For Quick Alerts
ALLOW NOTIFICATIONS  
For Daily Alerts

ಚಿಕ್ಕ ಮಕ್ಕಳಲ್ಲಿ ಬಾಯಿಹುಣ್ಣು ಸಮಸ್ಯೆಗೆ ಮನೆಮದ್ದು

|

ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಬಾಯಿ ಹುಣ್ಣಿನ ಸಮಸ್ಯೆ ಕಂಡು ಬರುವುದು. ಮಕ್ಕಳ ಬಾಯಿಗೆ ಮುತ್ತಿಕ್ಕುವುದರಿಂದ ಹಾಗೂ ಎದೆ ಹಾಲಿನ ಮೂಲಕ ಕೂಡ ಈ ಸಮಸ್ಯೆ ಉಂಟಾಗುವುದು.

ಇದನ್ನು ವೈದ್ಯರು ಓರಲ್‌ ಥ್ರೆಷ್ ಅಂತಾರೆ. ಮಕ್ಕಳಿಗೆ ಈ ರೀತಿಯಾದಾಗ ಅವರಿಗೆ ಹಾಲು ಕುಡಿಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ವಿಪರೀತ ಅಳುತ್ತವೆ. ಕೆಲವೊಂದು ಮಕ್ಕಳಲ್ಲಿ ಇದು ಕಾಣಿಸಿದಾಗ ಹಾಗೆಯೇ ಹೋಗುತ್ತದೆ, ಇನ್ನು ಕೆಲವರಿಗೆ ಚಿಕಿತ್ಸೆ ಮಾಡಬೇಕಾಗುತ್ತದೆ.

Home Remedies For Oral Thrush In Babies

ಶಿಶುಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತವೆ. ಹೀಗಾದಾಗ ಮಕ್ಕಳು ಹಾಲು ಕುಡಿಯುವಾಗ ತುಂಬಾ ಅಳುತ್ತವೆ, ಬಾಯಿಯೊಳಗೆ ನಾಲಗೆ ಹಾಗೂ ಕೆನ್ನೆಯಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಎದ್ದಿರುತ್ತವೆ. ಹೀಗೆ ಉಂಟಾದಾಗ ವೈದ್ಯರು ನೀಡುವ ಮುಲಾಮು ಹಚ್ಚಿದರೆ ಕಡಿಮೆಯಾಗುವುದು.

ಕೆಲವೊಂದು ಮನೆಮದ್ದುಗಳು ಕೂಡ ಮಕ್ಕಳಲ್ಲಿ ಉಂಟಾಗುವ ಈ ರೀತಿಯ ಸಮಸ್ಯೆ ಹೋಗಲಾಡಿಸಲು ಸಹಕಾರಿ.

ಸೂಚನೆ: ಏನೇ ಮನೆಮದ್ದು ಮಾಡುವುದಾದರೂ ವೈದ್ಯರ ಸಲಹೆ ಪಡೆಯಿರಿ.

ಮೊಸರು

ಮೊಸರು

ನಿಮ್ಮ ಮಗು ಆಹಾರ ಸೇವಿಸಲು ಪ್ರಾರಂಭಿಸಿದ್ದರೆ ಅದಕ್ಕೆ ಸಕ್ಕರೆ ಹಾಕದ ಮೊಸರು ನೀಡಿದರೆ ಬಾಯಿ ಸ್ವಾಸ್ಥ್ಯ ಹೆಚ್ಚುವುದು ಹಾಗೂ ಈ ಸಮಸ್ಯೆ ಇಲ್ಲವಾಗುವುದು. ಮಕ್ಕಳಿಗೆ ಹೊರಗಡೆಯ ಆಹಾರ ಹಾಕಲು 6 ತಿಂಗಳು ತುಂಬಿರಬೇಕು. ಅದಕ್ಕಿಂತ ಮೊದಲು ಬರೀ ತಾಯಿ ಹಾಲು ಮಾತ್ರ ನೀಡಬೇಕು.

