For Quick Alerts
ALLOW NOTIFICATIONS  
For Daily Alerts

ತೆಳ್ಳಗಿರುವ ಮಕ್ಕಳ ತೂಕ ಹೆಚ್ಚಾಗಲು ಆಹಾರ ಪಥ್ಯ ಹೀಗಿರಲಿ

By Manu
|

ಎಷ್ಟೇ ತಿಂದರೂ ಹಾಗೆ ಇದ್ದಾನೆ. ಸರಿಯಾಗಿಯೇ ತಿನ್ನುತ್ತಾನಾದರೂ ತೂಕ ಮಾತ್ರ ಹೆಚ್ಚಾಗಲ್ಲ. ಆತನ ವಯಸ್ಸಿನ ಬೇರೆ ಮಕ್ಕಳು ತುಂಬಾ ದಷ್ಟಪುಷ್ಟರಾಗಿದ್ದಾರೆ. ಇಂತಹ ಕೊರಗನ್ನು ಹೆಚ್ಚಿನ ಪೋಷಕರು ಹೇಳುವುದುಂಟು. ಮಕ್ಕಳಲ್ಲಿ ಪೋಷಕಾಂಶದ ಕೊರತೆಯಿಂದಾಗಿ ಹೀಗೆ ಆಗುವುದಿದೆ.

ಸರಿಯಾದ ಪೋಷಕಾಂಶಗಳ ಪೂರೈಕೆಯ ಬಳಿಕವೂ ಮಕ್ಕಳು ತೂಕ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲವೆಂದಾದರೆ ಆಗ ವೈದ್ಯರಿಗೆ ತೋರಿಸಬೇಕು. ಆದರೆ ಮಕ್ಕಳ ತೂಕ ಹೆಚ್ಚಾಗುತ್ತಿಲ್ಲ ಎಂದು ಚಿಂತಿಸಬೇಕಾದ ಅಗತ್ಯವಿಲ್ಲ. ಯಾಕೆಂದರೆ ಕೆಲವೊಂದು ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಮಕ್ಕಳು ದಪ್ಪಗಾಗುತ್ತಾರೆ. ಮಕ್ಕಳ ಮೆದುಳಿಗೆ ಬೇಕು ಈ ಏಳು ಬಗೆಯ ಆಹಾರಗಳು

ಅದರಲ್ಲೂ ಪ್ರೋಟೀನ್ ಇರುವಂತಹ ಆಹಾರವನ್ನು ಮಕ್ಕಳ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೆಕಾಗಿದೆ. ಹಾಲಿನ ಉತ್ಪನ್ನಗಳು ಮತ್ತು ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ತಿಂದರೆ ಮಕ್ಕಳ ಸ್ನಾಯುಗಳು ಬಲಿಷ್ಠವಾಗಿ ತೂಕವು ಹೆಚ್ಚಳವಾಗುತ್ತದೆ. ಬಾಳೆಹಣ್ಣು ಮತ್ತು ಅವಕೋಡ್‌ನಂತಹ ಹಣ್ಣುಗಳು ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಲು ನೆರವಾಗುವುದು. ಬೆಳೆಯುವ ಮಕ್ಕಳ ಆಹಾರ ಪದ್ಧತಿ ಬಗ್ಗೆ ಗಮನವಿರಲಿ

ಪಪ್ಪಾಯಿ, ಬಾಳೆಹಣ್ಣು, ಮಾವಿನ ಹಣ್ಣು ಮತ್ತು ಅನಾನಸಿನಲ್ಲಿ ನೈಸರ್ಗಿಕದತ್ತ ಸಕ್ಕರೆಯಿದೆ ಮತ್ತು ಇದು ಮಕ್ಕಳ ದೇಹದಲ್ಲಿ ಶಕ್ತಿ ತುಂಬಿ ತೂಕ ಹೆಚ್ಚಿಸಲು ನೆರವಾಗುವುದು. ಮಕ್ಕಳು ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಬೇಕೆಂದರೆ ಯಾವ್ಯಾವ ಆಹಾರವನ್ನು ತಿನ್ನಬೇಕು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದುತ್ತಾ ಹೋಗಿ...

