For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕಾಡುವ ಸಾಮಾನ್ಯ ತ್ವಚೆಯ ಸಮಸ್ಯೆಗಳಿವು

|

ಗರ್ಭಾವಸ್ಥೆಯಲ್ಲಿ ಹಲವಾರು ರಸದೂತಗಳ ಪ್ರಭಾವ ನಿಮ್ಮ ದೇಹದ ಮೇಲೆ ಅಗುತ್ತಿರುತ್ತದೆ. ಕೆಲವು ನಿಮ್ಮ ತ್ವಚೆಯ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಪರಿಣಾಮವಾಗಿ ಕೆಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಅತಿ ಸಾಮಾನ್ಯವಾದ ಮತ್ತು ಸ್ಪಷ್ಟವಾಗಿ ಗೋಚರಿಸುವ ನಾಲ್ಕು ತೊಂದರೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

pregnant skin problem
1. ಮೊಡವೆಗಳು

1. ಮೊಡವೆಗಳು

ಪ್ರಥಮ ಬಾರಿ ತಾಯಿಯಾಗುತ್ತಿರುವ ಮಹಿಳೆಯೊಬ್ಬರು ತಮ್ಮ ಮೊಡವೆಗಳ ಬಗ್ಗೆ ಹೀಗೆ ಉದ್ಗರಿಸಿದ್ದಾರೆ: "ಅಬ್ಬಾ, ಮೊದಲ ಗರ್ಭಾವಸ್ಥೆಯ ಸಮಯದಲ್ಲಿ ಕಾಣಿಸಿಕೊಂಡ ಮೊಡವೆಗಳು ಎಷ್ಟು ಭಯಾನಕವಾಗಿದ್ದವೆಂದರೆ ಇನ್ನೇನು ಸಿಡಿದೇ ಬಿಡುವಂತಿದ್ದವು". ಇವರ ಮಾತಿನಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಗರ್ಭಾವಸ್ಥೆಯಲ್ಲಿ ಕೆಲವು ರಸದೂತಗಳ ಪ್ರಭಾವದಿಂದ ಚರ್ಮದ ಅಡಿಯಲ್ಲಿ ಉತ್ಪಾದನೆಯಾಗುವ ಕೀವು ಹೆಚ್ಚಳಗೊಳ್ಳುತ್ತದೆ.

ಜೊತೆಗೇ ತ್ವಚೆಯ ತೈಲದ ಪ್ರಮಾಣವೂ ಹೆಚ್ಚುತ್ತದೆ. ಯಾವಾಗ ಈ ರಸದೂತದ ಪ್ರಭಾವ ತಗ್ಗುತ್ತದೆಯೋ ಆಗ ಸ್ವಾಭಾವಿಕವಾಗಿಯೇ ಈ ಪ್ರಮಾಣಗಳೂ ತಗ್ಗುತ್ತವೆ. ಅಲ್ಲಿಯವರೆಗೆ ಈ ಕೀವು ಮತ್ತು ಹೆಚ್ಚುವರಿ ಎಣ್ಣೆ ಮೊಡವೆಗಳ ರೂಪದಲ್ಲಿ ಹೊರಚರ್ಮವನ್ನು ದೂಡಿ ಹೊರಬರುತ್ತವೆ. ಎಷ್ಟು ಮೊಡವೆಗಳು ಮೂಡಬಹುದು ಎಂಬುದು ಪ್ರತಿ ಗರ್ಭಿಣಿಯ ಆರೋಗ್ಯವನ್ನು ಅನುಸರಿಸಿ ಬೇರೆ ಬೇರೆಯಾಗಿರಬಹುದು. ಸಾಮಾನ್ಯವಾಗಿ ನಾಲ್ಕನೆಯ ವಾರದಿಂದ ಪ್ರಾರಂಭವಾಗುವ ಮೊಡವೆಗಳು ಹದಿನಾರನೇ ವಾರದಲ್ಲಿ ಕೊನೆಗೊಳ್ಳುತ್ತವೆ.

ಈ ಮೊಡವೆಗಳು ಎದುರಾದ ಬಳಿಕ ಇವನ್ನು ಗುಣಪಡಿಸಲು ಯತ್ನಿಸುವುದು ತಪ್ಪಲ್ಲವಾದರೂ ಎಚ್ಚರಿಕೆ ವಹಿಸುವುದು ಅಗತ್ಯ. ಈ ಮೊಡವೆಗಳನ್ನು ನಿವಾರಿಸಲು ರೆಟಿನಾಲ್ ಮತ್ತು ಸಾಲಿಸೈಲಿಕ್ ಆಸಿಡ್ ಮೊದಲಾದ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ಇವು ಅಪಾಯಕಾರಿಯಾಗಿವೆ.

