For Quick Alerts
ALLOW NOTIFICATIONS  
For Daily Alerts

ಭ್ರೂಣದ ಹೃದಯ ಬಡಿತ ನೋಡಿ ಯಾವ ಲಿಂಗ ಎಂದು ಪತ್ತೆ ಮಾಡಬಹುದೇ?

|

ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಹಂತ ಮುಂದುವರೆಯುತ್ತಿದ್ದಂತೆಯೇ ಹೃದಯದ ಬಡಿತವೂ ಸೂಕ್ತ ಉಪಕರಣದ ನೆರವಿನಿಂದ ಸ್ಪಷ್ಟವಾಗಿ ಕೇಳಿಬರುತ್ತದೆ.

Can A Baby's Heartbeat Predict Their Sex | Boldsky Kannada

ಅಲ್ಟ್ರಾ ಸೌಂಡ್ ಉಪಕರಣದಿಂದ ಕೇಳಿಬರುವ ಮಗುವಿನ ಹೃದಯದ ಬಡಿತ ಇದು ಯಾವ ಮಗು ಎಂಬುದನ್ನು ತಿಳಿಸುತ್ತದೆ ಎಂದು ಕೆಲವು ವ್ಯಕ್ತಿಗಳು ನಂಬುತ್ತಾರೆ. ಆದರೆ ಈ ಬಗ್ಗೆ ನಡೆದ ಸಂಶೋಧನೆಗಳು ಹಾಗೂ ಅಧ್ಯಯನಗಳು ಇದು ಸುಳ್ಳು, ಹೃದಯದ ಬಡಿತವನ್ನು ಆಲಿಸುವ ಮೂಲಕ ಲಿಂಗ ಪತ್ತೆ ಸಾಧ್ಯವಿಲ್ಲ ಎಂದು ಖಚಿತಪಡಿಸಿವೆ.

baby heart beat

ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ಇಂದು ನಿನ್ನೆಯದ್ದಲ್ಲ. ಪ್ರಾಯಶಃ ಮಾನವರ ಉಗಮದ ದಿನದಿಂದಲೇ ಈ ಕುತೂಹಲ ಇದ್ದಿರಬಹುದು. ಆದರೆ ತಾಯಿಯ ದೈಹಿಕ ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಗಣಿಸುವ ಅನುಭವಿ ದಾದಿಯರು ಹುಟ್ಟಲಿರುವ ಮಗು ಯಾವುದಿರಬಹುದೆಂದು ಸ್ಥೂಲವಾಗಿ ಹೇಳಬಲ್ಲವರಾಗಿರುತ್ತಾರೆ.

ವೈಜ್ಞಾನಿಕ ಬೆಂಬಲ ಇಲ್ಲ

ವೈಜ್ಞಾನಿಕ ಬೆಂಬಲ ಇಲ್ಲ

ಗರ್ಭಿಣಿಯ ಸ್ತನಗಳ ಗಾತ್ರ, ಹೊಟ್ಟೆಯಲ್ಲಿರುವ ಮಗುವಿನ ಸ್ಥಾನ, ಉಬ್ಬಿರುವ ಹೊಟ್ಟೆಯ ಆಕಾರ ಮೊದಲಾದ ಬಾಹ್ಯ ಲಕ್ಷಣಗಳನ್ನು ನೋಡಿ ಇವರು ತಮ್ಮ ಅನುಭವದ ಮೂಲಕ ಹುಟ್ಟಲಿರುವ ಮಗು ಯಾವುದಿರಬಹುದು ಎಂಬ ಗುಟ್ಟನ್ನು ಹೇಳುತ್ತಾರೆ.

ಆದರೆ ಈ ಮಾಹಿತಿಗಳು ಆಯಾ ವ್ಯಕ್ತಿಯ ವೈಯಕ್ತಿಯ ಅಭಿಪ್ರಾಯವಾಗಬಲ್ಲುದೇ ಹೊರತು ಇದನ್ನು ಖಚಿತವಾದ ಮಾಹಿತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಹಾಗೂ ಈ ಲಕ್ಷಣಗಳನ್ನು ಸಾಕ್ಷ್ಯವಾಗಿ ಪರಿಗಣಿಸಬಹುದಾದ ವೈಜ್ಞಾನಿಕ ಬೆಂಬಲವೂ ಇಲ್ಲ.

