Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪುರುಷರೇ, ಮದುವೆಯ ನಂತರ ಕಾಫಿಯ ಚಟದಿಂದ ದೂರವಿರಿ!
ಕರ್ನಾಟಕದ ಕಾಫಿ ಎಷ್ಟು ರುಚಿಕರ ಎಂದರೆ ಸಾಮಾನ್ಯ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾಫಿ ನಿತ್ಯದ ಪೇಯವಾಗಿದೆ. ಆದರೆ ಈ ಪೇಯವನ್ನು ಒಂದು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸೇವಿಸಿದರೆ ಪುರುಷರಲ್ಲಿ ನಪುಂಸಕತ್ವ ಕಾಣಿಸಿಕೊಳ್ಳುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ನಿಗದಿತ ಅಂದರೆ ಎಷ್ಟು? ಎಂದು ಹೆಚ್ಚಿನವರು ಪ್ರಶ್ನೆ ಹಾಕಬಹುದು.

ಒಂದು ದಿನಕ್ಕಿಂತ ಮೂರು ಕಪ್‌ಗಳಿಗಿಂತ ಹೆಚ್ಚು ಕಾಫಿ ಕುಡಿಯುವವರ ವೀರ್ಯಾಣುಗಳ ಸಂಖ್ಯೆ ಫಲತೆಗ ಅಗತ್ಯವಿರುವುದಕ್ಕಿಂತಲೂ ಕಡಿಮೆಯಾಗುತ್ತದೆ, ಇದರಿಂದ ಪ್ರನಾಳ ಶಿಶುವಿನ ಸಾಧ್ಯತೆಯೂ ಕಡಿಮೆಯಾಗುತ್ತದೆ ಎಂದು ಈ ಸಂಶೋಧನೆ ತಿಳಿಸುತ್ತದೆ.
ಇನ್ನೊಂದು ಅರ್ಥದಲ್ಲಿ ಕಾಫಿಯನ್ನೇ ಕುಡಿಯದ ಪುರುಷರಲ್ಲಿ ಫಲತೆಯ ಸಾಧ್ಯತೆ 50% ಕ್ಕೂ ಹೆಚ್ಚಿದೆ. ಅಂದರೆ ಕಾಫಿಯಲ್ಲಿರುವ ಕೆಫೇನ್‌ಗೂ ವೀರ್ಯಾಣುಗಳ ಸಂಖ್ಯೆಗೂ ನಿಕಟ ಸಂಬಂಧವಿದೆ ಎಂದು ಈ ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ.
ಕರಾರುವಾಕ್ಕಾಗಿ ಹೇಳಬೇಕೆಂದರೆ ಒಂದು ದಿನಕ್ಕೆ 250ಮಿಲಿಗ್ರಾಂ ಗೂ ಹೆಚ್ಚು ಕೆಫೀನ್ ಸೇವಿಸಿದವರು ನಪುಂಸಕತ್ವ ಹೊಂದಿರುವ ಸಾಧ್ಯತೆಯೇ ಹೆಚ್ಚು ಎನ್ನುತ್ತದೆ ಈ ಸಂಶೋಧನೆ. ಪುರುಷರ ಫಲವತ್ತತೆ ಹೆಚ್ಚಿಸುವ ವಿಟಮಿನ್‌ಗಳು
ಆದ್ದರಿಂದ ಸಂತಾನವನ್ನು ಬಯಸುವ ಪುರುಷರು ಈ ಅವಧಿಯಲ್ಲಿಯಾದರೂ ಕೆಫೀನ್ ಸೇವನೆಯನ್ನು ಬಿಟ್ಟೇ ಬಿಡುವುದು ಲೇಸು. ಆದರೆ ಒಂದು ನಿತ್ಯದ ಚಟವಾಗಿ ಪರಿಣಮಿಸಿರುವ ಕಾಫಿಯನ್ನು ಬಿಡುವುದು ಅಷ್ಟು ಸುಲಭವಲ್ಲದಿದ್ದರೆ ಈ ಪ್ರಮಾಣವನ್ನು ತಗ್ಗಿಸುವಲ್ಲಿಯಾದರೂ ಕ್ರಮ ಕೈಗೊಳ್ಳಬೇಕು.
ಈ ಸಂಶೋಧನೆಯಲ್ಲಿ 35-37 ವರ್ಷ ವಯಸ್ಸಿನ ನೂರು ವರ್ಷಕ್ಕೂ ಹೆಚ್ಚಿನ ಪುರುಷರನ್ನು ಸಮೀಕ್ಷೆಗೊಳಪಡಿಸಿ ಹಲವು ಪ್ರಯೋಗಗಳ ಮೂಲಕ ಈ ಅಂಕಿಅಂಶಗಳು ಸರಿ ಎಂದು ಕಂಡುಕೊಳ್ಳಲಾಗಿದೆ. ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರ ಯಾವುವು?
ಆದರೆ ಕೇವಲ ಕಾಫಿ ಬಿಟ್ಟುಬಿಡುವುದರಿಂದ ಸಂತಾನ ಫಲ ಹೆಚ್ಚುವುದಿಲ್ಲ, ಇದಕ್ಕಾಗಿ ಸೂಕ್ತ ವ್ಯಾಯಾಮ, ಉತ್ತಮ ಮತ್ತು ಪೌಷ್ಟಿಕ ಆಹಾರ ಸೇವನೆ, ಮಾದಕ ವಸ್ತುಗಳಿಂದ ದೂರವಿರುವುದು ಮೊದಲಾದವೂ ಸಂತಾನಫಲವನ್ನು ಹೆಚ್ಚಿಸಲು ನೆರವಾಗುತ್ತವೆ.



Click it and Unblock the Notifications