ಉಳಿದಂತೆ ಬೆಂಜಾಯಿಲ್ ಪೆರಾಕ್ಸೈಡ್ ಅಥವಾ ಗ್ಲೈಕೋಲಿಕ್ ಆಮ್ಲಗಳು ಕೊಂಚ ಕಡಿಮೆ ಪ್ರಭಾವಶಾಲಿಯಾಗಿದ್ದು ಹೆಚ್ಚಿನ ತೊಂದರೆ ನೀಡದ ಔಷಧಿಗಳಾಗಿವೆ. ಆದ್ದರಿಂದ ಈ ಮೊಡವೆಗಳು ತಾವಾಗಿಯೇ ಗುಣವಾಗುವುದೇ ಸುರಕ್ಷಿತ ವಿಧಾನವಾಗಿದೆ. ಮೊಡವೆಗಳು ಮುಖ, ಬೆನ್ನು, ಭುಜದ ಭಾಗದಲ್ಲಿ ಹೆಚ್ಚಾಗಿ ಮೂಡುತ್ತವೆ. ಕೆಲವು ಸ್ತನಗಳ ಮೇಲೂ ಮೂಡಬಹುದು. ಅಲ್ಪ ಮಟ್ಟದ ಮೊಡವೆಗಳಾಗಿದ್ದರೆ ಪರವಾಗಿಲ್ಲ, ಆದರೆ ಹೆಚ್ಚಿದ್ದರೆ ಮಾತ್ರ ಚರ್ಮವೈದ್ಯರ ಸಲಹೆ ಪಡೆಯುವುದು ಅಗತ್ಯ.

2. ಹೊಕ್ಕಳಿನ ಲಂಬ ಗೆರೆ ಮತ್ತು ಮೆಲಾಸ್ಮಾ (Linea nigra and melasma)

2. ಹೊಕ್ಕಳಿನ ಲಂಬ ಗೆರೆ ಮತ್ತು ಮೆಲಾಸ್ಮಾ (Linea nigra and melasma)

ರಸದೂತಗಳ ಪ್ರಭಾವ ಮೆಲನಿನ್ ವರ್ಣದ್ರವ್ಯದ ಮೇಲೂ ಆಗುತ್ತದೆ. ಈ ವರ್ಣದ್ರವ್ಯವೇ ನಮ್ಮ ಚರ್ಮದ ಬಣ್ಣಕ್ಕೆ ಕಾರಣ. ಯಾವುದೋ ಪ್ರಭಾವದಿಂದ ಹೊಕ್ಕುಳಿನಿಂದ ಪ್ರಾರಂಭವಾಗಿ ಕಿಬ್ಬೊಟ್ಟೆಯತ್ತ ಒಂದು ಗೆರೆಯಂತೆ ವರ್ಣದ್ರವ್ಯ ದಟ್ಟವಾಗುತ್ತದೆ. ಗಮನಾರ್ಹವಾಗಿ ಕಾಣಬರುವ ಈ ಗೆರೆ ಹೊಕ್ಕುಳಿನಿಂದ ಕೆಳಸಾಗುತ್ತಾ ಕಿಬ್ಬೊಟ್ಟೆಯ ಕೆಳಭಾಗದವರೆಗೂ ಮುಂದುವರೆಯುತ್ತದೆ.

