For Quick Alerts
ALLOW NOTIFICATIONS  
For Daily Alerts

ಮಕ್ಕಳ ಕೊಲೆಸ್ಟ್ರಾಲ್ ಹೇಗೆ ಕಡಿಮೆ ಮಾಡ್ತೀರಾ?

|
Tips to Cure Obesity in Children
ಮಕ್ಕಳಲ್ಲಿ ಸ್ಥೂಲಕಾಯತೆ ತುಂಬಾ ಗಂಭೀರ ಸಮಸ್ಯೆ. ಇದು ಮುಂದೆ ಮಧುಮೇಹ, ಹೃದಯದ ಕಾಯಿಲೆ ಹಾಗೂ ನಿದ್ದೆಗೆ ಸಂಬಂಧಿಸಿದ ಕಾಯಿಲೆಯನ್ನೂ ತರಬಹುದು. ಆದ್ದರಿಂದ ಮಕ್ಕಳನ್ನು ಸ್ಥೂಲತೆಯ ಸಮಸ್ಯೆ ಸುಳಿಯಿಂದ ಹೊರಗೆ ತರುವುದು ಅವಶ್ಯಕ. ಅದಕ್ಕೆಂದು ಇಲ್ಲಿ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ.

ಮಕ್ಕಳಲ್ಲಿ ಸ್ಥೂಲಕಾಯತೆ ಹೋಗಲಾಡಿಸುವ ವಿಧಾನ:


1. ಕಾರಣ ತಿಳಿದುಕೊಳ್ಳಿ:
ಮೊದಲು ಮಕ್ಕಳ ಸ್ಥೂಲಕಾಯತೆಗೆ ನಿಖರ ಕಾರಣ ತಿಳಿದುಕೊಳ್ಳಿ. ವೈದ್ಯರನ್ನು ಸಂಪರ್ಕಿಸಿ ಇದು ವಂಶವಾಹಿಯೋ ಅಥವಾ ಜೀವನ ಶೈಲಿಯಿಂದ ಬಂದಿರುವುದೋ ಎಂದು ತಿಳಿದುಕೊಳ್ಳಿ.

2. ಎತ್ತರ ಪರೀಕ್ಷಿಸಿ:
ಮಕ್ಕಳಿಗೆ ತೂಕದ ಬಗ್ಗೆ ಮಾಹಿತಿ ನೀಡಿ, ತೂಕ ಹೆಚ್ಚಳದಿಂದಾಗುವ ಸಮಸ್ಯೆ ಕುರಿತು ತಿಳಿ ಹೇಳಿ. ವಯಸ್ಸು ಮತ್ತು ಎತ್ತರಕ್ಕೆ ತಕ್ಕಂತೆ ತೂಕ ಎಷ್ಟಿರಬೇಕೆಂದು ತಿಳಿದು ಅದಕ್ಕೆ ತಕ್ಕಂತೆ ಆಹಾರಕ್ರಮ, ವ್ಯಾಯಾಮ, ಜೀವನ ಶೈಲಿ ಬದಲಾಯಿಸಿಕೊಳ್ಳಲು ಸೂಕ್ತ ಸಲಹೆ ನೀಡಿ.

3. ಸೈಕ್ಲಿಂಗ್, ಸ್ವಿಮ್ಮಿಂಗ್:
ದೇಹಕ್ಕೆ ಚಟುವಟಿಕೆ ನೀಡುವಂತಹ ಆಟಗಳಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡಿ. ಕೇವಲ ಟಿ.ವಿ, ವಿಡಿಯೋ ಗೇಮ್ ಆಡುವ ಮಕ್ಕಳಲ್ಲಿ ಬೊಜ್ಜು ಹೆಚ್ಚು ತುಂಬಿಕೊಳ್ಳುತ್ತೆ. ಆದ್ದರಿಂದ ನಡಿಗೆ, ನೆಗೆತ, ಓಟ, ಸೈಕ್ಲಿಂಗ್, ಸ್ವಿಮ್ಮಿಂಗ್ ಇವುಗಳನ್ನು ಮಕ್ಕಳಿಗೆ ಕಲಿಸಿ ದೇಹದಲ್ಲಿನ ಕ್ಯಾಲೊರಿ ಕರಗುವಂತೆ ಮಾಡಬಹುದು.

