For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

By Hemanth
|

ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ಪ್ರತಿಕ್ಷಣವೂ ವಿಷವಾಗುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಸವಾಲಿನ ಕೆಲಸವಾಗಿದೆ. ಆರೋಗ್ಯ ಸರಿಯಾಗಿದ್ದರೂ ಬೇರೆ ವಿಧದ ಸಮಸ್ಯೆಗಳು ಇರುತ್ತದೆ. ಅದರಲ್ಲೂ ಬಂಜೆತನವೆನ್ನುವುದು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ.

ಮದುವೆಯಾಗಿ ನಾಲ್ಕೈದು ವರ್ಷಗಳಾದರೂ ಮಕ್ಕಳಾಗದಿರುವುದು ದಂಪತಿಯನ್ನು ಕಾಡುವ ಸಮಸ್ಯೆ. ಬಂಜೆತನ (ಸಂತಾನಹೀನತೆ ಅಥವಾ ಮಕ್ಕಳಾಗದಿರುವುದನ್ನು ಬಂಜೆತನ ಎಂದು ಕರೆಯಲಾಗುತ್ತದೆ) ನಿವಾರಣೆ ಮಾಡಲು ಹಲವಾರು ರೀತಿಯ ವೈದ್ಯಕೀಯ ಚಿಕಿತ್ಸೆಗಳು ಇದೆ. ಅವುಗಳು ತುಂಬಾ ದುಬಾರಿಯಾಗಿರುವ ಕಾರಣದಿಂದ ಪ್ರತಿಯೊಬ್ಬರ ಕೈಗೆಟುಕದು ಆದರೆ ಫಲವತ್ತತೆಯನ್ನು ಅಥವಾ ಫಲವಂತಿಕೆಯನ್ನು ಪಡೆಯಲು ಕೆಲವೊಂದು ಸರಳ ವಿಧಾನಗಳು ಇವೆ. ಇಂದಿನ ಲೇಖನದಲ್ಲಿ ಬಂಜೆತನ ನಿವಾರಣೆಗೆ ಕೆಲವೊಂದು ಔಷಧಿಗಳನ್ನು ಇಲ್ಲಿ ಸೂಚಿಸಲಾಗಿದೆ. ಆದರೆ ಈ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆಯಿರಿ. ಇಂತಹ ಔಷಧಿಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಪ್ರಸಕ್ತ ವೈದ್ಯಕೀಯ ಸ್ಥಿತಿ, ಆರೋಗ್ಯಗಳನ್ನು ಗಮನದಲ್ಲಿಡಬೇಕಾಗುತ್ತದೆ.

ಖರ್ಜೂರ

ಖರ್ಜೂರ

ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದರಲ್ಲಿ ಕಬ್ಬಿಣ, ವಿಟಮಿನ್ ಬಿ, ಎ ಮತ್ತು ಇ ಇದೆ. ಇದು ಗರ್ಭಧಾರಣೆಗೆ ಬೇಕಾಗಿರುವ ಕೆಲವೊಂದು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ದಿನಲೂ 3-6 ಖರ್ಜೂರಗಳನ್ನು ಸೇವಿಸಿ.ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಹುಡಿಯನ್ನು ಬಿಸಿ ನೀರಿಗೆ ಹಾಕಿಕೊಂಡು ದಿನದಲ್ಲಿ ಒಂದು ಸಲ ಕುಡಿಯಬಹುದು. ಇದು ಗರ್ಭಾಶಯದ ಕಾರ್ಯವನ್ನು ಉತ್ತೇಜಿಸಿ ಫಲವತ್ತತೆ ಹೆಚ್ಚು ಮಾಡುತ್ತದೆ. ಆದರೆ ಇದನ್ನು ಸೇವಿಸುವಾಗ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ದಿನದಲ್ಲಿ ಒಂದು ಚಮಚಕ್ಕಿಂತ ಹೆಚ್ಚು ಇದನ್ನು ಸೇವಿಸಬಾರದು.

ಅಶ್ವಗಂಧ

ಅಶ್ವಗಂಧ

ಹಾರ್ಮೋನು ಸಮತೋಲನವನ್ನು ಕಾಪಾಡಿಕೊಳ್ಳಲು ಅಶ್ವಗಂಧವು ನೆರವಾಗುತ್ತದೆ. ಇದು ಸಂತಾನೋತ್ಪತ್ತಿಯ ವ್ಯವಸ್ಥೆಗೆ ನೆರವಾಗುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಅಶ್ವಗಂಧದ ಹುಡಿಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಎರಡು ಸಲ ಇದನ್ನು ಕುಡಿಯಿರಿ. ಆದರೆ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.ಆಯುರ್ವೇದ ಔಷಧಿ ಅಶ್ವಗಂಧದಿಂದ ಲೈಂಗಿಕ ಆರೋಗ್ಯವನ್ನು ವೃದ್ಧಿಸಬಹುದೇ?

ಮಕಾ ರೂಟ್

ಮಕಾ ರೂಟ್

ಬಂಜೆತನ ನಿವಾರಣೆಗೆ ಬೇಕಾದ ಹಾರ್ಮೋನುಗಳನ್ನು ಇದು ಬಿಡುಗಡೆ ಮಾಡುತ್ತದೆ. ಒಂದು ಲೋಟ ಬಿಸಿ ಹಾಲಿಗೆ ಮಕಾ ರೂಟ್‌ನ ಹುಡಿಯನ್ನು ಹಾಕಿಕೊಂಡು ಕುಡಿಯಿರಿ. ಆದರೆ ಗರ್ಭಿಣಿಯಾಗಿರುವಾಗ ಇದನ್ನು ಕುಡಿಯಬೇಡಿ.

ವಿಟಮಿನ್ ಡಿ

ವಿಟಮಿನ್ ಡಿ

ಆರೋಗ್ಯದ ಲವಲವಿಕೆಗೆ, ವಿಟಮಿನ್ ಡಿ ಅತ್ಯವಶ್ಯಕ

ದಾಳಿಂಬೆ

ದಾಳಿಂಬೆ

ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಒಂದು ಲೋಟ ದಾಳಿಂಬೆ ಜ್ಯೂಸ್ ನ್ನು ಪ್ರತೀ ದಿನ ಸೇವಿಸಿ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

English summary

Home Remedies For Female Infertility

Here are some home remedies to boost fertility. But consult a doctor first before trying any of these remedies because your medical history, current health condition and various other factors need to be considered before trying any remedy.
X
Desktop Bottom Promotion