೇಲಿರುವಂತೆ ನಿಮ್ಮ ಕಾಲುಗಳನ್ನು ಇಟ್ಟುಕೊಳ್ಳಿ ಅಥವಾ ಮಗುವಿನ ಕುತ್ತಿಗೆಗೆ ಮೆತ್ತಗಿನ ದಿಂಬು ಇಟ್ಟುಕೊಳ್ಳಿ.

MOST READ: ಮಕ್ಕಳಿಗೆ ಕಾಡುವ ಸೈನಸ್ ಸಮಸ್ಯೆಗೆ ಕೆಲವೊಂದು ಮನೆಮದ್ದುಗಳು

ಮಗುವಿಗೆ ಮಸಾಜ್ ಮಾಡಿ

ಮಗುವಿಗೆ ಮಸಾಜ್ ಮಾಡಿ

ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡಲು ನೀವು ತುಂಬಾ ನಿಧಾನವಾಗಿ ಮಗುವಿನ ಹೊಟ್ಟೆ ಮೇಲೆ ಮಸಾಜ್ ಮಾಡಬೇಕು. ಮಗುವಿನ ಹೊಕ್ಕಳಿನ ಸುತ್ತಲು ನಯವಾಗಿ ಮಸಾಜ್ ಮಾಡಿ. ತುಂಬಾ ಒತ್ತಡ ಹಾಕಬೇಡಿ. ವೃತ್ತಾಕಾರದಲ್ಲಿ ಮಗುವಿನ ಹೊಟ್ಟೆ ಮಸಾಜ್ ಮಾಡಿ. ಮಗುವಿನ ಎಣ್ಣೆ ಅಥವಾ ಕ್ರೀಮ್ ನ್ನು ಸ್ವಲ್ಪ ಹಾಕಿಕೊಂಡು ಹೊಟ್ಟೆಗೆ ಮಸಾಜ್ ಮಾಡಿ.

 ಮಗುವಿನ ಬೆನ್ನು ನೀವಿ ತೇಗು ಬರುವಂತೆ ಮಾಡಿ

ಮಗುವಿನ ಬೆನ್ನು ನೀವಿ ತೇಗು ಬರುವಂತೆ ಮಾಡಿ

ಎದೆ ಹಾಲುಣಿಸಿದ ಬಳಿಕ ಪ್ರತೀ ಸಲವೂ ಮಗುವಿನ ಬೆನ್ನು ನೀವಿ ತೇಗು ಬರುವಂತೆ ಮಾಡಿ. ಇದು ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡಲು ಒಳ್ಳೆಯ ವಿಧಾನ. ತೇಗು ಹೊರಹಾಕಿದರೆ ಅದರಿಂದ ಗ್ಯಾಸ್ ಮತ್ತು ಮಗು ಹಾಲನ್ನು ಹೊರಗೆ ಹಾಕುವುದು ನಿಲ್ಲುವುದು. ಎದೆ ಹಾಲುಣಿಸಿದ ಬಳಿಕ ಸ್ವಲ್ಪ ಸಮಯ ಕಾಯಿರಿ ಮತ್ತು ಇದರ ಬಳಿಕ ಮಗುವನ್ನು ನಿಮ್ಮ ಹೆಗಲಿಗೆ ಹಾಕಿಕೊಂಡು ಬೆನ್ನನ್ನು ನೀವಿ ತೇಗು ಬರುವಂತೆ ಮಾಡಿ.

MOST READ: ಇದೇ ಕಾರಣಕ್ಕೆ, ಚಿಕ್ಕ ಮಕ್ಕಳಿಗೆ ಮಾತಿನ ಸಮಸ್ಯೆ ಕಾಡುವುದು!

