ಧೂಮಪಾನದ ಹೊಗೆ, ಮಕ್ಕಳ ಆರೋಗ್ಯಕ್ಕೆ ಬಲು ಅಪಾಯಕಾರಿ

By: manu
Subscribe to Boldsky

ಮಕ್ಕಳ ಆರೋಗ್ಯದ ಬಗ್ಗೆ ನಾವು ಸಾಕಷ್ಟು ಕಾಳಜಿ ವಹಿಸುತ್ತೇವೆ. ಮಕ್ಕಳು ಆರೋಗ್ಯವಾಗಿದ್ದರೆ ಇಡೀ ಕುಟುಂಬವು ಆರೋಗ್ಯವಾಗಿದ್ದಂತೆ. ಹೀಗಾಗಿ ಮಕ್ಕಳ ಆರೋಗ್ಯವೇ ಮುಖ್ಯವಾಗಿರುತ್ತದೆ. ಇದರಿಂದಾಗಿಯೇ ನಾವು ಮಕ್ಕಳಿಗೆ ಜಂಕ್ ಫುಡ್ ತಿನ್ನಲು ಬಿಡುವುದಿಲ್ಲ. ಇದೇ ಕಾಳಜಿ ಧೂಮಪಾನ ಮಾಡುವಂತಹ ಪೋಷಕರಲ್ಲಿ ಅಥವಾ ಮನೆಯವರಲ್ಲಿ ಇದೆಯಾ?

ಯಾಕೆಂದರೆ ಧೂಮಪಾನ ನೀವು ಮಾಡುತ್ತಾ ಇದ್ದರೂ ಅದರ ಪರಿಣಾಮ ಬೇರೆಯವರ ಮೇಲಾಗುತ್ತದೆ.  ಅದರಲ್ಲೂ ಮಕ್ಕಳ ಮೇಲೆ ಹೆಚ್ಚು. ಮಕ್ಕಳ ಸಮೀಪವಿದ್ದುಕೊಂಡು ಧೂಮಪಾನ ಮಾಡುವುದು ಸರಿಯಲ್ಲ. ಯಾಕೆಂದರೆ ಧೂಮಪಾನ ನೀವು ಮಾಡುತ್ತಾ ಇದ್ದರೂ ಅದು ಮಕ್ಕಳೇ ಧೂಮಪಾನ ಮಾಡಿದಂತಾಗುತ್ತದೆ. ಹೆತ್ತವರೇ ಮಕ್ಕಳ ಪಾಲಿಗೆ ಮೊದಲ ರೋಲ್ ಮಾಡೆಲ್...  

Smoking Cause Hearing Problems In Kids?
 

ಧೂಮಪಾನದಿಂದ ಧೂಮಪಾನಿಗೆ ಮಾತ್ರವಲ್ಲದೆ ಅದರ ಹೊಗೆಯನ್ನು ಉಸಿರಾಡುವಂತಹ ಸುತ್ತಲಿನವರಿಗೂ ತುಂಬಾ ಅಪಾಯಕಾರಿ. ಇದರಿಂದ ಯಕೃತ್ ಕ್ಯಾನ್ಸರ್ ಬರಬಹುದು. ಇಷ್ಟು ಮಾತ್ರವಲ್ಲದೆ ಮಕ್ಕಳಲ್ಲಿ ಕಿವುಡುತನ ಉಂಟಾಗಬಹುದು. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಮತ್ತಷ್ಟು ಮಾಹಿತಿ ನೀಡಲಿದೆ. 

kids
 

ಹುಟ್ಟುವ ಮೊದಲೇ ನಿಕೋಟಿನ್ ಪರಿಣಾಮ

ಗರ್ಭಿಣಿ ಮಹಿಳೆಗೆ ಧೂಮಪಾನದ ಅಭ್ಯಾಸವಿದ್ದರೆ ಅಥವಾ ಗರ್ಭಿಣಿ ಮಹಿಳೆಯ ಮನೆಯಲ್ಲಿ ಧೂಮಪಾನ ಮಾಡುವವರು ಇದ್ದರೆ ಆಗ ಅದರ ಪರಿಣಾಮ ಹುಟ್ಟುವ ಮಗುವಿನ ಮೇಲಾಗುತ್ತದೆ. ಮಗು ಹಲವಾರು ರೀತಿಯ ಆರೊಗ್ಯ ಸಮಸ್ಯೆಗೆ ಗುರಿಯಾಗಬಹುದು. ಗರ್ಭದಲ್ಲಿರುವ ಮಗು ಧೂಮಪಾನದ ಹೊಗೆಯನ್ನು ಸೇವಿಸಿದರೆ ವಿಕಲಾಂಗತೆ, ಮೆದುಳಿನ ಕ್ರಿಯೆ ಕಡಿಮೆಯಾಗುವುದು, ಶ್ವಾಸಕೋಶ ದುರ್ಬಲವಾಗುವುದು ಇತ್ಯಾದಿ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಭ್ರೂಣದ ಮೇಲೆ ಪರೋಕ್ಷ ಧೂಮಪಾನದ ಪರಿಣಾಮಗಳು

ಗರ್ಭಿಣಿ ಮಹಿಳೆಗೆ ಕೂಡ ಇದರಿಂದ ಸಮಸ್ಯೆಯಾಗಬಹುದು. ಧೂಮಪಾನಿಯ ಸುತ್ತ ಗರ್ಭಿಣಿ ಮಹಿಳೆಯಿದ್ದರೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಬಹುದು ಮತ್ತು ಹೆರಿಗೆ ವೇಳೆ ಸಮಸ್ಯೆಯಾಗಬಹುದು. ಜರ್ನಲ್ ಆಫ್ ಸೈಕಾಲಜಿಯಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ 3ರಿಂದ ಮೂರು ವರ್ಷದ ಮಕ್ಕಳು ಯಾವಾಗಲೂ ಧೂಮಪಾನದ ಹೊಗೆಗೆ ಸಿಲುಕಿದಾಗ ಮಕ್ಕಳಲ್ಲಿ ಶ್ರವಣೇಂದ್ರಿಯದ ತೊಂದರೆ ಕಾಣಿಸಬಹುದು. ಗರ್ಭಾವಸ್ಥೆಯಲ್ಲಿ ಧೂಮಪಾನ-ಮಗುವಿನ ಕಿಡ್ನಿಗೆ ಹಾನಿಕಾರಕ!  

kids hearing problem
 

ಸಿಗರೇಟಿನ ಹೊಗೆಗೆ ಮಕ್ಕಳು ಸಿಲುಕಿದಾಗ ಶ್ರವಣೇಂದ್ರಿಯದ ಮೆದುಳಿನಲ್ಲಿ ಅಸಾಮಾನ್ಯ ಬದಲಾವಣೆಗಳು ಆಗುತ್ತದೆ. ಇದರಿಂದ ಕಿವಿ ತುಂಬಾ ದುರ್ಬಲವಾಗುತ್ತದೆ ಎಂದು ಅಧ್ಯಯನವು ಹೇಳಿದೆ. ಮಕ್ಕಳ ಸುತ್ತ ನಿಯಮಿತವಾಗಿ ಧೂಮಪಾನ ಮಾಡುವವರು ಇದ್ದರೆ ಮಕ್ಕಳಲ್ಲಿ ಕಿವುಡುತನ ಉಂಟಾಗಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

English summary

Can Secondary Smoking Cause Hearing Problems In Kids?

If you are a parent who has young kids and you are a smoker too, then you must definitely read this article, because, exposing children to cigarette smoke can have potential health risks. As parents, we would want our kids to have the best of everything, which includes good health, right?
Subscribe Newsletter