ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ

Posted By: manu
Subscribe to Boldsky

ಹುಟ್ಟಿದ ಆರು ತಿಂಗಳ ಕಾಲ ಮಗು ಕೇವಲ ಹಾಲನ್ನು ಮಾತ್ರ ಸೇವಿಸುವುದರಿಂದ ಶಿಶುಗಳಲ್ಲಿ ಮಲಬದ್ಧತೆ ಉಂಟಾಗುವುದು ಸಹಜವಾಗಿದೆ. ಆದರೆ ಘನ ಆಹಾರ ಸೇವನೆ ಮಾಡಲು ಆರಂಭಿಸಿದ ಶಿಶುಗಳಲ್ಲಿಯೂ ಮಲಬದ್ಧತೆ ಇರುತ್ತದೆ. ನಾರಿನಾಂಶದ ಕೊರತೆ, ನೀರಿನ ಸೇವನೆ ಇಲ್ಲದೆ ಇರುವುದು ಶಿಶುಗಳಲ್ಲಿ ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ. ಮಕ್ಕಳಲ್ಲಿ ಮಲಬದ್ಧತೆ ನಿವಾರಣೆಗೆ ಮನೆಮದ್ದು

ಮಗು ಮಲ ವಿಸರ್ಜನೆ ಮಾಡಲು ತುಂಬಾ ಕಷ್ಟಪಡುತ್ತಿದೆ ಅಥವಾ ಒಂದು ದಿನಕ್ಕಿಂತ ಹೆಚ್ಚಿನ ಕಾಲ ಮಲ ವಿಸರ್ಜನೆ ಮಾಡದೇ ಇದ್ದರೆ ಇದಕ್ಕೆ ಮಲಬದ್ಧತೆ ಕಾರಣವಾಗಿರಬಹುದು. ಮಗುವಿನ ಮಲವನ್ನು ನೋಡಿಕೊಂಡು ಮಲಬದ್ಧತೆ ಇದೆಯಾ ಎಂದು ನೀವು ತಿಳಿದುಕೊಳ್ಳಬಹುದಾಗಿದೆ. ಸಣ್ಣ ಮಗು ಮಲಬದ್ಧತೆಯಿಂದ ಬಳಲುತ್ತಾ ಇದೆ ಎಂದು ನೀವು ತಿಳಿದುಕೊಂಡರೆ ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಹೋಗಿ....  

ಮಗುವಿಗೆ ಸರಿಯಾಗಿ ನೀರು ಕಡಿಯಲು

ಮಗುವಿಗೆ ಸರಿಯಾಗಿ ನೀರು ಕಡಿಯಲು

ಮಕ್ಕಳು ನೀರನ್ನು ಕಡಿಮೆ ಕುಡಿದರೆ ಮಲವಿಸರ್ಜನೆಗೆ ತೊಂದರೆಯಾಗುವುದು. ಆದ್ದರಿಂದ ಮಕ್ಕಳಿಗೆ ಕಮ್ಮಿಯೆಂದರೂ ಒಂದು ಲೀಟರ್ ನೀರನ್ನು ದಿನದಲ್ಲಿ ಕುಡಿಸಲು ಮರೆಯದಿರಿ. ಊಟದ ನಂತರ ಸ್ವಲ್ಪ ಹದ ಬಿಸಿ ನೀರು ಕುಡಿಸುವುದು ಮಗುವಿನ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ.

ಹಣ್ಣುಗಳನ್ನು ತಿನ್ನಿಸಿ

ಹಣ್ಣುಗಳನ್ನು ತಿನ್ನಿಸಿ

ಮಗುವಿಗೆ ಸ್ವಲ್ಪ ನಾರಿನಾಂಶ ಬೇಕಾಗುತ್ತದೆ. ಇದಕ್ಕಾಗಿ ಮಗುವಿಗೆ ಹಣ್ಣುಗಳು, ಇಡೀ ಧಾನ್ಯದ ಬ್ರೆಡ್ ಮತ್ತು ಬೇಯಿಸಿದ ತರಕಾರಿ ತಿನ್ನಿಸಿ. ನಾರಿನಾಂಶವು ಕರುಳಿನ ಕ್ರಿಯೆಯನ್ನು ಸರಾಗಗೊಳಿಸುವುದು.