ಆದರೆ ಕುತೂಹಲವಿನ್ನೂ ತಣಿದಿಲ್ಲ. ಕೆಲವರು ಅಲ್ಟ್ರಾ ಸೌಂಡ್ ಮೂಲಕ ಮಗುವಿನ ಹೃದಯದ ಬಡಿತವನ್ನು ಲಿಂಗಪತ್ತೆಯ ಸಾಧನವಾಗಿಸುವತ್ತ ಇನ್ನೂ ಕಾರ್ಯಪ್ರವೃತ್ತರಾಗಿದ್ದಾರೆ.

ಇಂದಿನ ಲೇಖನದಲ್ಲಿ, ಈ ನಿಟ್ಟಿನಲ್ಲಿ ನಡೆದಿರುವ ಸಂಶೋಧನೆಗಳ ಬಗ್ಗೆ ಹಾಗೂ ಮಗುವಿನ ಲಿಂಗ ಪತ್ತೆಯ ಬಗ್ಗೆ ಇತರ ಮಾಹಿತಿಗಳು ಹಾಗೂ ಹೆಚ್ಚು ನಂಬಲರ್ಹವಾಗಿರುವ ವೈಜ್ಞಾನಿಕ ಪುರಾವೆಗಳ ಬಗ್ಗೆ ನೋಡೋಣ:

ಮಗುವಿನ ಹೃದಯದ ಬಡಿತ ಲಿಂಗಪತ್ತೆಗೆ ನೆರವಾಗಬಲ್ಲುದೇ?

ಮಗುವಿನ ಹೃದಯದ ಬಡಿತ ಲಿಂಗಪತ್ತೆಗೆ ನೆರವಾಗಬಲ್ಲುದೇ?

ಗರ್ಭದಲ್ಲಿರುವ ಮಗು ಇನ್ನೂ ಮೂರು ತಿಂಗಳಿದ್ದಾಗಲೇ ಹೃದಯದ ಬಡಿತವನ್ನು ಪ್ರಾರಂಭಿಸಿರುತ್ತದೆ. ಅಲ್ಟ್ರಾ ಸೌಂಡ್ ಉಪಕರಣದ ಮೂಲಕ ವೈದ್ಯರು ಇದನ್ನು ಗುರುತಿಸಬಲ್ಲರು. ಒಂದು ವೇಳೆ ಈ ಬಡಿತ ನಿಮಿಷಕ್ಕೆ 140 ಕ್ಕೂ ಕಡಿಮೆ ಇದ್ದರೆ ಇದು ಗಂಡು ಮಗು ಎಂದೂ ಹೆಚ್ಚಿದ್ದರೆ ಹೆಣ್ಣು ಮಗು ಎಂದೂ ಈ ಸಿದ್ದಾಂತವನ್ನು ನಂಬುವವರು ವಿವರಿಸುತ್ತಾರೆ.

ಆದರೆ ಈ ಮಾಹಿತಿಯನ್ನು ಖಚಿತಪಡಿಸುವ ಯಾವುದೇ ಆಧಾರ ಲಭ್ಯವಿಲ್ಲ.

ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಏನು ಹೇಳುತ್ತದೆ?

ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಏನು ಹೇಳುತ್ತದೆ?

ಈ ಕುತೂಹಲ ನಮಗಿಂತಲೂ ವಿಜ್ಞಾನಿಗಳಿಗೇ ಹೆಚ್ಚಿದೆ. ಈಗಾಗಲೇ ಈ ಬಗ್ಗೆ ನೂರಾರು ಅಧ್ಯಯನಗಳು ನಡೆದಿವೆ. ಆದರೆ ಯಾವುದೇ ಖಚಿತ ತೀರ್ಮಾನಕ್ಕೆ ಬರಲು ವಿಜ್ಞಾನ ವಿಫಲವಾಗಿದೆ. 2006 ರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಮೊದಲ ತ್ರೈಮಾಸಿಕದಲ್ಲಿರುವ 477 ಗರ್ಭಿಣಿಯರ ಆರೋಗ್ಯ ಮಾಹಿತಿಯನ್ನು ಕಲೆಹಾಕಲಾಯ್ತು.

