For Quick Alerts
ALLOW NOTIFICATIONS  
For Daily Alerts

ಮಗುವಿಗೆ ಜ್ವರ ಬಂದಾಗ, ಪ್ರಥಮ ಚಿಕಿತ್ಸೆ ಹೀಗಿರಲಿ

By Deepu
|

ಜ್ವರ, ನೆಗಡಿ ಮತ್ತು ಕೆಮ್ಮು ಮಕ್ಕಳಿಗೆ ಆಗಾಗ ಬಂದು ಹೋಗುವ ಕಾಯಿಲೆಗಳಾಗಿರುತ್ತವೆ. ಕೆಲವೊಂದು ಜ್ವರಗಳು ಗಂಭೀರ ಸ್ವರೂಪ್ಪದ್ದಾಗಿರಬಹುದಾದರು, ಕೆಲವೊಂದು ಸಣ್ಣ ಪ್ರಮಾಣದ ವೈರಸ್‌ಗಳಿಂದ ಬರುವ ಜ್ವರಗಳಾಗಿರುತ್ತವೆ. ನಿಮ್ಮ ಮಗುವಿಗೆ ಜ್ವರ ಬಂದಾಗ ನೀವು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಬಳಲುತ್ತೀರಲ್ಲವೆ, ಎಷ್ಟಾದರು ಮಕ್ಕಳಿಗೆ ಕಾಯಿಲೆ ಬಂದರೆ ಅದರ ನೋವು ಪೋಷಕರಿಗೆ ತಾನೆ ತಟ್ಟುತ್ತದೆ.

ನಿಮ್ಮ ಮಗುವಿಗೆ ಜ್ವರ ಬಂದ ಕೂಡಲೆ ನೀವು ಗಾಬರಿಯಾಗಬೇಡಿ. ಕೆಲವೊಂದು ಜ್ವರಗಳು ಒಂದೆರಡು ದಿನ ಇದ್ದು, ಸಣ್ಣ ಪ್ರಮಾಣದಲ್ಲಿ ಔಷಧಿಯನ್ನು ತೆಗೆದುಕೊಂಡಾಗ ಹೋಗಿ ಬಿಡುತ್ತದೆ. ಇನ್ನೂ ಕೆಲವು ಜ್ವರಗಳು ತಮ್ಮಷ್ಟಕ್ಕೆ ತಾವು ಬಂದ ದಾರಿಗೆ ಸುಂಕವಿಲ್ಲ ಎಂದು ಹೋಗಿಬಿಡುತ್ತವೆ. ಆದರೂ ಮಕ್ಕಳಿಗೆ ಜ್ವರ ಬಂದರೆ ಗಾಬರಿಗೊಳ್ಳದೆ ವೈದ್ಯಕೀಯ ನೆರವನ್ನು ಪಡೆಯುವುದು ಉತ್ತಮ. ನಾವು ಇಂದು ಹೇಳುತ್ತಿರುವ ವಿಚಾರ, ನಿಮ್ಮ ಮಗುವಿಗೆ ಜ್ವರ ಬಂದರೆ ಏನು ಮಾಡಬೇಕು ಎಂಬುದಾಗಿದೆ. ಬನ್ನಿ ಆ ಕಾರ್ಯಗಳು ಯಾವುವು ಎಂದು ತಿಳಿದುಕೊಂಡು ಬರೋಣ. ಔಷಧ ಇಲ್ಲದೆ ಜ್ವರ ಕಡಿಮೆಗೊಳಿಸುವುದು ಹೇಗೆ?

