For Quick Alerts
ALLOW NOTIFICATIONS  
For Daily Alerts

ಗರ್ಭವತಿಯರು ಈ ಕಾರಣಗಳಿಗೆ ಹೆಮ್ಮೆ ಪಡಲೇಬೇಕು

|

ಗರ್ಭವತಿಯಾಗುವುದು ಪ್ರತಿ ಹೆಣ್ಣಿನ ಕನಸು ಆಗಿದ್ದರೂ ಇದು ಕೈಗೂಡಲು ಹಲವಾರು ಅಂಶಗಳನ್ನು ಆಧರಿಸಬೇಕಾಗುತ್ತದೆ. ಮೊದಲ ಬಾರಿಗೆ ಗರ್ಭ ಧರಿಸಿದಾಗ ಎದುರಾಗುವ ದುಗುಡ ಮತ್ತು ದೈಹಿಕ ಬದಲಾವಣೆಗಳು ಆಕೆಯನ್ನು ದೃತಿಗೆಡಿಸಬಹುದು. ವಾಸ್ತವದಲ್ಲಿ ಗರ್ಭಿಣಿಯಾದ ಬಳಿಕ ಆಕೆಯನ್ನು ಸಮಾಜ ನೋಡುವ ನೋಟ ಮತ್ತು ನೀಡುವ ಸಹಕಾರ ಎಲ್ಲವೂ ಬದಲಾಗುತ್ತವೆ.

ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯನ್ನು ಬದಲಾಗುವ ದೈಹಿಕ ಮತ್ತು ಮಾನಸಿಕ ಸ್ಥಿತಿಗಳಿಗೆ ಮೀಸಲಾಗಿಸುತ್ತಾರೆ. ಉಬ್ಬುವ ಹೊಟ್ಟೆ, ವಾಕರಿಕೆ, ವಾಂತಿ, ಏರುಪೇರಾಗುವ ಮನೋಭಾವ ಮೊದಲಾದವೇ ಪ್ರಾಮುಖ್ಯತೆ ಪಡೆಯುತ್ತವೆ. ಆದರೆ ಇವುಗಳ ಹೊರತಾಗಿಯೂ ಗರ್ಭಾವಸ್ಥೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ, ಬನ್ನಿ ಇವು ಯಾವುವು ಎಂಬುದನ್ನು ನೋಡೋಣ:

1. ಸಮಾಜದ ವ್ಯಕ್ತಿಗಳು ನಿಮ್ಮ ಬಗ್ಗೆ ಕಾಳಜಿ ತೋರ ತೊಡಗುತ್ತಾರೆ

1. ಸಮಾಜದ ವ್ಯಕ್ತಿಗಳು ನಿಮ್ಮ ಬಗ್ಗೆ ಕಾಳಜಿ ತೋರ ತೊಡಗುತ್ತಾರೆ

ಗರ್ಭವತಿಯರನ್ನು ಕಂಡಾಗ ಸಮಾಜದ ವ್ಯಕ್ತಿಗಳು ತಮ್ಮಿಂದಾದ ಎಲ್ಲಾ ಸಹಕಾರವನ್ನು ತೋರತೊಡಗುತ್ತಾರೆ. ಅಲ್ಲದೇ ನಿಮ್ಮ ಬಗ್ಗೆ ಹೆಚ್ಚಿನ ಅನುಕಂಪ ಮತ್ತು ಪ್ರಾಮುಖ್ಯತೆಯನ್ನು ತೋರತೊಡಗುತ್ತಾರೆ. ಎಲ್ಲಿ ಹೋದರೂ ನಿಮಗೆ ಕೆಂಪು ಕಂಬಳಿಯ ಸ್ವಾಗತ ದೊರಕುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಬಾಗಿಲನ್ನು ತೆರೆಯಲು, ಉದ್ದನೆಯ ಸರತಿ ಸಾಲು ಇದ್ದರೆ ನಿಮಗೆ ಮೊದಲ ಆದ್ಯತೆ ನೀಡಲು, ಲಿಫ್ಟ್ ಮೊದಲಾದ ಕಡೆ ನಿಮಗೇ ಮೊದಲು ಹೋಗಲು, ಬಸ್, ರೈಲು ಮೊದಲಾದ ಕಡೆಗಳಲ್ಲಿ ಕುಳಿತುಕೊಳ್ಳಲು ಸ್ಥಳ ಇಲ್ಲದಿದ್ದರೆ ನಿಮ್ಮ ಕಂಡಾಕ್ಷಣ ಯಾರಾದರೊಬ್ಬರು ನಿಂತು ಸ್ಥಳ ನೀಡುವುದು, ಮನೆ ಕೆಲಸ ಮಾಡಲು ಮನೆಯ ಸದಸ್ಯರು ನೆರವಾಗುವುದು ಮೊದಲಾದವುಗಳನ್ನು ನೀವು ಸ್ಪಷ್ಟವಾಗಿಯೇ ಗಮನಿಸಬಹುದು.

