For Quick Alerts
ALLOW NOTIFICATIONS  
For Daily Alerts

ಮಗು ಪಡೆಯಲು ಬಯಸುವ ದಂಪತಿಗಳು ಕೇಳುವಂತಹ ಪ್ರಶ್ನೆಗಳಿಗೆ-ಸಮಂಜಸ ಉತ್ತರಗಳು

|

ವಿವಾಹವಾದ ಬಳಿಕ ದಂಪತಿಗೆ ಮಗು ಪಡೆಯಬೇಕೆಂಬ ಮನಸ್ಸು ಇದ್ದೇ ಇರುತ್ತದೆ. ಹೀಗಾಗಿ ಅವರು ಮಗು ಪಡೆಯಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು. ಕೆಲವರಿಗೆ ಮದುವೆಯಾದ ಕೆಲವೇ ಸಮಯದಲ್ಲಿ ಮಗು ಆದರೆ, ಇನ್ನು ಕೆಲವು ದಂಪತಿ ಮಗುವನ್ನು ಪಡೆಯಲು ತುಂಬಾ ಸಮಯ ಕಾಯಬೇಕಾಗುತ್ತದೆ.

conceive

ಮಗು ಪಡೆಯಲು ಬಯಸಿರುವಂತಹ ಹೆಚ್ಚಿನ ದಂಪತಿಯಲ್ಲಿ ಕೆಲವೊಂದು ಪ್ರಶ್ನೆಗಳು ಇರುವುದು. ಇದು ಸಾಮಾನ್ಯ ಕೂಡ. ದಂಪತಿಗಳು ಸಾಮಾನ್ಯವಾಗಿ ಕೇಳುವಂತಹ ಕೆಲವು ಪ್ರಶ್ನೆಗಳನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಇದನ್ನು ನೀವು ತಿಳಿಯಿರಿ.

ಗರ್ಭ ಧರಿಸಲು ಪರಾಕಾಷ್ಠೆಯು ಪ್ರಮುಖ ಪಾತ್ರ ವಹಿಸುವುದೇ?

ಗರ್ಭ ಧರಿಸಲು ಪರಾಕಾಷ್ಠೆಯು ಪ್ರಮುಖ ಪಾತ್ರ ವಹಿಸುವುದೇ?

ಎಲ್ಲಾ ದಂಪತಿಗಳಿಗೆ ನಾವು ಈ ಪ್ರಶ್ನೆಗೆ ನೀಡುವಂತಹ ಉತ್ತರವೆಂದರೆ, ಮೊದಲಿಗೆ ನೀವು ಸಂಪೂರ್ಣವಾಗಿ ಒತ್ತಡದಿಂದ ಹೊರಗೆ ಬರಬೇಕು. ಕೆಲವು ಮಹಿಳೆಯರು ಮಗು ಪಡೆಯಬೇಕೆಂದು ಲೈಂಗಿಕ ಕ್ರಿಯೆ ವೇಳೆ ತುಂಬಾ ಒತ್ತಡಕ್ಕೆ ಸಿಲುಕಿರುವರು ಮತ್ತು ಇದರಿಂದಾಗಿ ಕೆಲವೊಂದು ಸಮಸ್ಯೆಗಳು ಆರಂಭವಾಗುವುದು. ಗರ್ಭ ಧರಿಸಲು ನೀವು ಪರಾಕಾಷ್ಠೆ ತಲುಪಿದ್ದರೆ ಆಗ ಕೂಡ ನಿಮಗೆ ಇದರಿಂದ ದೊಡ್ಡ ಹಿನ್ನಡೆಯೇ ಆಗುವುದು. ಅದು ಯಾವುದೆಂದರೆ ಒತ್ತಡ. ಆದರೆ ಪರಾಕಾಷ್ಠೆ ತಲುಪದೆ ಇರುವ ಮಹಿಳೆಯರು ಗರ್ಭ ಧರಿಸುವುದಿಲ್ಲ ಎಂದು ಹೇಳಲು ಆಗದು.