Things you MUST do when your child has fever

1. ಮಗುವಿಗೆ ಜ್ವರ ಬಂದ ಕೂಡಲೆ ಆಂಟಿಬಯೋಟಿಕ್‌ಗಳನ್ನು ನೀಡಲು ಮುಂದಾಗಬೇಡಿ. ಹಲವಾರು ಸಂದರ್ಭಗಳಲ್ಲಿ ಮಗುವಿಗೆ 101, 102, ಡಿಗ್ರಿಗಳ ಜ್ವರ ಬಂದಾಗಲು ಕೂಡ ಅವರಿಗೆ ಆಂಟಿಬಯೋಟಿಕ್‌ಗಳ ಅಗತ್ಯವಿರುವುದಿಲ್ಲ. ಈ ಸಂದರ್ಭದಲ್ಲಿ ಮಗುವಿಗೆ ಸರಳವಾದ ಪ್ಯಾರಾಸಿಟಮಲ್ ಸಿರಪ್ ನೀಡುವ ಮೂಲಕ ಜ್ವರವನ್ನು ನಿಯಂತ್ರಿಸಬಹುದು (ಆದರೆ ವೈದ್ಯರನ್ನು ಸಂಪರ್ಕಿಸಿದ ಮೇಲೆಯೇ ಇದನ್ನು ನೀಡಬೇಕು ಎಂಬುದನ್ನು ಮರೆಯಬೇಡಿ). ನೆನಪಿಡಿ ನಿಮ್ಮ ಮಗುವಿಗೆ ಬ್ಯಾಕ್ಟೀರಿಯಾಗಳ ಕಾರಣದಿಂದಾಗಿ ಮಾತ್ರ ಜ್ವರ ಬಂದಿದೆ ಎಂದು ರುಜುವಾತಾದಾಗ ಮಾತ್ರ ವೈದ್ಯರು ನಿಮ್ಮ ಮಗುವಿಗೆ ಆಂಟಿಬಯೋಟಿಕ್ ಅನ್ನು ನೀಡುತ್ತಾರೆ.

2. ಮಕ್ಕಳನ್ನು ಮತ್ತು ಮಕ್ಕಳಿರುವ ಮನೆಯನ್ನು ಶುಚಿಯಾಗಿ ಕಾಪಾಡಿಕೊಳ್ಳಿ. ಇದರಿಂದ ನಿಮಗೆ ಮತ್ತು ನಿಮ್ಮ ಮಗುವಿಗೆ ಇನ್‌ಫೆಕ್ಷನ್ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಊಟದ ಮೊದಲು ಮತ್ತು ನಂತರ ನಿಮ್ಮ ಕೈಯನ್ನು ಸ್ಯಾನಿಟೈಜರ್‌ನಿಂದ ತೊಳೆದುಕೊಳ್ಳುವುದು ಉತ್ತಮ.

3. ಯಾವಾಗಲು ತಾಜಾ ತಿಂಡಿಗಳನ್ನೆ ಸೇವಿಸಿ, ಮನೆಯಲ್ಲಿ ತಯಾರಿಸಿದ ಜ್ಯೂಸ್, ಮನೆಯಲ್ಲಿ ಬೇಯಿಸಿದ ಆಹಾರಗಳು ನಿಮ್ಮ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ಇವು ನಿಮ್ಮ ಮಗುವಿಗೆ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಸಹ ನೀಡುತ್ತವೆ.

4. ಒಂದು ವೇಳೆ ನಿಮ್ಮ ಮಗುವು ವಾಂತಿ ಮತ್ತು ಡಯೇರಿಯಾದಿಂದ ಬಳಲುತ್ತಿದ್ದಲ್ಲಿ, ಬಲವಂತವಾಗಿ ಮಗುವಿಗೆ ಹಾಲು ಕುಡಿಸಬೇಡಿ. ಅದರ ಬದಲಿಗೆ ನಿಮ್ಮ ಮಗುವಿಗೆ ನೀರು ಮತ್ತು ಹಣ್ಣಿನ ರಸಗಳನ್ನು ಸೇವಿಸಲು ನೀಡಿ. ಎಲೆಕ್ಟ್ರೋಲೈಟ್ ಪಾನೀಯಗಳನ್ನು ಸಹ ನೀಡಿ. ಇಲ್ಲವೇ ಮನೆಯಲ್ಲಿಯೇ ತಯಾರಿಸಲಾದ ಸಕ್ಕರೆ ಮತ್ತು ಉಪ್ಪು ಸೇರಿಸಿದ ಎಲೆಕ್ಟ್ರೋಲೈಟ್ ಪಾನೀಯವನ್ನು ಮತ್ತು ಹಣ್ಣಿನ ರಸಗಳು ಅಥವಾ ನಿರ್ಜಲೀಕರಣವನ್ನು ತಡೆಯಲು ಬರೀ ನೀರನ್ನಾದರು ಮಗುವಿಗೆ ಸೇವಿಸಲು ನೀಡಿ.