ಗರ್ಭಿಣಿಯ ಮನ ನೋಯಿಸ ಬಾರದು ಎಂಬ ಹಿರಿಯರ ಅಣತಿಯಂತೆ ಮನೆಯ ಸದಸ್ಯರೂ ಈ ಸಮಯದಲ್ಲಿ ನಿಮ್ಮೊಂದಿಗೆ ಆದಷ್ಟೂ ನಯವಾಗಿ ಮಾತನಾಡತೊಡಗುತ್ತಾರೆ.

ಎಂದೂ ಇಲ್ಲದ ಪ್ರಾಮುಖ್ಯತೆಯನ್ನು ಗರ್ಭವತಿಯಾಗಿ ನೀವು ಪಡೆಯುತ್ತೀರಿ. ನಿಮ್ಮಿಂದ ಈ ಜಗತ್ತಿಗೆ ಬರಲಿರುವ ಪುಟ್ಟ ಕಂದನ ಬಗ್ಗೆ ಎಲ್ಲರಿಗೂ ಅಕ್ಕರೆ.

ನೆನಪಿರಲಿ, ಹೆರಿಗೆಯಾದ ಬಳಿಕ ಈ ಅಕ್ಕರೆಯ ಬಹುಪಾಲು ಮಗುವಿನತ್ತ ಹರಿಯುತ್ತದೆ. ಹಾಗಾಗಿ, ಗರ್ಭಾವಸ್ಥೆಯ ಅವಧಿಯಲ್ಲಿ ಈ ಅಕ್ಕರೆಯನ್ನು ಆದಷ್ಟೂ ಹೆಚ್ಚಾಗಿ ಪಡೆಯಿರಿ. ನೀವು ಅಕ್ಕರೆಯನ್ನು ಎಷ್ಟು ಹೆಚ್ಚು ಪಡೆದು ಸಂತೋಷದಿಂದಿರುತ್ತೀರೋ ಅಷ್ಟೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು

2. ನಿಮ್ಮ ತ್ವಚೆ ಮತ್ತು ಕೂದಲು ಅತ್ಯುತ್ತಮ ಆರೋಗ್ಯ ಪಡೆಯುತ್ತವೆ

2. ನಿಮ್ಮ ತ್ವಚೆ ಮತ್ತು ಕೂದಲು ಅತ್ಯುತ್ತಮ ಆರೋಗ್ಯ ಪಡೆಯುತ್ತವೆ

ಮೊಡವೆಗಳು ತಾರುಣ್ಯದ ಸಂಕೇತವಾಗಿದ್ದರೂ ಕೆಲವರಿಗೆ ಹದಿವಯಸ್ಸು ದಾಟಿದ ಬಳಿಕವೂ ಮುಂದುವರೆಯಬಹುದು. ಆದರೆ ಈ ಮೊಡವೆಗಳಿದ್ದರೂ ಗರ್ಭಾವಸ್ಥೆಯಲ್ಲಿ ಇವು ತನ್ನಿಂತಾನೇ ಮಾಯವಾಗತೊಡಗುತ್ತವೆ ಮತ್ತು ನಿಮ್ಮ ತ್ವಚೆ ಹಿಂದೆಂದೂ ಇಲ್ಲದಷ್ಟು ಬೆಳಗತೊಡಗುತ್ತದೆ.

ಕೆನ್ನೆಗಳು ಕೆಂಪಾಗತೊಡಗುತ್ತವೆ. ಇದಕ್ಕೆಲ್ಲಾ ಕಾರಣ ನಿಮ್ಮ ದೇಹದಲ್ಲಿ ಈಗ ಸ್ರವಿಸುತ್ತಿರುವ ಹಲವಾರು ರಸದೂತಗಳು ಮತ್ತು ಹೆಚ್ಚಿರುವ ರಕ್ತಪರಿಚಲನೆ.

