For Quick Alerts
ALLOW NOTIFICATIONS  
For Daily Alerts

ಮಕ್ಕಳ ಹಠಮಾರಿತನಕ್ಕೆ ಪೋಷಕರ ಖಿನ್ನತೆಯೇ ಕಾರಣ!

By Jaya Subramanya
|

ಮಕ್ಕಳ ಮನಸ್ಸು ಹೂವಿನಂತಿರುತ್ತದೆ. ಈ ಹೂವಿಗೆ ಮುಳ್ಳಿನ ಒಂದು ಗೀರು ಕೂಡ ಅಪಾಯಕಾರಿಯೇ. ಮಕ್ಕಳು ಸಮಾಧಾನವಾಗಿರದೇ ಹಠಮಾರಿಯಾಗಿರುವುದು, ಕೋಪಗೊಳ್ಳುವುದು, ಜಗಳಗಂಟರಾಗಿರುವುದು ಇದಕ್ಕೆಲ್ಲಾ ಕಾರಣ ಅವರುಗಳ ಹೆತ್ತವರ ಖಿನ್ನತೆ ಮತ್ತು ಮಾನಸಿಕ ಸ್ಥಿತಿಯಾಗಿದೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಮಕ್ಕಳು ಅತಿರೇಕವಾಗಿ ವರ್ತಿಸುತ್ತಿದ್ದಾರೆ ಎಂದಾದಲ್ಲಿ ನ್ಯೂನತೆ ನಿಮ್ಮಲ್ಲಿಯೇ ಇದೆ ಎಂಬುದನ್ನು ನೀವು ಕಂಡುಕೊಳ್ಳಬೇಕಾಗುತ್ತದೆ.

Are Kids Of Depressed Parents Impulsive

ಈ ಸಮಯದಲ್ಲಿ ನೀವು ಅವರನ್ನು ದಂಡಿಸಿದಲ್ಲಿ ಈ ವರ್ತನೆ ಅತಿರೇಕಕ್ಕೆ ಹೋಗಬಹುದೇ ವಿನಃ ಅವರನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಮನಸ್ಥಿತಿಯನ್ನು ಸರಿಪಡಿಸಿಕೊಂಡಲ್ಲಿ ನಿಮ್ಮ ಮಕ್ಕಳು ಶಾಂತರಾಗುತ್ತಾರೆ ಎಂಬುದು ವಿಜ್ಞಾನಗಳ ಪ್ರಯೋಗದಿಂದ ಇದೀಗ ಸಾಬೀತಾಗಿದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...

ಮಾನಸಿಕ ಖಿನ್ನತೆಯುಳ್ಳ ಪೋಷಕರು ತಮ್ಮ ಮಕ್ಕಳ ಹಠಿಮಾರಿ ಪ್ರವೃತ್ತಿಗೆ ಕಾರಣರಾಗಿರುತ್ತಾರೆ ಎಂಬುದು ಹೊಸ ಅಧ್ಯಯನಗಳಿಂದ ತಿಳಿದು ಬಂದಿದೆ. ತಮ್ಮ ಮಕ್ಕಳು ಸಿಟ್ಟಾಗುವುದು ಜಗಳವಾಡುವುದಕ್ಕೆ ಕಾರಣ ಮಕ್ಕಳ ಹೆತ್ತವರೂ ಕೂಡ ಇದೇ ರೀತಿಯ ಮನಸ್ಥಿತಿಯನ್ನುಹೊಂದಿರುವುದಾಗಿದೆ. ಹದಿಹರೆಯವರಲ್ಲಿ ಮತ್ತು ಮಕ್ಕಳಲ್ಲಿ ಸಿಟ್ಟಾಗುವ ಮನಸ್ಥಿತಿಗೆ ಕಾರಣವೇ ಹೆತ್ತವರ ಸ್ವಭಾವವಾಗಿದೆ ಎಂಬುದಾಗಿ ಅಧ್ಯಯನ ದೃಢಪಡಿಸಿದೆ.

ಹೆತ್ತವರ ಖಿನ್ನತೆ ಮತ್ತು ಮಕ್ಕಳ ಮೆದುಳಿನ ಚಟುವಟಿಕೆಗಳಿಗೆ ಸಂಪರ್ಕವಿದ್ದು ಖಿನ್ನತೆಯಿರುವ ಪೋಷಕರ ಮಕ್ಕಳಲ್ಲಿ ಮೆದುಳಿನ ಪ್ರದೇಶಗಳು ಅಪಾಯವನ್ನು ತೆಗೆದುಕೊಳ್ಳುವ ವರ್ತನೆಗೆ ಅವರನ್ನು ತಯಾರು ಮಾಡುತ್ತದೆ. ಪ್ರಸ್ತುತ ಈ ಅಧ್ಯಯನಗಳು ಮಕ್ಕಳ ಮೆದುಳು ಮತ್ತು ಹೆತ್ತವರ ಖಿನ್ನತಾ ಮನಸ್ಥಿತಿಗೆ ಸಂಪರ್ಕವಿದೆ ಎಂಬುದನ್ನು ಖಾತ್ರಿಪಡಿಸಿದೆ. ಅಧ್ಯಯನದ ಸಲುವಾಗಿ 15-17 ರ ಹರೆಯದ ಮಕ್ಕಳನ್ನು ಮೂರು ವರ್ಷಗಳಿಗಿಂತ ಹೆಚ್ಚುಕಾಲ ಅಧ್ಯಯನ ನಡೆಸಲಾಯಿತು.


ಕೆಲವೊಂದು ಜ್ಞಾನಗ್ರಹಣ ಪರೀಕ್ಷೆಗಳು ಮತ್ತು ಮೆದುಳಿನ ಚಿತ್ರ ಪರೀಕ್ಷೆಗಳನ್ನು ಈ ಸಮಯದಲ್ಲಿ ಕೈಗೊಳ್ಳಲಾಗಿದ್ದು ಅವರ ವರ್ತನೆಯ ಮೂಲವನ್ನು ಈ ಸಮಯದಲ್ಲಿ ಅನ್ವೇಷಿಸಲಾಯಿತು. ಈ ಪರೀಕ್ಷೆಗೆ ಒಳಗಾಗಿದ್ದ ಮಕ್ಕಳ ಹೆತ್ತವರಲ್ಲಿ ಹೆಚ್ಚಿನವರು ಖಿನ್ನತೆಯಿಂದ ಬಳಲುತ್ತಿರುವ ಅಂಶ ದೃಢಪಟ್ಟಿದೆ.
ಇದೇ ರೀತಿ ಮಕ್ಕಳು ಕೂಡ ಜಗಳಗಂಟರಾಗಿರುವುದು, ಉದ್ರೇಕಗೊಳ್ಳುವುದು, ಕೋಪಗೊಳ್ಳುವ ವರ್ತನೆಯನ್ನು ತೋರಿಸಿದ್ದಾರೆ. ಆದ್ದರಿಂದ ಹೆತ್ತವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಲ್ಲಿ ಮಕ್ಕಳ ಅಸಮಾಧಾನವನ್ನು ಹತೋಟಿಗೆ ತರಬಹುದಾಗಿದೆ.
English summary

Are Kids Of Depressed Parents Impulsive

A new study claims that children of parents who suffer depression may turn into impulsive teenagers who tend to rebel and disobey rules. This study says that there is a link between parental depression and brain activity in kids. Generally, the areas in the brain that are related to risk taking behavior tend to be active in kids of parents who have depression.
Story first published: Monday, May 16, 2016, 10:37 [IST]
X
Desktop Bottom Promotion