For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿ ಶಿಶುವಿನ ಒದೆತ ತಾಯಿಗೆ ಬೆಲೆ ಕಟ್ಟಲಾಗದ ಆನಂದ

By Jaya subramanya
|

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂಬ ಹಾಡು ತಾಯ್ತನದ ಮಹತ್ವವನ್ನು ತಿಳಿಸುತ್ತದೆ. ಹೌದು ತಾಯಿಯಾಗುವುದು ಪ್ರತಿಯೊಂದು ಹೆಣ್ಣಿಗೂ ಇರುವ ಮಹತ್ವಾಕಾಂಕ್ಷೆ. ಆಕೆಯ ಜೀವನವನ್ನು ಪರಿಪೂರ್ಣವಾಗಿಸುವ ಒಂದು ಸುಂದರ ಅನುಭವ. ಒಂಬತ್ತು ತಿಂಗಳ ಕಾಲ ನಿಮ್ಮದೇ ರಕ್ತವನ್ನು ಬಸಿರಿನಲ್ಲಿ ಜೋಪಾನವಾಗಿ ಕಾಪಾಡುವ ಸ್ತ್ರೀಯ ಶಕ್ತಿ ಸಾಮರ್ಥ್ಯಗಳು ಸೀಮಾತೀತವಾದುದು.

ತಾವು ಸೇವಿಸುವ ಮುನ್ನ ಮಗುವಿಗೆ ಎಂಬ ಯೋಚನೆಯನ್ನು ಮುಂದಿಟ್ಟುಕೊಂಡೇ ಗರ್ಭವತಿ ಆಹಾರವನ್ನು ಸೇವಿಸುತ್ತಾಳೆ. ತಾನು ಸೇವಿಸುವ ಆಹಾರ, ಔಷಧಿ, ಗಾಳಿ ಪ್ರತಿಯೊಂದೂ ತನ್ನ ಮಗುವಿಗೆ ಹಾನಿಯನ್ನು ಉಂಟುಮಾಡಬಾರದು ಎಂಬ ತ್ಯಾಗ ಆ ತಾಯಿಯದಾಗಿರುತ್ತದೆ. ತನಗೆ ಇಷ್ಟಪಟ್ಟ ಆಹಾರ ಚಟುವಟಿಕೆ ಎಲ್ಲವನ್ನೂ ಮಗುವಿನ ಒಳಿತಿಗಾಗಿ ಆಕೆ ಬಿಟ್ಟುಬಿಡುತ್ತಾಳೆ.

ಗರ್ಭಿಣಿಯಾಗಿದ್ದಾಗ, ವಾಕರಿಎ, ತಲೆ ಸುತ್ತು, ವಾಂತಿ, ಹೊಟ್ಟೆಯ ಸಮಸ್ಯೆಗಳು, ಹೀಗೆ ಸಮಸ್ಯೆಗಳ ಸರಮಾಲೆಯೇ ಆಕೆಯನ್ನು ಕಾಡುತ್ತಿರುತ್ತದೆ. ಒಂದೊಂದು ಮಾಸದಲ್ಲೂ ಹೊಸ ಹೊಸ ಸಂಕಟದ ಅನುಭವವನ್ನು ಆ ತಾಯಿ ಅನುಭವಿಸುತ್ತಾಳೆ. ಈ ಎಲ್ಲಾ ನೋವಿನ ನಡುವೆಯೂ ಮಗು ತನ್ನ ಇರುವಿಕೆಯನ್ನು ವ್ಯಕ್ತಪಡಿಸುವ ಕೆಲವೊಂದು ಸೂಚನೆಗಳು ವಾಹ್! ಅದಂತೂ ಬೆಲೆ ಕಟ್ಟಲು ಸಾಧ್ಯವಾಗದೇ ಇರುವಂತಹದ್ದು. ಇದೇ ತಾನೇ ತಾಯಿಗೆ ತನ್ನ ನೋವನ್ನು ಮರೆಯಿಸುವ ದಿವ್ಯಶಕ್ತಿ. ಮಗು ಒದ್ದು ತನ್ನ ಇರುವಿಕೆಯನ್ನು ಹಾಜರುಪಡಿಸುವುದು ಒಂದು ವಿಭಿನ್ನ ಅನುಭವ ಎಂದೆನಿಸಿದೆ.