ಪರಿಣಾಮವಾಗಿ ಚರ್ಮದಲ್ಲಿ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳು ದೊರಕತೊಡಗುತ್ತವೆ. ಹಾಗಾಗಿ, ಈ ಸಮಯದಲ್ಲಿ ನಿಮ್ಮ ಸಹಜವರ್ಣ ಪ್ರಜ್ವಲಿಸುತ್ತದೆ. ಈ ಸೌಂದರ್ಯವನ್ನು ಆದಷ್ಟೂ ನಿಮ್ಮ ಸಾಧನಗಳಲ್ಲಿ ಸೆರೆಹಿಡಿಯಿರಿ ಮತ್ತು ಆಪ್ತರೊಂದಿಗೆ ಹಂಚಿಕೊಳ್ಳಿ.

ನಿಮ್ಮ ಕೂದಲು ಸಹಾ ಈ ಸಮಯದಲ್ಲಿ ಹೆಚ್ಚು ಗಾಢ ಮತ್ತು ಸೊಂಪಗಾಗುತ್ತದೆ.

ಕೂದಲು ಉದುರುವುದು ಹೆಚ್ಚೂ ಕಡಿಮೆ ನಿಂತೇ ಹೋಗುವಷ್ಟು ಕಡಿಮೆಯಾಗುತ್ತದೆ. (ಆದರೆ ಈ ಸಂತೋಷವನ್ನು ನೀವು ಹೆಚ್ಚಿನ ದಿನ ಅನುಭವಿಸಲು ಸಾಧ್ಯವಿಲ್ಲ.

ಏಕೆಂದರೆ ಹೆರಿಗೆಯ ಬಳಿಕ ಬಾಣಂತನದ ಅವಧಿಯಲ್ಲಿ ನಿಮ್ಮ ದೇಹವನ್ನು ಹಿಂದಿನ ಆರೋಗ್ಯಕ್ಕೆ ತರುವ ಕೆಲವು ರಸದೂತಗಳ ಪ್ರಭಾವದಿಂದ ಗಾಬರಿ ಬೀಳುವಷ್ಟು ಹೆಚ್ಚು ಕೂದಲುಗಳು ಉದುರತೊಡಗುತ್ತದೆ) ಹಾಗಾಗಿ ಕೂದಲು ಸೊಂಪಾಗಿದ್ದಾಗಲೇ ಇದರ ಇರುವಿಕೆಯನ್ನು ಅನುಭವಿಸಿ ಸಂತೋಷ ಪಡಿ.

3. ನೀವು ಒಲ್ಲದ ಸಭೆ ಸಮಾರಂಭಗಳಿಗೆ ಹೋಗದಿರಲು ಇದು ಸೂಕ್ತ ನೆಪವಾಗಿದೆ

3. ನೀವು ಒಲ್ಲದ ಸಭೆ ಸಮಾರಂಭಗಳಿಗೆ ಹೋಗದಿರಲು ಇದು ಸೂಕ್ತ ನೆಪವಾಗಿದೆ

ಎಷ್ಟೋ ಸಲ, ಕೆಲವು ಸಭೆ ಸಮಾರಂಭಗಳಿಗೆ ಒಲ್ಲದ ಮನಸ್ಸಿನಿಂದ ಅಥವಾ ಮನೆಯ ಸದಸ್ಯರ ಒತ್ತಾಯದಿಂದ ಅಥವಾ ಇನ್ನಾವುದೋ ಅನಿವಾರ್ಯ ಕಾರಣದಿಂದ ಹೋಗಬೇಕಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಎಷ್ಟೇ ಗಹನವಾದ ಕಾರಣವಿದ್ದರೂ ಸರಿ, ಗರ್ಭಾವಸ್ಥೆಯಲ್ಲಿರುವುದನ್ನೇ ನೀವು ನೆಪವಾಗಿಸಿ ಇಲ್ಲಿ ಹೋಗುವುದರಿಂದ ತಪ್ಪಿಸಿಕೊಳ್ಳಬಹುದು. ಇದಕ್ಕೆ ಎದುರಾಡುವ ಧೈರ್ಯ ಯಾರಿಗೂ ಬಾರದು!

