For Quick Alerts
ALLOW NOTIFICATIONS  
For Daily Alerts

ಸಣ್ಣ ಮಗುವಿಗೆ ಅಪ್ಪಿತಪ್ಪಿಯೂ ಇಂತಹ ಆಹಾರಗಳನ್ನು ನೀಡಬೇಡಿ

By Hemanth
|

ಶಿಶುವಿನ ಆರೈಕೆಯು ತಾಯಿಗೆ ದೊಡ್ಡ ಸವಾಲಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ಮೊದಲ ಆರು ತಿಂಗಳಲ್ಲಿ ಕೇವಲ ಎದೆಹಾಲಿನ ಮೂಲಕವೇ ಮಗುವನ್ನು ಸಲಹಬೇಕಾಗಿದೆ. ಮಗುವಿನ ಆರೋಗ್ಯ ಹಾಗೂ ಬಟ್ಟೆಬರೆಯ ಬಗ್ಗೆ ಸೂಕ್ತ ಕಾಳಜಿ ವಹಿಸುವುದು ಅಷ್ಟೇ ಅಗತ್ಯ. ಮಗುವಿನ ಆರೋಗ್ಯ ಮತ್ತು ಪ್ರತಿರೋಧಕ ಶಕ್ತಿ ಬಗ್ಗೆ ಗಮನಹರಿಸುವುದು ಅತೀ ಅಗತ್ಯವಾಗಿರುವುದು. ಆದರೆ ಕೆಲವೊಂದು ಸಲ ನಾವು ಮಗುವಿನ ಆಹಾರ ಕ್ರಮದ ಬಗ್ಗೆ ತುಂಬಾ ನಿರ್ಲಕ್ಷ್ಯ ವಹಿಸುತ್ತೇವೆ. ಮೊದಲ ಮೂರು ತಿಂಗಳಲ್ಲಿ ಮಗು ಕೇವಲ ತಾಯಿ ಹಾಲಿನೊಂದಿಗೆ ಬದುಕುವುದು.

ಇದರ ಬಳಿಕ ಸಾಮಾನ್ಯವಾಗಿ ಕೆಲವೊಂದು ಆಹಾರ ನೀಡಬಹುದು. ಮಗುವಿನ ಆಹಾರದಲ್ಲಿ ಆರು ತಿಂಗಳ ಬಳಿಕ ಧಾನ್ಯಗಳು ಹಾಗೂ ಕೆಲವು ಮೊಳಕೆ ಕಾಳುಗಳನ್ನು ಬಳಸಿಕೊಳ್ಳಬೇಕು. ಇದರ ಬಳಿಕ ಮಗು ಆಹಾರ ಹೆಚ್ಚು ಸೇವನೆ ಮಾಡಿ, ಹಾಲು ಕಡಿಮೆ ಮಾಡುವುದು. ಇದು ಆರೋಗ್ಯಕರ ಮಗುವಿನ ಲಕ್ಷಣ. ಆದರೆ ಕೆಲವೊಂದು ಆಹಾರಗಳನ್ನು ಮಗುವಿನ ನೀಡಲೇಬಾರದು. ಒಂದು ವರ್ಷದ ತನಕ ಕೆಲವು ಮಕ್ಕಳಿಗೆ ಕೆಲವೊಂದು ರೀತಿಯ ಆಹಾರ ನೀಡಬಹುದು. ಅಂತಹ ಆಹಾರಗಳು ಯಾವುದು ಎಂದು ತಿಳಿಯಿರಿ.

food feeding to baby

ಬೀಜಗಳು ಮತ್ತು ನೆಲಕಡಲೆ ಬೆಣ್ಣೆ
ಮನೆಯಲ್ಲಿರುವಂತಹ ದೊಡ್ಡ ಮಕ್ಕಳು ನೆಲಗಡಲೆ ಬೆಣ್ಣೆ ತಿನ್ನಲು ಹೆಚ್ಚು ಇಷ್ಟಪಡುತ್ತಿರುವಂತೆ ಸಣ್ಣ ಮಕ್ಕಳಿಗೂ ನೀವು ಇದನ್ನು ನೀಡಲು ಹೋಗಬೇಡಿ. ಈ ವಿಷಯದಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಮಕ್ಕಳಿಗೆ ಬೀಜಗಳು ಮತ್ತು ನೆಲಗಡಲೆಯು ಅಲರ್ಜಿ ಉಂಟು ಮಾಡಬಹುದು. ಇದು ಮಗುವಿಗೆ ತುಂಬಾ ಅಪಾಯಕಾರಿ ಅಲರ್ಜಿಯಾಗಿ ಕಾಡಬಹುದು. ಇದರಿಂದ ನೀವು ಮಗುವಿಗೆ ಇಂತಹ ಆಹಾರ ನೀಡುವ ಮೊದಲು ಪರೀಕ್ಷಿಸಿಕೊಳ್ಳುವುದು ಅಗತ್ಯ.

