For Quick Alerts
ALLOW NOTIFICATIONS  
For Daily Alerts

ಮಗು ಓದಿನಲ್ಲಿ ಹಿಂದಿದೆ ಎಂದಾದಲ್ಲಿ ಅದಕ್ಕೆ ಗೊರಕೆಯೇ ಕಾರಣ!

By Manu
|

ನಿಮ್ಮ ಮಗು ಶೈಕ್ಷಣಿಕ ವಲಯದಲ್ಲಿ ಹಿಂದಿದೆಯೇ? ಇದು ನಿಮ್ಮನ್ನು ಬಹಳವಾಗಿ ಕಂಗೆಡಿಸುತ್ತಿದೆ ಎಂದಾದಲ್ಲಿ ಮಕ್ಕಳನ್ನು ದಂಡಿಸುವ ಬದಲಿಗೆ ಅವರಿಗೆ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳಲು ಉಂಟಾಗಿರುವ ಸಮಸ್ಯೆಯೇನು ಎಂಬುದನ್ನು ಅರಿತುಕೊಳ್ಳಿ. ನಾವು ಕೆಲವೊಂದು ಸಣ್ಣ-ಪುಟ್ಟ ದೋಷಗಳನ್ನು ಸಮಸ್ಯೆಯೇ ಅಲ್ಲವೆಂದು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಈ ಚಿಕ್ಕ ದೋಷಗಳೇ ಮುಂದಿನ ದೊಡ್ಡ ಆತಂಕಕಗಳಿಗೆ ಕಾರಣವಾಗುತ್ತದೆ.

Does Snoring Affect Your Kid's Academics?

ಈಗ ನಿಮ್ಮ ಮಗು ಓದಿನಲ್ಲಿ ಹಿಂದಿದೆ ಎಂದಾದಲ್ಲಿ ಅದಕ್ಕೆ ಕಾರಣ ಗೊರಕೆಯಾಗಿದೆ ಎಂಬುದನ್ನು ನೀವು ಒಪ್ಪಲೇಬೇಕು. ಮಗುವಿನ ನಿದ್ದೆಯ ಗುಣಮಟ್ಟವನ್ನು ಈ ಗೊರಕೆ ಹಾಳುಮಾಡುತ್ತಿದ್ದು ಸಾಕಷ್ಟು ವಿಶ್ರಾಂತಿ ಇಲ್ಲದೆ ಮಗು ಓದಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿಂದೆ ಬೀಳುತ್ತದೆ ಎಂಬುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ.

ಕೆಲವು ಮಕ್ಕಳು ಅಪರೂಪಕ್ಕೊಮ್ಮೆ ಗೊರಕೆ ಹೊಡೆದರೆ, ಇದು ದಿನವೂ ಆಗುತ್ತಿದೆ ಎಂದಾದಲ್ಲಿ ಸ್ಲೀಪ್ ಅಪೇನಿಯಾ ಎಂಬ ರೋಗವಾಗಿ ಪರಿಗಣಿಸಲಾಗುತ್ತದೆ. ಮಗುವಿನ ಓದು ಮತ್ತು ಏಕಾಗ್ರತೆಯ ಮೇಲೆ ಇದು ಪರಿಣಾಮವನ್ನು ಬೀರುತ್ತದೆ. ಮಗುವು ಸ್ಲೀಪ್ ಅಪೇನಿಯಾದಿಂದ ಬಳಲುತ್ತಿದೆ ಎಂದಾದಲ್ಲಿ ನಿದ್ದೆಯ ಸಮಯದಲ್ಲಿ ಉಸಿರಾಟದ ತೊಂದರೆ ಕೂಡ ಉಂಟಾಗುತ್ತಿರುತ್ತದೆ. ಮಕ್ಕಳಿಗೆ ಕಾಡುವ ಗೊರಕೆಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

ಈ ಸಮಸ್ಯೆಯನ್ನು ನಿವಾರಿಸಲು ಸರ್ಜರಿ ಮಾಡಬೇಕಾಗುತ್ತದೆ. ಅಧ್ಯಯನದ ಭಾಗವಾಗಿ, 5 ರಿಂದ 7 ವರ್ಷಗಳ 1300 ಕ್ಕಿಂತ ಹೆಚ್ಚಿನ ಮಕ್ಕಳನ್ನು ನಿಖರವಾಗಿ ಅಭ್ಯಸಿಸಲಾಯಿತು. ಗೊರಕೆ ಹೊಡೆಯುವವರು ಮತ್ತು ಹೊಡೆಯದೇ ಇರುವವರು ಹೀಗೆ ಎರಡು ವಿಭಾಗಗಳನ್ನು ಮಾಡಲಾಯಿತು.

ನಿದ್ದೆಯ ಗುಣಮಟ್ಟವನ್ನು ಅಭ್ಯಸಿಸಲಾಯಿತು ಮತ್ತು ಅರಿವಿನ ಸಾಮರ್ಥ್ಯಗಳನ್ನು ಪರೀಕ್ಷಿಸಲಾಯಿತು ಇದಕ್ಕಾಗಿ ನಿರ್ದಿಷ್ಟ ಪ್ರಶ್ನಾವಳಿಗಳನ್ನು ತಯಾರಿಸಲಾಯಿತು. ಅಧ್ಯಯನ ಪೂರ್ಣಗೊಳಿಸಿದ ನಂತರ, ಸಂಶೋಧಕರು ತಳೆದ ನಿರ್ಧಾರವೆಂದರೆ ಗೊರಕೆಯು ಮಕ್ಕಳ ಅರಿವಿನ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದಾಗಿದೆ. ಗೊರಕೆಯ ಅಬ್ಬರಕ್ಕೆ ಕಡಿವಾಣ ಹಾಕುವ ಮನೆಮದ್ದು

ಆದ್ದರಿಂದ ನಿಮ್ಮ ಮಗು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದಾದಲ್ಲಿ ಗೊರಕೆಯ ಸಮಸ್ಯೆಯಿಂದ ಬಳಲುತ್ತಿದೆ ಎಂದಲ್ಲಿ, ಎರಡಕ್ಕೂ ಸಂಬಂಧವಿದೆ ಎಂದಾಗಿದೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಲ್ಲಿ ಮಗುವಿನ ನಿದ್ದೆಯ ಗುಣಮಟ್ಟ ಉತ್ತಮವಾಗುತ್ತದೆ ಮತ್ತು ಅರಿವಿನ ಶಕ್ತಿಯೂ ಹೆಚ್ಚುತ್ತದೆ.

English summary

Does Snoring Affect Your Kid's Academics?

A new study claims that kids who snore may score poorly in their academics. This study further claims that snoring could also affect a kid's cognitive abilities. As snoring could affect the quality of sleep, it could indirectly affect a kids' performance.
Story first published: Thursday, May 19, 2016, 10:11 [IST]
X
Desktop Bottom Promotion