Most Read: 30 ವರ್ಷದೊಳಗಿನ ಮಹಿಳೆಯರಲ್ಲಿ ಏಕೆ ಬಂಜೆತನ ಕಾಡುವುದು?

ಗರ್ಭ ಧರಿಸಲು ಸರಿಯಾದ ಭಂಗಿ ಯಾವುದು?

ಗರ್ಭ ಧರಿಸಲು ಸರಿಯಾದ ಭಂಗಿ ಯಾವುದು?

ಹೌದು, ಕೆಲವೊಂದು ಭಂಗಿಗಳು ತುಂಬಾ ಉತ್ತಮವಾಗಿ ಕೆಲಸ ಮಾಡುವುದು. ಆದರೆ ಇದರ ಬಗ್ಗೆ ಇದುವರೆಗೆ ಸ್ಪಷ್ಟವಾಗಿ ಏನೂ ಹೇಳಲಾಗಿಲ್ಲ. ಯಾವುದೇ ಲೈಂಗಿಕ ಭಂಗಿಯು ಅತ್ಯಧಿಕ ಒಳನುಗ್ಗುವಿಕೆ ಒದಗಿಸುವುದು ಮತ್ತು ವೀರ್ಯವನ್ನು ಗರ್ಭಕಂಠದ ಹತ್ತಿರ ತಲುಪಿಸುವುದು. ಇದು ಆಳವಾಗಿ ಒಳನುಗ್ಗಿಸದೆ ಇರುವವರಿಗೆ ಸಾಧ್ಯವಾಗದು. ಸಾಂಪ್ರದಾಯಿಕ ಭಂಗಿಯಾಗಿರುವಂತಹ ಪುರುಷನು ಮೇಲಿನ ಭಾಗದಲ್ಲಿ ಇದ್ದು, ಮಹಿಳೆಯ ಕಾಲುಗಳು ಆತನ ಭುಜದ ಮೇಲಿದ್ದರೆ ಆಗ ಇದು ಅತ್ಯುತ್ತಮವಾಗಿ ಕೆಲಸ ಮಾಡುವುದು.

ಬಾಯಿ ಸೆಕ್ಸ್ ನಿಂದ ಗರ್ಭಧಾರಣೆಗೆ ಸಮಸ್ಯೆಯಾಗುವುದೇ?

ಬಾಯಿ ಸೆಕ್ಸ್ ನಿಂದ ಗರ್ಭಧಾರಣೆಗೆ ಸಮಸ್ಯೆಯಾಗುವುದೇ?

ಕೆಲವೊಂದು ಲೈಂಗಿಕ ತಜ್ಞರ ಪ್ರಕಾರ ಜೊಲ್ಲು, ವೀರ್ಯವನ್ನು ಕೊಲ್ಲುತ್ತದೆ ಎಂಧು ಹೇಳುತ್ತಾರೆ. ಯೋನಿ ಭಾಗದಲ್ಲಿನ ಪಿಎಚ್ ಮಟ್ಟವನ್ನು ಕೂಡ ಇದು ಬಿಗಡಾಯಿಸುವುದು. ಇದರಿಂದ ಅಲ್ಲಿನ ಲೋಳೆ ಮೇಲೆ ಪರಿಣಾಮ ಬೀರುವುದು. ವೀರ್ಯವು ಪ್ರಯಾಣಿಸಲು ಇದು ತುಂಬಾ ಕಠಿಣ ಹಾದಿಯನ್ನು ಉಂಟು ಮಾಡುವುದು.

Most Read: ಮೊದಲ ಸಲ ಸೆಕ್ಸ್ ನಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವೇ?

ಗುರುತ್ವಾಕರ್ಷಣೆಯಿಂದ ವೀರ್ಯ ಬೇಗನೆ ಸಾಗುವುದೇ?

ಗುರುತ್ವಾಕರ್ಷಣೆಯಿಂದ ವೀರ್ಯ ಬೇಗನೆ ಸಾಗುವುದೇ?