ಬಳಿಕ ಈ ಮಾಹಿತಿಗಳನ್ನು ಎರಡನೆಯ ತ್ರೈಮಾಸಿಕದಲ್ಲಿ ಪಡೆದ ಮಾಹಿತಿಯೊಂದಿಗೆ ಹೋಲಿಸಿ ನೋಡಲಾಯಿತು. ಬಳಿಕ ಹೆರಿಗೆಯ ನಂತರ ಮಗುವಿನ ಲಿಂಗ ಖಚಿತಗೊಂಡ ಬಳಿಕ ಹಿಂದಿನ ಮಾಹಿತಿಗಳೊಂದಿಗೆ ಮತ್ತೊಮ್ಮೆ ವಿಶ್ಲೇಷಿಸಲಾಯಿತು. ಆದರೆ ಖಚಿತವಾಗಿ ಹೇಳಬಹುದಾದ ಯಾವ ತರ್ಕವೂ ಉಳಿಯಲಿಲ್ಲ.

2016ರಲ್ಲಿ, 332 ಹೆಣ್ಣು ಮತ್ತು 323 ಗಂಡು ಮಕ್ಕಳು ಹುಟ್ಟಿದ್ದ ಗರ್ಭಿಣಿಯರ ಮೂರನೆಯ ತಿಂಗಳು ನಡೆಯುತ್ತಿದ್ದಾಗ ಭ್ರೂಣದ ಹೃದಯದ ಬಡಿತಗಳನ್ನು ದಾಖಲಿಸಲಾಗಿತ್ತು. ಈಗಲೂ ಯಾವುದೇ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

ಮಗುವಿನ ಲಿಂಗದ ಪತ್ತೆ ಯಾವಾಗ ಸಾಧ್ಯವಾಗುತ್ತದೆ?

ಮಗುವಿನ ಲಿಂಗದ ಪತ್ತೆ ಯಾವಾಗ ಸಾಧ್ಯವಾಗುತ್ತದೆ?

ಹುಟ್ಟಿದ ಬಳಿಕವೇ ಯಾವ ಮಗು ಎಂದು ಖಚಿತಪಡಿಸುವುದೇ ಅತಿ ಸೂಕ್ತವಾಗಿದೆ. ಆದರೆ ನಾಲ್ಕುವರೆ ತಿಂಗಳ ಬಳಿಕ ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕ ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂದು ಹೇಳಬಲ್ಲರು.

ಇದಕ್ಕೆ ಅವರು ಅಲ್ಟ್ರಾ ಸೌಂಡ್ ಎಕ್ಸಾಂ ಎಂಬ ಪರೀಕ್ಷೆಯನ್ನು ನಡೆಸುತ್ತಾರೆ. ಈ ಪರೀಕ್ಷೆಯಲ್ಲಿ ಅತಿ ಕಂಪನದ ಶಬ್ದದ ಅಲೆಗಳ ಮೂಲಕ ಕಂಪ್ಯೂಟರ್ ಪರದೆಯ ಮೇಲೆ ಅಡ್ಡಕತ್ತರಿಸಿದ ಚಿತ್ರದ ಛಾಯೆ ಕಾಣಬರುತ್ತದೆ ಹಾಗೂ ನಿಖರವಾದ ಮಾಹಿತಿಗಳು ಲಭ್ಯವಾಗುತ್ತವೆ.

ಗರ್ಭಿಣಿಯ ಹೊಟ್ಟೆ ಮತ್ತು ಸೊಂಟದ ಭಾಗವನ್ನು ಈ ಪರೀಕ್ಷೆಯಲ್ಲಿ ಪ್ರಮುಖವಾಗಿ ಗಮನಿಸಲಾಗುತ್ತದೆ ಹಾಗೂ ಯಾವುದೇ ಅಸಹಜ ಬೆಳವಣಿಗೆ ಅಥವಾ ತೊಂದರೆ ಇಲ್ಲದಿರುವುದನ್ನು ಖಚಿತಪಡಿಸಲಾಗುತ್ತದೆ.