4. ನಿಮ್ಮ ತಪ್ಪುಗಳೆಲ್ಲವನ್ನೂ ನಿಮ್ಮ ಮನೋಭಾವದ ಏರುಪೇರಿನ ಮೇಲೆ ಹೊರಿಸಬಹುದು

4. ನಿಮ್ಮ ತಪ್ಪುಗಳೆಲ್ಲವನ್ನೂ ನಿಮ್ಮ ಮನೋಭಾವದ ಏರುಪೇರಿನ ಮೇಲೆ ಹೊರಿಸಬಹುದು

ಗರ್ಭಾವಸ್ಥೆಯಲ್ಲಿ ನಿಮ್ಮ ದೇಹದ ಮೇಲೆ ನೂರಾರು ರಸದೂತಗಳು ಪ್ರಭಾವ ಬೀರುತ್ತವೆ ಹಾಗೂ ಮನೋಭಾವವೂ ಬದಲಾಗುತ್ತದೆ. ಮರೆವೂ ಕಾಣಿಸಿಕೊಳ್ಳಬಹುದು. ಆದರೆ ನೀವು ಅರಿತೋ ಅರಿಯದೆಯೋ ಯಾವುದೋ ಮುಖ್ಯ ಸಂಗತಿಯನ್ನು ತಪ್ಪಿಸಿಕೊಂಡರೆ ಇದಕ್ಕೆ ನಿಮ್ಮ ಮನೋಭಾವದ ಏರಿಳಿತವನ್ನೇ ಕಾರಣವಾಗಿಸಬಹುದು.

ಉಳಿದವರಿಗೆ ಈ ತಪ್ಪಿಗಾಗಿ ಶಿಕ್ಷೆ ಅನುಭವಿಸಬೇಕಾಗಿ ಬಂದರೆ ನಿಮಗೆ ಮಾತ್ರ ಎಲ್ಲಾ ರಿಯಾಯಿತಿಗಳು ಲಭಿಸುತ್ತವೆ. ಆದರೆ ಇದರ ಅರ್ಥ ನೀವು ಇದರ ದುರುಪಯೋಗ ಪಡಿಸಿಕೊಂಡು ನಿಮ್ಮ ಮನಬಂದಂತೆ ಆಡಿಸಬಹುದು ಎಂದಲ್ಲ. ಒಂದು ವೇಳೆ ನಿಮ್ಮಿಂದ ತಪ್ಪಾದರೂ ಯಾರೂ ಏನೂ ಅನ್ನುವುದಿಲ್ಲ ಎಂದಷ್ಟೇ ಅರ್ಥ.

5. ನಿಮ್ಮ ಎದೆಯ ಸೀಳು ಇನ್ನಷ್ಟು ಆಳವಾಗುತ್ತದೆ

5. ನಿಮ್ಮ ಎದೆಯ ಸೀಳು ಇನ್ನಷ್ಟು ಆಳವಾಗುತ್ತದೆ

ಜೀವಮಾನವಿಡೀ ನೀವು ಎ ಅಥವಾ ಬಿ ಕಪ್ ಸೈಜ್ ಇರುವ ಕಂಚುಕವನ್ನೇ ಧರಿಸಿದ್ದಿರಬಹುದು. ಈ ಗಾತ್ರದ ಕಂಚುಕ ಇರುವ ಮಹಿಳೆಯರಿಗೆ ಎದೆಸೀಳು ಇರುವ ಸಾಧ್ಯತೆ ಕಡಿಮೆ. ಆದರೆ ಗರ್ಭಾವಸ್ಥೆಯಲ್ಲಿ ನಿಮ್ಮ ಸ್ತನಗಳ ಗಾತ್ರ ಕೊಂಚ ಹೆಚ್ಚತೊಡಗುತ್ತದೆ ಮತ್ತು ಈ ಏರಿಕೆ ಗರ್ಭಾವಸ್ಥೆಯ ಕೊನೆಯ ದಿನಗಳವರೆಗೂ ಮುಂದುವರೆಯುತ್ತದೆ.