ಮೀನುಗಳು
ಮೀನುಗಳು ಹಾಗೂ ಸಮುದ್ರದ ಆಹಾರವು ಕೆಲವು ಕುಟುಂಬಗಳಿಗೆ ಅಲರ್ಜಿ ಉಂಟು ಮಾಡುವುದು. ಇದರಿಂದ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಇಂತಹ ಅಲರ್ಜಿ ಇದ್ದರೆ ನೀವು ಇಂತಹ ಆಹಾರ ನೀಡುವ ಮೊದಲು ಮಕ್ಕಳ ತಜ್ಞರಿಂದ ಸಲಹೆ ಪಡೆಯುವುದು ಅತೀ ಅಗತ್ಯ. ಕೆಲವರಿಗೆ ಮಕ್ಕಳಿರುವಾಗ ಮೀನುಗಳಿಂದ ಅಲರ್ಜಿ ಬರುವುದು. ಆದರೆ ಬೆಳೆಯುತ್ತಾ ಹೋದಂತೆ ಅದು ಕಡಿಮೆಯಾಗುವುದು. ಇದರಿಂದ ಮಗುವಿಗೆ ಒಂದು ವರ್ಷ ಆಗುವ ತನಕ ಮೀನುಗಳನ್ನು ನೀಡಬೇಡಿ.

ಜೇನುತುಪ್ಪ
ಕ್ಲಾಸ್ಟ್ರಿಡಿಯಮ್ ಬೊಟೊಲಿನಮ್ ಎನ್ನುವ ಬ್ಯಾಕ್ಟೀರಿಯಾವು ಜೇನುತುಪ್ಪದಲ್ಲಿ ಹೇರಳವಾಗಿರುವುದು. ಇದರಿಂದ ಬೊಟೊಲಿಸಂ, ಸ್ನಾಯು ಪಾರ್ಶ್ವವಾಯು ಮತ್ತು ಇತರ ಕೆಲವೊಂದು ಗಂಭೀರ ರೋಗಗಳು ಕಾಣಿಸಬಹುದು. ದೊಡ್ಡವರಲ್ಲಿ ದೇಹದ ಪ್ರತಿರೋಧಕ ಶಕ್ತಿಯು ಹೆಚ್ಚಾಗಿರುವ ಕಾರಣದಿಂದಾಗಿ ಇಂತಹ ಸಮಸ್ಯೆಯು ಅವರನ್ನು ಕಾಡದು. ಇದರಿಂದಾಗಿ ಸಣ್ಣ ಮಕ್ಕಳಿಗೆ ಜೇನುತುಪ್ಪ ಕೊಡಲು ಹೋಗಬೇಡಿ. ಮಗುವಿಗೆ ಒಂದು ವರ್ಷವಾದ ಬಳಿಕವಷ್ಟೇ ಇದನ್ನು ನೀಡಿ. ಈ ವೇಳೆ ಅವರ ಪ್ರತಿರೋಧಕ ಶಕ್ತಿಯು ಕ್ಲಾಸ್ಟ್ರಿಡಿಯಮ್ ವಿರುದ್ಧ ಹೋರಾಡುವಷ್ಟು ಬಲಿಷ್ಠವಾಗಿರುವುದು.

