For Quick Alerts
ALLOW NOTIFICATIONS  
For Daily Alerts

ವೀರ್ಯದ ಗಣತಿ ಹೆಚ್ಚಿಸುವುದು ಹೇಗೆ ಗೊತ್ತೇ? ಇಂತಹ ಆಹಾರಗಳನ್ನು ಸೇವಿಸಿ

|

ಇಂದಿನ ಪುರುಷರು ಫಲವತ್ತತೆ ಸಮಸ್ಯೆಯನ್ನು ಅತಿಯಾಗಿ ಎದುರಿಸುತ್ತಿದ್ದಾರೆ. ನಮ್ಮ ಜೀವನ ಶೈಲಿಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಜಡ ದೈಹಿಕ ಜೀವನ, ಆಹಾರ ಕ್ರಮ ಇತ್ಯಾದಿಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ ಮುಖ್ಯವಾಗಿ ನಮ್ಮ ದೇಹದ ಆರೋಗ್ಯದ ಮೇಲೆ. ಹೀಗಾಗಿ ಫಲವತ್ತತೆ ಸಮಸ್ಯೆಯು ಮಹಿಳೆಯರು ಮಾತ್ರವಲ್ಲದೆ, ಪುರುಷರನ್ನು ಕೂಡ ಕಾಡುತ್ತಲಿದೆ. ಪುರುಷರಲ್ಲಿ ಕಾಡುವಂತಹ ಫಲವತ್ತತೆ ಸಮಸ್ಯೆಗೆ ಕಾರಣವೆಂದರೆ ಅದು ವೀರ್ಯ ಗಣತಿಯು ಕಡಿಮೆ ಆಗುವುದು. ಆರೋಗ್ಯ ಮತ್ತು ಜೀವನಶೈಲಿ ಕೂಡ ವೀರ್ಯ ಗಣತಿ ಮೇಲೆ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಧೂಮಪಾನ, ಡ್ರಗ್ಸ್, ಸ್ನಾಯುಗಳನ್ನು ಬೆಳೆಸಲು ಬಳಸುವ ಸ್ಟಿರಾಯ್ಡ್ ವೀರ್ಯ ಗಣತಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುವಂತ ಆಹಾರ ಮತ್ತು ಜೀವನಶೈಲಿ

ಸಂಸ್ಕರಿತ ಆಹಾರ, ಸಕ್ಕರೆ ಮತ್ತು ಅನಾರೋಗ್ಯಕರ ಆಹಾರಗಳು ಹೆಚ್ಚಾಗಿರುವಂತಹ ಆಹಾರ ಕ್ರಮವು ವೀರ್ಯ ಗಣತಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದು ಎಂದು ಹೇಳಲಾಗುತ್ತದೆ. ಇದಕ್ಕೆ ಮತ್ತೊಂದು ಸೇರ್ಪಡೆಯೆಂದರೆ ದೈಹಿಕ ಚಟುವಟಿಕೆಗಳು ಕಡಿಮೆ ಆಗಿರುವುದು ಕೂಡ ವೀರ್ಯ ಗಣತಿ ಕಡಿಮೆ ಮಾಡುವುದು ಮತ್ತು ಅದರ ಗುಣಮಟ್ಟ ಕೂಡ.

Sperm Count

ನೀವು ಮತ್ತು ಸಂಗಾತಿಯು ಮಗು ಪಡೆಯಲು ಬಯಸುತ್ತಿದ್ದರೆ ಮತ್ತು ವೀರ್ಯ ಗಣತಿಯು ತುಂಬಾ ಕಡಿಮೆ ಇದ್ದರೆ ಆಗ ನೀವು ಸಮಸ್ಯೆ ನಿವಾರಣೆ ಮಾಡಲು ಮಾತ್ರೆಗಳನ್ನೇ ಸೇವನೆ ಮಾಡಬೇಕು ಎಂದೇನಿಲ್ಲ. ಆಹಾರ ಮತ್ತು ಜೀವನ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು, ವೀರ್ಯಗಣತಿ ಹೆಚ್ಚಿಸುವ ಆಹಾರ ಮತ್ತು ವ್ಯಾಯಾಮ ಮಾಡುತ್ತಲಿದ್ದರೆ ಆಗ ನಿಮಗೆ ಇದು ನೆರವಾಗುವುದು. ವೀರ್ಯ ಗಣತಿ ಹೆಚ್ಚಿಸುವಂತಹ ಕೆಲವೊಂದು ಆಹಾರಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ವೀರ್ಯ ಗಣತಿ ಹೆಚ್ಚಿಸುವ ಆಹಾರಗಳು

