For Quick Alerts
ALLOW NOTIFICATIONS  
For Daily Alerts

ಕಿರಿಯ ಸಹೋದರ ಸಹೋದರಿಯರ ಪ್ರೀತಿ ಪಾತ್ರ ಗುಣಗಳು

By Jaya subramanya
|

ನಮ್ಮ ಒಡಹುಟ್ಟಿದವರು ನಮಗೆ ಹೆಚ್ಚು ಆತ್ಮೀಯರಾಗಿರುತ್ತಾರೆ. ಗೆಳೆಯರಂತೆ ನಾವು ಅವರನ್ನು ಕಾಣುತ್ತೇವೆ. ಅವರಲ್ಲಿ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತೇವೆ. ನಮ್ಮ ಒಡಹುಟ್ಟಿದವರು ತಂಗಿ ಅಥವಾ ತಮ್ಮನಾಗಿದ್ದರೆ ಅವರ ಮೇಲೆ ನಮಗೆ ಅಪರಿಮಿತ ಪ್ರೀತಿ ಇರುತ್ತದೆ. ಕೊನೆಯವರೆಂದು ಮನೆಯಲ್ಲಿ ಮುದ್ದು ಅವರಿಗೇ ಜಾಸ್ತಿಯಾಗಿರುತ್ತದೆ. ಎಳೆಯರು ತಮ್ಮ ಅಕ್ಕ ಅಥವಾ ಅಣ್ಣನನ್ನು ಅನುಸರಿಸುವುದು ಜಾಸ್ತಿಯಾಗಿರುತ್ತದೆ ಅವರದ್ದು ಸೂಕ್ಷ್ಮ ಪ್ರವೃತ್ತಿಯಾಗಿದ್ದು ಬೇರೆ ಸಹೋದರ ಸಹೋದರಿಯರಿಗೆ ಹೋಲಿಸಿದಾಗ ಮುಚ್ಚುಮರೆ ಮಾಡದೇ ಇರುವವರಾಗಿದ್ದಾರೆ.

Cutest Traits Of Younger Siblings

ಮನೆಯ ಕಿರಿಯರು ಮುದ್ದಿನ ಕಣ್ಮಣಿಯಾಗಿದ್ದರೂ ತಮ್ಮ ಅಕ್ಕ ಅಥವಾ ಅಣ್ಣನ ಹಿಂಬಾಲಿಸುವ ಗುಣವನ್ನು ಅವರು ಬಿಡಲಾರರು. ಅವರಂತೆಯೇ ನಡೆದುಕೊಳ್ಳುವುದು, ಅವರನ್ನೇ ಅನುಸರಿಸುವುದು, ಹೀಗೆ ಅವರ ಗುಣಗಳನ್ನೇ ಇವರು ಅನುಸರಿಸುತ್ತಾರೆ ಮತ್ತು ಅವರಂತೆಯೇ ನಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ರೀತಿಯಲ್ಲಿ ದೊಡ್ಡವರು ಸಣ್ಣವರ ರೋಲ್ ಮಾಡೆಲ್‎ಗಳಾಗಿರುತ್ತಾರೆ ಎಂದೂ ಹೇಳಬಹುದು. ಮುಂದೆ ಬೆಳೆಯುತ್ತಾ ಜವಬ್ದಾರಿಯನ್ನು ಹೊಂದಿದರೂ ಅಕ್ಕ, ಅಣ್ಣನ ಗುಣಗಳು ಸಣ್ಣವರಲ್ಲೂ ಇರುತ್ತದೆ.

ಮನೆಯ ಕಿರಿಯ ಸದಸ್ಯರಾಗಿದ್ದುಕೊಂಡೇ ಅವರಲ್ಲಿ ಕೆಲವೊಂದು ಉತ್ತಮ ಕೌಶಲ್ಯಗಳಿರುತ್ತವೆ ಎಂಬುದಾಗಿ ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ದೊಡ್ಡವರನ್ನು ಅನುಸರಿಸುವುದು ಅವರು ಮಾಡಿದಂತೆಯೇ ಮಾಡುವುದು ಕಿರಿಯರ ಹವ್ಯಾಸವಾಗಿರುತ್ತದೆ ಅದಾಗ್ಯೂ ಅವರಲ್ಲಿ ಕೆಲವೊಂದು ಗುಣಗಳಿದ್ದು ನೀವೂ ಮನೆಯ ಕಿರಿಯ ಸದಸ್ಯರಾಗಿದ್ದರೆ ಈ ಲೇಖನವನ್ನು ನೀವು ಓದಲೇಬೇಕು.