ಕೆಲವು ಗರ್ಭಿಣಿಯರಲ್ಲಿ ಹೊಕ್ಕುಳಿನಿಂದ ಮೇಲೂ ಕಾಣಿಸಿಕೊಳ್ಳಬಹುದು. ಈ ಗೆರೆ ಬಂದಾಕ್ಷಣ ಹೆಚ್ಚಿನ ಗರ್ಭವತಿಯರು ಗಾಬರಿಗೊಳ್ಳುತ್ತಾರೆ. ಆದರೆ ಹೆರಿಗೆಯ ಬಳಿಕ ಬಾಣಂತನದ ಅವಧಿಯಲ್ಲಿಯೇ ಈ ಗೆರೆ ತನ್ನಿಂತಾನೇ ಇಲ್ಲವಾಗುತ್ತದೆ. ಇದೇ ಪ್ರಕಾರ ರಸದೂತಗಳ ಪ್ರಭಾವದಿಂದ ಮೆಲಾಸ್ಮಾ ಎಂಬ ಕಲೆಗಳು ಕಾಣಿಸಿಕೊಳ್ಳುತ್ತವೆ. ಇವು ಮೇಲ್ತುಟಿ, ಮೂಗು, ಕೆನ್ನೆ, ಹಣೆಯ ಮೇಲೆ ಗಾಢವರ್ಣದ ಕಲೆಗಳನ್ನು ಮೂಡಿಸುತ್ತವೆ. ಯವ ಗರ್ಭವತಿಯರಲ್ಲಿ ಈ ಕಲೆಗಳು ಮೂಡುವ ಸಾಧ್ಯತೆ ಹೆಚ್ಚು. ಅದರಲ್ಲೂ ಈ ಕಲೆಗಳು ಕುಟುಂಬ ಇತಿಹಾಸದಲ್ಲಿದ್ದರೆ ಇವರಿಗೂ ಬರುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಕಲೆಗಳು ಪ್ರತಿ ಬಾರಿ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗಲೂ ಇನ್ನಷ್ಟು ದಟ್ಟವಾಗುತ್ತವೆ. ಮೊದಲ ಬಾರಿಯ ಗರ್ಭಾವಸ್ಥೆಯಲ್ಲಿ ಈ ಕಲೆಗಳು ಎದುರಾಗಿದ್ದರೆ ಮುಂದಿನ ಗರ್ಭಾವಸ್ಥೆಗಳಲ್ಲಿಯೂ ಎದುರಾಗುವ ಸಾಧ್ಯತೆ ಇದೆ. ಆದರೆ ಹೆರಿಗೆಯ ಬಳಿಕ ಈ ಕಲೆಗಳು ತಾವಾಗಿಯೇ ಇಲ್ಲವಾಗುತ್ತವೆ.

ಆದರೆ ಗರ್ಭಾವಸ್ಥೆಯಲ್ಲಿ ಈ ಕಲೆಗಳು ಬಿಸಿಲಿನಿಂದಾಗಿ ಉಲ್ಬಣಗೊಂಡಿದ್ದರೆ ಮಾತ್ರ ಹೆರಿಗೆಯ ಬಳಿಕ ಕೊಂಚ ಪ್ರಮಾಣದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಉತ್ತಮ ಗುಣಮಟ್ಟದ ಎಸ್ ಪಿ ಎಫ್ ಕ್ರಮಾಂಕದ ಉತ್ಪನ್ನವನ್ನು ಹಚ್ಚಿಕೊಂಡೇ ಬಿಸಿಲಿಗೆ ಹೋಗಬೇಕು. ಕೆಲವರಿಗೆ ಈ ಕಲೆಗಳು ವಿಪರೀತ ದಟ್ಟವಾಗಿದ್ದು ಇವರಿಗೆ ಚರ್ಮವೈದ್ಯರಿಂದ ಚಿಕಿತ್ಸೆ ಬೇಕಾಗುತ್ತದೆ. ಪರ್ಯಾಯವಾಗಿ ಮನೆಯಲ್ಲಿಯೇ ವಿಟಮಿನ್ ಎ ಅಥವಾ ರೆಟಿನಾಲ್ ಯುಕ್ತ ಲೇಪಗಳನ್ನು ಬಳಸಿ ಇವುಗಳ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಸುರಕ್ಷತೆಯನ್ನು ಪರಿಗಣಿಸಿ ಈ ಚಿಕಿತ್ಸೆಗಳನ್ನು ಹೆರಿಗೆಯ ಬಳಿಕ, ಸ್ತನಪಾನದ ಅವಧಿ ಕಳೆದ ಬಳಿಕವೇ ಪ್ರಾರಂಭಿಸುವುದು ಉತ್ತಮ.

3. ಪಿಯುಪಿಪಿಪಿ (Pruritic urticarial papules and plaques of pregnancy (PUPPP))

3. ಪಿಯುಪಿಪಿಪಿ (Pruritic urticarial papules and plaques of pregnancy (PUPPP))

ಸುಮಾರು ಮೂವತ್ತೇಳನೇ ವಾರದಲ್ಲಿ ಚಿಕ್ಕ ಗೆರೆಯಂತೆ ಪ್ರಾರಂಭವಾದ ಈ ಕಲೆ ಕೆಲವೇ ದಿನಗಳಲ್ಲಿ ನನ್ನ ಭುಜಗಳಿಂದ ಹಿಡಿದು ಹಿಮ್ಮಡಿಯವರೆಗೂ ವ್ಯಾಪಿಸಿತ್ತು ಎಂದು ಇಬ್ಬರು ಮಕ್ಕಳ ತಾಯಿಯಾಗಿರುವ.