ಈ ಪರೀಕ್ಷೆಯಲ್ಲಿ ತಜ್ಞರು ಗರ್ಭಿಣಿಯ ಹೊಟ್ಟೆಯ ಭಾಗಕ್ಕೆ ಜಾರುಕ ದ್ರವ ಅಥವಾ ಜೆಲ್ ಹಚ್ಚುತ್ತಾರೆ. ಈ ಜೆಲ್ ಶಬ್ದದ ತರಂಗಗಳನ್ನು ಹೊಟ್ಟೆಯ ಮೂಲಕ ಒಳಭಾಗಕ್ಕೆ ತಲುಪಿಸುವ ನಿರ್ವಾಹಕನಂತೆ ಕಾರ್ಯನಿರ್ವಹಿಸುತ್ತದೆ.

ಕೈಯಲ್ಲಿ ಹಿಡಿದುಕೊಳ್ಳಬಹುದಾದ ಟ್ರಾನ್ಸ್ ಡ್ಯೂಸರ್ ಎಂಬ ಉಪಕರನವನ್ನು ಹೊಟ್ಟೆಯ ಮೇಲೆ ಓಡಾಡಿಸಿ ಮಗುವಿನ ವಿವಿಧ ಭಾಗಗಳ ಮಾಹಿತಿಯನ್ನು ಪಡೆಯಲಾಗುತ್ತದೆ.

ಮಗುವಿನ ದೇಹ, ಮಾಸು ಅಥವಾ ಪ್ಲಾಸೆಂಟಾ ಮೊದಲಾದ ಪ್ರಮುಖ ಅಂಗಗಳೆಲ್ಲವೂ ಕಪ್ಪು ಬಿಳುಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಈ ಚಿತ್ರಕ್ಕೆ ಸೋನೋಗ್ರಾಂ ಎಂದು ಕರೆಯುತ್ತಾರೆ.

18ರಿಂದ 22 ವಾರಗಳ ನಡುವೆ ಪರೀಕ್ಷೆ

18ರಿಂದ 22 ವಾರಗಳ ನಡುವೆ ಪರೀಕ್ಷೆ

ಸುಮಾರು ಹದಿನೆಂಟರಿಂದ ಇಪ್ಪತ್ತೆರಡು ವಾರಗಳ ನಡುವೆ ಗರ್ಭಿಣಿ ತಪ್ಪದೇ ಈ ಪರೀಕ್ಷೆಯನ್ನು ಮಾಡಿಕೊಳ್ಳಬೇಕು. ಈ ಪರೀಕ್ಷೆಯಿಂದ ವೈದ್ಯರಿಗೆ ಹಲವಾರು ಮಾಹಿತಿಗಳು ಲಭಿಸುತ್ತವೆ ಹಾಗೂ ಈ ಮೂಲಕ ಕೆಳಗಿನ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ:

* ಹೆರಿಗೆಯಾಗುವ ಸಾಧ್ಯತೆಯ ದಿನ

* ಮಗು ಒಂದೇ ಇದೆಯೇ ಅಥವಾ ಅವಳಿಗಳೇ

* ಮಾಸು ಯಾವ ಸ್ಥಾನದಲ್ಲಿದೆ

* ಬೇರಾವುದಾದರೂ ಕ್ಲಿಷ್ಟತೆಯ ಲಕ್ಷಣಗಳು

ಇದರ ಜೊತೆಗೇ ಮಗುವಿನ ಲಿಂಗವನ್ನೂ ಪತ್ತೆ ಹಚ್ಚಬಹುದಾದರೂ ಇದನ್ನು ತಕ್ಷಣಕ್ಕೆ ಖಚಿತಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕೆಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ ಮಗು ಇರುವ ಭಂಗಿ ಮತ್ತು ಗರ್ಭಾವಸ್ಥೆ ಯಾವ ಹಂತದಲ್ಲಿದೆ ಎಂಬ ಮಾಹಿತಿಗಳು.

ವಿವಿಧ ಹಂತಗಳಲ್ಲಿ ಪರೀಕ್ಷೆ

ವಿವಿಧ ಹಂತಗಳಲ್ಲಿ ಪರೀಕ್ಷೆ

ಒಟ್ಟಾರೆ ಗರ್ಭಾವಸ್ಥೆಯಲ್ಲಿ ಎಷ್ಟು ಬಾರಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಬೇಕು ಎಂಬುದನ್ನು ಆಕೆಯ ಕಾಳಜಿ ವಹಿಸುವ ವೈದ್ಯರೇ ನಿರ್ಧರಿಸುತ್ತಾರೆ.

