For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಬೆಳವಣಿಗೆಗೆ 4 ಪೌಷ್ಠಿಕ ಆಹಾರ

|
Best Food For Baby
ಮಕ್ಕಳಿಗೆ ಒಂದು ವರ್ಷ ಆಗುತ್ತಿದ್ದ ಹಾಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸುತ್ತಾರೆ ಇಂದು ವೇಳೆ ಕೊಟ್ಟರೂ ಸಹ ಅದು ಮಕ್ಕಳ ಹೊಟ್ಟೆ ತುಂಬಲು ಸಾಕಾಗುವುದಿಲ್ಲ.

ಆದರೆ ಎಲ್ಲಾ ರೀತಿಯ ಆಹಾರವನ್ನು ಮಕ್ಕಳಿಗೆ ಕೊಡಲು ಸಾಧ್ಯವಿಲ್ಲ. ಏಕೆಂದರೆ ಅವು ಮಕ್ಕಳಲ್ಲಿ ಅಲರ್ಜಿ, ಹೊಟ್ಟೆನೋವು, ಬೇಧಿ ಮುಂತಾದ ಸಮಸ್ಯೆಯನ್ನು ತರುತ್ತದೆ. ಆದರೆ ಈ ಕೆಳಗಿನ ಆಹಾರಗಳು ಮಕ್ಕಳ ಹೊಟ್ಟೆ ತುಂಬಿಸುವುದರ ಜೊತೆಗೆ, ಬೆಳವಣಿಗೆಗೆ ಸಹಾಯ ಮಾಡುತ್ತದೆ.

1. ಹಸುವಿನ ಹಾಲು:
ಮಗುವಿಗೆ ಹಸುವಿನ ಹಾಲನ್ನು ಕೊಡುವುದರಿಂದ ಅದು ಮಕ್ಕಳ ದೇಹಕ್ಕೆ ಅವಶ್ಯಕವಿರುವ ಪೋಷಕಾಂಶಗಳನ್ನು ನೀಡುತ್ತದೆ.

2. ಸೋಯಾ: ಮಗುವಿಗೆ ಹಸುವಿನ ಹಾಲಿನಿಂದ ಅಲರ್ಜಿ ಆದರೆ ಸೋಯಾ ಹಾಲು ಕೊಡಬಹುದು, ಇದರಲ್ಲಿರುವ ಪ್ರೊಟೀನ್ ಅಂಶ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲ ಮಕ್ಕಳಿಗೆ ಇದರಿಂದ ಅಲರ್ಜಿಯಾಗಬಹುದು. ಆದ್ದರಿಂದ ಇದನ್ನು ಬಳಸುವ ಮೊದಲು ಶಿಶು ವೈದ್ಯರ ಸಲಹೆಗಳನ್ನು ಪಡೆಯಿರಿ.

3. ಗಂಜಿ:
ಅನ್ನವನ್ನು ಚೆನ್ನಾಗಿ ಬೇಯಿಸಿ ಅದಕ್ಕೆ ಸ್ವಲ್ಪ ತುಪ್ಪ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಕೊಡಬಹುದು. ಇದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

4. ಬಾದಾಮಿ ಹಾಲು:
ಇದರಲ್ಲಿರುವ ಕ್ಯಾಲ್ಸಿಯಂ ಅಂಶ ಆರೋಗ್ಯಕ್ಕೆ ಒಳ್ಳೆಯದು. ಈ ಬಾದಾಮಿ ಹಾಲು ಹಸುವಿನ ಹಾಲಿನಷ್ಟೆ ಆರೋಗ್ಯಕ್ಕೆ ಒಳ್ಳೆಯದು.

English summary

Best Food For Baby | Healthy baby Food | ಮಕ್ಕಳಿಗೆ ಉತ್ತಮವಾದ ಆಹಾರ | ಮಕ್ಕಳಿಗೆ ಆರೋಗ್ಯಕರ ಆಹಾರ

Breast food is best for baby but apart from breast food certain food will help to full fill the baby stomach and these food is healthy it will nourish baby. Today, we will discuss on the best food alternatives for breast milk. Take a look.
Story first published: Thursday, December 1, 2011, 18:26 [IST]
X
Desktop Bottom Promotion