ಐದರಿಂದ ಆರು ತಿಂಗಳ ನಂತರ-ಮಗುವಿನ ಆಹಾರ-ಕ್ರಮ ಹೀಗಿರಲಿ

Posted By: Hemanth
Subscribe to Boldsky

ಎರಡು ವರ್ಷದವರಿಗಿನ ಮಕ್ಕಳಿಗೆ ತಾಯಿ ಎದೆಹಾಲು ನೀಡಲೇಬೇಕು. ಇದು ಮಕ್ಕಳನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಮಕ್ಕಳಿಗೆ ಘನ ಆಹಾರವಾಗಿ ಅನ್ನವನ್ನು ನೀಡುವ ಬದಲು ಹೆಚ್ಚಿನ ಪೋಷಕಾಂಶಗಳು ಇರುವ ಇತರ ಆಹಾರಗಳನ್ನು ನೀಡುವುದು ಒಳ್ಳೆಯದು. ಬೆಣ್ಣೆ ಹಣ್ಣು (ಆವಕಾಡೊ), ಗೆಣಸು ಮತ್ತು ಬಾಳೆಹಣ್ಣು ಮಕ್ಕಳಿಗೆ ನೀಡಬಹುದಾದ ಕೆಲವೊಂದು ಪೋಷಕಾಂಶಗಳು ಇರುವಂತಹ ಆಹಾರವಾಗಿದೆ.

ಕಂದಮ್ಮನ ಲವಲವಿಕೆಯ ಆರೋಗ್ಯಕ್ಕೆ 'ಸಿಹಿ ಕುಂಬಳಕಾಯಿ'

ಮಗು ತಾಯಿ ಹಾಲಿನ ಸೇವನೆ ಬಿಟ್ಟ ಬಳಿಕ ಪೋಷಕಾಂಶಗಳು ಇರುವಂತಹ ಕೆಲವು ಘನ ಆಹಾರವನ್ನು ಮಗುವಿಗೆ ನೀಡುವುದು ಅಗತ್ಯವಾಗಿದೆ. ಐದರಿಂದ ಆರು ತಿಂಗಳ ಬಳಿಕ ಮಗುವಿಗೆ ಘನ ಆಹಾರ ನೀಡಬಹುದು. ಮಗುವಿಗೆ ನೀಡಬಹುದಾದ ಆರೋಗ್ಯಕರ ಹಾಗೂ ರುಚಿಕರವಾದ ಆಹಾರವನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.... 

ಪಿಯರ್ಸ್ ಹಣ್ಣಿನ ಆಹಾರ

ಪಿಯರ್ಸ್ ಹಣ್ಣಿನ ಆಹಾರ

ಪಿಯರ್ಸ್ ಹಣ್ಣಿನಲ್ಲಿ ವಿಟಮಿನ್ ಸಿ, ಎ, ಮೆಗ್ನಿಶಿಯಂ, ಕ್ಯಾಲ್ಸಿಯಂ ಮತ್ತು ಹಲವಾರು ರೀತಿಯ ಪೋಷಕಾಂಶಗಳು ಇದೆ. ಮೊದಲು ಇದರ ಸಿಪ್ಪೆ ತೆಗೆದು ತುಂಡುಗಳನ್ನಾಗಿ ಮಾಡಿಕೊಂಡು, ಒಳಗಿನ ಭಾಗವನ್ನು ತೆಗೆಯಿರಿ, ಬಳಿಕ ತುಂಡುಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ತದನಂತರ ಮಿಕ್ಸಿಗೆ ಹಾಕಿ ರುಬ್ಬಿ ನಯವಾದ ಪೇಸ್ಟ್ ರೀತಿ ಮಾಡಿ ಮಗುವಿಗೆ ನೀಡಿ.

