ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ

Posted By:
Subscribe to Boldsky
How To Increase Kids Memory
ನಮ್ಮ ಮಕ್ಕಳ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಕಡಿಮೆ ಇದೆ, ಆದ್ದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ತುಂಬಾ ಸಲ ಕಂಠಪಾಠ ಮಾಡಿದರೂ ಮರೆತು ಹೋಗುತ್ತಾರೆ ಅನ್ನುವುದು ಅನೇಕರ ಪೋಷಕರ ಚಿಂತೆಯಾಗಿದೆ. ಆದರೆ ಈ ರೀತಿ ಚಿಂತೆಯನ್ನು ಮಕ್ಕಳ ಪರೀಕ್ಷೆ ಸಮಯದಲ್ಲಿ ಮಾಡುವ ಬದಲು, ಮಕ್ಕಳಿಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಆಹಾರಕ್ರಮದ ಬಗ್ಗೆ ತಿಳಿದು ಕೊಳ್ಳುವುದು ಒಳ್ಳೆಯದು.

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಕ್ರಮ:

1. ದಿನ ನಿತ್ಯ ಕೊಡುವ ಆರೋಗ್ಯಕರ ಆಹಾರಗಳ ಜೊತೆ ಸತು, ಮ್ಯಾಗ್ನೀಸೆ, ವಿಟಮಿನ್ ಇ, ಒಮೆಗಾ3 ಕೊಬ್ಬಿನಂಶವನ್ನು ಸೇರಿಸಬೇಕು.

2. ಕೆಂಪಕ್ಕಿ ಅನ್ನ, ಓಟ್ಸ್, ಸೋಯಾ ಬೀನ್ಸ್, ಮೊಟ್ಟೆ, ಹಾಲು, ಮೊಸರು, ಚೀಸ್, ನಟ್ಸ್, ಹುಚ್ಚೆಳ್ಳು ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು.

3. ಪ್ರತಿದಿನ ವ್ಯಾಯಾಮ ಮಾಡಿಸಬೇಕು. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಾಗಿ ಪೂರೈಕೆಯಾಗುತ್ತದೆ. ಆದ್ದರಿಂದ ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುವುದು.

4. ಮಕ್ಕಳಿಗೆ ತಲೆಗೆ ಕೆಲಸ ಕೊಡುವಂತಹ ಆಟಗಳನ್ನು ಆಡಿಸಬೇಕು. ಪದಬಂಧ, ಚೆಸ್ ಮುಂತಾದ ಆಟಗಳನ್ನು ಆಡಿದರೆ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ.

English summary

How To Increase Kids Memory | Tips For Parents | ಮಕ್ಕಳ ಜ್ಞಾಪಕಶಕ್ತಿ ಹೇಗೆ ಹೆಚ್ಚಿಸಬಹುದು | ಪೋಷಕರಿಗೆ ಕೆಲ ಸಲಹೆಗಳು

Have you seen your child losing concentration and memory power o Then your child’s memory must be suffering. If you fallow some method and diet then your kids concentration power will increase.
Story first published: Wednesday, April 18, 2012, 15:32 [IST]
Subscribe Newsletter