Just In
Don't Miss
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- News
ಭೂತಾನ್ಗೆ 1.5 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನ ಉಡುಗೊರೆ ನೀಡಿದ ಭಾರತ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Automobiles
ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕ್ಕಳ ಸಂಜ್ಞಾ ಭಾಷೆ ತಿಳಿಯುವುದು ಹೇಗೆ?
ಮಕ್ಕಳೆಂದರೆ ಪ್ರೀತಿ, ಮಕ್ಕಳೆಂದರೆ ನಮ್ಮ ಜಗತ್ತು.ಪ್ರತಿ ತಾಯಿಯೂ ಕೂಡ ತನ್ನ ಮಗು ಮಾತನಾಡುವುದಕ್ಕಿಂತ ಮುಂಚೆ ಏನು ಹೇಳುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾಳೆ. ಈ ಸಮಯ ಪ್ರತಿ ತಾಯಿಗೆ ಮತ್ತು ಇಡೀ ಕುಟುಂಬದವರಿಗೆ ಬಹಳ ಕಿರಿಕಿರಿ ಅನ್ನಿಸುವ ಸಮಯವೇ ಸರಿ. ಯಾಕೆಂದರೆ ಮಗು ಏನನ್ನು ಬಯಸುತ್ತದೆ ಮತ್ತು ಮಗುವಿಗೆ ಏನು ಬೇಕಾಗಿದೆ ಅಥವಾ ಏನಾಗುತ್ತಿದೆ ಇತ್ಯಾದಿ ಎಲ್ಲವೂ ಕೂಡ ಸನ್ಹೆಗಳಿಂದ ಅಥವಾ ಅಳುವಿನಿಂದಲೇ ಕೂಡಿರುತ್ತದೆ. ಮಗು ಮಾತು ಕಲಿಯುವುದಕ್ಕಿಂತ ಮುಂಚೆ ಅದರ ಪ್ರತಿಕ್ರಿಯೆಯನ್ನು ಅರ್ಥೈಸಿಕೊಳ್ಳುವುದು ಒಂದು ಸವಾಲಿನ ಕೆಲಸ.
ಹಾಗಂತ ಇದು ಅಸಾಧ್ಯವಾದುದ್ದಲ್ಲ.ಮಗುವು ಮಾತು ಕಲಿಯುವುದಕ್ಕಿಂತ ಮುಂಚೆ ಹಲವು ಚಿಹ್ನೆಗಳನ್ನು ಅನುಸರಿಸುತ್ತದೆ. ನೀವು ಅದನ್ನು ಅರ್ಥಮಾಡಿಕೊಂಡರೆ ಖಂಡಿತ ನಿಮ್ಮ ಮಗುವಿಗೆ ಏನಾಗುತ್ತಿದೆ ಅಥವಾ ಮಗು ಏನನ್ನು ಬಯಸುತ್ತಿದೆ ಎಂಬುದನ್ನು ಬೇಗನೆ ಗ್ರಹಿಸಬಹುದು.

ಡನ್ ಸ್ಟ್ಯಾನ್ ಬಾಡಿ ಲಾಂಗ್ವೇಜ್
ಪ್ರಿಸ್ಸಿಲ್ಲಾ ಡನ್ ಸ್ಟ್ಯಾನ್ ಆಸ್ಟ್ರೇಲಿಯಾದ ಮಹಿಳೆಯಾಗಿದ್ದು ಡನ್ ಸ್ಟ್ಯಾನ್ ಬಾಡಿ ಲಾಂಗ್ವೇಜ್ ಎಂದು ಕರೆಯಾಗುವ ವಿಚಾರವನ್ನು ಪ್ರಸ್ತುತಪಡಿಸಿದ್ದಾಳೆ. ಹೇಗೆ ಮಾತನಾಡಬೇಕು ಎಂಬುದನ್ನು ನಿಮ್ಮ ಮಗು ಕಲಿಯುವುದಕ್ಕಿಂತ ಮುಂಚೆ ನಿಮ್ಮ ಮಗುವಿನ ಬಾಡಿ ಲಾಂಗ್ವೇಜ್ ನ್ನು ಇದು ವಿವರಿಸುತ್ತದೆ. ವಿಜ್ಞಾನಿಗಳು ಈ ವಿಚಾರದ ಬಗ್ಗೆ ಇನ್ನೂ ಕೂಡ ಕೆಲವು ಗೊಂದಲದಲ್ಲಿದ್ದರೂ ಕೂಡ ಪೋಷಕರಿಂದಾಗಿ ಈಕೆಯ ಈ ವಿಚಾರ ಮಂಡನೆ ಬಹಳ ಪ್ರಸಿದ್ಧಿ ಪಡೆದಿದೆ.