ಮಕ್ಕಳಿಗೆ ಬೆಳವಣಿಗೆಗೆ 4 ಪೌಷ್ಠಿಕ ಆಹಾರ

ಗೆಣಸಿನ ಆಹಾರ

ಗೆಣಸಿನ ಆಹಾರ

ಗೆಣಸು ವಿಟಮಿನ್ ಎ, ಸಿ ಮತ್ತು ಫಾಲಟೆಯಿಂದ ಸಮೃದ್ಧವಾಗಿದೆ. ಇದನ್ನು ಹೊರತುಪಡಿಸಿ ಕ್ಯಾಲ್ಸಿಯಂ, ಮೆಗ್ನಿಶಿಯಂ, ಪೊಟಾಶಿಯಂ ಇತ್ಯಾದಿ ಖನಿಜಾಂಶಗಳು ಇದರಲ್ಲಿ ಇದೆ. ಗೆಣಸಿನ ಸಿಪ್ಪೆ ತೆಗೆದು ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ಒಂದು ಬಾಣಲೆಗೆ ಹಾಕಿ ಅದಕ್ಕೆ ನೀರು ಹಾಕಿ, ಮೃದುವಾಗುವ ತನಕ ಬೇಯಿಸಿ, ಇನ್ನು ಇದನ್ನು ಸರಿಯಾಗಿ ಹಿಚುಕಿಕೊಂಡ ಬಳಿಕ ಎದೆಹಾಲನ್ನು ಇದಕ್ಕೆ ಮಿಶ್ರಣ ಮಾಡಿ ಮಗುವಿಗೆ ನೀಡಿ.

ಆವಕಾಡೊ

ಆವಕಾಡೊ

ಇದು ಮಕ್ಕಳಿಗೆ ಮೊದಲ ಸಲ ನೀಡಬಹುದಾದ ಆರೋಗ್ಯಕರ ಆಹಾರವಾಗಿದೆ. ಇದರಲ್ಲಿ ಕೊಬ್ಬಿನಾಮ್ಲ ಸಮೃದ್ಧವಾಗಿದೆ ಮತ್ತು ಹಲವಾರು ರೀತಿಯ ಪೋಷಕಾಂಶಗಳು ಇದೆ. ಇದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅವಕಾಡೊ ತುಂಬಾ ಮೃಧುವಾಗಿರುವ ಕಾರಣ ಸುಲಭವಾಗಿ ಜೀರ್ಣವಾಗಬಲ್ಲದು. ಅವಕಾಡೊದ ಸಿಪ್ಪೆ ತೆಗೆದು ಅದರ ತಿರುಳನ್ನು ಹೊರಗೆ ತೆಗೆಯಿರಿ. ಇದನ್ನು ಚಮಚದಿಂದ ಸರಿಯಾಗಿ ಹಿಚುಕಿಕೊಳ್ಳಿ. ಇದು ತುಂಬಾ ಮೃದುವಾಗಿರುವ ಕಾರಣದಿಂದ ಬೇಯಿಸುವ ಅಗತ್ಯವಿಲ್ಲ. ಎದೆಹಾಲು ಅಥವಾ ಸಾಮಾನ್ಯ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.ಅವಕಾಡೊದಲ್ಲಿ ಉನ್ನತ ಮಟ್ಟದ ವಿಟಮಿನ್ ಹಾಗೂ ಖನಿಜಾಂಶಗಳಾದ ವಿಟಮಿನ್ ಎ, ಸಿ ಮತ್ತು ಫಾಲಟ್, ನಿಯಾಸಿನ್, ಪೊಟಾಶಿಯಂ, ಕ್ಯಾಲ್ಸಿಯಂ, ಕಬ್ಬಿನ ಇತ್ಯಾದಿ ಲಭ್ಯವಿದೆ.

ಬಾಳೆಹಣ್ಣು

ಬಾಳೆಹಣ್ಣು

ಇದು ಬೇಗನೆ ಜೀರ್ಣಗೊಳ್ಳುತ್ತದೆ...ಅಲ್ಲದೆ ಇದು ಮಕ್ಕಳಿಗೆ ಹೇಳಿಮಾಡಿಸಿದಂತಹ ಆಹಾರವಾಗಿದೆ.