*ಬಸಳೆ

ಹಸಿರೆಲೆ ತರಕಾರಿ ಆಗಿರುವಂತಹ ಬಸಳೆಯು ಉನ್ನತ ಮಟ್ಟದ ಫಾಲಿಕ್ ಆಮ್ಲವನ್ನು ಹೊಂದಿದ್ದು, ಇದು ವೀರ್ಯದ ಆರೋಗ್ಯ ಮತ್ತು ಚಲನಶೀಲತೆಗೆ ನೆರವಾಗುವುದು. ಬಸಳೆಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಇದರಿಂದ ವೀರ್ಯ ಗಣತಿ ಮತ್ತು ಆರೋಗ್ಯದ ಮಟ್ಟವು ಉತ್ತಮವಾಗುವುದು.

*ಮೊಟ್ಟೆ

ಪುರುಷರಿಗೆ ತುಂಬಾ ಅಗ್ಗವಾಗಿ ಮತ್ತು ಅತ್ಯಧಿಕ ಮಟ್ಟದಲ್ಲಿ ಪ್ರೋಟೀನ್ ಒದಗಿಸುವ ಮೂಲವೆಂದರೆ ಅದು ಮೊಟ್ಟೆ. ಇದು ಕೂಡ ವೀರ್ಯ ಗಣತಿ ಹೆಚ್ಚು ಮಾಡುವುದು. ಪ್ರೋಟೀನ್ ವೀರ್ಯದ ನಿರ್ಮಾಣಕ್ಕೆ ನೆರವಾಗುವುದು ಮತ್ತು ಇದರಿಂದಾಗಿ ನಿಮ್ಮ ಆಹಾರ ಕ್ರಮದಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಸೇರಿಸಿಕೊಳ್ಳಿ.

Most Read: ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಭಾರತೀಯ ಆಹಾರಗಳು

*ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್ ನಲ್ಲಿ ಹೆಚ್ಚಿನ ಸಕ್ಕರೆ ಅಂಶವು ಇರುವ ಕಾರಣದಿಂದಾಗಿ ನೀವು ಅದನ್ನು ಇಷ್ಟಪಡುತ್ತಿದ್ದರೆ ನೀವು ನಿರ್ಧಾರ ಬದಲಾಯಿಸಿಕೊಳ್ಳಿ. ಯಾಕೆಂದರೆ ಸಕ್ಕರೆಯು ವೀರ್ಯ ಗಣತಿ ಕುಗ್ಗಿಸಲು ದೊಡ್ಡ ಶತ್ರುವಾಗಿದೆ. ಡಾರ್ಕ್ ಚಾಕಲೇಟ್ ನಲ್ಲಿ ಉನ್ನತ ಮಟ್ಟದ ಅಮಿನೋ ಆಮ್ಲವು ಇರುವ ಕಾರಣದಿಂದಾಗಿ ಇದು ವೀರ್ಯ ಗಣತಿ ಹಾಗೂ ಅದರ ಗುಣಮಟ್ಟವನ್ನು ಹೆಚ್ಚಿಸುವುದು.

*ಬೆಳ್ಳುಳ್ಳಿ

ಇದು ನಾಲಗೆಗೆ ರುಚಿ ನೀಡದೆ ಇದ್ದರೂ ಬೆಳ್ಳುಳ್ಳಿಯಲ್ಲಿ ವೀರ್ಯ ಗಣತಿ ಹೆಚ್ಚಿಸುವ ಅದ್ಭುತ ಅಂಶಗಳು ಇವೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6 ಮತ್ತು ಸೆಲೆನಿಯಂ ಅಂಶವಿದೆ. ಇದು ವೀರ್ಯಕ್ಕೆ ಆಗುವಂತಹ ಹಾನಿ ತಡೆಯುವುದು.