ಮಕ್ಕಳ ಅಳುವಿನ ಅರ್ಥವೇನು?
ಕರೆಯುವ ಅಳು
ನಿಮ್ಮ ಮಗು ಬಹಳ ಅಳುತ್ತಿರುತ್ತದೆ ಮತ್ತು ಕೂಡಲೇ 20 ಸೆಕೆಂಡ್ ಗಳ ಕಾಲ ಸುಮ್ಮನಿರುತ್ತದೆ ಮತ್ತು ಪುನಃ ಅಳಲು ಪ್ರಾರಂಭಿಸುತ್ತದೆ. ಆಗ ಮಗುವು ನಿಮ್ಮ ಗಮನವನ್ನು ಬಯಸುತ್ತಿದೆ ಎಂದರ್ಥ. ಅಂದರೆ ಮಗುವು ತನ್ನನ್ನ ಯಾರಾದರೂ ಎತ್ತಿಕೊಳ್ಳಬೇಕು ಎಂದು ಬಯಸುತ್ತಿರುತ್ತದೆ. ಒಂದು ವೇಳೆ ಸುತ್ತಲೂ ಯಾರೂ ಇಲ್ಲದಿದ್ದರೆ ಅಳು ಪುನಃ ಮುಂದುವರಿಯುತ್ತದೆ.

ಹಸಿವಿನ ಅಳು
ಒಂದು ವೇಳೆ ನಿಮ್ಮ ಮಗುವಿಗೆ ಹಸಿವೆಯಾಗಿದ್ದರೆ ಅಳು ನಿಲ್ಲುವುದೇ ಇಲ್ಲ. ಇದು ಉನ್ಮಾದ ತುಂಬಿದ ಅಳುವಾಗಿರುತ್ತದೆ ಮತ್ತು ತಲೆಯನ್ನು ಆಚೀಚೆ ಅಲುಗಾಡಿಸುತ್ತದೆ ಅಷ್ಟೇ ಅಲ್ಲ ತನ್ನ ತುಟಿಗಳಿಂದ ರುಚಿಯನ್ನು ಬಯಸುವಾಗ ಮಾಡುವ ಶಬ್ದವನ್ನು ಅಳುತ್ತಲೇ ಮಾಡುತ್ತದೆ.

ಅಸ್ವಸ್ಥತೆಯ ಅಳು
ನಿಮ್ಮ ಮಗು ಉಚ್ಚೆ ಮಾಡಿಕೊಂಡು ಅದರ ಚಡ್ಡಿ ಒದ್ದೆಯಾಗಿದ್ದರೆ ತಣ್ಣಗೆ ಅಥವಾ ಬಿಸಿಯ ಅನುಭವವಾಗಿ ಕಿರಿಕಿರಿ ಅನ್ನಿಸಿದಾಗ ಅಥವಾ ಇನ್ಯಾವುದೇ ಕಾರಣದಿಂದ ಮಗು ಕಂಫರ್ಟ್ ಆಗಿಲ್ಲದೆ ಇದ್ದರೆ ಆಗ ತನ್ನ ದೇಹವನ್ನು ತಿರುಗಿಸಿ ಅಳಲು ಪ್ರಾರಂಭಿಸುತ್ತದೆ.

ನೋವಿನ ಅಳು
ಮಗುವಿನ ನೋವಿನ ಅಳು ಸಾಮಾನ್ಯವಾಗಿ ಜೋರಾಗಿರುತ್ತದೆ. ಸಮಯ ಮತ್ತು ಜೋರಿನಿಂದಾಗಿ ಈ ಅಳು ಎಲ್ಲಕ್ಕಿಂತ ವಿಭಿನ್ನವಾಗಿರುತ್ತದೆ. ಇತರೆ ಅಳುವಿನಿಂದ ಈ ಅಳು ಭಿನ್ನವಾಗಿರುವುದರಿಂದಾಗಿ ಗೊಂದಲವಾಗುವುದೇ ಬೇಡ.

