For Quick Alerts
ALLOW NOTIFICATIONS  
For Daily Alerts

ಒಂದು ಬರ್ಗರ್ ಬೆಲೆ 4.39 ಲಕ್ಷ: ಜಗತ್ತಿನ ದುಬಾರಿ ಬರ್ಗರ್ ಖರೀದಿಸಿದ್ದು ಈ ಮಹಾನುಭಾವನೇ!

|

ಬರ್ಗರ್.. ಯಾರಿಗೆ ಇಷ್ಟವಿಲ್ಲ ಹೇಳಿ? ಸಸ್ಯಹಾರಿಗಳಿರಲಿ, ಮಾಂಸಹಾರಿಗಳಿರಲಿ, ಬರ್ಗರ್ ಹೆಚ್ಚಿನವರ ಫೇವರೆಟ್. ರೆಸ್ಟೊರೆಂಟ್ ಗಳಿಗೆ ಹೋಗಿ ವಿಧವಿಧವಾದ ಬರ್ಗರ್ ವಾರಕ್ಕೊಮೆ ಸವಿಯದಿದ್ದರೆ ಕೆಲವರಿಗೆ ತೃಪ್ತಿಯೇ ಇರುವುದಿಲ್ಲ. ಬನ್ ನಡುವೆ ಟೊಮ್ಯಾಟೋ ಲೇಯರಿಂಗ್ ಮಾಡಿ, ವಿಭಿನ್ನ ಮಸಾಲೆಗಳನ್ನು ಸೇರಿಸಿ ಬಾಯಿಗಿಟ್ಟರೆ, ಆಹಾ ಎಂದೆನಿಸದೇ ಇರದು.

ಸಾಮಾನ್ಯವಾಗಿ ಬರ್ಗರ್ ಬೆಲೆ ನೂರರಿಂದ ಶುರುವಾಗಿ ಸಾವಿರದವರೆಗೂ ಇರಬಹುದು. ಆದರೆ ಈ ಬರ್ಗರ್ ಬೆಲೆ ಕೇಳಿದ್ರೆ, ಒಮ್ಮೆಗೆ ಶಾಕ್ ಆಗದೇ ಇರಲಾರದು. ಹಾಗಾದ್ರೆ ಇದರ ಬೆಲೆಯಷ್ಟು? ಎನಿದು ಬರ್ಗರ್ ಕಥೆ ನೋಡೋಣ ಬನ್ನಿ.

ಸ್ಥಳ ಹಾಗೂ ರುಚಿಗೆ ತಕ್ಕಂತೆ ಬರ್ಗರ್ ಬೆಲೆ ಹೆಚ್ಚು ಕಡಿಮೆ ಆಗುವುದು ಸಹಜ. ಆದರೆ ಡಚ್ ನ ಈ ಬರ್ಗರ್ ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಾ! ಹೌದು, ಈ ಬರ್ಗರ್ ಬೆಲೆ ಬರೋಬ್ಬರಿ 4.39 ಲಕ್ಷ. ಈ ಮೂಲಕ ಇದು ಜಗತ್ತಿನ ದುಬಾರಿ ಬರ್ಗರ್ ಅನ್ನೋ ಕೀರ್ತಿಗೂ ಭಾಜನವಾಗಿದೆ. ಇಷ್ಟು ಬೆಲೆಯುಳ್ಳ ಈ ಬರ್ಗರ್ ನಲ್ಲಿ ಅಂತದ್ದೇನಿದೆ ಅಂತಹ ಯೋಚನೆ ಮಾಡ್ತಿದ್ದೀರಾ? ಮುಂದೆ ಓದ್ತಾ ಹೋಗಿ ನಿಮಗೆ ಗೊತ್ತಾಗುತ್ತೆ.