American Pregnancy Association ಸಂಸ್ಥೆಯ ಪ್ರಕಾರ ವೈದ್ಯರು ಗರ್ಭಿಣಿಯ ಆರೋಗ್ಯವನ್ನು ಪರಿಗಣಿಸಿ ವಿವಿಧ ಹಂತಗಳಲ್ಲಿ ಬೇರೆ ಬೇರೆ ಪರೀಕ್ಷೆಗಳನ್ನು ನಡೆಸಬಹುದು.

ಮೊದಲ ತ್ರೈಮಾಸಿಕದಲ್ಲಿ ವೈದ್ಯರು ಈ ಕೆಳಕಂಡ ಮಾಹಿತಿ

  • ಪಡೆಯಲು ಪರೀಕ್ಷೆ ನಡೆಸುತ್ತಾರೆ
  • ಗರ್ಭಧಾರಣೆಯನ್ನು ಖಚಿತಪಡಿಸಲು
  • ಹೃದಯ ಬಡಿತವನ್ನು ಖಚಿತಪಡಿಸಲು
  • ಗರ್ಭಾವಸ್ಥೆಯ ವಯಸ್ಸನ್ನು ನಿರ್ಧರಿಸಲು
  • ಎರಡನೇ ತ್ರೈಮಾಸಿಕದಲ್ಲಿ

    ಎರಡನೇ ತ್ರೈಮಾಸಿಕದಲ್ಲಿ

    • ಅಲ್ಟ್ರಾಸೌಂಡ್ ಬಳಸಬಹುದು
    • ಭ್ರೂಣದ ವಿರೂಪವನ್ನು ಪತ್ತೆ ಮಾಡಲು
    • ಅವಳಿ ಅಥವಾ ತ್ರಿವಳಿಗಳಂತಹ ಒಂದಕ್ಕಿಂತ ಹೆಚ್ಚಿನ ಗರ್ಭಧಾರಣೆಗಳನ್ನು ದೃಢೀಕರಿಸಲು
    • ಭ್ರೂಣದ ಯೋಗಕ್ಷೇಮವನ್ನು ಪರಿಶೀಲಿಸಲು
    • ಮೂರನೇ ತ್ರೈಮಾಸಿಕದಲ್ಲಿ

      ಮೂರನೇ ತ್ರೈಮಾಸಿಕದಲ್ಲಿ

      • ಅಲ್ಟ್ರಾಸೌಂಡ್ ಬಳಸಬಹುದು
      • ಭ್ರೂಣದ ಚಲನೆಯನ್ನು ಪರಿಶೀಲಿಸಲು
      • ಗರ್ಭದಲ್ಲಿರುವ ಭ್ರೂಣದ ಸ್ಥಾನವನ್ನು ಪರೀಕ್ಷಿಸಲು
      • ಯಾವುದೇ ಗರ್ಭಾಶಯ ಅಥವಾ ಸೊಂಟದ ಒಳಗಿನ ಸಮಸ್ಯೆಗಳನ್ನು ಗುರುತಿಸಲು
      • ಮಗುವಿನ ಲಿಂಗ ಪತ್ತೆಯ ಬಗ್ಗೆ ಇರುವ ಇತರ ಮಿಥ್ಯೆಗಳು

        ಮಗುವಿನ ಲಿಂಗ ಪತ್ತೆಯ ಬಗ್ಗೆ ಇರುವ ಇತರ ಮಿಥ್ಯೆಗಳು

        ಈವರೆಗೆ ಜಗತ್ತಿನ ಎಲ್ಲೆಡೆ ಈ ಬಗ್ಗೆ ಹಲವಾರು ಮಿಥ್ಯೆಗಳು ಪ್ರಚಲಿತವಾಗಿವೆ. ಎಷ್ಟೋ ನಂಬುಗೆಗಳು ಕಾಕತಾಳೀಯವಾಗಿ ನಿಜವಾಗಿದ್ದುದಂತೆ ಕಂಡುಬರುತ್ತವೆ.

