For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಬೆರಳು ಚೀಪುವ ಅಭ್ಯಾಸವಿದ್ದರೆ, ಅಲರ್ಜಿಯಾಗಲ್ಲ!

By Arshad
|

ಸಾಮಾನ್ಯವಾಗಿ ಪ್ರತಿ ಮಗುವೂ ತನ್ನ ಬೆರಳನ್ನು ಚೀಪುವ ಅಭ್ಯಾಸ ಹೊಂದಿರುತ್ತದೆ. ಬೆರಳು ಚೀಪುವುದನ್ನು ಕಂಡ ಎಲ್ಲಾ ತಾಯಂದಿರೂ ಇದೊಂದು ಕೆಟ್ಟ ಅಭ್ಯಾಸವೆಂದು ಪರಿಗಣಿಸಿ ಬಲವಂತವಾಗಿ ಮಗುವಿನ ಬಾಯಿಯಿಂದ ಬೆರಳನ್ನು ಹೊರತೆಗೆಯುತ್ತಾರೆ. ಪಾಲಕರ ಚಿಂತೆ ಹೆಚ್ಚಿಸುವ ಮಕ್ಕಳ ಇನ್ನೊಂದು ಕೆಟ್ಟ ಅಭ್ಯಾಸವೆಂದರೆ ಉಗುರು ಕಚ್ಚುವುದು.

Does Thumb-Sucking Minimise Allergies?

ಆದರೆ ಮಕ್ಕಳ ತಜ್ಞರ ಪ್ರಕಾರ ಇನ್ನೂ ಹಾಲುಹಲ್ಲು ಮೂಡಿದರ ಮಕ್ಕಳು ಬೆರಳು ಚೀಪಿದರೆ ಆತಂಕಕ್ಕೆ ಕಾರಣವಿಲ್ಲ. ಏಕೆಂದರೆ ಇದೊಂದು ನಿಸರ್ಗದ ರಕ್ಷಣಾ ಶಕ್ತಿಯಾಗಿದ್ದು ಮಗುವಿನಲ್ಲಿ ಅಲರ್ಜಿಯನ್ನು ಎದುರಿಸಲು ಅಗತ್ಯವಾದ ಶಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಬೆರಳು ಚೀಪುವ ಅಭ್ಯಾಸ ನಿಲ್ಲಿಸುವುದು ಹೇಗೆ?

ಈ ನಿಟ್ಟಿನಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಹಲ್ಲು ಮೂಡುವ ಮುನ್ನ ಬೆರಳು ಚೀಪುವ, ಹಲ್ಲು ಮೂಡಿದ ಬಳಿಕ ಉಗುರು ಕಡಿಯುವ ಅಭ್ಯಾಸಗಳಿಂದ ಮಕ್ಕಳು ಕೆಲವು ಅಲರ್ಜಿಗಳಿಂದ ರಕ್ಷಣೆ ಪಡೆಯುವ ವ್ಯವಸ್ಥೆಯನ್ನು ತಮ್ಮ ದೇಹದಲ್ಲಿ ಬೆಳೆಸಿಕೊಂಡಿರುತ್ತಾರೆ. ಇದರಿಂದ ಸಾಕುಪ್ರಾಣಿಗಳಿಂದ, ಧೂಳಿನಿಂದ ಆಗಮಿಸುವ ಸೂಕ್ಷ್ಮ ಕ್ರಿಮಿ, ವಿವಿಧ ಶಿಲೀಂಧ್ರ ಮತ್ತು ವಿಶೇಷವಾಗಿ ಬೆಕ್ಕು ಮತ್ತು ಬೆಕ್ಕಿನ ಕೂದಲಿನ ಅಲರ್ಜಿಯನ್ನು ಎದುರಿಸಲು ಈ ಮಕ್ಕಳ ಶರೀರ ಹೆಚ್ಚು ಸಕ್ಷಮವಾಗಿರುತ್ತದೆ.

ಈ ಸಂಶೋಧನೆಯ ಪ್ರಕಾರ ಬೆರಳನ್ನು ಬಾಯಿಗೆ ಹಾಕಿಕೊಳ್ಳುವ ಮುನ್ನ ಮಗು ಮುಟ್ಟಿದ ಇತರ ವಸ್ತುಗಳ ಮೂಲಕ ಕೆಲವು ಕ್ರಿಮಿಗಳು ದೇಹ ಸೇರಿಕೊಳ್ಳುವ ಸಾಧ್ಯತೆ ಇದೆಯಾದರೂ ಪಾಲಕರು ಆತಂಕ ಪಡುವಷ್ಟಿಲ್ಲ. ಏಕೆಂದರೆ ಈ ಮೂಲಕ ಈ ಕ್ರಿಮಿಗಳಿಗೂ ರೋಗ ನಿರೋಧಕ ವ್ಯವಸ್ಥೆಯನ್ನು ಭದ್ರಪಡಿಸಲು ಸಾಧ್ಯವಾಗುತ್ತದೆ.

ಆದರೆ ಈ ಅಭ್ಯಾಸಗಳು ಬಾಲ್ಯದಲ್ಲಿ ಸಹಜವಾಗಿದ್ದು ಆಗಾಗ ಅನುಸರಿಸಿದರೆ ಮಾತ್ರ ಆರೋಗ್ಯಕರವೇ ಹೊರತು ಇಡಿಯ ದಿನ ಬೆರಳನ್ನು ಬಾಯಿಯಲ್ಲಿಟ್ಟುಕೊಳ್ಳುವುದು ಆರೋಗ್ಯಕರವಲ್ಲ. ಅಲ್ಲದೇ ಉಗುರು ಕಚ್ಚುವ ಅಭ್ಯಾಸ ಸಹಾ ಒಂದು ಹಂತ ಕಳೆದ ಬಳಿಕ ಸಂಪೂರ್ಣವಾಗಿ ನಿಲ್ಲಿಸಲೇಬೇಕು.

ಅಲ್ಲದೇ ಮಕ್ಕಳು ಹೊರಗೆ ಆಡುವ ಸಮಯದಲ್ಲಿ ಕೊಳೆಯಾಗಿದ್ದ ಕೈಗಳನ್ನು ಸರ್ವಥಾ ಬಾಯಿಯಲ್ಲಿಟ್ಟುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಐದರಿಂದ ಏಳು ವರ್ಷದ ನಡುವಣ ಒಂದು ಸಾವಿರಕ್ಕೂ ಹೆಚ್ಚು ಉಗುರು ಕಚ್ಚುವ ಅಭ್ಯಾಸವಿರುವ ಮಕ್ಕಳ ಆರೋಗ್ಯದ ಅಂಕಿ ಅಂಶಗಳನ್ನು ವಿಶ್ಲೇಷಿಸಿ ಈ ಫಲಿತಾಂಶಗಳನ್ನು ಪಡೆಯಲಾಗಿದೆ.

English summary

Does Thumb-Sucking Minimise Allergies?

If your baby is seen thumb sucking, most of the time you may get irritated. Even nail-biting is another bad habit of toddlers that may worry parents. But researchers say that you don't need to worry if you see such habits in your toddler. Such habits are said to minimise the vulnerability to allergic infections in toddlers.
X
Desktop Bottom Promotion