ಬೆಳೆಯುವ ಮಕ್ಕಳ ಆಹಾರ ಕ್ರಮದ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು!

By Manu
Subscribe to Boldsky

ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತಿ ಅಗತ್ಯ. ಹಾಗೆಂದು ಬೇಕಾಬಿಟ್ಟಿ ಯಾವುದೇ ಆಹಾರಗಳನ್ನು ಎಷ್ಟು ಬೇಕೋ ಅಷ್ಟು ನೀಡಬಾರದು. ಏಕೆಂದರೆ ಅಗತ್ಯಕ್ಕಿಂತಲೂ ಹೆಚ್ಚಿನ ಪೌಷ್ಟಿಕಾಂಶಗಳು ಸಿಕ್ಕರೆ ಇದು ಕೊಬ್ಬಾಗಿ ಪರಿವರ್ತಿತವಾಗಿ ಸ್ಥೂಲಕಾಯ ಆವರಿಸುತ್ತದೆ.    ತೆಳ್ಳಗಿರುವ ಮಕ್ಕಳ ತೂಕ ಹೆಚ್ಚಾಗಲು ಆಹಾರ ಪಥ್ಯ ಹೀಗಿರಲಿ

ಇದು ಬೆಳವಣಿಗೆ ಹಂತದಲ್ಲಿ ಬೇರೆಯೇ ರೀತಿಯ ತೊಂದರೆಗಳನ್ನು ತಂದೊಡ್ಡುತ್ತದೆ. ಆದ್ದರಿಂದ ಅಗತ್ಯವಿರುವ ಪೋಷಕಾಂಶಗಳನ್ನು ಅಗತ್ಯಪ್ರಮಾಣದಲ್ಲಿ ಮತ್ತು ಅಗತ್ಯಸಮಯದಲ್ಲಿ ನೀಡುವುದು ಜಾಣತನದ ಮತ್ತು ಆರೋಗ್ಯಕರ ಕ್ರಮವಾಗಿದೆ.  ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು...

ಜಾಣತನದ ಕ್ರಮವೇನೋ ಸರಿ, ಜಾಣರಾಗಲು ಇರುವಷ್ಟು ಮಾಹಿತಿ ನಮ್ಮಲ್ಲಿಲ್ಲವಲ್ಲಾ! ಈ ಕೊರತೆಯನ್ನು ನಿಮ್ಮ ಕುಟುಂಬ ವೈದ್ಯರು ಅಥವಾ ಆಹಾರ ತಜ್ಞರು ನೀಗಿಸಬಲ್ಲರು. ಇವರ ಸಲಹೆಯ ಹೊರತಾಗಿ ಪ್ರತಿ ತಂದೆ ತಾಯಿಯರಿಗೆ ತಮ್ಮ ಸಾಮಾನ್ಯ ಜ್ಞಾನದ ಪ್ರಕಾರ ಮಕ್ಕಳ ಆಹಾರದಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟುಗಳು, ಪ್ರೋಟೀನ್, ವಿಟಮಿನ್ನುಗಳು ಮತ್ತು ಖನಿಜಗಳಿರಬೇಕು ಎಂದು ತಿಳಿದಿರಬೇಕು. ಆದರೆ ಯಾವುದು ಎಷ್ಟು ಮತ್ತು ಯಾವ ಆಹಾರಗಳಲ್ಲಿರುತ್ತದೆ ಎಂಬ ಮಾಹಿತಿಯನ್ನು ನಮ್ಮ ಸಾಮಾನ್ಯ ಜ್ಞಾನ ನೀಡಲಾರದು. ಈ ಕೊರತೆಯನ್ನು ಇಲ್ಲಿ ನೀಡಿರುವ ಮಾಹಿತಿ ನೀಗಿಸಬಲ್ಲುದು, ಮುಂದೆ ಓದಿ...     