ಚಾಕಲೇಟ್
ಸಣ್ಣ ಮಕ್ಕಳಿಗೆ ಚಾಕಲೇಟ್ ಎಂದರೆ ಪಂಚಪ್ರಾಣ. ಹೀಗಾಗಿ ಅವರಿಂದ ಇದನ್ನು ದೂರವಿರುಡುವುದ ತುಂಬಾ ಕಷ್ಟದ ಕೆಲಸ. ಆದರೆ ಚಾಕಲೇಟ್ ನಲ್ಲಿ ಕೆಫಿನ್ ಅಂಶವು ಹೆಚ್ಚಾಗಿದ್ದು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದನ್ನು ನೀಡುವುದು ಅಪಾಯಕಾರಿ. ಒಂದು ವರ್ಷ ಕಳೆದ ಬಳಿಕ ಕೂಡ ಮಕ್ಕಳಿಗೆ ಯಾವಾಗಲೊಮ್ಮೆ ಮಾತ್ರ ಚಾಕಲೇಟ್ ನೀಡಿ. ಚಾಕಲೇಟ್ ನಲ್ಲಿರುವಂತಹ ಅತಿಯಾದ ಸಕ್ಕರೆಯಂಶವು ಮಕ್ಕಳಿಗೆ ಕೆಟ್ಟದು.

ದನದ ಹಾಲು
ಹಾಲಿನ ಉತ್ಪನ್ನಗಳಲ್ಲಿ ಹಲವಾರು ರೀತಿಯ ಪ್ರೋಟೀನ್ ಗಳು ಮತ್ತು ಖನಿಜಾಂಶಗಳು ಇರುವುದು. ಈ ಪೋಷಕಾಂಶಗಳು ದೊಡ್ಡವರಿಗೆ ಒಳ್ಳೆಯದು. ಆದರೆ ಮಕ್ಕಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದು. ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಮಗುವಿನ ಕಿಡ್ನಿ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಮಗುವಿನ ಬೆಳವಣಿಗೆಗೆ ಬೇಕಾಗಿರುವ ಪರಿಣಾಕಾರಿ ಪೋಷಕಾಂಶಗಳು ದನದ ಹಾಲಿನಲ್ಲಿಲ್ಲ. ಇದರಿಂದ ಮಕ್ಕಳಿಗೆ ದನದ ಹಾಲು ನೀಡಬೇಡಿ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಎದೆಹಾಲು ಸೂಕ್ತ
ಐದರಿಂದ ಆರು ತಿಂಗಳ ನಂತರ-ಮಗುವಿನ ಆಹಾರ-ಕ್ರಮ ಹೀಗಿರಲಿ

ಪಿಯರ್ಸ್ ಹಣ್ಣಿನ ಆಹಾರ
ಪಿಯರ್ಸ್ ಹಣ್ಣಿನಲ್ಲಿ ವಿಟಮಿನ್ ಸಿ, ಎ, ಮೆಗ್ನಿಶಿಯಂ, ಕ್ಯಾಲ್ಸಿಯಂ ಮತ್ತು ಹಲವಾರು ರೀತಿಯ ಪೋಷಕಾಂಶಗಳು ಇದೆ. ಮೊದಲು ಇದರ ಸಿಪ್ಪೆ ತೆಗೆದು ತುಂಡುಗಳನ್ನಾಗಿ ಮಾಡಿಕೊಂಡು, ಒಳಗಿನ ಭಾಗವನ್ನು ತೆಗೆಯಿರಿ, ಬಳಿಕ ತುಂಡುಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ತದನಂತರ ಮಿಕ್ಸಿಗೆ ಹಾಕಿ ರುಬ್ಬಿ ನಯವಾದ ಪೇಸ್ಟ್ ರೀತಿ ಮಾಡಿ ಮಗುವಿಗೆ ನೀಡಿ.