ಮೊದಲ ಗರ್ಭಾವಸ್ಥೆಯ ಸಮಯದಲಿವರಿಗೆ ಪಿಯುಪಿಪಿಪಿ ಎಂಬ ಸ್ಥಿತಿ ವಿಪರೀತವಾಗಿ ಆವರಿಸಿದ್ದು ಇದರಿಂದ ಸತತ ತುರಿಕೆ ಸಹಾ ಕಾಣಿಸಿಕೊಂಡಿತ್ತು ಇದು ತಾಯಿ ಅಥವಾ ಮಗುವಿನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲವಾದರೂ ಇದನ್ನು ಗುಣಪಡಿಸುವುದು ಭಾರೀ ಕಷ್ಟ ಮತ್ತು ನಿಧಾನ.

ಇವರಿಗೆ ಓಟ್ಸ್ ರವೆಯ ಹಾಲಿನ ಸ್ನಾನದ ಚಿಕಿತ್ಸೆಯನ್ನು ಸೂಚಿಸಿದ್ದರೂ ಇದರಿಂದ ಫಲ ಸಿಕ್ಕಿರಲಿಲ್ಲ. ಸತತ ತುರಿಕೆಯಿಂದ ಅಲ್ಲಲ್ಲಿ ಚರ್ಮದಲ್ಲಿ ಹಿಸಿದ ಗಾಯಗಳೂ ಆಗಿದ್ದವು. ಹೆರಿಗೆಯ ಬಳಿಕ ಇದು ಕಡಿಮೆಯಾಗಬಹುದು ಎಂದುಕೊಂಡಿದ್ದರೆ ಹೆರಿಗೆಯ ಬಳಿಕವೂ ಈ ತುರಿಕೆ ಮುಂದುವರೆದಿತ್ತು.ಬದಲಿಗೆ ಈಗ ಕೈ, ಹೊಟ್ಟೆ ಮತ್ತು ಪಾದಗಳಿಗೂ ವ್ಯಾಪಿಸಿತ್ತು. ಹೆರಿಗೆಯ ಸುಮಾರು ಮೂರು ತಿಂಗಳುಗಳ ಬಳಿಕವೇ ಇವು ಇಲ್ಲವಾದವು.

ಈ ಸ್ಥಿತಿ ಏಕಾಗಿ ಬರುತ್ತದೆ ಎಂಬುದನ್ನು ಇದುವರೆಗೂ ತಜ್ಞರಿಗೆ ವಿವರಿಸಲು ಸಾಧ್ಯವಾಗಿಲ್ಲ. ವಂಶಪಾರಂಪರ್ಯ ಕಾರಣಗಳು ಅಥವಾ ಯಾವುದೋ ಅಲರ್ಜಿಯ ಕಾರಣದಿಂದ ಅಂಗಾಂಶ ಘಾಸಿಗೊಂಡು ಚರ್ಮ ಸೆಳೆತಕ್ಕೆ ಒಳಗಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಥಿತಿ ಸಾಮಾನ್ಯವಾಗಿ ಮೊದಲ ಹೆರಿಗೆಯ ಸಮಯದಲ್ಲಿಯೇ ಕಾಣಿಸಿಕೊಳ್ಳುತ್ತದೆ ಹಾಗೂ ಅವಳಿ ಮಕ್ಕಳಿದ್ದರೆ ಈ ಸಾಧ್ಯತೆ ಹೆಚ್ಚು.

ಒಂದೇ ಆಶಾದಾಯಕ ಸಂಗತಿ ಎಂದರೆ ಇದುವರೆಗೆ ಈ ಸ್ಥಿತಿ ಕೇವಲ ಶೇಖಡಾ ಒಂದರಷ್ಟು ಗರ್ಭವತಿಯರಲ್ಲಿ ಮಾತ್ರವೇ ಕಾಣಿಸಿಕೊಂಡಿದೆ.

