For Quick Alerts
ALLOW NOTIFICATIONS  
For Daily Alerts

ಗರ್ಭಪಾತದ ಬಳಿಕ ಕಾಡುವ ಖಿನ್ನತೆಯಿಂದ ಹೊರಬರುವುದು ಹೇಗೆ?

|

ಗರ್ಭ ಧರಿಸಿದ ಮೊದಲ ಮೂರು ತಿಂಗಳವರೆಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಹೆಚ್ಚು ಓಡಾಡಬಾರದು, ಭಾರದ ವಸ್ತುಗಳನ್ನು ಎತ್ತಬಾರದು, ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು ಎಂದು ಹಿರಿಯರು ಹಾಗೂ ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಮೊದಲತ್ರೈ ಮಾಸಿಕದಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಸಂದರ್ಭದಲ್ಲಿ ಗರ್ಭಪಾತವಾದರೆ ಮನಸ್ಸಿಗೆ ನೋವಾದರೂ ಅಷ್ಟಾದರೂ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ ಮೂರು ತಿಂಗಳು ಕಳೆದು ನಾಲ್ಕನೇ ತಿಂಗಳು ಪ್ರಾರಂಭವಾದಾಗ ಇನ್ನು ಹೆಚ್ಚಿನ ತೊಂದರೆಯಿಲ್ಲ ಎಂದು ಭಾವಿಸಲಾಗುವುದು. ಆಗ ಮಗುವಿನೊಂದಿಗೆ ತಾಯಿಯ ಬಾಂಧವ್ಯ ಗಟ್ಟಿಯಾಗುತ್ತಾ ಹೋಗುತ್ತದೆ. ಹೊಟ್ಟೆಯೊಳಗೆ ಮಗು ತನ್ನ ಇರುವಿಕೆಯನ್ನು ತೋರಿಸುತ್ತಿರುತ್ತದೆ.

Miscarriage Depression

ಆದರೆ ಕೆಲವರಿಗೆ ನಂತರ ಅನಾರೋಗ್ಯ, ಮಗುವಿನಲ್ಲಿ ತೊಂದರೆ ಮತ್ಯಾವುದೋ ಕಾರಣಕ್ಕೆ ತೊಂದರೆ ಉಂಟಾಗುತ್ತದೆ. ಆಗ ಗರ್ಭಪಾತವಾಗುವುದು. ಗರ್ಭಿಣಿಯರಲ್ಲಿ ಶೇ. 10-20 ಜನರಿಗೆ ಗರ್ಭಪಾತವಾಗುತ್ತದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ. ಇದು ವಂಶಪಾರಂಪರ್ಯ, ಸೋಂಕು, ಹಾರ್ಮೋನ್‌ಗಳ ಅಸಮತೋಲನ, ವಯಸ್ಸು ಮುಂತಾದ ಕಾರಣಗಳಿಂದ ಉಂಟಾಗುತ್ತದೆ.

ಆದರೆ ಗರ್ಭಪಾತವಾದಾಗ ಮಹಿಳೆಯ ಮಾನಸಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ದೇಹಕ್ಕೆ ಉಂಟಾದ ನೋವುಗಿಂತ ಮನಸ್ಸಿಗೆ ಉಂಟಾದ ನೋವು ತುಂಬಾ ಆಳವಾಗಿರುತ್ತದೆ. ಇದರ ನೋವು ಅವರು ಮತ್ತೊಮ್ಮೆ ಗರ್ಭಧಾರಣೆಯಾಗುವವರೆಗೆ ಇದ್ದೇ ಇರುತ್ತದೆ.

ಆಕೆ ಆ ನೋವಿನಿಂದ ಹೊರ ಬರಲು ಮನೆಯವರ ಸಹಕಾರವೂ ಮುಖ್ಯವಾಗಿರುತ್ತದೆ. ಅದರಲ್ಲೂ ಪತಿಯ ಸಾಂತ್ವಾನ ಅಗ್ಯತವಿರುತ್ತದೆ. ಗರ್ಭಪಾತವಾದ ಮಹಿಳೆ ಮಾನಸಿಕ ನೋವಿನಿಂದ ಹೊರಬರಲು ಆಕೆಗೆ ಈ ರೀತಿ ಸಾಂತ್ವಾನಪಡಿಸುವುದು ಒಳ್ಳೆಯದು.