ಆವಕಾಡೊ
ಇದು ಮಕ್ಕಳಿಗೆ ಮೊದಲ ಸಲ ನೀಡಬಹುದಾದ ಆರೋಗ್ಯಕರ ಆಹಾರವಾಗಿದೆ. ಇದರಲ್ಲಿ ಕೊಬ್ಬಿನಾಮ್ಲ ಸಮೃದ್ಧವಾಗಿದೆ ಮತ್ತು ಹಲವಾರು ರೀತಿಯ ಪೋಷಕಾಂಶಗಳು ಇದೆ. ಇದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅವಕಾಡೊ ತುಂಬಾ ಮೃಧುವಾಗಿರುವ ಕಾರಣ ಸುಲಭವಾಗಿ ಜೀರ್ಣವಾಗಬಲ್ಲದು. ಅವಕಾಡೊದ ಸಿಪ್ಪೆ ತೆಗೆದು ಅದರ ತಿರುಳನ್ನು ಹೊರಗೆ ತೆಗೆಯಿರಿ. ಇದನ್ನು ಚಮಚದಿಂದ ಸರಿಯಾಗಿ ಹಿಚುಕಿಕೊಳ್ಳಿ. ಇದು ತುಂಬಾ ಮೃದುವಾಗಿರುವ ಕಾರಣದಿಂದ ಬೇಯಿಸುವ ಅಗತ್ಯವಿಲ್ಲ. ಎದೆಹಾಲು ಅಥವಾ ಸಾಮಾನ್ಯ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.ಅವಕಾಡೊದಲ್ಲಿ ಉನ್ನತ ಮಟ್ಟದ ವಿಟಮಿನ್ ಹಾಗೂ ಖನಿಜಾಂಶಗಳಾದ ವಿಟಮಿನ್ ಎ, ಸಿ ಮತ್ತು ಫಾಲಟ್, ನಿಯಾಸಿನ್, ಪೊಟಾಶಿಯಂ, ಕ್ಯಾಲ್ಸಿಯಂ, ಕಬ್ಬಿನ ಇತ್ಯಾದಿ ಲಭ್ಯವಿದೆ.

ಬಾಳೆಹಣ್ಣು
ಇದು ಬೇಗನೆ ಜೀರ್ಣಗೊಳ್ಳುತ್ತದೆ...ಅಲ್ಲದೆ ಇದು ಮಕ್ಕಳಿಗೆ ಹೇಳಿಮಾಡಿಸಿದಂತಹ ಆಹಾರವಾಗಿದೆ. ಹಣ್ಣಾಗಿರುವ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಇದನ್ನು ಬೇಯಿಸುವ ಅಗತ್ಯವಿಲ್ಲ, ಬಾಳೆಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿಕೊಂಡು ಸರಿಯಾಗಿ ರುಬ್ಬಿಕೊಳ್ಳಿ ಮತ್ತು ಚಮಚದಿಂದ ಇದನ್ನು ಸರಿಯಾಗಿ ಹಿಚುಕಿ. ಬಾಳೆಹಣ್ಣನ್ನು ತುಂಬಾ ಮೃದುವಾಗಿಸಲು 25 ನಿಮಿಷ ಕಾಲ ಇದನ್ನು ಮೈಕ್ರೋವೇವ್ ನಲ್ಲಿಡಿ. ಈ ಮಿಶ್ರಣಕ್ಕೆ ಎದೆಹಾಲು ಅಥವಾ ಸಾಮಾನ್ಯ ಹಾಲು ಹಾಕಿ, ಮಗುವಿಗೆ ತಿನ್ನಿಸಿ

ಕಂದು ಅಕ್ಕಿಯ ಸಿರೇಲ್
¼ ಭಾಗ ಕಂದು ಅಕ್ಕಿಯ ಹುಡಿಯನ್ನು ಒಂದು ಕಪ್ ಹಾಲಿನೊಂದಿಗೆ ಹಾಕಿ ಮಿಶ್ರಣ ಮಾಡಿ. ಹಾಲನ್ನು ಬಿಸಿ ಮಾಡಿ ಮತ್ತು ಅದಕ್ಕೆ ಅಕ್ಕಿ ಹುಡಿಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಬೆಂಕಿಯನ್ನು ಸ್ವಲ್ಪ ಕಡಿಮೆ ಮಾಡಿ. ಇದಕ್ಕೆ ಎದೆಹಾಲು ಅಥವಾ ಸಾಮಾನ್ಯ ಹಾಲು ಹಾಕಿಕೊಳ್ಳಿ.

English summary

Baby Foods To Avoid In The First Year

From the moment our child is born, we work and we strive to ensure that we give only the best to our child. Be it the food that we give them or the clothes that they are made to wear, as parents, we go to any level to ensure that our child is given nothing less than the best. Now, while things like health care and immunization are things we do not take a chance with, the fact is that we often end up neglecting the very foundation of health; i.e., the dietary habits of our little one.
X
Desktop Bottom Promotion