ನಿದ್ದೆಯ ಅಳು
ಮಗುವು ನಿದ್ದೆ ಮಾಡಲು ಬಯಸುತ್ತಿದ್ದರೆ ಆಗಲೂ ಕೂಡ ವಿಭಿನ್ನವಾಗಿ ಅಳುತ್ತದೆ.ಕಣ್ಣನ್ನು ಉಜ್ಜಿಕೊಳ್ಳುತ್ತಾ ಅಳುವುದು,ಕಿವಿಯನ್ನು ಉಜ್ಜಿಕೊಳ್ಳುವುದು,ಆಕಳಿಸುತ್ತಾ ಅಳುವುದನ್ನು ಗಮನಿಸಿದರೆ ಕೂಡಲೇ ಮಗುವನ್ನು ಹಾಸಿಗೆಗೆ ಕರೆದುಕೊಂಡು ಹೋಗಬೇಕು ಎಂದೇ ಅರ್ಥ.

ವಾತಾವರಣದ ಅಳು
ಒಂದು ವೇಳೆ ನಿಮ್ಮ ಮಗುವಿಗೆ ತಾನಿರುವ ಜಾಗ ಬೋರ್ ಎನ್ನಿಸುತ್ತಿದ್ದರೆ ಅಥವಾ ತಾವಿರುವ ಜಾಗ ಅವರಿಗೆ ಅಷ್ಟು ಹಿತವೆನ್ನಿಸಿದೇ ಇದ್ದರೆ ಅವು ನಿಮ್ಮ ಗಮನ ಸೆಳೆಯುವುದಕ್ಕೆ ಪ್ರಯತ್ನಿಸುತ್ತದೆ.ಅವರಿಗೆ ಸೇಫ್ ಅನ್ನಿಸುವ ಅಥವಾ ಸುರಕ್ಷಿತವೆನ್ನಿಸುವ ಜಾಗಕ್ಕೆ ಕರೆದುಕೊಂಡು ಹೋಗುವವರೆಗೂ ಅಳುತ್ತವೆ.

ದೈಹಿಕ ಭಾಷೆಗಳು
ಬೆನ್ನಿನ ಭಾಗ ತಿರುಗಿಸುವಿಕೆ
ಎರಡು ತಿಂಗಳಾಗಿರುವ ಮಗು ಸಾಮಾನ್ಯವಾಗಿ ಹೀಗೆ ತನ್ನ ಬೆನ್ನನ್ನು ತಿರುಗಿಸುತ್ತದೆ. ಎರಡು ತಿಂಗಳ ನಂತರ ಹೀಗೆ ಮಾಡುವ ಮಗು ನಿದ್ದೆಗಾಗಿಯೂ ಮಾಡಬಹುದು ಅಥವಾ ಯಾವುದೋ ಸರಿಹೊಂದುತ್ತಿಲ್ಲ ಎನ್ನಿಸಿದಾಗಲೂ ಮಾಡುವ ಸಾಧ್ಯತೆ ಇರುತ್ತದೆ.

ಬಿಗಿಹಿಡಿದ ಮುಷ್ಟಿ
ಮಗುವು ಬಿಗಿ ಮುಷ್ಟಿ ಕಟ್ಟಿದರೆ ಮಗುವಿಗೆ ಹಸಿವಾಗಿದೆ ಎಂದು ಭಾವಿಸಬಹುದು. ಅದನ್ನು ನೀವು ಆಗಾಗ ಗಮನಿಸಿ ಹಾಲುಣಿಸುವುದರಿಂದಾಗಿ ಮಕ್ಕಳ ಹಸುವಿನ ಅಳುವನ್ನು ತಡೆಯಬಹುದು.
aಕಿವಿಯನ್ನು ಎಳೆದುಕೊಳ್ಳುವುದು:ಕಿವಿಯನ್ನು ಆಗಾಗ ಮಗುವು ಎಳೆಯುತ್ತಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ. ಅದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ ಪದೇ ಪದೇ ನಡೆಯುತ್ತಿದ್ದರೆ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬಹುದು.

ತಲೆಯನ್ನು ತಿರುಗಿಸುವುದು
ನಿದ್ದೆಯ ಸಮಯದಲ್ಲಿ ಮಗುವು ತನ್ನ ತಲೆಯನ್ನು ತಿರುಗಿಸುವುದಕ್ಕೆ ಪ್ರಯತ್ನಿಸುತ್ತದೆ. ಅವರನ್ನು ನಿದ್ದೆಗೆ ತಳ್ಳುವುದರಿಂದಾಗಿ ನೀವು ಈ ಅಳು ಅಥವಾ ಸಮಾಧಾನಿಸುವುದಕ್ಕೆ ಸಾಧ್ಯವಾಗುತ್ತದೆ.