*ಬಾಳೆಹಣ್ಣು

ಬಾಳೆಹಣ್ಣು ಈ ಪಟ್ಟಿಯಲ್ಲಿ ಒಂದು ಸ್ಥಾನ ಪಡೆದುಕೊಂಡಿದೆ ಮತ್ತು ಆರೋಗ್ಯದ ವಿಚಾರಕ್ಕೆ ಬಂದರೆ ಇದು ಆಲ್ ರೌಂಡರ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಎ, ಬಿ1 ಮತ್ತು ಸಿ ಇದೆ. ಬಾಳೆಹಣ್ಣು ಸೇವನೆ ಮಾಡಿದರೆ ಅದು ವೀರ್ಯ ಗಣತಿ ಮತ್ತು ಗುಣಮಟ್ಟ ಹೆಚ್ಚಿಸುವುದು.

*ಸಿಂಪಿ

ಸಿಂಪಿಯು ಕಾಮೋತ್ತೇಜಕ ಎಂದು ಪರಿಗಣಿಸಲ್ಪಟ್ಟಿದೆ. ಸಿಂಪಿಯಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳಾಗಿರುವಂತಹ ಸತು ಪ್ರಮುಖ ಪಾತ್ರ ವಹಿಸಿದೆ. ಇದರಿಂದ ಟೆಸ್ಟೋಸ್ಟೆರಾನ್ ಮಟ್ಟವು ಹೆಚ್ಚಾಗುವುದು ಮತ್ತು ವೀರ್ಯ ಉತ್ಪತ್ತಿ ಕೂಡ.

*ವಾಲ್ ನಟ್(ಅಕ್ರೋಡ)

ನಿಮಗೆ ವಾಲ್ ನಟ್ ಸೇವನೆ ಮಾಡುವುದು ತುಂಬಾ ಇಷ್ಟವಾಗಿದ್ದರೆ ಆಗ ನೀವು ಇದನ್ನು ಇನ್ನಷ್ಟು ಇಷ್ಟಪಡುವಿರಿ. ವಾಲ್ ನಟ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಜನನೇಂದ್ರೀಯಗಳಿಗೆ ರಕ್ತಸಂಚಾರವನ್ನು ಉತ್ತಮಪಡಿಸುತ್ತದೆ ಮತ್ತು ವೀರ್ಯದ ಗಣತಿ ಹೆಚ್ಚು ಮಾಡುವುದು.

Most Read: ಪುರುಷರೇ ಕೇಳಿ ಇಲ್ಲಿ, ನಿಮಗೂ ಈ ಸಂಗತಿಗಳು ತಿಳಿದಿರಲಿ!

*ಶತಾವರಿ

ಆರೋಗ್ಯಕಾರಿಯಾಗಿರುವಂತಹ ಹಸಿರು ದಂಡಿನಲ್ಲಿ ವಿಟಮಿನ್ ಸಿ ಇದ್ದು, ಇದು ವೀರ್ಯವನ್ನು ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿಯಿಂದ ತಡೆಯುವುದು. ಇದರಿಂದ ವೀರ್ಯದ ಗಣತಿಯನ್ನು ನಿರಂತರವಾಗಿ ಹೆಚ್ಚಿಸುವುದು.

*ವಿಟಮಿನ್ ಡಿ ಇರುವ ಉತ್ಪನ್ನಗಳು

ವೀರ್ಯದ ಗಣತಿಯು ಕಡಿಮೆ ಆಗಲು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪ್ರಮಾಣವು ಕಡಿಮೆ ಇರುವುದು ಕಾರಣವೆಂದು ಹಲವಾರು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಇದರಿಂದ ದೇಹಕ್ಕೆ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು ಮಾತ್ರವಲ್ಲದೆ, ವೀರ್ಯದ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಾಗುವುದು.