ಚಟುವಟಿಕೆ

ಚಟುವಟಿಕೆ

ಮಗುವನ್ನು ಆಡಲು ಬಿಡಿ. ಮಗುವಿನ ಆಹಾರವು ಸರಿಯಾಗಿ ಜೀರ್ಣವಾಗಿ ಮಲಬದ್ಧತೆ ನಿವಾರಣೆಯಾಗಲು ಮಗು ಆಡುತ್ತಾ, ಓಡುತ್ತಾ ಇರಬೇಕು.

ಹಾಲಿನ ಸೇವನೆ ಕಡಿಮೆ ಮಾಡಿಸಿ

ಹಾಲಿನ ಸೇವನೆ ಕಡಿಮೆ ಮಾಡಿಸಿ

ಅತಿಯಾದ ಹಾಲು ಸೇವನೆಯಿಂದ ಮಲಬದ್ಧತೆ ಉಂಟಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಹಾಲು ಕುಡಿಸಿ. ದಿನದಲ್ಲಿ ಮೂರು ಜೌನ್ಸ್ ಗಿಂತ ಹೆಚ್ಚು ಹಾಲು ನೀಡಬೇಡಿ.

ಒಣ ದ್ರಾಕ್ಷಿ ರಸ

ಒಣ ದ್ರಾಕ್ಷಿ ರಸ

ಮಲ ಬದ್ಧತೆಯನ್ನು ಓಡಿಸುವ ಮತ್ತೊಂದು ಮಾಂತ್ರಿಕ ಪರಿಹಾರವೆಂದರೆ ಅದು, ಒಣ ದ್ರಾಕ್ಷಿ ರಸ. ಇದನ್ನು ಸ್ವಲ್ಪ ಜೇನು ತುಪ್ಪದ ಜೊತೆಗೆ ನೀಡಿದರೆ ಒಳ್ಳೆಯ ಪರಿಹಾರವನ್ನು ಕಾಣಬಹುದು.

ಬ್ರೋಕೋಲಿ

ಬ್ರೋಕೋಲಿ

ಈ ಹಸಿರು ಹೂಕೋಸಿನಲ್ಲಿ ಉತ್ತಮ ಪ್ರಮಾಣದ ನಾರು ಇದ್ದು ಇದರ ಗರಿಷ್ಟ ಪ್ರಯೋಜನ ಪಡೆಯಬೇಕಾದರೆ ಹಸಿಯಾಗಿ ತಿನ್ನುವುದು ಅಗತ್ಯ. ಮಕ್ಕಳು ಇದನ್ನು ತಿನ್ನಲು ತಕರಾರು ಮಾಡುವ ಮೂಲಕ ಇದನ್ನು ಮಕ್ಕಳ ಆಹಾರದಲ್ಲಿ ಇದನ್ನು ಚಿಕ್ಕಚಿಕ್ಕತುಂಡುಗಳನ್ನಾಗಿಸಿ ಬೆರೆಸಿ ನೀಡುವುದು ಜಾಣತನದ ಕ್ರಮವಾಗಿದೆ. ಬೇಯಿಸಿದ ಬ್ರೋಕೋಲಿಯಿಂದ ನಾರು ನಷ್ಟವಾಗುವ ಕಾರಣ ಹಸಿಯಾಗಿಯೇ ಸೇವಿಸುವುದು ಉತ್ತಮ.

 
English summary

How To Cure Constipation In Babies

The main reasons behind constipation in children are excessive milk consumption, lack of fibre in the diet, low intake of liquids or postponing nature's calls due to any reason. What are the signs? If you observe your baby struggling to pass the stools or if your baby doesn't pass stools for more than a day then constipation could be the reason.