For Quick Alerts
ALLOW NOTIFICATIONS  
For Daily Alerts

ವಯಸ್ಸಾದ ತಂದೆಗೆ ಜನಿಸಿದ ಮಗುವಿನ ಅಳುವಿನಲ್ಲಿ ಇರುತ್ತಂತೆ ವ್ಯತ್ಯಾಸ! ಏಕೆ?

|

ಹೆಣ್ಣಾಗಲಿ, ಗಂಡಾಗಲಿ ವಯಸ್ಸಾದಂತೆ ಅವರಲ್ಲಿ ಫಲವತ್ತತೆ ಅಂದರೆ ಮಗು ಮಾಡುವ ಸಾಮರ್ಥ್ಯ ಕಡಿಮೆಯಾಗುವುದು. ಇತ್ತೀಚಿನ ದಿನಗಳಲ್ಲಿ ಬಂಜೆತನ ಹೆಚ್ಚಾಗುತ್ತಿದೆ, ಈ ಸಮಸ್ಯೆಗೆ ಅಧಿಕ ವಯಸ್ಸು ತುಂಬಾನೇ ಪ್ರಮುಖ ಕಾರಣವಾಗಿದೆ. ದಂಪತಿ 30 ವರ್ಷದ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸಿದರೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದು, 40 ವರ್ಷದ ಬಳಿಕ ಈ ಸಾಧ್ಯತೆ ತುಂಬಾನೇ ಕಡಿಮೆಯಾಗುವುದು. ಒಂದು ವೇಳೆ ವಯಸ್ಸಾದ ಮೇಲೆ ಮಕ್ಕಳಾದರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ತುಂಬಾನೇ, ಇತ್ತೀಚೆಗೆ ನಡೆಸಿದ ಸಂಶೋಧನೆ ಮತ್ತೊಂದು ಆಸಕ್ತಿಕ ವಿಷಯ ಹೇಳಿದೆ, ವಯಸ್ಸಾದ ತಂದೆಗೆ ಜನಿಸಿದ ಮಗುವಿನ ಅಳುವಿನಲ್ಲಿ ವ್ಯತ್ಯಾಸವಿರುತ್ತದಂತೆ!

ಹಾಗಾದರೆ ವಯಸ್ಸಾದ ತಂದೆಯ ಮಗುವಿನ ಅಳುವಿನಲ್ಲಿ ಕಂಡು ಬರುವ ವ್ಯತ್ಯಾಸವೇನು, ಸಂಶೋಧನೆ ಏನು ಹೇಳಿದೆ ಎಂದು ನೋಡೋಣ ಬನ್ನಿ:

ಮಗುವಿನ ಅಳು

ಮಗುವಿನ ಅಳು

ಮಗುವಿಗೆ ಮಾತು ಬರುವವರೆಗೆ ಮಗು ಅಳುವಿನ ಮೂಲಕ ಸಂವಹನ ಮಾಡುತ್ತೆ. ಅದಕ್ಕೆ ನಿದ್ದೆ ಬಂದರೆ ಅಳುತ್ತೆ, ಹಸಿವಾದರೆ ಅಳುತ್ತೆ, ಏನಾದರೂ ಮೈ ಹುಷಾರಿಲ್ಲವೆಂದರೆ ಅಳುತ್ತೆ. ಹೀಗೆ ಅಳುವಿನ ಮೂಲಕ ಸಮವಹನ ಮಾಡುತ್ತೆ. ಮಗು ಅಳುವಾಗ ತಾಯಿಗೆ ಆ ಮಗು ಹಾಲಿಗಾಗಿ ಅಳುತ್ತಿದೆಯೇ ಅಥವಾ ನಿದ್ದೆಗಾಗಿ ಅಳುತ್ತಿದೆಯೇ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಯಿಂದಾಗಿ ಅಳುತ್ತಿದೆಯೇ ಎಂಬುವುದು ತಿಳಿಯುತ್ತದೆ.