ತಾಯಿ ಸಕ್ಕರೆ ಕಡಿಮೆ ತಿನ್ನಬೇಕು

ತಾಯಿ ಸಕ್ಕರೆ ಕಡಿಮೆ ತಿನ್ನಬೇಕು

ನೀವು ಎದೆ ಹಾಲುಣಿಸುತ್ತಿದ್ದರೆ ಸಕ್ಕರೆಯಂಶ ಹಾಗೂ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಗ್ಲೂಕೋಸ್‌ ಹಾಗೂ ಬಾಯಿ ಹುಣ್ಣಿಗೆ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ.

ಸಿಹಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ ಮಕ್ಕಳಲ್ಲಿ ಓರಲ್‌ ಥ್ರಷ್ ಉಂಟಾಗುವುದನ್ನು ತಡೆಯಬಹುದು.

ತಾಯಿ ಔಷಧಿ ಸೇವಿಸುತ್ತಿದ್ದರೆ

ತಾಯಿ ಔಷಧಿ ಸೇವಿಸುತ್ತಿದ್ದರೆ

ಎದೆ ಹಾಲು ಕುಡಿಯುವ ಮಕ್ಕಳಲ್ಲಿ ಓರಲ್ ಥ್ರಷ್ ಹೆಚ್ಚಾಗಿ ಕಂಡು ಬರುತ್ತದೆ. ಶೇ. 34.55ರಷ್ಟು ಓರಲ್ ಥ್ರಷ್ ಎದೆಹಾಲಿನಿಂದ ಶೇ.66.67ರಷ್ಟು ಬಾಟಲಿ ಹಾಲು ಕುಡಿಯುವುದರಿಂದ ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಮೊಲೆತೊಟ್ಟಿನಲ್ಲಿರುವ ಶಿಲೀಂಧ್ರಗಳಿಂದಲೂ ಮಕ್ಕಳಿಗೆ ಬಾಯಿಹುಣ್ಣು ಉಂಟಾಗುತ್ತದೆ. ಎದೆ ಹಾಲುಣಿಸುವಾಗ ನಿಮ್ಮ ಸ್ತನದಲ್ಲಿ ತುರಿಕೆ ಮತ್ತಿತರ ವ್ಯತ್ಯಾಸ ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಿ. ಇದರಿಂದ ಮಗುವಿನಲ್ಲಿ ನಬಾಯಿ ಹುಣ್ಣು ಉಂಟಾಗುವುದನ್ನು ತಡೆಯಬಹುದು.

ಶುಚಿತ್ವ ಕಾಪಾಡಿ

ಶುಚಿತ್ವ ಕಾಪಾಡಿ

ಮಗುವನ್ನು ಮುಟ್ಟುವಾಗ, ಅದನ್ನು ಮಲಗಿಸುವ, ಓಡಾಡುವ ಸ್ಥಳ ಶುಚಿಯಾಗಿರಲಿ. ಮಗುವಿಗೆ ಹಾಲುಣಿಸುವ ಮುನ್ನ ಮೊಲೆತೊಟ್ಟು ತೊಳೆದು ಕೊಡಿ. ಮಕ್ಕಳು ಸಿಕ್ಕಿದ್ದೆಲ್ಲಾ ಬಾಯಿಗೆ ಹಾಕುತ್ತವೆ, ಕೈ ಬಾಯಿಗೆ ಹಾಕುವ ಅಭ್ಯಾಸವಿರುತ್ತದೆ. ಆದ್ದರಿಂದ ಕೈ ಶುಚಿತ್ವ ಕಡೆ ಗಮನ ನೀಡಿ.

ಸೂಚನೆ: ಮಕ್ಕಳಿಗೆ ಯಾವುದೇ ಮನೆಮದ್ದು ಮಾಡುವುದಾದರೆ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಮಾಡಿ.

English summary

Home Remedies For Oral Thrush In Babies

Oral thrush is a common name for oral candidiasis which is an infection of the mouth by a fungus known as Candida albicans. Oral thrush can be transmitted through breastfeeding or by kissing.
Story first published: Wednesday, April 8, 2020, 13:31 [IST]
X
Desktop Bottom Promotion