ಸಾಮಾನ್ಯವಾಗಿ ಈ ಏರಿಕೆ ಎರಡು ಬ್ರಾ ಗಾತ್ರಗಳಿಗೂ ಮೀರಬಹುದು. ಅಂದರೆ ನಿಮ್ಮ ಸ್ತನಗಳು ತುಂಬಿಕೊಂಡಷ್ಟೂ ಎದೆಸೀಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ. ಬರಲಿರುವ ಕಂದನಿಗಾಗಿ ಹಾಲನ್ನು ಉತ್ಪಾದಿಸಲು ನಿಮ್ಮ ಸ್ತನಗಳ ಅಂಗಾಂಶಗಳು ಬೆಳೆದು ಹಾಲು ಒಸರಲು ಸಕಲ ಸಿದ್ದತೆ ನಡೆಸುವ ಕಾರಣದಿಂದಲೇ ಈ ಏರಿಕೆ ಕಾಣತೊಡಗುತ್ತದೆ.

ಅಷ್ಟಕ್ಕೂ ಸುಂದರ ಎದೆಸೀಳು ಯಾರಿಗೆ ಇಷ್ಟವಿಲ್ಲ? ಇದುವರೆಗೆ ನೀವು ತೊಟ್ಟುಕೊಳ್ಳಲು ಹಂಬಲಿಸುತ್ತಿದ್ದ ಸಿ ಅಥವಾ ಡಿ ಗಾತ್ರದ ಕಂಚುಕ ಈಗ ನೀವು ಧರಿಸಲು ಸಾಧ್ಯವಾಗುತ್ತದೆ. ಎದೆಸೀಳು ಕಾಣುವಂತಹ ಉಡುಪು ತೊಟ್ಟು ಮೆರೆಯಲು ಇದು ಸಕಾಲ! ಈ ಸಮಯದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ.

6. ನಿಮ್ಮ ಲೈಂಗಿಕ ಕಾಮನೆಗಳು ಹೆಚ್ಚಬಹುದು

6. ನಿಮ್ಮ ಲೈಂಗಿಕ ಕಾಮನೆಗಳು ಹೆಚ್ಚಬಹುದು

ಹಿಂದಿನ ದಿನಗಳಲ್ಲಿ ಲೈಂಗಿಕ ಕಾಮನೆಗಳು ನಿಮ್ಮ ಮಾಸಿಕ ದಿನಗಳನ್ನು ಅಧರಿಸಿ ಹೆಚ್ಚು ಕಡಿಮೆಯಾಗುತ್ತಿದ್ದವು. ಅಲ್ಲದೇ ಗರ್ಭ ಧರಿಸಬೇಕಾದ ಅಗತ್ಯತೆ ಅಥವಾ ಗರ್ಭನಿರೋಧಕ ಕ್ರಮಗಳ ಬಗ್ಗೆ ನಿಮಗೆ ದುಗುಡ ಇದ್ದೇ ಇರುತ್ತಿತ್ತು.

ಆದರೆ ಗರ್ಭಾವಸ್ಥೆಯಲ್ಲಿ, ವಿಶೇಷವಾಗಿ ಎರಡನೆಯ ತ್ರೈಮಾಸಿಕದಲ್ಲಿ ಲೈಂಗಿಕ ಬಯಕೆಗಳು ಹೆಚ್ಚುತ್ತವೆ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಭುಗಿಲೇಳುತ್ತವೆ. ಹಲವು ಗರ್ಭವತಿಯರಿಗೆ ಸ್ತನಗಳು ಅತಿ ಸೂಕ್ಷ್ಮ ಸಂವೇದಿಯಾಗುತ್ತವೆ. ಜನನಾಂಗಗಗಳಲ್ಲಿ ಹೆಚ್ಚಿನ ರಕ್ತ ಪರಿಚಲನೆಗೊಳ್ಳುವ ಮೂಲಕ ಹೆಚ್ಚು ಸಂವೇದನಾಶೀಲವಾಗುತ್ತದೆ. ಈ ಭಾಗದ ರಕ್ತ ಪರಿಚಲನೆ ಹೆಚ್ಚುವುದೇ ಇದಕ್ಕೆ ಕಾರಣ.

ಅಲ್ಲದೇ ಈಗ ಗರ್ಭ ನಿಂತಿರುವ ಕಾರಣ ಗರ್ಭನಿರೋಧಕ ಕ್ರಮಗಳನ್ನು ಕೈಗೊಳ್ಳುವ ಯಾವುದೇ ಅಗತ್ಯವಿಲ್ಲವಾದ ಕಾರಣ ಸಂಗಾತಿಯೊಂದಿಗಿನ ಸಂಪರ್ಕವನ್ನು ಗರಿಷ್ಟ ಮಟ್ಟಿಗೆ ಹಂಚಿಕೊಳ್ಳಬಹುದು.