'ದಿ ಗೋಲ್ಡನ್ ಬಾಯ್' :

'ದಿ ಗೋಲ್ಡನ್ ಬಾಯ್' :

'ದಿ ಗೋಲ್ಡನ್ ಬಾಯ್' ಹೆಸರಿನ ಈ ಬರ್ಗರ್ ನ್ನು ಡಚ್ ನ ಒರೆಗಾನ್‌ ರೆಸ್ಟೋರೆಂಟ್ ನಲ್ಲಿ ರಾಬರ್ಟ್ ಜಾನ್ ಡಿ ವೀನ್ ಅವರು ತಯಾರಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದ ರೆಸ್ಟೋರೆಂಟ್ ಉದ್ಯಮ ತೀವ್ರವಾಗಿ ಹಾನಿಗೊಳಗಾಗುವುದನ್ನು ನೋಡಿದ ನಂತರ ಈ ಬರ್ಗರ್ ತಯಾರಿಸುವ ನಿರ್ಧಾರ ಮಾಡಿದ್ದಾರೆ. 777 ಪೌಂಡ್ ಅಂದರೆ ಸುಮಾರು ಮೂರುವರೆ ಕೆಜಿ ತೂಕವಿರುವ ಈ ಬರ್ಗರ್ ತಯಾರಿಕ ವೆಚ್ಚ ಸುಮಾರು. 3.70 ಲಕ್ಷ. ಇಷ್ಟು ದುಬಾರಿಯಾಗಿರುವ ಈ ಬರ್ಗರ್ ನ್ನು ಮೊದಲು ರಾಯಲ್ ಡಚ್ ಆಹಾರ ಮತ್ತು ಪಾನೀಯ ಸಂಘದ ಅಧ್ಯಕ್ಷ ರಾಬರ್ ವಿಲಿಯಮ್ಸೆ ಅವರು 4.39 ಲಕ್ಷ ಕೊಟ್ಟು ಖರೀದಿಸಿದ್ದಾರೆ.

ಇಷ್ಟು ದುಬಾರಿಯಾಗುವಂತಹದ್ದು ಏನಿದೆ ಈ ಬರ್ಗರಲ್ಲಿ?:

ಇಷ್ಟು ದುಬಾರಿಯಾಗುವಂತಹದ್ದು ಏನಿದೆ ಈ ಬರ್ಗರಲ್ಲಿ?:

ಲಕ್ಷಗಟ್ಟಲೇ ವೆಚ್ಚವಾಗಿರುವ ಈ ಬರ್ಗರ್ ನಲ್ಲಿ ವಿಶೇಷತೆ ಅಂತೂ ಖಂಡಿತಾ ಇದ್ದೇ ಇರುತ್ತದೆ. ಈ ಬರ್ಗರ್ ತಯಾರಿಸಲು ಅವರಿಗೆ ಸುಮಾರು ಒಂಬತ್ತು ಗಂಟೆ ಬೇಕಾಯಿತಂತೆ!. ಹಾಗಾದ್ರೆ ಅದ್ರಲ್ಲಿ ಇರೋದೇನು:

ಗೋಲ್ಡನ್ ಬಾಯ್ ಬರ್ಗರ್ ವಿಸ್ಕಿ ತುಂಬಿದ ಹೊಗೆಯ ತಟ್ಟೆಯಲ್ಲಿ ಬರುತ್ತದೆ. ಇದು ಉನ್ನತ ಮಟ್ಟದ ಪದಾರ್ಥಗಳಾದ ಎ 5 ವಾಗ್ಯು ಬೀಫ್, ಕಿಂಗ್ ಏಡಿ, ಬೆಲುಗಾ ಕ್ಯಾವಿಯರ್, ಕೋಪಿ ಲುವಾಕ್ (ವಿಶ್ವದ ಅತ್ಯಂತ ದುಬಾರಿ ಕಾಫಿ ಅರ್ಧ ಕೆ.ಜಿ ಗೆ 7,442 ರೂ. ನಿಂದ 44, 442ರೂ.) ಕಾಫಿ ಬಿಬಿಕ್ಯು ಸಾಸ್, ಜಪಾನೀಸ್ ಮಚ್ಚಾ ಟೀ, ಟೊಮೆಟೊ, ಹೊಗೆಯಾಡಿಸಿದ ಬಾತುಕೋಳಿ ಮೊಟ್ಟೆ ಮೇಯೊ, ವೈಟ್ ಟ್ರಫಲ್, ವಿಂಟೇಜ್ ಐಬೇರಿಯನ್ ