ಮಕ್ಕಳ 'ಮನೆಪಾಠ'ದಿಂದಾಗಿ ಪೋಷಕರಿಗೆ ನೆಮ್ಮದಿಯೇ ಇಲ್ಲ!!

By: manu
Subscribe to Boldsky

ಒಂದು ವೇಳೆ ನಿಮ್ಮ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ನಿಮಗೆ ಅರಿವೇ ಇಲ್ಲದಂತೆ ಹಲವಾರು ಹೆಚ್ಚುವರಿ ಕೆಲಸಗಳು ಆವರಿಸಿಕೊಳ್ಳುತ್ತವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರು ಮಾಡುವುದು, ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸ್ ಸಿದ್ಧಪಡಿಸುವುದು, ಅಂದಿನ ಪಾಠಗಳಿಗೆ ಬೇಕಾದ ಪುಸ್ತಕ ಮತ್ತು ಇತರ ಸಾಮಾಗ್ರಿಗಳನ್ನು ಮರೆಯದೇ ಕೊಂಡು ಹೋಗುವಂತೆ ನೋಡಿಕೊಳ್ಳುವುದು, ಸಮವಸ್ತ್ರ, ಶೂ, ಸಾಕ್ಸ್, ಟೈ ಮೊದಲಾದವು ಅಂದಿನ ದಿನದ ಅಗತ್ಯಕ್ಕೆ ತಕ್ಕಂತೆ ಇರುವಂತೆ ನೋಡಿಕೊಳ್ಳುವುದು ಇತ್ಯಾದಿಗಳೆಲ್ಲಾ ಪ್ರತಿ ಗೃಹಿಣಿಯರು ಅನುಭವಿಸುವ ನಿತ್ಯದ ಪಾಡಾಗಿದೆ.  

Child’s Homework
 

ಮಕ್ಕಳ ಪಾಲನೆ ಎಂದರೆ ಅಷ್ಟು ಸುಲಭವಾದ ಮಾತಲ್ಲ, ವಿಶೇಷವಾಗಿ ಮಕ್ಕಳು ಮುಂದಿನ ತರಗತಿಗಳಿಗೆ ದಾಟುತ್ತಾ ಹೋದಂತೆ ಪಾಲಕರ ಜವಾಬ್ದಾರಿಯೂ ಹೆಚ್ಚುತ್ತಾ ಹೊಗುತ್ತದೆ. ಆದರೆ ಈ ಪಾಲನೆಯ ಪರಿಣಾಮವಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯದತ್ತ ಸಾಗುತ್ತಿರುವುದನ್ನು ಕಂಡ ಯಾವುದೇ ಪಾಲಕರಿಗೆ ತಮ್ಮ ಶ್ರಮಗಳು ಸಾರ್ಥಕ ಎನಿಸುತ್ತವೆ.

ಜೀವನದಲ್ಲಿ ಮುಂದೆ ಬರಬೇಕಾದರೆ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಸಾಧಿಸಲೇಬೇಕು. ಇದನ್ನು ಸಾಧಿಸಲು ಮಕ್ಕಳಿಗೆ ಎಲ್ಲಾ ರೀತಿಯಲ್ಲಿ ನೆರವಾಗುವುದು ಪಾಲಕರ ಕರ್ತವ್ಯವೂ ಹೌದು. ಶಿಕ್ಷಣದಲ್ಲಿ ಮನೆಪಾಠವೂ ಒಂದು ಮುಖ್ಯವಾದ ಅಂಗವಾಗಿದ್ದು ಈ ಮೂಲಕ ಶಾಲೆಯಲ್ಲಿ ಸಮಯಾಭಾವದಿಂದ ಪೂರೈಸಲಾಗದ ವಿಷಯ ಅಥವಾ ಮಕ್ಕಳೇ ತಮ್ಮ ಜಾಣ್ಮೆಯನ್ನು ಉಪಯೋಗಿಸಿ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಮನೆಪಾಠವನ್ನು ನೀಡಲಾಗುತ್ತದೆ. ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ

ಆದರೆ ಈ ಮನೆಪಾಠ ಹೆಚ್ಚಿನವರಿಗೆ ಹೊರೆ ಎಂದೇ ಅನ್ನಿಸುತ್ತದೆ. ಹೆಚ್ಚಿನ ಮಕ್ಕಳು ಮನೆಪಾಠವನ್ನು ಪೂರೈಸಲು ಪಾಲಕರ ನೆರವು ಪಡೆಯುತ್ತಾರೆ. ಹೆಚ್ಚಿನ ಮನೆಗಳಲ್ಲಿ ಈ ಮನೆಪಾಠಕ್ಕೆ ನೆರವು ನೀಡುವ ಪಾಲಕರು ಹೆಚ್ಚೂ ಕಡಿಮೆ ಎಲ್ಲವನ್ನೂ ತಾವೇ ಮಾಡಿಕೊಡುತ್ತಾರೆ. ಈ ಮೂಲಕ ಮಕ್ಕಳ ಮನೆಪಾಠವೂ ಕುಟುಂಬದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೇಗೆ? ಇಲ್ಲಿವೆ ಉತ್ತರಗಳು:          ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವ ಚಟುವಟಿಕೆಗಳು  

