For Quick Alerts
ALLOW NOTIFICATIONS  
For Daily Alerts

ಮಕ್ಕಳನ್ನು ಕಾಡುವ ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆಯೇ ಸಾಕು

By Arshad
|

ನಾವೆಲ್ಲಾ ಚಿಕ್ಕಂದಿನಲ್ಲಿ ಒಂದಲ್ಲಾ ಒಂದು ಬಾರಿ ಫ್ಲೂ ಜ್ವರದಿಂದ ಬಳಲಿಯೇ ಇದ್ದೇವೆ. ಜ್ವರ ಬಂದ ಅವಧಿಯಲ್ಲಿ ನಮಗಿಂತಲೂ ನಮ್ಮ ತಂದೆತಾಯಿಯರೇ ಹೆಚ್ಚು ವ್ಯಾಕುಲರಾಗುತ್ತಿದ್ದುದು ನಮಗಿನ್ನೂ ನೆನಪಿದೆ. ಇದೇ ಜ್ವರ ಇಂದು ನಮ್ಮ ಮಕ್ಕಳನ್ನು ಬಾಧಿಸುವಾಗ ವ್ಯಾಕುಲರಾಗುವ ಸರದಿ ನಮ್ಮದಾಗುತ್ತದೆ. ವಿಶೇಷವಾಗಿ ತಾಯಿಯಾದವಳು ತನ್ನ ಮಗು ಜ್ವರದಿಂದ ಬಳಲುತ್ತಿದ್ದಾಗ ತನ್ನೆಲ್ಲಾ ಕೆಲಸಗಳನ್ನು ಬದಿಗೊತ್ತಿ ಮಗುವಿನ ಶುಶ್ರೂಷೆಗೆ ಧಾವಿಸುತ್ತಾಳೆ. ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

ಫ್ಲೂ ಜ್ವರ ಹಿರಿಯರಿಗಿಂತ ಮಕ್ಕಳನ್ನೇ ಹೆಚ್ಚಾಗಿ ಭಾಧಿಸುತ್ತದೆ. ಏಕೆಂದರೆ ಈ ಜ್ವರಕ್ಕೆ ಕಾರಣವಾಗಿರುವ ವೈರಸ್ಸು ನಮಗೆ ಹಳೆಯದಾಗಿದ್ದು ನಮ್ಮ ರೋಗನಿರೋಧಕ ವ್ಯವಸ್ಥೆ ಈ ವೈರಸ್ಸಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡುಬಿಟ್ಟಿರುತ್ತದೆ. ಆದರೆ ಮಕ್ಕಳ ದೇಹಕ್ಕೆ ಈ ವೈರಸ್ಸು ಹೊಸದಾಗಿದ್ದು ಅವರ ಜೀವ ನಿರೋಧಕ ಶಕ್ತಿಯಲ್ಲಿ ಪ್ರತಿರೋಧ ವ್ಯವಸ್ಥೆ ಬೆಳೆದಿರದ ಕಾರಣ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ.

ಬರೆಯ ವೈರಸ್ಸುಗಳಿಗೆ ಮಾತ್ರವಲ್ಲ, ಹೊಸ ಬ್ಯಾಕ್ಟೀರಿಯಾ ಆಧಾರಿತ ರೋಗಗಳಿಗೂ ಮಕ್ಕಳು ಸುಲಭವಾಗಿ ತುತ್ತಾಗುತ್ತಾರೆ. ಫ್ಲೂ ಜ್ವರ ಸಾಮಾನ್ಯವಾಗಿ ಮೂರರಿಂದ ಹನ್ನೆರಡು ವಯಸ್ಸಿನ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ. ಇದೊಂದು ಅಪ್ಪಟ ವೈರಲ್ ಸೋಂಕುರೋಗವಾಗಿದ್ದು ಸುರಿಯುವ ಮೂಗು, ಗಂಟಲಬೇನೆ, ಅತೀವ ಜ್ವರ, ಉಸಿರಾಟಕ್ಕೆ ತೊಂದರೆ, ಹಸಿವಿಲ್ಲದಿರುವುದು, ಮೈ ಕೈ ನೋವು ಮೊದಲಾದವು ಇದರ ಲಕ್ಷಣಗಳಾಗಿವೆ.