ಎಲ್ಲವನ್ನೂ ನಕಲಿಸುವ ಗುಣ
ಹಿರಿಯ ಸಹೋದರ ಇಲ್ಲವೇ ಸಹೋದರಿಯರ ಗುಣಗಳನ್ನೇ ಕಿರಿಯರು ಕಲಿಯುವುದರಿಂದ ಅವರನ್ನು ನಕಲಿಸುವವರು ಎಂದೇ ಕರೆಯಬಹುದು. ಅಣ್ಣ ಅಥವಾ ಅಕ್ಕನಂತೆಯೇ ತಾವಾಗಬೇಕೆಂಬ ಹಂಬಲ ಅವರಲ್ಲಿ ಬೆರೆತಿರುತ್ತದೆ. ಆದ್ದರಿಂದೇ ಹೆತ್ತವರು ದೊಡ್ಡವರಿಗೆ ಉಪದೇಶ ಮಾಡುತ್ತಿರುತ್ತಾರೆ.

ಪತ್ತೇದಾರಿಕೆ
ದೊಡ್ಡವರನ್ನು ಪತ್ತೇದಾರಿಕೆ ಮಾಡುವ ಗುಣ ಇವರಲ್ಲಿ ಇರುತ್ತದೆ. ನಿಮ್ಮ ಹೆತ್ತವರ ಕಣ್ಣುತಪ್ಪಿಸಿಯಾದರೂ ನೀವು ಓಡಾಡಬಹುದಾದರೂ ತಂಗಿ ಅಥವಾ ತಮ್ಮಂದಿರ ಕಣ್ಣು ತಪ್ಪಿಸಿ ನಿಮ್ಮ ಖಿನ್ನತೆಯನ್ನು ಮರೆಮಾಚಲಾಗುವುದಿಲ್ಲ. ನಿಮ್ಮಲ್ಲಿ ವ್ಯತ್ಯಾಸವಾದರೆ ಅವರು ಕೂಡಲೇ ಅದನ್ನು ಕಂಡುಹಿಡಿದು ಬಿಡುತ್ತಾರೆ.

ಬಾಲಂಗೋಚಿ
ನಿಮ್ಮ ಹಿಂದೆಯೇ ನಿಮ್ಮನ್ನೇ ಹಿಂಬಾಲಿಸಿಕೊಂಡು ಬರುವ ಗುಣ ನಿಮ್ಮ ಕಿರಿಯ ಒಡಹುಟ್ಟಿದವರಲ್ಲಿ ಇರುತ್ತದೆ. ಅವರಿಗೆ ನಿಮ್ಮನ್ನು ಹಿಂಬಾಲಿಸುವುದು ಸಂತಸಕರ ವಿಚಾರವಾಗಿರುತ್ತದೆ. ನೀವು ಎಲ್ಲೇ ಹೋದರೂ ನಿಮ್ಮೊಂದಿಗೆ ಬರುತ್ತೇನೆ ಎಂಬ ಹಟವನ್ನು ಅವರು ಮಾಡುತ್ತಾರೆ.

ಪ್ರತಿಸ್ಪರ್ಧಿ
ನಿಮ್ಮ ಕುಟುಂಬದಲ್ಲಿ ಸ್ಪರ್ಧೆಯನ್ನು ಒಡ್ಡುವವರು ಯಾರಾದರೂ ಇದ್ದಾರೆ ಎಂದಾದಲ್ಲಿ ಅದು ನಿಮ್ಮ ಕಿರಿಯರು ಎಂಬುದನ್ನು ಮಾತ್ರ ಮರೆಯಬೇಡಿ. ಅವರದ್ದು ಕೀಟಲೆ ಸ್ವಭಾವವಾಗಿರುವುದರಿಂದ ನಿಮ್ಮನ್ನು ಸಮಸ್ಯೆಗೆ ನೂಕುವಲ್ಲಿ ಅವರು ಸದಾ ಮುಂದಿರುತ್ತಾರೆ.ಇದು ಹಿರಿಯ ಸಹೋದರಿಗೆ ಸಹೋದರರಿಗೆ ಸಿಟ್ಟನ್ನು ತರಿಸುವಂತಿದ್ದರೂ ಅವರ ಕೀಟಲೆ ಇಷ್ಟವಾಗುತ್ತದೆ.

ಜವಬ್ದಾರಿಯತರು
ಸ್ವಲ್ಪ ಸಮಯದ ನಂತರ ಸಣ್ಣವರು ಹೆಚ್ಚು ಜವಬ್ದಾರಿಯುತರಾಗಿರುತ್ತಾರೆ. ಹಿರಿಯರ ಜಾಡನ್ನೇ ಅವರು ಅನುಸರಿಸಿಕೊಂಡು ಹೋಗುವುದರಿಂದ ಜವಬ್ದಾರಿಯುತವಾಗಿ ವರ್ತಿಸುವುದನ್ನು ಅವರು ತಿಳಿದು ಕೊಂಡಿರುತ್ತಾರೆ.

English summary

Cutest Traits Of Younger Siblings

Younger siblings, don't we all love them and love to be them? When you are the youngest of the lot in the family, you are blessed and pampered sky high. Younger siblings have all the right in the world too, as they are regarded to be much more sensible and outspoken when compared to the rest of the siblings
X
Desktop Bottom Promotion