Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಲ್ಲಿ ಮಲಬದ್ಧತೆ ನಿವಾರಣೆಗೆ ಮನೆಮದ್ದು
ಮಲಬದ್ಧತೆ ದೊಡ್ಡವರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿಯೂ ಕಂಡು ಬರುತ್ತದೆ. ಚಿಕ್ಕ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಕಂಡು ಬಂದರೆ ಅವರಿಗೆ ಮಾತ್ರೆ ಕೊಡುವುದು ಒಳ್ಳೆಯದಲ್ಲ. ಮಲಬದ್ಧತೆಗೆ ಮನೆ ಮದ್ದನ್ನು ಬಳಸುವುದು ಒಳ್ಳೆಯದು. ಕೆಲವು ಆಹಾರ ವಸ್ತುಗಳನ್ನು ಮಲಬದ್ಧತೆಯನ್ನು ಹೋಗಲಾಡಿಸುವ ಮನೆ ಮದ್ದಾಗಿ ಬಳಸಬಹುದು.
ಇಲ್ಲಿ ನಾವು ಕೆಲ ಮನೆ ಮದ್ದುಗಳನ್ನು ನೀಡಿದ್ದೇವೆ. ಈ ಮನೆ ಮದ್ದುಗಳು ನಿಮ್ಮ ಮಕ್ಕಳಲ್ಲಿ ಕಂಡು ಬರುವ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಜೇನು ಮತ್ತು ಸಕ್ಕರೆ
ಒಂದು ಗ್ಲಾಸ್ ಹಾಲಿನಲ್ಲಿ 1 ಚಮಚ ಜೇನು ಮತ್ತು 1 ಚಮಚ ಸಕ್ಕರೆ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಲು ಕೊಡಿ.
ಸೂಚನೆ: 2 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಈ ಮನೆ ಮದ್ದು ಕೊಡಬೇಡಿ. ಜೇನನ್ನು ಜೀರ್ಣಿಸಿಕೊಳ್ಳುವ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ.

ತರಕಾರಿಗಳು
ಕ್ಯಾರೆಟ್, ಕ್ಯಾಬೇಜ್, ಕುಂಬಳಕಾಯಿ, ಪಾಲಾಕ್, ಬೀನ್ಸ್ ಈ ರೀತಿಯ ತರಕಾರಿಗಳನ್ನು ಬೇಯಿಸಿಕೊಡಿ. ಈ ಆಹಾರಗಳಲ್ಲಿ ನೀರಿನಂಶ ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ.

ಅಗಸೆದ ಬೀಜ
ಪ್ಲ್ಯಾಕ್ಸಿ ಸೀಡ್ ಅಥವಾ ಅಗಸೆದ ಬೀಜವನ್ನು ಪುಡಿ ಮಾಡಿ ಹಾಕಿ ಆ ನೀರನ್ನು ಕುಡಿಯಲು ಕೊಟ್ಟರೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಹರಳೆಣ್ಣೆ
ಒಂದು ಗ್ಲಾಸ್ ಬಿಸಿ ನೀರಿಗೆ ಸ್ವಲ್ಪ ಹರಳೆಣ್ಣೆ ಹಾಕಿ ಕುಡಿಸಿ, ಸ್ವಲ್ಪ ಹೊತ್ತಿನಲ್ಲಿಯೇ ಮಲವಿಸರ್ಜನೆ ಆಗುವುದು. ಈ ವಿಧಾನವನ್ನು ತುಂಬಾ ಚಿಕ್ಕ ಮಕ್ಕಳಲ್ಲಿಯೂ ಪ್ರಯೋಗ ಮಾಡಬಹುದು.

ನೀರು
ಮಕ್ಕಳು ನೀರನ್ನು ಕಮ್ಮಿ ಕುಡಿದರೆ ಮಲವಿಸರ್ಜನೆಗೆ ತೊಂದರೆಯಾಗುವುದು. ಆದ್ದರಿಂದ ಮಕ್ಕಳು ನೀರು ಕುಡಿಯದಿದ್ದರೂ ಕಮ್ಮಿಯೆಂದರೂ ಒಂದು ಲೀಟರ್ ನೀರನ್ನು ದಿನದಲ್ಲಿ ಕುಡಿಸಿ. ಊಟದ ನಂತರ ಸ್ವಲ್ಪ ಹದ ಬಿಸಿ ನೀರು ಕುಡಿಸಿ.

ಬಾಳೆಹಣ್ಣು
ಬಾಳೆ ಹಣ್ಣು ತಿಂದರೆ ಮಲಬದ್ಧತೆ ಸಮಸ್ಯೆ ತಕ್ಷಣ ನಿವಾರಣೆಯಾಗುವುದು. ಒಂದು ಗ್ಲಾಸ್ ಬಿಸಿ ಹಾಲಿನ ಜೊತೆ ಬಾಳೆ ಹಣ್ಣನ್ನು ತಿನ್ನಲು ಕೊಡಿ.

ಸೋಂಪು
ಒಂದು ಗ್ಲಾಸ್ ನೀರಿಗೆ 1 ಚಮಚ ಸೋಂಪು ಅನ್ನು ರೋಸ್ಟ್ ಮಾಡಿ, ಪುಡಿ ಮಾಡಿ ಹಾಕಿ, ನೀರನ್ನು ಕುದಿಸಿ, ಸೋಸಿ. ನಂತರ ಆ ನೀರನ್ನು ಕುಡಿಯಲು ಕೊಡಿ. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಹಾಗೇ ತಿನ್ನಲು ಕೂಡ ಕೊಡಬಹುದು.



Click it and Unblock the Notifications