ಈ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ತಕ್ಷಣ ಮನೆಯಲ್ಲಿಯೇ ಲಭ್ಯವಿರುವ ಈ ಸುಲಭ ಸಾಮಾಗ್ರಿಗಳಿಂದ ಆರೈಕೆ ಮಾಡಿದರೆ ಈ ಜ್ವರ ಉಲ್ಬಣಿಸುವುದನ್ನು ತಡೆಗಟ್ಟಬಹುದು. ಬನ್ನಿ, ಈ ವಿಧಾನಗಳನ್ನು ನೋಡೋಣ: ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ

ಬಿಸಿ ಬಿಸಿ ಸೂಪ್ ಕುಡಿಸಿ

ಒಂದು ವೇಳೆ ಮಗುವಿನ ಮೈತಾಪ ಹೆಚ್ಚುತ್ತಿದ್ದು ಮೂಗು ಕಟ್ಟಿಕೊಂಡಿರುವುದು ಕಂಡುಬಂದರೆ ಇದು ಜ್ವರ ಹೆಚ್ಚುವ ಸ್ಪಷ್ಟ ಸೂಚನೆಯಾಗಿದೆ. ಈ ಹೊತ್ತಿನಲ್ಲಿ ಬಿಸಿಬಿಸಿಯಾಗಿ ಚಿಕನ್ ಅಥವಾ ತರಕಾರಿಯ ಸೂಪ್ ತಯಾರಿಸಿ ಕುಡಿಸಿ. ಎಣ್ಣೆ ಬಳಸದಿರಿ. ಮಗುವಿಗೆ ಕುಡಿಯಲು ಸಾಧ್ಯವಾದಷ್ಟು ಮಾತ್ರ ಕಾಳುಮೆಣಸಿನ ಪುಡಿ ಬಳಸಿ. ಈ ಸೂಪ್ ಅನ್ನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಕುಡಿಸಿ.

ಬೆಳ್ಳುಳ್ಳಿ-ಜೇನಿನಿಂದ ಕೆಮ್ಮು ಕಡಿಮೆಗೊಳಿಸಿ

ಒಂದು ವೇಳೆ ಮೈತಾಪ ಹೆಚ್ಚುತ್ತಿದ್ದು ಇದರೊಂದಿಗೆ ಒಣಕೆಮ್ಮು ಆವರಿಸಿದರೆ ಇದು ಸಹಾ ಫ್ಲೂ ಜ್ವರದ ಸಾಮಾನ್ಯ ಲಕ್ಷಣವಾಗಿದೆ. ಮಗು ಇಡಿಯ ದಿನ ಸುಮ್ಮಸುಮ್ಮನೇ ಕೆಮ್ಮುತ್ತಲೇ ಇದ್ದರೆ ಇದರಿಂದ ಎದೆಯಲ್ಲಿ ನೋವು ಉಂಟಾಗಬಹುದು. ಇದನ್ನು ಕಡಿಮೆಗೊಳಿಸಲು ಬಿಸಿನೀರಿನಲ್ಲಿ ಒಂದೆರಡು ಎಸಳು ಜಜ್ಜಿದ ಬೆಳ್ಳುಳ್ಳಿ ಮತ್ತು ಕೊಂಚ ಜೇನು ಕದಡಿ ಬೆಳಿಗ್ಗೆ ಕುಡಿಸಿ.

ಸಾಕಷ್ಟು ವಿಶ್ರಾಂತಿ ದೊರಕುವಂತೆ ಮಾಡಿ

ಮಕ್ಕಳಲ್ಲಿ ಆಟವಾಡುವ ಮನೋಭಾವ ಎಷ್ಟು ಹೆಚ್ಚಿರುತ್ತದೆ ಎಂದರೆ ತನಗೆ ಜ್ವರ ಇರುವ ವಿಷಯವನ್ನೂ ಮರೆತು ಆಟಕ್ಕೆ ಓಡಿಬಿಡುತ್ತಾರೆ. ಆದರೆ ಆಟದಿಂದ ಜ್ವರ ಇನ್ನಷ್ಟು ಬೇಗನೇ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಜ್ವರದ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ದೇಹಕ್ಕೆ ಇದನ್ನು ಎದುರಿಸಲು ಸಾಕಷ್ಟು ವಿಶ್ರಾಂತಿ ಅಗತ್ಯ. ಅಂದರೆ ಈ ಸಮಯದಲ್ಲಿ ದೇಹ ತನ್ನೆಲ್ಲಾ ಶಕ್ತಿಯನ್ನು ಆಟೋಟಗಳ ಬದಲಿಗೆ ವೈರಸ್ಸುಗಳನ್ನು ಎದುರಿಸಲು ಬಳಸಬೇಕು. ಆದ್ದರಿಂದ ಜ್ವರ ಬಂದ ಮಗು ಸಾಕಷ್ಟು ವಿಶ್ರಾಂತಿ ಪಡೆಯುವಂತೆ ಮಾಡುವುದು ಅವಶ್ಯವಾಗಿದೆ. ವೈರಲ್ ಜ್ವರದಿಂದ ಶೀಘ್ರ ಗುಣಮುಖರಾಗಲು ಒಂದಿಷ್ಟು ಟಿಪ್ಸ್

English summary

Best, Natural Tips To Cure Your Child's Flu

Surely, most of you remember a couple of instances from our childhood days when we got sick and it was a testing period for both our parents and us! One thing that can be worse than falling sick is to see your child sick with painful symptoms. Also, when a child falls sick, the parents have to spend a lot of
X