        ಒಂದು ನಂಬಿಕೆಯ ಪ್ರಕಾರ ಗರ್ಭಿಣಿಯ ಮದುವೆಯ ಉಂಗುರವನ್ನು ದಾರಕ್ಕೆ ಕಟ್ಟಿ ಆಕೆಯ ತಲೆಯ ಮೇಲೆ ನೇತಾಡಿಸಿದಾಗ ಇದು ಪ್ರದಕ್ಷಿಣವಾಗಿ ತಿರುಗಿದರೆ ಗಂಡು ಎಂದೂ ಸುಮ್ಮನೇ ಅಡ್ಡಡ್ಡ ವಾಲಿದರೆ ಹೆಣ್ಣು ಎಂದೂ ಪರಿಗಣಿಸಲಾಗುತ್ತದೆ.

        ಈ ಬಗ್ಗೆ ಇನ್ನೂ ಕೆಲವು ನಂಬಿಕೆಗಳು ಹೀಗಿವೆ

        • ಗಂಡು ಮಗು ಗರ್ಭದಲ್ಲಿದ್ದರೆ
        • ಆಕೆಯ ಹೊಟ್ಟೆ ಸಾಕಷ್ಟು ಮೇಲಕ್ಕೆ ಮತ್ತು ಮುಂಚಾಚಿರುತ್ತದೆ
        • ಅಥವಾ ಅತಿ ಕೆಳಗೆ ಇರುತ್ತದೆ
        • ಮೊದಲ ತ್ರೈಮಾಸಿಕದಲ್ಲಿ ಆಕೆಗೆ ವಾಕರಿಕೆ ಎದುರಾಗಿರಲಿಲ್ಲ
        • ಆಕೆಯ ಬಲಸ್ತನ ಎಡಸ್ತನಕ್ಕಿಂದ ದೊಡ್ಡದಿರುತ್ತದೆ
        • ಆಕೆಯ ಬಯಕೆಯ ಆಹಾರದಲ್ಲಿ ಉಪ್ಪು ಮತ್ತು ಪ್ರೋಟೀನ್ ತುಂಬಿರುತ್ತವೆ. ಉದಾಹರಣೆಗೆ ಚೀಸ್ ಮತ್ತು ಮಾಂಸ
        • ಆಕೆಯ ಚರ್ಮ ಒಣದಾಗಿರುತ್ತದೆ
        • ಕೂದಲು ಇಡಿಯ ದೇಹ ತುಂಬಿಕೊಳ್ಳುತ್ತದೆ ಮತ್ತು ಕಾಂತಿಯುಕ್ತವಾಗುತ್ತದೆ
        • ಹೆಣ್ಣು ಮಗು ಗರ್ಭದಲ್ಲಿದ್ದರೆ

          ಹೆಣ್ಣು ಮಗು ಗರ್ಭದಲ್ಲಿದ್ದರೆ

          • ಉಬ್ಬಿದ ಹೊಟ್ಟೆ ಸೊಂಟದ ಬದಿಗೂ ವಿಸ್ತರಿಸಿರುತ್ತದೆ
          • ಉಬ್ಬಿದ ಹೊಟ್ಟೆ ಸಾಕಷ್ಟು ಮೇಲೆ ಇರುತ್ತದೆ
          • ಮೊದಲ ತ್ರೈಮಾಸಿಕದಲ್ಲಿ ಆಕೆಗೆ ವಾಕರಿಕೆ ಎದುರಾಗಿತ್ತು
          • ಆಕೆಯ ಎಡಸ್ತನ ಬಲಸ್ತನಕ್ಕಿಂದ ದೊಡ್ಡದಿರುತ್ತದೆ
          • ಆಕೆಯ ಬಯಕೆಯ ಅಹಾರಗಳು ಸಿಹಿ ಮತ್ತು ಹುಳಿಯಾಗಿರುತ್ತವೆ. ಉದಾಹರಣೆಗೆ ಹಣ್ಣುಗಳು ಮತ್ತು ಕ್ಯಾಂಡಿ
          • ಆಕೆಯ ತ್ವಚೆ ಅತಿ ಮೃದುವಾಗುತ್ತದೆ
          • ಕೂದಲು ತೆಳು ಮತ್ತು ಕಳಾಹೀನವಾಗುತ್ತದೆ
          • ಮನೆಯ ಸದಸ್ಯರಂತೂ ಪ್ರತಿಯೊಬ್ಬರೂ ತಮ್ಮದೇ ಆದ ಸಿದ್ಧಾಂತಗಳನ್ನು ಮಂಡಿಸಿ ತಾವು ಹೇಳಿದಂತೆಯೇ ಆಗುತ್ತದೆ ಎಂದು ಬೀಗುತ್ತಾರೆ. ಆದರೆ ಈ ಯಾವುದಕ್ಕೂ ವೈಜ್ಞಾನಿಕವಾದ ಪುರಾವೆ ನೀಡಲು ಸಾಧ್ಯವಿಲ್ಲ. ಬೀಚಿಯವರು ಹೇಳುವಂತೆ 'ಆದರೆ ಗಂಡೇ, ತಪ್ಪಿದರೆ ಹೆಣ್ಣು' ಎಂಬ ಮಾತು ಎಂದಿಗೂ ಅನ್ವಯಿಸುತ್ತದೆ.