ಬಾಳೆಹಣ್ಣಿನ ಆಹಾರ

ಬಾಳೆಹಣ್ಣಿನ ಆಹಾರ

ಹಣ್ಣಾಗಿರುವ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಇದನ್ನು ಬೇಯಿಸುವ ಅಗತ್ಯವಿಲ್ಲ, ಬಾಳೆಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿಕೊಂಡು ಸರಿಯಾಗಿ ರುಬ್ಬಿಕೊಳ್ಳಿ ಮತ್ತು ಚಮಚದಿಂದ ಇದನ್ನು ಸರಿಯಾಗಿ ಹಿಚುಕಿ. ಬಾಳೆಹಣ್ಣನ್ನು ತುಂಬಾ ಮೃದುವಾಗಿಸಲು 25 ನಿಮಿಷ ಕಾಲ ಇದನ್ನು ಮೈಕ್ರೋವೇವ್ ನಲ್ಲಿಡಿ. ಈ ಮಿಶ್ರಣಕ್ಕೆ ಎದೆಹಾಲು ಅಥವಾ ಸಾಮಾನ್ಯ ಹಾಲು ಹಾಕಿ, ಮಗುವಿಗೆ ತಿನ್ನಿಸಿ

ಪೋಷಕಾಂಶಗಳ ಆಗರ

ಪೋಷಕಾಂಶಗಳ ಆಗರ

ಬಾಳೆಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳು ಇದ್ದು, ವಿಟಮಿನ್ ಹಾಗೂ ಖನಿಜಾಂಶದಿಂದ ಸಮೃದ್ಧವಾಗಿದೆ. ಅಲ್ಲದೆ ಇದರಲ್ಲಿರುವ ಕ್ಯಾಲ್ಸಿಯಂ, ಪೊಟಾಶಿಯಂ, ಫೋಸ್ಪರಸ್, ಸೆಲೆನಿಯಂ, ವಿಟಮಿನ್ ಎ, ಅಗಾಧ ಪ್ರಮಾಣದಲ್ಲಿದೆ

ಕಂದು ಅಕ್ಕಿಯ ಸಿರೇಲ್

ಕಂದು ಅಕ್ಕಿಯ ಸಿರೇಲ್

¼ ಭಾಗ ಕಂದು ಅಕ್ಕಿಯ ಹುಡಿಯನ್ನು ಒಂದು ಕಪ್ ಹಾಲಿನೊಂದಿಗೆ ಹಾಕಿ ಮಿಶ್ರಣ ಮಾಡಿ. ಹಾಲನ್ನು ಬಿಸಿ ಮಾಡಿ ಮತ್ತು ಅದಕ್ಕೆ ಅಕ್ಕಿ ಹುಡಿಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಬೆಂಕಿಯನ್ನು ಸ್ವಲ್ಪ ಕಡಿಮೆ ಮಾಡಿ. ಇದಕ್ಕೆ ಎದೆಹಾಲು ಅಥವಾ ಸಾಮಾನ್ಯ ಹಾಲು ಹಾಕಿಕೊಳ್ಳಿ.

ಮಕ್ಕಳಿಗೆ ಕೊಡಬಾರದ ಏಳು ಆಹಾರಗಳು

For Quick Alerts
ALLOW NOTIFICATIONS
For Daily Alerts

    English summary

    First Baby Food Recipes 5 To 6 Months

    Solid food is important for you baby apart from breast feeding. You have to start giving solid food to your baby once he reaches six months of age. Once you feed you baby with solid food, don't stop breast feeding as this is also important until your baby's first birthday or more. Here, we will share with you healthy and tasty solid food recipes for your baby as a first food.
    Story first published: Friday, May 26, 2017, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more