7. ನೀವು ಹಿಂದಿನ ದಿನಗಳಿಗಿಂತ ಹೆಚ್ಚು ನಿದ್ರಿಸುತ್ತೀರಿ

7. ನೀವು ಹಿಂದಿನ ದಿನಗಳಿಗಿಂತ ಹೆಚ್ಚು ನಿದ್ರಿಸುತ್ತೀರಿ

ಗರ್ಭಾವಸ್ಥೆಯ ಒಂದು ಲಕ್ಷಣ ಎಂದರೆ ದಿನದ ಹೆಚ್ಚಿನ ಹೊತ್ತು ಕಾಡುವ ಸುಸ್ತು. ಪರಿಣಾಮವಾಗಿ ನೀವು ದಿನದ ಹೆಚ್ಚಿನ ಹೊತ್ತು ಮಲಗಿಯೇ ಇರಲು ಇಚ್ಛಿಸುತ್ತೀರಿ. ವಿಶೇಷವಾಗಿ ರಾತ್ರಿ ಎಲ್ಲರಿಗೂ ಮುನ್ನವೇ ಅಂದರೆ ಎಂಟೂವರೆ ಒಂಭತ್ತು ಘಂಟೆಗೆಲ್ಲಾ ನಿಮಗೆ ನಿದ್ದೆ ಆವರಿಸತೊಡಗುತ್ತದೆ. ಅದೂ ಎಷ್ಟು ಗಾಢ ಎಂದರೆ ಹಿಂದೆ ಎಂದೂ ಇಲ್ಲದಷ್ಟು ಸುಖವಾದ ನಿದ್ದೆ.

ಈ ನಿದ್ದೆ ನಿಮ್ಮ ಪಾಲಿಗೆ ಐಶ್ವರ್ಯವಿದ್ದಂತೆ. ನೀವು ಮಲಗಿದ್ದರೆ ಯಾರೂ ನಿಮ್ಮನ್ನು ಗಹನ ಕಾರಣವಿಲ್ಲದೇ ಎಬ್ಬಿಸಲಾರರು. ಒಂದು ವೇಳೆ ಎಬ್ಬಿಸಬೇಕಾದರೂ ಅತೀವ ಎಚ್ಚರಿಕೆಯಿಂದ, ನಿಮಗೆ ಯಾವುದೇ ಅನಾನುಕೂಲತೆ ಆಗದಂತೆ ಮೆಲ್ಲನೇ ಎಚ್ಚರಿಸುತ್ತಾರೆ.

ಅಲ್ಲದೇ ಗರ್ಭಾವಸ್ಥೆಯಲ್ಲಿ ಬೆಳೆಯುತ್ತಿರುವ ಗರ್ಭಕ್ಕೆ ಪೋಷಣೆ ನೀಡಲು ನಿಮ್ಮ ದೇಹದಲ್ಲಿ ನೀರಿನ ಸಂಗ್ರಹವೂ ಹೆಚ್ಚುತ್ತದೆ ಮತ್ತು ತೂಕವೂ ಹೆಚ್ಚುತ್ತದೆ. ಹೆಚ್ಚಿನ ತೂಕ ಎಂದರೆ ನಿಮಗೆ ಹಿಂದಿನಂತೆ ಓಡಾಡಲು ಅಷ್ಟು ಸುಲಭವಾಗಿ ಆಗುವುದಿಲ್ಲ ಮತ್ತು ಈಗ ಅಗತ್ಯವೂ ಇಲ್ಲ. ಆದಷ್ಟೂ ಈ ನಿದ್ದೆಯ ಐಶ್ವರ್ಯವನ್ನು ಸವಿಯಿರಿ ಮತ್ತು ಸುಂದರ ಕನಸುಗಳನ್ನು ಹೆಚ್ಚು ಹೆಚ್ಚಾಗಿ ಅನುಭವಿಸಿ.