*ಅರಿಶಿನ

ಅರಿಶಿನದಲ್ಲಿ ತುಂಬಾ ಶಕ್ತಿಶಾಲಿಯಾಗಿರುವಂತಹ ಕರ್ಕ್ಯುಮಿನ್ ಎನ್ನುವ ಅಂಶವಿದೆ. ಇದು ವೀರ್ಯದ ಗುಣಮಟ್ಟದ ಮೇಲೆ ಧನಾತ್ಮಕ ಪರಿಣಾಮ ಬೀರುವುದು. ಇದು ಜನನೇಂದ್ರೀಯದ ಭಾಗಕ್ಕೆ ರಕ್ತದ ಸಂಚಾರ ಉತ್ತಮಪಡಿಸುವುದು ಮಾತ್ರವಲ್ಲದೆ ಸಂಪೂರ್ಣವಾಗಿ ಪುರುಷರಲ್ಲಿ ಸಂತಾನೋತ್ಪತ್ತಿ ಪರಿಣಾಮ ಹೆಚ್ಚಿಸುವುದು.

*ಮಶ್ರೂಮ್

ಮಶ್ರೂಮ್ ತುಂಬಾ ಸಣ್ಣದಾಗಿ ಕಾಣಿಸಬಹುದು. ಆದರೆ ಇದರಲ್ಲಿ ಅದ್ಭುತವಾದ ಗುಣಗಳು ಇವೆ. ಇದರಲ್ಲಿ 15 ರೀತಿಯ ವಿವಿಧ ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಇದು ವೀರ್ಯಕ್ಕೆ ನೆರವಾಗುವುದು ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡುವುದು. ದೇಹದಲ್ಲಿ ವಿವಿಧ ರೀತಿಯಿಂದ ವೀರ್ಯದ ಮೇಲೆ ಆಗುವಂತಹ ಹಾನಿಯನ್ನು ಇದು ತಡೆಯುವುದು.

*ಓಟ್ಸ್

ಆರೋಗ್ಯಕಾರಿ ಉಪಾಹಾರದ ಆಯ್ಕೆ ಆಗಿರುವಂತಹ ಓಟ್ಸ್ ನಲ್ಲಿ ಎಲ್ಲಾ ರೀತಿಯ ಉತ್ತಮ ಅಂಶಗಳಿದ್ದು, ಇದು ಸಂತಾನೋತ್ಪತ್ತಿ ಆರೋಗ್ಯಕ್ಕೆ ನೆರವು ನೀಡುವುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ವೀರ್ಯದ ಉತ್ಪತ್ತಿಯನ್ನು ಸುಧಾರಣೆ ಮಾಡಿ, ಫಲವತ್ತತೆ ಹೆಚ್ಚಿಸುವುದು.

*ಸಾಲ್ಮನ್

ಸಾಲ್ಮನ್ ಮೀನು ತುಂಬಾ ಆರೋಗ್ಯಕಾರಿ ಸಮುದ್ರಖಾದ್ಯ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಉನ್ನತ ಮಟ್ಟದ ಒಮೆಗಾ 3 ಕೊಬ್ಬಿನಾಮ್ಲಗಳು ಇವೆ. ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಬಿ ಮತ್ತು ಡಿ ಇದ್ದು, ವೀರ್ಯದ ಗಣತಿ ಹಾಗೂ ಗುಣಮಟ್ಟವನ್ನು ಸುಧಾರಣೆ ಮಾಡುವುದು.

*ಗೆಣಸು

ವಿಟಮಿನ್ ಎ, ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ನಿಂದ ತುಂಬಿರುವಂತಹ ಗೆಣಸು ಫ್ರೀ ರ್ಯಾಡಿಕಲ್ ನಿಂದ ವೀರ್ಯವನ್ನು ರಕ್ಷಿಸುವುದು. ಗೆಣಸಿನಲ್ಲಿ ಇರುವಂತಹ ಪೋಷಕಾಂಶಗಳು ವೀರ್ಯದ ಉತ್ಪತ್ತಿಗೆ ನೆರವಾಗುವುದು ಮತ್ತು ಇದರಿಂದ ವೀರ್ಯದ ಗಣತಿಯು ಹೆಚ್ಚಾಗುವುದು.