ವೀರ್ಯ ಸ್ಖಲನದ ಬಳಿಕ ಕೆಲವು ಮಹಿಳೆಯರು ಹಾಗೆ ಬೆನ್ನಿನ ಮೇಲೆ ಮಲಗಿರುವರು. ಇದರಿಂದ ಅಂಡಾಣುಗಳಿಗೆ ವೀರ್ಯವು ತಲುಪಲಿ ಎನ್ನುವುದು ಅವರ ಉದ್ದೇಶ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳು ಇಲ್ಲ ಮತ್ತು ಇದನ್ನು ವೈಜ್ಞಾನಿಕವಾಗಿ ನಿರಾಕರಿಸಲಾಗಿದೆ.

ಗರ್ಭ ಧಾರಣೆಗೆ ರಾತ್ರಿ ಸೆಕ್ಸ್ ಗಿಂತ ಬೆಳಗ್ಗಿನ ಸೆಕ್ಸ್ ಒಳ್ಳೆಯದೇ?

ಗರ್ಭ ಧಾರಣೆಗೆ ರಾತ್ರಿ ಸೆಕ್ಸ್ ಗಿಂತ ಬೆಳಗ್ಗಿನ ಸೆಕ್ಸ್ ಒಳ್ಳೆಯದೇ?

ಗರ್ಭ ಧರಿಸಲು ರಾತ್ರಿ ಸೆಕ್ಸ್ ಗಿಂತ ಬೆಳಗ್ಗಿನ ಸೆಕ್ಸ್ ಒಳ್ಳೆಯದು ಎಂದು ನಂಬಲಾಗಿದೆ. ಯಾಕೆಂದರೆ ಸಂಜೆ ವೇಳೆ ಪುರುಷರು ತುಂಬಾ ದಣಿದು ಬಂದಿರುವ ಕಾರಣದಿಂದಾಗಿ, ರಾತ್ರಿ ಸರಿಯಾಗಿ ನಿದ್ರೆ ಮಾಡಿದ ಬಳಿಕ ಬೆಳಗ್ಗೆ ಎದ್ದರೆ ಆಗ ವೀರ್ಯವು ಉತ್ತಮವಾಗಿರುವುದು ಎಂದು ಹೇಳಲಾಗುತ್ತದೆ. ವ್ಯಾಯಾಮ ಮಾಡಿದ ಬಳಿಕ ಬಂದು ಸೆಕ್ಸ್ ನಡೆಸಿದರೆ, ಆಗ ವೀರ್ಯವು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡದು. ಆದರೆ ವಿಶ್ರಾಂತಿ ಪಡೆದ ಬಳಿಕ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು.

ಬಿಸಿ ನೀರಿನ ಟಬ್ ಸ್ನಾನ ನೆರವಾಗುವುದೇ?

ಬಿಸಿ ನೀರಿನ ಟಬ್ ಸ್ನಾನ ನೆರವಾಗುವುದೇ?

ತಾಪಮಾನವು 96ಕ್ಕಿಂತ ಹೆಚ್ಚಾಗಿದ್ದರೆ ಆಗ ವೀರ್ಯವು ಸರಿಯಾಗಿ ಕೆಲಸ ಮಾಡುವುದಿಲ್ಲಎಂದು ನಿಮಗೆ ತಿಳಿದಿರಬೇಕು. ಬಿಸಿ ನೀರಿನ ಸ್ನಾನ ಮಾಡುತ್ತಿದ್ದರೆ ಆಗ ಅದು ಗರ್ಭಧಾರಣೆಗೆ ಸರಿಯಾದ ಕ್ರಮವಲ್ಲ. ಬಿಸಿ ನೀರಿನ ಟಬ್ ನಲ್ಲಿ ಸ್ನಾನ ಮಾಡಿದ ಒಂದು ದಿನ ಕಾಲ ವೀರ್ಯದ ಉತ್ಪಾದನೆಯು ತಡೆ ಹಿಡಿಯಲ್ಪಡುವುದು ಎಂದು ಹೇಳಲಾಗುತ್ತದೆ.

English summary

Most common questions answered for couples wanting to conceive

Sex takes a whole new meaning when it turns into the act of making babies. Naturally so, couples have a lot of questions they seek answers to while trying to get pregnant. We have tried answering few of the most common conception queries:
X
Desktop Bottom Promotion