8. ನೀವು ಎಂದಿಗಿಂತಲೂ ಹೆಚ್ಚು ಸಂತೋಷವಾಗಿರುತ್ತೀರಿ

8. ನೀವು ಎಂದಿಗಿಂತಲೂ ಹೆಚ್ಚು ಸಂತೋಷವಾಗಿರುತ್ತೀರಿ

ಗರ್ಭಾವಸ್ಥೆಯಲ್ಲಿ ಮನೋಭಾವದ ಏರುಪೇರು ಸಾಮಾನ್ಯವಾಗಿದೆ. ಒಂದು ಕ್ಷಣ ನೀವು ಸಿಡುಕು ಸ್ವಭಾವ ತೋರಿದರೆ ಮುಂದಿನ ಕ್ಷಣ ನಿಮ್ಮ ವರ್ತನೆ ಅತಿ ನಯವಾಗಿರುತ್ತದೆ. ಕೆಲವೊಮ್ಮೆ ಮಾತು ಮಾತಿಗೂ ನೀವು ಸಿಟ್ಟಾಗುತ್ತೀರಿ ಮತ್ತು ಕೆಲವೊಮ್ಮೆ ಅತೀವ ಸಂತೋಷವನ್ನು ವ್ಯಕ್ತಪಡಿಸುತ್ತೀರಿ.

ಆದರೆ ಒಟ್ಟಾರೆ ನವಮಾಸಗಳಲ್ಲಿ ನೀವು ಸಿಡುಕು ತೋರುವ ಸಮಯನ್ನು ಸಂತೋಷ ತೋರುವ ಸಮಯಕ್ಕೆ ಹೋಲಿಸಿದರೆ ಸಿಡುಕಿನ ಸಮಯ ಅತ್ಯಲ್ಪ! ಒಟ್ಟೂ ಒಂಭತ್ತು ತಿಂಗಳಲ್ಲಿ ಅತಿ ಹೆಚ್ಚು ಎಂದರೆ ಒಂದು ಘಂಟೆ ಅಷ್ಟೇ! ಉಳಿದ ಎಲ್ಲಾ ಸಮಯ ನೀವು ಸಂತೋಷವಾಗಿಯೇ ಇರುತ್ತೀರಿ, ಇರಬೇಕು! ಎಲ್ಲಿಯವರೆಗೆ ಇತರರ ಕಹಿಮಾತನ್ನು ನೀವು ಗಮನಕ್ಕೆ ತೆಗೆದುಕೊಳ್ಳದೇ ಕೇವಲ ಒಳ್ಳೆಯ ಮಾತು, ಸಂಗತಿ, ಮಾಹಿತಿಗಳನ್ನೇ ಪರಿಗಣಿಸುತ್ತೀರೋ, ಅಷ್ಟೂ ನೀವು ಸಂತೋಷವಾಗಿಯೇ ಇರುತ್ತೀರಿ. ಈ ಸಂತೋಷದ ದಿನಗಳನ್ನು ಆದಷ್ಟೂ ಹೆಚ್ಚು ಅನುಭವಿಸಿ.

ಗರ್ಭಾವಸ್ಥೆಯ ಬದಲಾವಣೆಗಳಲ್ಲಿ ತನ್ನದೇ ಆದ ತೊಂದರೆಗಳೂ ಇರುತ್ತವೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಇವು ನಿಮ್ಮನ್ನು ಬಾಧಿಸುತ್ತವೆ. ಆದರೆ ನೀವು ನಿಮ್ಮ ಗರ್ಭಾವಸ್ಥೆಯ ಧನಾತ್ಮಕ ಪರಿಣಾಮಗಳ ಬಗ್ಗೆ ಮಾತ್ರವೇ ಚಿಂತಿಸಬೇಕೇ ವಿನಃ ನಿಮ್ಮ ಮನದಲ್ಲಿ ಎಂದೂ ಕೊರಗು ಆವರಿಸಬಾರದು. ಅಷ್ಟಲ್ಲದೇ, ನಿಮ್ಮ ಒಡಲಲ್ಲಿ ಬೆಳೆಯುತ್ತಿರುವ ನಿಮ್ಮದೇ ಆದ ಮಗು ಈ ಜಗತ್ತಿನ ಯಾವುದೇ ಸಂಪತ್ತಿಗೂ ಮಿಗಿಲಾದ ಐಶ್ವರ್ಯವಾಗಿದೆ.

English summary

You Should Be Proud And love To Be A Pregnant

Here we are discussing about things to love about being pregnant. From finally reaching your #hairgoals to being able to blame every mistake on pregnancy brain, there are plenty of things to love about being pregnant. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X