ಜೀವನಶೈಲಿಯಲ್ಲಿ ಮಾಡಬೇಕಾಗಿರುವ ಬದಲಾವಣೆಗಳು

ಆಹಾರ ಕ್ರಮವು ನಿಮ್ಮ ವೀರ್ಯ ಗಣತಿಯನ್ನು ಹೆಚ್ಚು ಮಾಡುವುದು. ಅದೇ ರೀತಿಯಾಗಿ ನೀವು ಜೀವನಶೈಲಿಯಲ್ಲಿ ಕೂಡ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

*ವ್ಯಾಯಾಮ

ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೆ ವ್ಯಾಯಾಮವು ಅತ್ಯುತ್ತಮವಾದ ಪರಿಹಾರವಾಗಿದೆ. ಇಲ್ಲಿ ಕೂಡ ವ್ಯಾಯಾವು ನಿಮ್ಮ ವೀರ್ಯ ಗಣತಿ ಹೆಚ್ಚು ಮಾಡುವುದು. ಅದರಲ್ಲೂ ಮುಖ್ಯವಾಗಿ ಏರೋಬಿಕ್ ವ್ಯಾಯಾವು ವೀರ್ಯ ಗಣತಿ ಮೇಲೆ ಧನಾತ್ಮಕ ಪರಿಣಾಮ ಬೀರುವುದು.

*ಒತ್ತಡ ಕಡಿಮೆ ಮಾಡಿ

ಒತ್ತಡಕ್ಕೆ ಒಳಗಾದ ವೇಳೆ ದೇಹವು ಹಲವಾರು ರೀತಿಯ ಸಮಸ್ಯೆಗಳಿಂದ ಬಳಲುತ್ತದೆ. ಇದರಿಂದಾಗಿ ಸಂತಾನೋತ್ಪತ್ತಿ ಮೇಲೆ ಇದು ನೇರ ಪರಿಣಾಮ ಬೀರುವುದು. ಒತ್ತಡ ಮುಕ್ತವಾಗಿದ್ದರೆ ಆಗ ಸಂತಾನೋತ್ಪತ್ತಿ ಅಂಗಾಂಗಗಳ ಆರೋಗ್ಯ ಮತ್ತು ಕಾರ್ಯವು ಉತ್ತಮವಾಗುವುದು. ಇದು ಲೈಂಗಿಕ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುವುದು.

*ಧೂಮಪಾನ ತ್ಯಜಿಸಿ

ವೀರ್ಯ ಗಣತಿಯು ಕಡಿಮೆ ಆಗಲು ಧೂಮಪಾನವು ಕಾರಣವಾಗಿದೆ. ಧೂಮಪಾನವು ಶ್ವಾಸಕೋಶಕ್ಕೂ ಹಾನಿ ಉಂಟು ಮಾಡುವುದು ಮತ್ತು ಇದು ನಿಮ್ಮಲ್ಲಿ ದೀರ್ಘಕಾಲದ ತನಕ ನಪುಂಸಕತೆ ಕಾಡುವಂತೆ ಮಾಡುವುದು.

*ಆಲ್ಕೋಹಾಲ್ ತ್ಯಜಿಸಿ

ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ಮಾತ್ರವಲ್ಲದೆ ವೀರ್ಯ ಗಣತಿಯನ್ನು ಕಡಿಮೆ ಮಾಡುವುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದರಿಂದಾಗಿ ನೀವು ಮಗುವನ್ನು ಬಯಸುತ್ತಿದ್ದರೆ ಆಗ ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ಕಡೆಗಣಿಸಬೇಕು.

