For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವ ಚಟುವಟಿಕೆಗಳು

|

ಪ್ರತಿಯೊಬ್ಬ ಪೋಷಕರಿಗೆ ಮಕ್ಕಳ ಪರೀಕ್ಷೆ ಬಂತೆಂದರೆ ತಾವೇ ಪರೀಕ್ಷೆ ಬರೆಯುವಷ್ಟು ಆತಂಕಕ್ಕೆ ಒಳಗಾಗುತ್ತಾರೆ. ನಮ್ಮ ಮಕ್ಕಳಿಗೆ ಓದಿದ್ದೆಲ್ಲಾ ಪರೀಕ್ಷೆಯಲ್ಲಿ ಚೆನ್ನಾಗಿ ನೆನಪಿಗೆ ಬಂದರೆ ಸಾಕಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮಕ್ಕಳು ಉತ್ತಮ ಅಂಕ ತೆಗೆಯಲು ಬುದ್ಧಿ ಶಕ್ತಿ ಇದ್ದರೆ ಮಾತ್ರ ಸಾಲದು, ಏಕಾಗ್ರತೆ ಬೇಕು. ಏಕ್ರಾಗತೆ ಅನ್ನುವುದು ಕೇವಲ ಮಾರ್ಕ್ಸ್ ತೆಗೆಯಲು ಮಾತ್ರವಲ್ಲ ಜೀವನದಲ್ಲಿ ಪ್ರತಿಯೊಂದು ಕೆಲಸಮಾಡುವಾಗ ಏಕಾಗ್ರತೆ ಅವಶ್ಯಕ.

ಆದ್ದರಿಂದ ನಿಮ್ಮ ಮಕ್ಕಳಲ್ಲಿ ಚಿಕ್ಕ ಪ್ರಾಯದಲ್ಲಿಯೇ ಏಕಾಗ್ರತೆ ಬೆಳೆಸಿದರೆ ಒಳ್ಳೆಯದು, ಮಕ್ಕಳಲ್ಲಿ ಏಕಾಗ್ರತೆ ಬೆಳೆಸುವಲ್ಲಿ ಈ ಕೆಳಗಿನ ಚಟುವಟಿಕೆಗಳು ಸಹಾಯ ಮಾಡುತ್ತವೆ:

Help Your Toddler Concentrate

ಓದುವುದು
ಮಕ್ಕಳಿಗೆ ಪಾಠ ಹೇಳಿಕೊಡುವಾಗ ಜೋರಾಗಿ ಓದಿ, ಅದರ ವಿವರಣೆಯನ್ನು ಉದಾಹರಣೆ ಸಹಿತ ಹೇಳಿಕೊಟ್ಟರೆ ಮಕ್ಕಳಿಗೆ ಆಸಕ್ತಿ ಹೆಚ್ಚಾಗಿ ಏಕಾಗ್ರತೆಯಿಂದ ಕೇಳುತ್ತಾರೆ. ಇದರಿಂದ ನೆನಪಿನ ಶಕ್ತಿ ಹೆಚ್ಚುವುದು.

ಕೆಲವೊಂದು ಆಟಗಳು
ಚೆಸ್, ಹಾವು-ಏಣಿ ಆಟ, ಲುಡಾ ಈ ರೀತಿಯ ಆಟ ಆಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುವುದು. ಅಲ್ಲದೆ ಸ್ಲೋರ್ಟ್ಸ್ ನಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ, ಸ್ಪೋರ್ಟ್ಸ್ ಕೂಡ ಮಕ್ಕಳಲ್ಲಿ ಏಕಾಗ್ರತೆಯ ಸಾಮರ್ಥ್ಯ ಹೆಚ್ಚಿಸುವುದು.

ಕ್ಯಾಂಡಲ್ ಪ್ರಯೋಗ
ಮೇಣದ ಬತ್ತಿ ಹಚ್ಚಿ ನಿಮ್ಮ ಮಗುವಿನ ಹತ್ತಿರ 3 ನಿಮಿಷ ಆ ಬೆಳಕನ್ನೇ ನೋಡಲು ಹೇಳಿ, ಮಗು ಅದರ ಮೇಲೆ ದೃಷ್ಟಿ ಇಟ್ಟು ನೋಡುತ್ತಿದ್ದಂತೆ ಏಕಾಗ್ರತೆ ಸಾಮರ್ಥ್ಯ ಹೆಚ್ಚುವುದು. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಇದೊಂದು ಉತ್ತಮವಾದ ವಿಧಾನವಾಗಿದೆ.