 ಎದೆ ಹಾಲು ಮಾತ್ರ ನೀಡಿ

ಎದೆ ಹಾಲು ಮಾತ್ರ ನೀಡಿ

ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಎದೆ ಹಾಲಿನ ಹೊರತಾಗಿ ಮಗುವಿಗೆ ಬೇರೆ ಯಾವುದೇ ರೀತಿಯ ಆಹಾರ ಅಥವಾ ಪಾನೀಯವನ್ನು ನೀಡಬೇಡಿ. ವೈದ್ಯರು ಸಲಹೆ ನೀಡಿರುವ ತನಕ ನೀವು ಕೇವಲ ಎದೆ ಹಾಲು ಮಾತ್ರ ನೀಡಬೇಕು. ಮಗುವಿಗೆ ಬೇರೆ ಯಾವುದೇ ಆಹಾರ ನೀಡುವ ಮೊದಲು ನೀವು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ಮಗುವಿಗೆ ಬೇರೆ ಯಾವುದೇ ಆಹಾರದಿಂದ ತೊಂದರೆ ಆಗುತ್ತಲಿದ್ದರೆ ಆಗ ನೀವು ಅದನ್ನು ಕೊಡುವುದನ್ನು ತಕ್ಷಣ ನಿಲ್ಲಿಸಿಬಿಡಿ. ಹಠಾತ್ ಆಗಿ ಮಗುವಿಗೆ ಎದೆ ಹಾಲು ನೀಡುವುದನ್ನು ನಿಲ್ಲಿಸಿಬಿಡಬೇಡಿ. ಮಗು ಬೆಳೆಯುತ್ತಾ ಬೇರೆ ಆಹಾರ ಸೇವನೆ ಮಾಡಲು ಆರಂಭಿಸಿದ ಬಳಿಕ ನೀವು ನಿಧಾನವಾಗಿ ಮಗುವಿಗೆ ಹಾಲು ನೀಡುವ ಪ್ರಮಾಣ ಕಡಿಮೆ ಮಾಡುತ್ತಾ ಬನ್ನಿ.

 ಗ್ರೈಪ್ ವಾಟರ್

ಗ್ರೈಪ್ ವಾಟರ್

ಮಗುವಿಗೆ ಸಂಬಂಧಿಸಿದ ಎಲ್ಲಾ ಜೀರ್ಣಕ್ರಿಯೆ ಸಮಸ್ಯೆಗೆ ಗ್ರೈಪ್ ವಾಟರ್ ಒಳ್ಳೆಯ ಪರಿಹಾರವಾಗಿದೆ. ಗ್ರೈಪ್ ವಾಟರ್ ನಲ್ಲಿ ಸೋಡಿಯಂ ಬೈಕಾರ್ಬೋನೇಟ್ ನೊಂದಿಗೆ ನೀರು ಮತ್ತು ಹಲವಾರು ಗಿಡಮೂಲಿಕೆಗಳು ಇವೆ. ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ ನಿವಾರಣೆ ಮಾಡಲು ಇದು ತುಂಬಾ ಸುರಕ್ಷಿತ ವಿಧಾನವಾಗಿದೆ. ಕೇವಲ ಐದು ನಿಮಿಷದಲ್ಲಿ ಇದು ಕೆಲಸ ಮಾಡಲು ಆರಂಭಿಸುವುದು. ತಕ್ಷಣವೇ ಇದು ಮಗುವಿಗೆ ಆರಾಮ ನೀಡುವುದು. ವೈದ್ಯರ ಸಲಹೆ ಪಡೆಯದೆ ಮಗುವಿಗೆ ಯಾವುದೇ ರೀತಿಯ ಔಷಧಿಗಳನ್ನು ನೀಡಬೇಡಿ. ಈ ಮನೆಮದ್ದುಗಳನ್ನು ನೀವು ಪರೀಕ್ಷಿಸಿ, ಪರಿಸ್ಥಿತಿಯು ಹದಗೆಡುತ್ತಲಿದ್ದರೆ ಆಗ ನೀವು ವೈದ್ಯರನ್ನು ತಕ್ಷಣ ಭೇಟಿ ಮಾಡಿ ಸಲಹೆ ಪಡೆಯಿರಿ.

English summary

Ayurveda to Improve Your Baby's Digestion

A baby's digestive system is very sensitive. It is still growing which makes it more vulnerable to infections and diseases. A small change in your baby’s diet or a wrong ingredient even in a small quantity can disturb the functioning if your baby’s digestive tract. A lot of mothers especially first-time mother are always worried about their baby’s digestive health. A such a young age you cannot give medicines to your baby for everything. Natural remedies are best for a baby as they do not possess any side effect.
Story first published: Tuesday, February 26, 2019, 18:08 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more