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ನಮ್ಮ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಮತ್ತು ದೃಢತೆ ಕಾಪಾಡಿಕೊಳ್ಳಲು ಜೀವನಪರ್ಯಂತ ನಮ್ಮ ಆಹಾರದಲ್ಲಿ ಕೊಂಚ ಪ್ರಮಾಣದ ಕ್ಯಾಲ್ಸಿಯಂ ಸಿಗುತ್ತಲೇ ಇರಬೇಕು. ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆ ಸತತವಾಗಿ ಆಗುತ್ತಿರುವ ಕಾರಣ ಇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದೆ. ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಹಾಲಿನಲ್ಲಿದೆ. ಬೆಳೆಯುವ ಮಕ್ಕಳಿಗೆ ಕ್ಯಾಲ್ಸಿಯಂಯುಕ್ತ ಆಹಾರ ಅತ್ಯಗತ್ಯ

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಆದರೆ ಬರೇ ಹಾಲನ್ನು ಎಷ್ಟು ಕುಡಿದರೂ ಇದನ್ನು ದೇಹ ಹೀರಿಕೊಳ್ಳಲು ಅಸಮರ್ಥವಾಗುತ್ತದೆ. ಇದನ್ನು ಸಾಧ್ಯವಾಗಿಸಲು ಹಾಲಿನೊಂದಿಗೆ ಕೊಂಚ ಜೇನು ಸೇರಿಸಿ ನಿತ್ಯವೂ ಒಂದು ಲೋಟ ಮಕ್ಕಳಿಗೆ ಕುಡಿಸಬೇಕು. ಹಾಲಿನ ಹೊರತಾಗಿ ಡೈರಿ ಉತ್ಪನ್ನಗಳು, ಹಸಿರು ಸೊಪ್ಪು, ಸಾಲ್ಮನ್ ಮೀನು ಮೊದಲಾದವುಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿದ್ದು ಈ ಆಹಾರಗಳನ್ನು ಆಗಾಗ ಮಕ್ಕಳಿಗೆ ನೀಡುತ್ತಿರಬೇಕು.

ಕಬ್ಬಿಣ

ಕಬ್ಬಿಣ

ಕಬ್ಬಿಣ ಅಂದರೆ ನಮ್ಮ ಬೋಲ್ಟ್ ನಟ್ಟುಗಳಲ್ಲಿರುವ ಕಬ್ಬಿಣವೇ ಹೊರತು ಇಷ್ಟೊಂದು ಸಾಂದ್ರತೆಯಲ್ಲಿ ಅಲ್ಲ. ನಮಗೆ ಕೇವಲ ಕಬ್ಬಿಣದ ಅಣುಗಳು ಮಾತ್ರ ಸಾಕು. ಕಬ್ಬಿಣ ಇಲ್ಲದಿದ್ದತೆ ರಕ್ತ ಅತಿಯಾಗಿ ಪ್ರಭಾವಗೊಳ್ಳುತ್ತದೆ. ಏಕೆಂದರೆ ನಮ್ಮ ಕೆಂಪು ರಕ್ತಕಣಗಳಿಗೆ ಕಬ್ಬಿಣ ಅತಿ ಅಗತ್ಯವಾಗಿ ಬೇಕು. ರಕ್ತಕಣದಲ್ಲಿರುವ ಕಬ್ಬಿಣವೇ ಆಮ್ಲಜನಕವನ್ನು ಹೊತ್ತೊಯ್ಯಲು ನೆರವಾಗುತ್ತದೆ.

ಕಬ್ಬಿಣ

ಕಬ್ಬಿಣ

ಕಬ್ಬಿಣದ ಅಂಶ ಬಸಲೆ ಮತ್ತು ಪಾಲಕ್ ಸೊಪ್ಪಿನಲ್ಲಿದೆ. ಆದ್ದರಿಂದ ಸಾಧ್ಯವಾದರೆ ವಾರಕ್ಕೆರಡು ಬಾರಿಯಾದರೂ ಬಸಲೆ ಸೊಪ್ಪಿನ ಸಾರು ಮಾಡಿ ಮಕ್ಕಳಿಗೆ ಬಡಿಸಬೇಕು. ಇನ್ನುಳಿದಂತೆ ಕೇಲ್ ಎಲೆಗಳು ಮತ್ತು ಕೆಂಪು ಮಾಂಸದಲ್ಲಿಯೂ ಕಬ್ಬಿಣ ಇದೆ. ಆದರೆ ಕೆಂಪು ಮಾಂಸದಲ್ಲಿ ಕೊಲೆಸ್ಟ್ರಾಲ್ ಸಹಾ ಹೆಚ್ಚಿರುವ ಕಾರಣ ಇದರ ಪ್ರಮಾಣ ಮಿತವಾರುವಂತೆ ನೋಡಿಕೊಳ್ಳಬೇಕು.