5. ನಿಮ್ಮ ಮಗುವಿನ ಆಹಾರದಲ್ಲಿ ಪ್ರೊಬಯೋಟಿಕ್‌ಗಳನ್ನು ಸೇರಿಸಿಕೊಳ್ಳಿ. ಇವುಗಳು ಮಕ್ಕಳ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

6. ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಮಗುವಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್ ಅನ್ನು ಅದ್ದಿ, ದೇಹವನ್ನು ಒರೆಸಿ ಅಥವಾ ತಣ್ಣಗಿನ ಕಂಪ್ರೆಸ್ಸರ್ ಅನ್ನು ನೀಡಿ. ಇದು ನಿಮ್ಮ ಮಗುವಿಗೆ ಆರಾಮವನ್ನು ನೀಡುತ್ತದೆ. ಇದನ್ನು ನಿಮ್ಮ ಮಗುವಿಗೆ ಉಷ್ಣಾಂಶವು ಹೆಚ್ಚಾದಾಗೆಲ್ಲ ಮಾಡಿ.

7. ನಿಮ್ಮ ಮಗುವಿನ ವಿಸರ್ಜನೆಗಳನ್ನು ದಾಖಲೆ ಮಾಡಿಡಿ. ನಿಮ್ಮ ಮಗುವು ಐದು ಅಥವಾ ಆರು ಗಂಟೆಗಳ ಕಾಲ ಮೂತ್ರ ವಿಸರ್ಜನೆ ಮಾಡಿಲ್ಲವಾದಲ್ಲಿ, ಅದು ನಿರ್ಜಲೀಕರಣದ ಸೂಚನೆಯಾಗಿರುತ್ತದೆ. ಹೀಗೆ ಆದಾಗ ನಿಮ್ಮ ಮಗುವಿಗೆ 4 ನೇ ಅಂಶದಲ್ಲಿ ಸೂಚಿಸಿರುವ ಪರಿಹಾರವನ್ನು ನೀಡಿ.

8. ನಿಮ್ಮ ಮಗುವಿಗೆ ವಾಂತಿ ಬಂದ ಕೂಡಲೆ ಯಾವುದೇ ದ್ರವ ಪದಾರ್ಥ ಅಥವಾ ಆಹಾರವನ್ನು ನೀಡುವುದನ್ನು ನಿಲ್ಲಿಸಿ. ಈ ಸಂದರ್ಭಗಳಲ್ಲಿ ಕನಿಷ್ಠ 30 ನಿಮಿಷ ತಡೆದು ನಂತರ ನಿಮ್ಮ ಮಗುವಿಗೆ ಆಹಾರವನ್ನು ನೀಡಿ. ಇದರಿಂದ ನಿಮ್ಮ ಮಗುವಿಗೆ ಆರಾಮ ದೊರೆಯುತ್ತದೆ.

English summary

Things you MUST do when your child has fever

When your child suffers from fever, you suffer emotionally and physically too. But remember fever is body’s own way of fighting infections. If your little one is suffering from one, don’t frett. Most of the time, a fever is a viral infection that settles on its own. That doesn’t mean your child doesn’t need care and attention. Here are few things you should not do when your little bud has a high temperature.
Story first published: Sunday, January 17, 2016, 12:12 [IST]
X
Desktop Bottom Promotion