For Quick Alerts
ALLOW NOTIFICATIONS  
For Daily Alerts

ವ್ಯಕ್ತಿಯ ವೃತ್ತಿಯನ್ನು ಆತನ ಬಾಲ್ಯ ನಿರ್ಧರಿಸಬಲ್ಲುದೇ?

By Manu
|

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ತಮ್ಮ ಪಾಲಕರಿಂದ ಪ್ರೀತಿ, ಕಾಳಜಿ ಮತ್ತು ಎಲ್ಲಾ ವಿಧದ ಸೌಕರ್ಯಗಳನ್ನು ಪಡೆದು ಬಾಲ್ಯವನ್ನು ಕಳೆದ ಮಕ್ಕಳು ಹಿರಿಯರಾದ ಬಳಿಕ ವೃತ್ತಿಯಲ್ಲಿ ಅತ್ಯುನ್ನತ ಸಾಧನೆ ಸಾಧಿಸುತ್ತಾರೆ.

ಅಲ್ಲದೇ ಹಿರಿಯರಾಗಿ ಈ ವ್ಯಕ್ತಿಗಳು ಹೆಚ್ಚು ಸಂತೃಪ್ತರೂ ಗೌರವಾನ್ವಿತರೂ ಆಗಿರುತ್ತಾರೆ. ಶಿಕ್ಷಣದಲ್ಲಿ ಉತ್ತಮ ಸಾಧನೆ, ಜೀವನದಲ್ಲಿ ಸಂತೋಷ, ವೃತ್ತಿರಂಗದಲ್ಲಿ ತೃಪ್ತಿ ಎಲ್ಲವೂ ಬಾಲ್ಯದಲ್ಲಿ ಪಾಲಕ ಪೋಷಕರಿಂದ ಸಿಕ್ಕ ಪ್ರೀತಿಗೆ ಪೂರಕವಾಗಿವೆ ಎಂದು ಈ ಸಂಶೋಧನೆ ತಿಳಿಸುತ್ತದೆ.

 Does Childhood Affect A Person's Career

ವೃತ್ತಿರಂಗದಲ್ಲಿ ಉನ್ನತ ಸಾಧನೆ ಸಾಧಿಸಿದ ಕೆಲವು ವ್ಯಕ್ತಿಗಳು ಬಾಲ್ಯದಲ್ಲಿ ತಮ್ಮ ಪಾಲಕರ ಕಟ್ಟುನಿಟ್ಟಿನ ನಿಯಮಗಳಲ್ಲಿ ಬಂಧಿತರಾಗಿದ್ದು ಕಂಡುಬಂದರೂ ಇವರು ಜೀವನವನ್ನು ಸುಖವಾಗಿ ಅನುಭವಿಸುವುದರಲ್ಲಿ ಅಥವಾ ಸಂತೋಷಪಡುವುದರಲ್ಲಿ ಇತರರಿಗಿಂತ ಹಿಂದಿರುತ್ತಾರೆ ಎಂದು ಈ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಆದ್ದರಿಂದ ಅತ್ಯುತ್ತಮ ಅಂಕ ಬೇಕೇ ಬೇಕು ಎಂದು ಮಕ್ಕಳ ಮೇಲೆ ಅಪಾರ ಒತ್ತಡ ಹೇರುವ ಪಾಲಕರ ಕ್ರಮದ ಪರಿಣಾಮದಿಂದಲೂ ಈ ಮಕ್ಕಳು ಹಿರಿಯರಾದ ಬಳಿಕ ಹೆಚ್ಚು ಸಂತುಷ್ಟರಾಗಿರುವುದಿಲ್ಲ. ಈ ಸಂಶೋಧನೆಯಲ್ಲಿ ತಜ್ಞರು ಸುಮಾರು ಐದು ಸಾವಿರಕ್ಕೂ ಹೆಚ್ಚು ವಿವಿಧ ಶ್ರೇಣಿಯ ವ್ಯಕ್ತಿಗಳನ್ನು ಭೇಟಿಯಾಗಿ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದು ವಿಶ್ಲೇಷಿಸಿ ಮೇಲಿನ ತೀರ್ಮಾನಕ್ಕೆ ಬರಲಾಗಿದೆ.

ಇದರಲ್ಲಿ ವಿಶೇಷವಾಗಿ ಬಾಲ್ಯದಲ್ಲಿ ತಂದೆ ತಾಯಿಯರು, ಹಿರಿಯರು, ಶಿಕ್ಷಕರು ಅವರನ್ನು ನಡೆಸಿಕೊಂಡಿದ್ದ ರೀತಿಯ ಬಗ್ಗೆ ಅಪಾರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಆದ್ದರಿಂದ ವೃತ್ತಿಜೀವನದಲ್ಲಿ ಉನ್ನತ ಸಾಧನೆ ಸಾಧಿಸಿದರೂ ವೈಯಕ್ತಿಕವಾಗಿ ಅಸುಖಿಗಳಾಗಿರಲು ಬಾಲ್ಯದ ಕಟ್ಟುಪಾಡು ಪ್ರಮುಖ ಕಾರಣವಾಗಿದೆ.

ಇದಕ್ಕೆ ತದ್ವಿರುದ್ಧವಾಗಿ ಬಾಲ್ಯದಲ್ಲಿ ಪಾಲಕರ ಪೋಷಕರ ಪ್ರೀತಿಯನ್ನು ಪಡೆದವರು ಉನ್ನತ ಪದವನ್ನು ಪಡೆದರೂ ಪಡೆಯದಿದ್ದರೂ ತಮ್ಮ ಪಾಲಿನ ಜೀವನವನ್ನು ಸಂತುಷ್ಟರಾಗಿ, ಸದಾ ನೆಮ್ಮದಿಯಿಂದ ಸವೆಸುತ್ತಿರುತ್ತಾರೆ.

English summary

Does Childhood Affect A Person's Career

A new study claims that children who get enough attention, love, care and resources during their childhood tend to succeed in their careers after they grow up. Also, such children may enjoy more happiness in their adult lives. This study further reveals that supportive parenting has positive effects on children especially after they grow up.
Story first published: Tuesday, June 21, 2016, 19:58 [IST]
X
Desktop Bottom Promotion