4. ಜಂಕ್ ಫುಡ್ ಕಡಿಮೆಯಿರಲಿ: ಮಕ್ಕಳಿಗೆ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ನೀಡುವುದನ್ನು ಕಡಿಮೆಗೊಳಿಸಿ. ಫ್ರೆಂಚ್ ಫ್ರೈ, ಚಿಪ್ಸ್, ಫ್ರೈಯ್ಡ್ ಚಿಕನ್, ಮಿಲ್ಕ್ ಶೇಕ್, ಇಂತಹ ಆಹಾರಗಳಲ್ಲಿ ಕೊಬ್ಬಿನಂಶ ಹೆಚ್ಚಿರುವುದರಿಂದ ಬೇಗನೆ ಹೃದಯ ತೊಂದರೆ ಉಂಟಾಗಬಹುದು.

5. ಜ್ಯೂಸ್ ಗೆ ಕಡಿವಾಣ ಹಾಕಿ: ಸಿಹಿಯಾದ ಜ್ಯೂಸ್ ಮತ್ತು ಕೆನೆ ತುಂಬಿದ ಹಾಲು ಮಕ್ಕಳಲ್ಲಿ ಸ್ಥೂಲಕಾಯತೆ ತರಬಹುದು. ಆದ್ದರಿಂದ ಕೆನೆರಹಿತ ಹಾಲನ್ನು ನೀಡಿ. ಹೊರಗೆ ಜ್ಯೂಸ್ ಕುಡಿಯುವುದನ್ನು ನಿಯಂತ್ರಣ ಮಾಡಿ. ಕೊಬ್ಬು ಮತ್ತು ಕ್ಯಾಲೊರಿ ಕಡಿಮೆ ಇರುವ ಡೈರಿ ಉತ್ಪನ್ನಗಳನ್ನಷ್ಟೇ ಮಕ್ಕಳಿಗೆ ನೀಡಿ.

6. ಖಿನ್ನತೆ ತರಬೇಡಿ: ಮಕ್ಕಳಲ್ಲಿ ಸ್ಥೂಲಕಾಯತೆ ಖಿನ್ನತೆಯನ್ನೂ ಉಂಟುಮಾಡಬಹುದು. ಆದ್ದರಿಂದ ಮಕ್ಕಳ ಮೇಲೆ ಅನವಶ್ಯಕ ಒತ್ತಡ ಹೇರದೆ, ಸಮಸ್ಯೆಯನ್ನು ಬಗೆ ಹರಿಸುವತ್ತ ಚಿಂತನೆ ನಡೆಸಿ. ಅವರಿಗೆ ನಿಮ್ಮ ಪ್ರೀತಿ ಮತ್ತು ಕಾಳಜಿಯ ಅವಶ್ಯಕತೆ ಹೆಚ್ಚಿರುತ್ತದೆ ಎಂಬುದನ್ನು ಮರೆಯಬೇಡಿ.

English summary

Obesity and Kids Health Problem | Tips to Cure Obesity in Children | ಸ್ಥೂಲಕಾಯತೆ ಮತ್ತು ಮಕ್ಕಳ ಆರೋಗ್ಯ | ಮಕ್ಕಳಲ್ಲಿ ಸ್ಥೂಲಕಾಯತೆ ನಿವಾರಿಸುವ ಸಲಹೆ

Obesity in kids is dangerous as this makes them prone to diseases such as type 2 diabetes, cardiovascular diseases and sleep disorders. So Here is an healthy and nutritious diet can help cure obesity in kids. Take a look.
Story first published: Friday, September 30, 2011, 18:35 [IST]
X
Desktop Bottom Promotion