            ಕೊನೆಯ ಮಾತು

            ಕೊನೆಯ ಮಾತು

            ಹುಟ್ಟುವ ಮುನ್ನವೇ ಮಗುವಿನ ಲಿಂಗ ಪತ್ತೆಹಚ್ಚುವುದು ಕುತೂಹಲ ಕೆರಳಿಸುವ ವಿಷಯವಾಗಿದೆ. ಗರ್ಭದಲ್ಲಿರುವ ಗಂಡುಮಗುವಿನ ಹೃದಯದ ಬಡಿತ ಹೆಣ್ಣು ಮಗುವಿಗಿಂತಲೂ ಕೊಂಚ ಹೆಚ್ಚಿರುತ್ತದೆ ಎಂದು ಒಂದು ಸಿದ್ದಾಂತ ತಿಳಿಸಿದರೂ ಇದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ.

            ಕೆಲವಾರು ಸಂಶೋಧನೆಗಳಿಂದಲೂ ಇದನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ.

            ಅಲ್ಟ್ರಾಸೌಂಡ್ ಉಪಕರಣದಿಂದ ವೈದ್ಯರು ನಿಖರ ಮಾಹಿತಿಗಳನ್ನು ಪಡೆಯುವ ಮೂಲಕ ಮಗು ಮತ್ತು ಗರ್ಭಿಣಿಯ ಆರೋಗ್ಯದ ಕಾಳಜಿಯನ್ನು ವಹಿಸುತಾರೆ. ಆದರೆ ಮಗುವಿನ ಲಿಂಗ ಪತ್ತೆಹಚ್ಚಲು ಇತರ ಮಾಹಿತಿಗಳೂ ಬೇಕಾಗುತ್ತವೆ ಹಾಗೂ ಇದನ್ನು ನಿಖರವಾಗಿ ಹೇಳಲು ಕಷ್ಟವಾಗುತ್ತದೆ.

            ಕಾನೂನಿನ ಪ್ರಕಾರವೂ ಹುಟ್ಟುವ ಮುನ್ನವೇ ಮಗುವಿನ ಲಿಂಗ ಪತ್ತೆ ಹಚ್ಚುವುದು ಅಪರಾಧವಾಗಿದೆ. ಹಾಗಾಗಿ ಮಗು ಹುಟ್ಟುವ ಕ್ಷಣದವರೆಗೂ ಕುತೂಹಲವನ್ನು ಕಾಯ್ದುಕೊಂಡು ಆಗಮಿಸಿದ ಹೊಸ ಅತಿಥಿಯನ್ನು ಲಿಂಗಬೇಧವಿಲ್ಲದೇ ಸಂತೋಷದಿಂದ ಬರಮಾಡಿಕೊಳ್ಳುವುದೇ ಒಳ್ಳೆಯ ಕ್ರಮ.

English summary

Can Baby Heartbeat Predict Their Sex

Here we are discussing about can baby heartbeat predict their sex. Some people believe that the rate of the fetus’ heartbeat, as heard during an ultrasound scan, can indicate its sex. Research shows no evidence for this, and similar beliefs tend to be myths. Read more.
X
Desktop Bottom Promotion