ಗರ್ಭಾವಸ್ಥೆಯ 16 ಮತ್ತು 25 ನೇ ವಾರಗಳಲ್ಲಿ ಮಗುವಿನ ಒದೆಯುವಿಕೆಯ ಅನುಭವ ಆಕೆಗೆ ಉಂಟಾಗುತ್ತದೆ. ಒಂದು ವೇಳೆ ಇದು ನಿಮ್ಮ ಪ್ರಥಮ ಗರ್ಭಾವಸ್ಥೆ ಎಂದಾದಲ್ಲಿ, 25 ವಾರಗಳವರೆಗೆ ನಿಮಗೆ ಮಗುವಿನ ಒದೆಯುವಿಕೆಯ ಸ್ಪರ್ಶ ಉಂಟಾಗುವುದಿಲ್ಲ. ನೀವು ಎರಡನೇ ಬಾರಿಗೆ ಗರ್ಭಿಣಿಯಾಗುತ್ತಿದ್ದೀರಿ ಎಂದಾದಲ್ಲಿ, 13 ನೇ ವಾರಗಳಲ್ಲಿ ಒದೆಯುವಿಕೆಯ ಅನುಭವ ಆಕೆಗೆ ಉಂಟಾಗುವುದು ಸಹಜವಾಗಿದೆ. ಇಂದಿನ ಲೇಖನದಲ್ಲಿ ಮಗುವಿನ ಒದೆಯುವಿಕೆಯ ಕುರಿತಾದ ಕೆಲವೊಂದು ಆಸಕ್ತಿಕರ ಅಂಶಗಳನ್ನು ನಾವು ನಿಮಗೆ ತಿಳಿಸುತ್ತಿದ್ದು ಮಗು ಒದೆಯುವುದು ಅತ್ಯಗತ್ಯವಾಗಿದೆ. ಗರ್ಭದಲ್ಲಿ ಮಗು ಆರೋಗ್ಯವಾಗಿದೆ ಎಂಬುದನ್ನೇ ಈ ಒದೆಯುವಿಕೆ ನಿಮಗೆ ತಿಳಿಸುತ್ತದೆ.

ಮೊದಲ ಒದೆಯುವಿಕೆ ಯಾವಾಗ?

ಮೊದಲ ಒದೆಯುವಿಕೆ ಯಾವಾಗ?

ಗರ್ಭಾವಸ್ಥೆಯ 18 ಮತ್ತು 25 ನೇ ವಾರದಲ್ಲಿ ಮಗುವಿನ ಪ್ರಥಮ ಒದೆತದ ಅನುಭವವನ್ನು ನೀವು ಪಡೆದುಕೊಳ್ಳುತ್ತೀರಿ.

ಎರಡನೇ ಬಾರಿ ತಾಯಿಯಾಗುವವರು

ಎರಡನೇ ಬಾರಿ ತಾಯಿಯಾಗುವವರು

ಎರಡನೇ ಬಾರಿ ತಾಯಿಯಾದವರು ಈ ಒದೆಯುವಿಕೆಯನ್ನು ಕೊಂಚ ಬೇಗನೇ ಅನುಭವಿಸುತ್ತಾರೆ. ಅನುಭವಸ್ಥರು ಹೇಳುವಂತೆ ಎರಡನೇ ಗರ್ಭಾವಸ್ಥೆಯಲ್ಲಿ ಮಗುವಿನ ಒದೆತದ ಅನುಭವ ಗರ್ಭಾವಸ್ಥೆಯ 13 ನೇ ವಾರದಲ್ಲಿ ಅರಿವಾಗುತ್ತದೆ.

ಭ್ರೂಣ ಕಡಿಮೆ ಚಟುವಟಿಕೆಯಿಂದ ಕೂಡಿರುವುದು

ಭ್ರೂಣ ಕಡಿಮೆ ಚಟುವಟಿಕೆಯಿಂದ ಕೂಡಿರುವುದು

ತಾಯಿಯ ಸಕ್ಕರೆ ಪ್ರಮಾಣ ಇಳಿಮುಖವಾದಲ್ಲಿ ಭ್ರೂಣದ ಚಲನೆ ಇಳಿಯುತ್ತದೆ. ಸಾಮಾನ್ಯವಾಗಿ ಈ ಕ್ರಿಯೆ ರಾತ್ರಿ 9 ರಿಂದ ಮುಂಜಾನೆ 1 ರ ನಡುವೆಯಾಗಿರುತ್ತದೆ.