ದುಃಖ ಹೊರಹಾಕಲಿ

ದುಃಖ ಹೊರಹಾಕಲಿ

ನಮ್ಮ ಮನಸ್ಸಿಗೆ ನೋವಾದಾಗ ಅತ್ತಾಗ ದುಃಖ ಕಡಿಮೆಯಾಗುತ್ತದೆ. ಆದ್ದರಿಂದ ಅವರು ತಮ್ಮ ಮನಸ್ಸಿನಲ್ಲಿರುವ ದುಃಖವನ್ನು ಹೊರಹಾಕಲು ಬಿಡಿ. ಅವರು ಅಳುವಾಗ ಅಳಬೇಡ ಅಂತೆಲ್ಲಾ ಹೇಳಬೇಡಿ, ಅತ್ತು ಮನಸ್ಸು ಹಗುರ ಮಾಡಿಕೊಳ್ಳಲಿ. ಇದರಿಂದ ಮನಸ್ಸಿನ ನೋವು ಕಣ್ಣೀರಿನ ಮುಖಾಂತರ ಸ್ವಲ್ಪ ಹೊರ ಹೋಗುತ್ತದೆ. ಇನ್ನು ಮಗುವನ್ನು ಕಳೆದುಕೊಂಡ ಮೇಲೆ ಈ ರೀತಿ ನಡೆದುಕೊಳ್ಳಬಹುದು. ಆಗ ಮನೆಯವರು ಬೇಸರ ಪಟ್ಟುಕೊಳ್ಳುದೆ ಸಾಂತ್ವಾನ ತೋರಬೇಕು.

ಕೋಪಗೊಳ್ಳಬಹುದು

ಕೋಪಗೊಳ್ಳಬಹುದು

ಗರ್ಭಪಾತವಾದ ಬಳಿಕ ಆಕೆಯ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಆಕೆಗೆ ತನ್ನ ಮೇಲೆ, ಪರಿಸ್ಥಿತಿ ಮೇಲೆ, ಮೆನಯವರ ಮೇಲೆ, ಸಮಾಜದ ಮೇಲೆ ಕೋಪ ಉಂಟಾಗಬಹುದು. ಆದರೆ ಆ ಸಂದರ್ಭದಲ್ಲಿ ಗಂಡ ಹಾಗೂ ಮನೆಯವರು ಆಕೆಯ ಮೇಲೆ ಬೇಸರಪಟ್ಟುಕೊಳ್ಳದೆ ಸಾಂತ್ವಾನ ಹೇಳಬೇಕು. ಆಕೆ ಸಣ್ಣ-ಪುಟ್ಟ ವಿಷಯಕ್ಕೆ ಕೋಪಗೊಂಡರೂ ಅದನ್ನು ದೊಡ್ಡ ವಿಷಯವಾಗಿ ತೆಗೆದುಕೊಳ್ಳಬಾರದು. ದಿನಗಳು ಕಳೆದಂತೆ ಆಕೆ ಸರಿ ಹೋಗುತ್ತಾಳೆ.

ಖಿನ್ನತೆ

ಖಿನ್ನತೆ

ಇನ್ನು ಕೆಲವರು ಗರ್ಭಪಾತದ ಬಳಿಕ ಖಿನ್ನತೆಗೆ ಒಳಗಾಗುತ್ತಾರೆ. ಆಗ ಅವರು ಯಾರನ್ನು ಭೇಟಿಯಾಗಲಿ ಆಗಲಿ, ಯಾರ ಜೊತೆ ಬೆರೆಯಲಿ ಆಗಲಿ ಇಷ್ಟಪಡುವುದಿಲ್ಲ. ಸಭೆ, ಸಮಾರಂಭಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಮಾಡುತ್ತಿರುವ ಕೆಲಸದಲ್ಲಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಗಂಡನ ಸಾಂತ್ವಾನ ತುಂಬಾ ಮುಖ್ಯವಾಗಿರುತ್ತದೆ. ಸ್ನೇಹಿತರು , ಮನೆಯವರು ಸಮಧಾನ ಹೇಳಬೇಕಾಗುತ್ತದೆ. ಖಿನ್ನತೆ ಕಡಿಮೆಯಾಗುವ ಲಕ್ಷಣ ಕಂಡು ಬರದಿದ್ದರೆ ಕೂಡಲೇ ಮಾನಸಿಕ ವೈದ್ಯರನ್ನು ಕಂಡು ಚಿಕಿತ್ಸೆ ಕೊಡಿಸಬೇಕು.