Child’s Homework
 

1. ತೂಕದಲ್ಲಿ ಹೆಚ್ಚಳ

ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಮಕ್ಕಳ ಮನೆಪಾಠ ಪಾಲಕರ ಮತ್ತು ಮಕ್ಕಳ ಸ್ಥೂಲಕಾಯಕ್ಕೆ ಪರೋಕ್ಷವಾಗಿ ನೆರವಾಗುತ್ತದೆ. ಏಕೆಂದರೆ ಇಂದಿನ ದಿನಗಳಲ್ಲಿ ಮನೆಪಾಠದ ಪ್ರಮಾಣ ಹೆಚ್ಚಾಗಿದ್ದು ಶಾಲಾ ಸಮಯದ ಬಳಿಕವೂ ಮಕ್ಕಳು ಪಠ್ಯಗಳನ್ನು ಮನೆಯಲ್ಲಿಯೇ ಹೆಚ್ಚು ಕಾಲ ಓದಬೇಕಾಗುತ್ತದೆ. ಇದರಲ್ಲಿ ಹೆಚ್ಚಿನವುಗಳನ್ನು ತಮ್ಮ ಮಕ್ಕಳ ಕಷ್ಟ ನೋಡಲಾರದೇ ಪಾಲಕರೇ ಮಾಡಿಕೊಡುತ್ತಾರೆ. ಈ ಅಭ್ಯಾಸದಿಂದ ಮಕ್ಕಳಿಗೂ, ಪಾಲಕರಿಗೂ ದೈಹಿಕ ಚಟುವಟಿಕೆಯ ಅಭ್ಯಾಸ ಕಡಿಮೆಯಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

2. ಖಿನ್ನತೆ

ಮನೆಪಾಠದ ಹೊರೆಯಿಂದ ಮಕ್ಕಳು ಮತ್ತು ಪಾಲಕರಲ್ಲಿ ಖಿನ್ನತೆಯೂ ಹೆಚ್ಚಿರುವುದು ಕಂಡುಬಂದಿದೆ. ಎಷ್ಟೋ ಸಮಯದಲ್ಲಿ ಹೆಚ್ಚಿನ ಅಂಕ ಪಡೆಯುವಂತೆ ಮಾಡಲು ಮಕ್ಕಳ ಮೇಲೆ ಪಾಲಕರು ಹೆಚ್ಚಿನ ಒತ್ತಡ ಹೇರುತ್ತಾರೆ. ಅಲ್ಲದೇ ಮನೆಪಾಠವನ್ನು ಪೂರ್ಣವಾಗಿಸಲು, ತಪ್ಪಿಲ್ಲದಂತೆ ಮಾಡಲು ಗದರಿಸುತ್ತಾರೆ. ಈ ಒತ್ತಡದಿಂದ ಮಕ್ಕಳು ತಮ್ಮ ಪಾಠಗಳನ್ನು ಸರಿಯಾಗಿ ಕಲಿಯಲು ಅಸಮರ್ಥರಾಗಿ, ತಮ್ಮ ಮಕ್ಕಳು ಅಸಮರ್ಥರಾದರೆಂದು ಪಾಲಕರೂ ಖಿನ್ನತೆಗೆ ಒಳಗಾಗುತ್ತಾರೆ.  ಮಕ್ಕಳ ಹಠಮಾರಿತನಕ್ಕೆ ಪೋಷಕರ ಖಿನ್ನತೆಯೇ ಕಾರಣ! 

 

Child’s Homework

ಈ ಖಿನ್ನತೆ ಬೇರಾವುದೋ ರೂಪದಲ್ಲಿ ಮನೆಯ ಇತರ ಸದಸ್ಯರ ಮೇಲೂ ಪ್ರಭಾವ ಬೀರಬಹುದು. ಒಟ್ಟಾರೆ ಮಕ್ಕಳ ಮನೆಪಾಠ ಇಡಿಯ ಕುಟುಂಬದ ಮೇಲೇ ಪ್ರಭಾವ ಬೀರಬಲ್ಲುದು. ಮಾನಸಿಕ ತಜ್ಞರು ಕಂಡುಕೊಂಡಿರುವಂತೆ ಮನೆಪಾಠದ ಪರಿಣಾಮಗಳು ಇಡಿಯ ಕುಟುಂಬದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಆದರೆ ಇದರ ಹಿಂದೆ ಮನೆಪಾಠದ ಆಗಾಧ ಪ್ರಮಾಣ, ಇದನ್ನು ಮುಗಿಸಲೇಬೇಕೆಂಬ ಒತ್ತಡ, ತಮ್ಮ ಮಕ್ಕಳು ಅತಿ ಹೆಚ್ಚು ಅಂಕ ಪಡೆಯಲೇಬೇಕೆಂದು ಮನೆಯವರ ಒತ್ತಡ ಇವೇ ಪ್ರಮುಖ ಕಾರಣಗಳಾಗಿವೆ....

English summary

How Your Child’s Homework Can Affect Your Family’s Health

Getting your child ready for school in the morning, packing their lunches, making sure that they haven't forgotten their books at home - all these can be quite tiring for parents! As we all realise, parenting is not an easy job, especially as the kids start to grow up and start their studies, the parents will start to have more responsibilities. As parents we would want our children to do well in school and have a great education, so that their future can be shaped in a better way and also to enable them to live a quality life.
Please Wait while comments are loading...
Subscribe Newsletter