4. ಒಬ್ಸ್ಟೆಟ್ರಿಕ್ ಕೊಲೆಸ್ಟಾಸಿಸ್ (Obstetric cholestasis (OC)

4. ಒಬ್ಸ್ಟೆಟ್ರಿಕ್ ಕೊಲೆಸ್ಟಾಸಿಸ್ (Obstetric cholestasis (OC)

ಅತೀವ ತುರಿಕೆಯ ಇನ್ನೊಂದು ಅಪರೂಪದ ಕಾಯಿಲೆಯಾಗಿರುವ ಒಸಿ ಸಾಮಾನ್ಯವಾಗಿ ಹಸ್ತ ಮತ್ತು ಪಾದಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ. ಆದರೆ ಈ ಸ್ಥಿತಿಯಲ್ಲಿ ಚರ್ಮ ಕೆಂಪು ಗೆರೆಗಳನ್ನು ಪಡೆದಿರುವುದಿಲ್ಲ. ಕೇವಲ ತುರಿಕೆ ಮಾತ್ರವೇ ಕಾಣಿಸಿಕೊಳ್ಳುತ್ತದೆ ಮತ್ತು ಅಪರೂಪಕ್ಕೆ ಕಾಮಾಲೆ ಮತ್ತು ವಾಕರಿಕೆಯೂ ಇರುತ್ತದೆ.

ಸಾಮಾನ್ಯವಾಗಿ ಇದು ಮೂರನೆಯ ತ್ರೈಮಾಸಿಕದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಯಕೃತ್ ನ ಕಾರ್ಯಕ್ಷಮತೆಯಲ್ಲಿ ಏರುಪೇರಿನಿಂದ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಕೆಲವು ರಸದೂತಗಳ ಪ್ರಭಾವ ಗರಿಷ್ಟವಾದಾಗ ಯಕೃತ್ ನಿಂದ ಕರುಳುಗಳಿಗೆ ಹರಿಯುವ ಪಿತ್ತರಸ ನಿಧಾನಗೊಳ್ಳುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ.

ಕೆಲವರ ಪ್ರಕಾರ ಇದಕ್ಕೆ ಅನುವಂಶಿಕ ಕಾರಣಗಳೂ ಇವೆ. ಇದರಿಂದ ರಕ್ತದಲ್ಲಿ ಆಮ್ಲೀಯತೆ ಸಂಗ್ರಹಗೊಳ್ಳತೊಡಗುತ್ತದೆ. ಈ ತೊಂದರೆಯೂ ತಾಯಿ ಅಥವಾ ಮಗುವಿನ ಆರೋಗ್ಯಕ್ಕೆ ಮಾರಕವಲ್ಲ. ಆದರೆ ಈ ತೊಂದರೆ ಇದ್ದಾಗ ರಕ್ತ ಹೆಪ್ಪುಗಟ್ಟುವಿಕೆಯ ಕ್ರಿಯೆಯ ಮೇಲೆ ಪ್ರಭಾವ ಉಂಟಾಗುತ್ತದೆ.

ಹಾಗಾಗಿ ನವಮಾಸ ತುಂಬುವ ಮುನ್ನವೇ ಹೆರಿಗೆಯಾಗುವ ಸಂದರ್ಭ ಎದುರಾದರೆ ಮಾತ್ರ ವೈದ್ಯರು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಗಳನ್ನು ಮುಂಚಿತವಾಗಿಯೇ ರಕ್ತಪರೀಕ್ಷೆ, ಅಲ್ಟ್ರಾಸೌಂಡ್ ಹಾಗೂ ಮಗುವಿನ ಹೃದಯದ ಬಡಿತ ಮೊದಲಾದ ಪರೀಕ್ಷೆಗಳ ಮೂಲಕ ಖಚಿತಪಡಿಸಿಕೊಂಡೇ ಆ ಪ್ರಕಾರ ತಮ್ಮ ಚಿಕಿತ್ಸೆ ಹಾಗೂ ಹೆರಿಗೆಯ ಸಮಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಓಸಿ ಎದುರಾದರೆ ಇದು ಹೆರಿಗೆಯಾಗುವವರೆಗೂ ಹೋಗುವ ಸಾಧ್ಯತೆ ಇಲ್ಲ. ಆದರೆ ಇದರ ತುರಿಕೆಯನ್ನು ಕಡಿಮೆ ಮಾಡಲು ವೈದ್ಯರು ತುರಿಕೆ ನಿವಾರಕ ಔಷಧಿ ಅಥವಾ ಹಚ್ಚಿಕೊಳ್ಳಲು ಕ್ರೀಂ ಗಳನ್ನು ನೀಡಬಹುದು.

English summary

These Are The Common Pregnancy Skin Issues

Here we are discussing about these are the common pregnancy skin issues. Here are a few of the most common—and a few extreme—conditions you may see reflected in the mirror. Read more.
Story first published: Monday, March 16, 2020, 15:08 [IST]
X
Desktop Bottom Promotion