ನಾಣ್ಯ
ಮೇಣದ ಬತ್ತಿಯನ್ನು ದಿಟ್ಟಿಸಿ ನೋಡುವಂತೆಯೇ ನಿಮ್ಮ ಮಗುವಿನ ಮುಂದೆ ನಾಣ್ಯ ಹಾಕಿ ಅತ್ತ- ಇತ್ತ ನೋಡದೆ ನಾಣ್ಯವನ್ನು 5 ನಿಮಿಷ ನೋಡಲು ಹೇಳಿ, ಮಗು ಹೀಗೆ ಮಾಡಿದಾಗ ಅವರನ್ನು ಹುರಿದುಂಬಿಸಿ, ಈ ವಿಧಾನವು ಮಕ್ಕಳಲ್ಲಿ ಏಕಾಗ್ರತೆ ಸಾಮರ್ಥ್ಯವನ್ನು ಹೆಚ್ಚಿಸುವುದು.

ಸಂಗೀತ
ನಿಮ್ಮ ಮಗು ಸಂಗೀತವನ್ನು ಕೇಳಲು ಇಷ್ಟ ಪಡುವುದಾದರೆ ಅವನ/ಳ ಇಷ್ಟದ ಹಾಡುಗಳನ್ನು ಹಾಕಿ. ಹೀಗೆ ಮಾಡಿದರೆ ಅವರು ಆ ಹಾಡನ್ನು ಗಮನವಿಟ್ಟು ಕೇಳುತ್ತಾರೆ, ಇದರಿಂದ ಏಕಾಗ್ರತೆ ಹೆಚ್ಚುವುದು.

ತುಂಬಾ ಕೆಲಸಗಳನ್ನು ಜೊತೆಯಲ್ಲಿ ಮಾಡಲು ಕೊಡಬೇಡಿ
ಮಗು ಆಡುತ್ತಿರುವ ಸಮಯದಲ್ಲಿ ಓದು ಅಂತ, ಓದುತ್ತಿರುವಾಗ ಹೋಂವರ್ಕ್ ಮಾಡು ಅಂತ ಹೀಗೆ ನಾನಾ ಕೆಲಸಗಳನ್ನು ಜೊತೆಯಲ್ಲಿಯೇ ಹೇಳಬೇಡಿ. ಮಗು ಏನಾದರೂ ಆಡುತ್ತಿದ್ದರೆ ಆ ಆಟ ಮುಗಿದ ಬಳಿಕ ಓದಲು ಹೇಳಿ, ಈ ರೀತಿ ಮಾಡಿದರೆ ಮಗುವಿಗೆ ಮಾಡುವ ಕೆಲಸದಲ್ಲಿ ಏಕಾಗ್ರತೆ ಹೆಚ್ಚುವುದು.

ನಡುವಳಿಕೆಗಳು
ಹೈಪರ್ ಆಕ್ಟಿವ್ ಮಕ್ಕಳಲ್ಲಿ ಏಕಾಗ್ರತೆ ಕಮ್ಮಿ ಇರುತ್ತದೆ, ತಕ್ಷಣ ಕೋಪಗೊಳ್ಳುವುದು, ಗಲಾಟೆ ಮಾಡುವುದು ಹೀಗೆ ಅವರ ರಂಪಾಟಗಳಿಗೆ ಮಿತಿ ಇರುವುದಿಲ್ಲ, ಇಂತಹ ಮಕ್ಕಳನ್ನು ಪ್ರೀತಿಯಿಂದ ತಿದ್ದಬೇಕು, ಹಾಗೇ ಮಾಡಿದರೆ ಅವರಲ್ಲಿ ಏಕಾಗ್ರತೆ ಸಾಮರ್ಥ್ಯ ಹೆಚ್ಚುವುದು.

ಕನಸ್ಸು ಕಾಣಲು ಹೇಳಿ
ಯಾವುದೇ ಗುರಿ ಮುಟ್ಟಲು ನಮಗೆ ಅದರ ಬಗ್ಗೆ ಕನಸ್ಸು ಇರಬೇಕು, ಮಗುವಿನಲ್ಲಿ ಉತ್ತಮವಾದ ಕನಸ್ಸುಗಳನ್ನು ತುಂಬಿ, ಆಗ ಅವರು ತಮ್ಮ ಗುರಿ ಮುಟ್ಟಲು ಪ್ರಯತ್ನಿಸುತ್ತಾರೆ.

English summary

Help Your Toddler Concentrate

Parents, take a look at some of the ways in which you can improve your toddlers concentration. These are some of the best and easy ways to help your little one concentrate.
Story first published: Monday, November 4, 2013, 16:00 [IST]
X
Desktop Bottom Promotion