ಬೆಣ್ಣೆ

ಬೆಣ್ಣೆ

ಬೆಣ್ಣೆಯಲ್ಲಿ ಅಂತದ್ದೇನಿದೆ ವಿಶೇಷತೆ?

ಹಾಲು ಮತ್ತು ಕ್ರೀಮ್

ಹಾಲು ಮತ್ತು ಕ್ರೀಮ್

ಮಕ್ಕಳಿಗೆ ಹಾಲು ಮತ್ತು ಹಾಲಿನ ಉತ್ಪನ್ನವಾಗಿರುವ ಕ್ರೀಮ್ ನ್ನು ನೀಡಬೇಕು. ಉನ್ನತ ಮಟ್ಟದ ಕ್ಯಾಲರಿ ಇರುವ ಇವುಗಳು ಮಕ್ಕಳ ತೂಕ ಹೆಚ್ಚಿಸಲು ನೆರವಾಗುವುದು. ಪ್ರತೀ ದಿನ ಮಕ್ಕಳಿಗೆ ಎರಡು ಲೋಟ ಹಾಲು ನೀಡಬೇಕು. ಮಕ್ಕಳಿಗೆ ನೀಡುವಂತಹ ಏಕದಳಧಾನ್ಯಗಳಲ್ಲಿ ಕ್ರೀಮ್ ಹಾಕಲು ಮರೆಯದಿರಿ.

ಮೊಟ್ಟೆ

ಮೊಟ್ಟೆ

ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಮಕ್ಕಳ ಆಹಾರ ಕ್ರಮದಲ್ಲಿ ಮೊಟ್ಟೆಯನ್ನು ಸೇರಿಸಿದರೆ ಅದರಿಂದ ಮಕ್ಕಳ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ ತೂಕ ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮೊಟ್ಟೆಯಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಬಿ12 ಹೇರಳವಾಗಿದೆ. ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!

ಬಾಳೆಹಣ್ಣು

ಬಾಳೆಹಣ್ಣು

ಕ್ಯಾಲರಿ ಅಧಿಕವಾಗಿರುವ ಬಾಳೆಹಣ್ಣು ಮಕ್ಕಳಿಗೆ ಬೇಕಾಗಿರುವ ಶಕ್ತಿಯನ್ನು ಒದಗಿಸುತ್ತದೆ. ಮಕ್ಕಳು ಆರೋಗ್ಯಕರ ಕೊಬ್ಬನ್ನು ಪಡೆಯಲು ಬೇಕಾಗಿರುವ ಕಾರ್ಬೋಹೈಡ್ರೆಟ್ಸ್ ಬಾಳೆಹಣ್ಣಿನಲ್ಲಿದೆ. ಇದು ತೂಕ ಹೆಚ್ಚಳ ಮಾಡಲು ನೆರವಾಗುವುದು. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಕೋಳಿ ಮಾಂಸ

ಕೋಳಿ ಮಾಂಸ

ಕೋಳಿಯಲ್ಲಿ ಉತ್ತಮ ಮಟ್ಟದ ಪ್ರೋಟೀನ್ ಇದೆ. ಇದು ಸ್ನಾಯುಗಳ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ ತೂಕ ಕಡಿಮೆ ಇರುವ ಮಕ್ಕಳಿಗೆ ತೂಕ ಹೆಚ್ಚಿಸಲು ಕೋಳಿ ಮಾಂಸವನ್ನು ಪ್ರಮುಖ ಆಹಾರವಾಗಿ ನೀಡಬಹುದು.

English summary

Healthy Tips For Weight Gain In Kids

Fruits and veggies should make up for a good portion for a kid's diet. Fruits like papaya, banana, mango and pineapple are rich in natural sugars that give the body energy and promote a healthy weight gain. Likewise, there are a few more foods that help kids in gaining weight. Read on to know more about it.
X
Desktop Bottom Promotion