ಕಾಲನ್ನು ಎಳೆದು ಹಿಡಿದುಕೊಳ್ಳುವುದು
ಹೊಟ್ಟೆ ನೋವು ಅಥವಾ ಗ್ಯಾಸ್ ನಿಂದಾಗಿ ಮಗು ಸಾಮಾನ್ಯವಾಗಿ ತನ್ನ ಕಾಲನ್ನು ಬರಸೆಳೆದು ಹಿಡಿದುಕೊಳ್ಳುತ್ತದೆ. ಹೀಗೆ ಕಾಲನ್ನು ಎತ್ತಿಕೊಳ್ಳುವುದರಿಂದಾಗಿ ಕೆಲ ಸಮಯಕ್ಕೆ ಮಗುವಿಗೆ ರಿಲ್ಯಾಕ್ಸ್ ಆಗುತ್ತದೆ.ಇದು ಸಮಸ್ಯೆಯಂತೆ ಯಾವಾಗಲೂ ಆಗುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಬಹುದು.

ತೋಳನ್ನು ಬೆದರಿದಂತೆ ಮಾಡುವುದು
ಲೈಟ್ ಆನ್ ಮಾಡಿದಾಗ ಅಥವಾ ದೊಡ್ಡ ಶಬ್ದಕ್ಕೆ ಮಲಗಿದ ಮಗು ಸಡನ್ ಆಗಿ ಏಳುವಾಗ ಹೀಗೆ ತೋಳನ್ನು ಬೆದರಿದಂತೆ ಅಲುಗಾಡಿಸಿ ಏಳುತ್ತವೆ.

ಇತರೆ ಕೆಲವು ಮಗುವಿನ ಶಬ್ದಗಳ ಅರ್ಥವೇನು?
ಇ
ಬರಸೆಳೆದು ಎತ್ತಿಕೊಳ್ಳುವ ಅಗತ್ಯವಿದೆ ಎಂಬುದರ ಸಂಕೇತವಾಗಿದೆ. ಅನ್ನನಾಳದಲ್ಲಿ ಗಾಳಿಯಿಂದಾಗಿ ಒಮ್ಮೊಮ್ಮೆ ಈ ಶಬ್ಧವು ತನ್ನಷ್ಟಕ್ಕೇ ತಾನೇ ಬರುವ ಸಾಧ್ಯತೆಯೂ ಇದೆ.

ಹೇ
ನಿಮ್ಮ ಮಗು ಯಾವುದೋ ರೀತಿಯ ಅಸ್ವಸ್ಥತೆಯನ್ನು ಅನುಭವಿಸುತ್ತಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಕೈಗಳನ್ನು ಮತ್ತು ಪಾದಗಳನ್ನು ಒಟ್ಟಿಗೆ ಸೇರಿಸುತ್ತಾ ಅಳುತ್ತವೆ.

ಓಹ್
ಈ ರೀತಿಯ ಶಬ್ದ ಮಾಡುತ್ತಾ ಮಗುವು ತುಟಿಗಳನ್ನು ಮಡಚಿದರೆ ಮಗುವಿಗೆ ಸುಸ್ತಾಗಿದೆ ಮತ್ತು ನಿದ್ದೆ ಬರುತ್ತಿದೆ ಎಂದರ್ಥ.

ಏಯ್
ಹೊಟ್ಟೆ ನೋವು, ಬ್ಲೋಟಿಂಗ್ ಅಥವಾ ಗ್ಯಾಸ್ಟ್ರಿಂಕ್ ನಿಂದಾಗಿ ನಿಮ್ಮ ಸಮಸ್ಯೆಯಲ್ಲಿದ್ದರೆ ಈ ರೀತಿಯ ಶಬ್ದವನ್ನು ಮಾಡುತ್ತವೆ.

ನೇಯ್
ಈ ಶಬ್ದವು ಮಗುವಿನ ಹಸಿವೆಯ ಸಂಕೇತವಾಗಿದೆ.ಈ ಸಮಯದಲ್ಲಿ ಮಗುವು ತನ್ನ ನಾಲಗೆಯನ್ನು ಬಾಯಿಯ ಮೇಲ್ಬಾಗಕ್ಕೆ ತಾಗಿಸುತ್ತಾ ಅಳುತ್ತವೆ.