ಆರೋಗ್ಯವಂತ ಮಗುವಿನ ಅಳುವಿನಲ್ಲೂ, ಆಟಿಸಂ ಇರುವ ಮಕ್ಕಳ ಅಳುವಿನಲ್ಲೂ ವ್ಯತ್ಯಾಸವಿರುತ್ತೆ

ಆರೋಗ್ಯವಂತ ಮಗುವಿನ ಅಳುವಿನಲ್ಲೂ, ಆಟಿಸಂ ಇರುವ ಮಕ್ಕಳ ಅಳುವಿನಲ್ಲೂ ವ್ಯತ್ಯಾಸವಿರುತ್ತೆ

ತಜ್ಞರ ಪ್ರಕಾರ ಮಗುವಿಗೆ ಮೆದುಳಿನ ನರದ ಬೆಳವಣಿಗೆ ಸಮಸ್ಯೆಯಿದ್ದರೆ ಅದರ ಅಳು ಆರೋಗ್ಯವಂತ ಮಗುವಿನ ಅಳುವಿಗಿಂತ ಭಿನ್ನವಾಗಿರುತ್ತದೆಯಂತೆ. ಆಟಿಸಂ ಸಮಸ್ಯೆ ಇರುವ ಮಗು ಹೆಚ್ಚಾಗಿ ಅಳುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ತಂದೆಯ ವಯಸ್ಸು ಹೆಚ್ಚಾದರೆ ಮಗುವಿನ ಆರೋಗ್ಯದ ಅಡ್ಡಪರಿಣಾಮ

ತಂದೆಯ ವಯಸ್ಸು ಹೆಚ್ಚಾದರೆ ಮಗುವಿನ ಆರೋಗ್ಯದ ಅಡ್ಡಪರಿಣಾಮ

ತಂದೆಗೆ ವಯಸ್ಸು ಹೆಚ್ಚಾದರೆ ಮಗುವಿನ ಮೆದುಳಿನ ನರದ ಬೆಳವಣಿಗೆ ಮೇಲೆ ಅಡ್ಡಪರಿಣಾಮ ಬೀರಬಹುದು. ವಯಸ್ಸಾದ ಪೋಷಕರಿಗೆ ಜನಿಸಿದ ಮಗುವಿನಲ್ಲಿ ನರದ ಬೆಳವಣಿಗೆಯ ತೊಂದರೆಗಳು (neurodevelopmental disorders) ಕಂಡು ಬರುವ ಸಾಧ್ಯತೆ ಹೆಚ್ಚು.

ಆಟಿಸಂ ಮಗುವಿನಲ್ಲಿ ಕಂಡು ಬರುವ ಲಕ್ಷಣಗಳು

ಆಟಿಸಂ ಮಗುವಿನಲ್ಲಿ ಕಂಡು ಬರುವ ಲಕ್ಷಣಗಳು

ಹೆಚ್ಚಾಗಿ ಪ್ರತಿಕ್ರಿಯಿಸಿದೆ ಇರುವುದು

ತುಂಬಾ ಅಳುವುದಿಲ್ಲ, ಹೆಚ್ಚು ದೈಹಿಕ ಚಟುವಟಿಕೆ ಇರುವುದಿಲ್ಲ. ಯಾವ ಮಗು ಮೊದಲ ವರ್ಷದಲ್ಲಿ ತುಂಬಾ ಅಳುತ್ತದೋ ಆ ಮಗು ತುಂಬಾನೇ ಹೈಪರ್ ಆಕ್ಟಿವ್ ಆಗಿರುತ್ತದೆ ಎಂದು ಸಂಶೋಧನೆ ಹೇಳಿದೆ.

English summary

Study Says Babies born to older fathers cry differently

Study Says Babies born to older fathers cry differently, why read on...
Story first published: Saturday, October 15, 2022, 9:39 [IST]
X
Desktop Bottom Promotion