ವಿಟಮಿನ್ B12

ವಿಟಮಿನ್ B12

ಬಿ ಗುಂಪಿನಲ್ಲಿರುವ ಎಲ್ಲಾ ವಿಟಮಿನ್ನುಗಳೂ ನಮ್ಮ ಜೀವರಾಸಾಯನಿಕ ಕ್ರಿಯೆಗೆ ಅಗತ್ಯವಾಗಿದೆ. ಆದರೆ ವಿಶೇಷವಾಗಿ ವಿಟಮಿನ್ B12 ಮಕ್ಕಳ ಬೆಳವಣಿಗೆಯ ಹಂತದಲ್ಲಿ ಹೆಚ್ಚು ಬೇಕಾಗುತ್ತದೆ. ಇದನ್ನು ಕೇವಲ ಮೊಟ್ಟೆ ಮತ್ತು ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ಆದ್ದರಿಂದ ದಿನಕ್ಕೊಂದಾದರೂ ಮೊಟ್ಟೆ ತಿನ್ನಿಸುವುದು ಮತ್ತು ವಾರಕ್ಕೆರಡು ಹೊತ್ತಾದರೂ ಕೋಳಿ ಮಾಂಸದ ಅಡುಗೆ ಉತ್ತಮ.

ವಿಟಮಿನ್ B12

ವಿಟಮಿನ್ B12

ಹಾಲಿನಲ್ಲಿಯೂ ಕೊಂಚ ಪ್ರಮಾಣದಲ್ಲಿದೆ. ಆದರೆ ಇದು ಯಾವುದೇ ಸಸ್ಯಾಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಇರದ ಕಾರಣ ಸಸ್ಯಾಹಾರಿಗಳಿಗೆ ಕೊಂಚ ಕಷ್ಟವಾಗಬಹುದು. ಆದರೆ ಈಗ ಮಾರುಕಟ್ಟೆಯಲ್ಲಿ ವಿಟಮಿನ್ B12 ಪ್ರಮಾಣವನ್ನು ಹೆಚ್ಚಿಸಿರುವ ಸಸ್ಯಾಹಾರಿ ಸಿದ್ದ ಆಹಾರಗಳು ದೊರಕುತ್ತಿವೆ. fortified vitamin B12 cereals ಎಂದಿರುವ ಪ್ಯಾಕೆಟ್ಟುಗಳು ಈ ಕೊರತೆಯನ್ನು ನೀಗಿಸುತ್ತವೆ. ವೈದ್ಯರ ಸಲಹೆ ಪಡೆದು ವಾರಕ್ಕೆರಡು ಬಾರಿ ಉಪಾಹಾರಕ್ಕೆ ಈ ಸಿದ್ಧ ಆಹಾರಗಳನ್ನು ಮಕ್ಕಳಿಗೆ ನೀಡಬಹುದು.

ವಿಟಮಿನ್ ಇ

ವಿಟಮಿನ್ ಇ

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ವಿಟಮಿನ ಅತಿ ಅಗತ್ಯವಾಗಿದ್ದು ಹಲವು ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಜೊತೆಗೇ ರಕ್ತದ ಪರಿಚಲನೆ ಸಮರ್ಪಕವಾಗಿರಲು ನೆರವಾಗುತ್ತದೆ. ಸೂರ್ಯಕಾಂತಿ ಬೀಜ, ಬಾದಾಮಿ ಮತ್ತು ಇತರ ಒಣಫಲಗಳಲ್ಲಿ ವಿಟಮಿನ್ ಇ ಹೇರಳವಾಗಿದ್ದು ಆಗಾಗ ಈ ಒಣಫಲಗಳನ್ನು ತಿನ್ನಲು ಮಕ್ಕಳಿಗೆ ನೀಡುತ್ತಿರಬೇಕು. ದಿನಕ್ಕೆರಡು ಬಾದಾಮಿಗಳನ್ನು ರಾತ್ರಿ ಮಲಗುವ ಮುನ್ನ ತಿನ್ನಿಸುವುದು ಉತ್ತಮ ಅಭ್ಯಾಸ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

 
For Quick Alerts
ALLOW NOTIFICATIONS
For Daily Alerts

    English summary

    Essential Nutrients For Your Growing Kid

    Diet plays a very important role in the growth and development of your kid. If you are unaware of the nutritional requirements, then you may not be providing the right foods to your kids. Here are some of the important nutrients that you must give your baby.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more