*ತೂಕ ಇಳಿಸಿ

25ಕ್ಕಿಂತ ಹೆಚ್ಚಿನ ಬಿಎಂಎಸ್ ಹೊಂದಿರುವಂತಹ ಜನರು ವೀರ್ಯ ಗಣತಿ ಕಡಿಮೆ ಇರುವ ಸಮಸ್ಯೆಗೆ ಒಳಗಾಗುವರು. ಇದರಿಂದಾಗಿ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡು ವೀರ್ಯ ಗಣತಿಯು ಆರೋಗ್ಯಕಾರಿ ಮಟ್ಟಕ್ಕೆ ಬರುವಂತೆ ಮಾಡಿ.

*ಸ್ಟಿರಾಯ್ಡ್ ಸೇವನೆ ಬಿಟ್ಟುಬಿಡಿ

ನೀವು ದೇಹದಾರ್ಢ್ಯ ಪಟುವಾಗಿದ್ದರೆ ಮತ್ತು ಮಾಂಸಖಂಡಗಳನ್ನು ಬೆಳೆಸಲು ಸ್ಟಿರಾಯ್ಡ್ ಬಳಸುತ್ತಿದ್ದರೆ ಆಗ ಸ್ಟಿರಾಯ್ಡ್ ನಿಂದ ಸಂತಾನೋತ್ಪತ್ತಿ ಅವಕಾಶವು ಕಡಿಮೆ ಆಗುವ ಸಾಧ್ಯತೆಯು ಇದೆ. ಕಟ್ಟುಮಸ್ತಾದ ದೇಹ ಮತ್ತು ಸಂತಾನೋತ್ಪತ್ತಿಯಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಇದ್ದರೆ ಆಗ ನೀವು ಎರಡನೇಯದ್ದನ್ನು ಆಯ್ಕೆ ಮಾಡಿ.

*ದೀರ್ಘಕಾಲ ಸ್ನಾನ ಕಡೆಗಣಿಸಿ

ವೃಷಣಗಳಿಗೆ ಮುಖ್ಯವಾಗಿ ವೀರ್ಯ ಉತ್ಪಾದನೆ ಕೆಲಸ ಮಾಡುತ್ತದೆ ಮತ್ತು ಇದಕ್ಕೆ ನಮ್ಮ ದೇಹಕ್ಕೆ ಒಂದು ಡಿಗ್ರಿ ಕಡಿಮೆ ಉಷ್ಣಾಂಶವು ಇದಕ್ಕೆ ಬೇಕಾಗುವುದು. ಹೀಗಿದ್ದರೆ ಅದು ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ. ಇದರಿಂದಾಗಿ ನೀವು ಅಧಿಕ ಉಷ್ಣತೆಗೆ ಮೈಯೊಡ್ಡುವುದನ್ನು ಕಡೆಗಣಿಸಬೇಕು. ಬಿಗಿಯಾದ ಪ್ಯಾಂಟ್ ಧರಿಸುವುದು ಅಥವಾ ಒಣ ಉಡುಪು ಧರಿಸುವುದನ್ನು ಕಡೆಗಣಿಸಬೇಕು.

*ನಿಯಮಿತವಾಗಿ ಲೈಂಗಿಕ ಕ್ರಿಯೆ ಮಾಡಬೇಡಿ

ದಿನನಿತ್ಯವು ಲೈಂಗಿಕ ಕ್ರಿಯೆ ನಡೆಸಿದರೆ ಅದರಿಂದ ವೀರ್ಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇನ್ನೊಂದೆಡೆ ನೀವು ದೀರ್ಘಕಾಲ ತನಕ ಸೆಕ್ಸ್ ನಲ್ಲಿ ಭಾಗಿಯಾಗದೆ ಇದ್ದರೂ ಅದು ವೀರ್ಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಎರಡು ದಿನಕ್ಕೊಮ್ಮೆ ವೀರ್ಯ ಸ್ಖಲನ ಮಾಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

English summary

How To Boost Your Sperm Count Naturally

A diet rich in processed foods, sugar and unhealthy fats can lead to a significant decrease in your sperm count. Add to that, a sedentary lifestyle can further deplete your sperm count and the quality of your sperm. Making some necessary changes in our diet and lifestyle to include some sperm boosting foods and exercises is certain to do you good.
Story first published: Friday, June 21, 2019, 13:21 [IST]
X
Desktop Bottom Promotion