ಎಡಭಾಗದ ಕಥೆ

ಎಡಭಾಗದ ಕಥೆ

ನೀವು ಎಡಭಾಗದಲ್ಲಿ ಮಲಗಿದಾಗ, ಬೆಳೆಯುತ್ತಿರುವ ನಿಮ್ಮ ಭ್ರೂಣವು ಉತ್ತಮ ತಿರುಗುವಿಕೆಯನ್ನು ಪಡೆದುಕೊಳ್ಳುತ್ತದೆ. ಎಡಭಾಗದಲ್ಲಿ ಮಗುವಿನ ಒದೆತ ಮತ್ತು ತೂಗಾಡುವಿಕೆಯ ಅನುಭವ ನಿಮಗೆ ಹೆಚ್ಚು ಉಂಟಾಗುತ್ತದೆ.

ಈ ಒದೆತಗಳನ್ನು ಎಣಿಕೆ ಮಾಡಿ

ಈ ಒದೆತಗಳನ್ನು ಎಣಿಕೆ ಮಾಡಿ

ತಜ್ಞರು ಹೇಳುವಂತೆ, ನಿಮ್ಮ ಮಗುವಿನ ಒದೆತಗಳನ್ನು ಎಣಿಕೆ ಮಾಡಬೇಕು ಎಂದಾಗಿದೆ. 28 ವಾರದೊಳಗೆ ನಿಮ್ಮ ಮಗುವಿನ ಒದೆತಗಳನ್ನು ನೀವು ಎಣಿಕೆ ಮಾಡಿದಾಗ ಯಾವುದೇ ಭ್ರೂಣದ ಸಮಸ್ಯೆಗಳಿದ್ದಲ್ಲಿ ಅದು ನಿಮ್ಮ ಅರಿವಿಗೆ ಬರುತ್ತದೆ.

ನಿಮ್ಮ ಆಹಾರದ ಮೇಲೂ ಒದೆತ ಅವಲಂಬಿಸಿದೆ

ನಿಮ್ಮ ಆಹಾರದ ಮೇಲೂ ಒದೆತ ಅವಲಂಬಿಸಿದೆ

ಗರ್ಭದ ಒಳಗೆ ನಿಮ್ಮ ಮಗುವಿನ ಚಲನೆಗಳನ್ನು ಅಭಿವೃದ್ಧಿಪಡಿಸುವ ನಿರ್ದಿಷ್ಟ ಆಹಾರದ ಬಗ್ಗೆ ನಿಮಗೆ ಜ್ಞಾನವಿರಬೇಕು. ಈ ಆಹಾರಗಳು ಒದೆಯುವಿಕೆಯನ್ನು ಹೆಚ್ಚಿಸುತ್ತದೆ.

ಚಲನೆಗಳು ಇಳಿಮುಖವಾಗುತ್ತವೆಯೇ?

ಚಲನೆಗಳು ಇಳಿಮುಖವಾಗುತ್ತವೆಯೇ?

ತಜ್ಞರು ಹೇಳುವಂತೆ, ನೀವು 36 ನೇ ವಾರದಲ್ಲಿದ್ದಾಗ, ಚಲನೆಗಳು ಇಳಿಮುಖವಾಗುವುದು ಸಾಮಾನ್ಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಮಗು ಪೂರ್ಣವಾಗಿ ಅಭಿವೃದ್ಧಿಗೊಂಡಿರುತ್ತದೆ ಮತ್ತು ಅದಕ್ಕೆ ಸ್ಥಳದ ಕೊರತೆಯುಂಟಾಗಿ ಒದೆಯುವಿಕೆ ಇಳಿಮುಖವಾಗುತ್ತದೆ.

English summary

Things Every Pregnant Mama Needs To Know About Foetal Kicking!

The moment you get the news of your pregnancy, you feel on top of the world, right? Pregnant women go through a lot of problems in their 9 months of the pregnancy period. Not only do the cravings get to you, it is also the bloating, weight gain and the tummy issues that make a woman go insane.
X
Desktop Bottom Promotion