ನಿರೀಕ್ಷೆ

ನಿರೀಕ್ಷೆ

ಒಮ್ಮೆ ಗರ್ಭಪಾತವಾದರೆ ನಂತರ ಇನ್ನೊಂದು ಮಗುವಿಗೆ ತುಂಬಾ ನಿರೀಕ್ಷೆ ಮಾಡುತ್ತರೆ. ಕೆಲವರಿಗೆ ಗರ್ಭಪಾತವಾದ ಕೆಲವೇ ತಿಂಗಳಿನಲ್ಲಿ ಮತ್ತೆ ಗರ್ಭಧಾರಣೆಗೆ ಪ್ರಯತ್ನಿಸಬಹುದೆಂದು ವೈದ್ಯರು ಸೂಚಿಸುತ್ತಾರೆ, ಇನ್ನು ಕೆಲವರಿಗೆ ಅವರ ಆರೋಗ್ಯದ ಸ್ಥಿತಿ ನೋಡಿ ಎಷ್ಟು ಸಮಯದ ಬಳಿಕ ಗರ್ಭಧಾರಣೆ ಒಳ್ಳೆಯದೆಂದು ಸೂಚಿಸುತ್ತಾರೆ. ಗರ್ಭಪಾತವಾದ ಬಳಿಕ ಮತ್ತೊಂದು ಮಗುವಿಗಾಗಿ ತುಂಬಾ ನಿರೀಕ್ಷೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಗರ್ಭಧಾರಣೆಯಾಗದಿದ್ದರೆ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಪಾತದ ಬಳಿಕ ಮೊದಲು ಅವರ ಮಾನಸಿಕ ಸ್ಥಿತಿ ಸುಧಾರಿಸುವಂತೆ ಮಾಡಬೇಕು.

ಸಾಂತ್ವಾನ ನೀಡಿ ಮನೋಬಲ ಹೆಚ್ಚಿಸಿ

ಸಾಂತ್ವಾನ ನೀಡಿ ಮನೋಬಲ ಹೆಚ್ಚಿಸಿ

ನೈಜತೆಯನ್ನು ಸ್ವೀಕರಿಸಿ, ಆ ಬದುಕಿಗೆ ಹೊಂದಿಕೊಂಡು ಹೋಗಲು ಕಲಿತರೆ ಆಗ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ರೀತಿಯಾಗಲು ಆಕೆಯ ಪ್ರಯತ್ನದ ಜೊತೆಗೆ ಮನೆಯವರ ಸಹಕಾರ ತುಂಬಾ ಮುಖ್ಯ. ಮನೆಯವರು, ಸ್ನೇಹಿತರು ಅವರ ಬಳಿ ಮಾತನಾಡಬೇಕು. ಅವರ ಮನಸ್ಸಿಗೆ ಸಮಧಾನ ಆಗಲು ಮಕ್ಕಳಿಗೆ ದಾನ ಮಾಡುವುದು, ಕೆಲವೊಂದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ಹೀಗೆ ಅವರ ಮನಸ್ಸಿಗೆ ಸಮಧಾನ ನೀಡುವ ಕಾರ್ಯ ಮಾಡಿದರೆ ಬೇಗನೆ ಅವರು ತಮ್ಮ ಹಳೆಯ ಬದುಕಿಗೆ ಮರಳುವವರು. ಅವರ ಮಾನಸಿಕ ಸ್ಥಿತಿ ಉತ್ತಮವಾಗುವುದು. ಇದರಿಂದ ಮತ್ತೊಮ್ಮೆ ಆರೋಗ್ಯಕರವಾಗಿ ಗರ್ಭಧಾರಣೆಯಾಗಲು ಸಾಧ್ಯವಾಗುವುದು.

English summary

How To Deal With Miscarriage Depression

Miscarriage will effect lot on women mental health, she may go depression stage. Here are tips to deal with miscarriage depression. Read on.
Story first published: Tuesday, January 28, 2020, 11:38 [IST]
X
Desktop Bottom Promotion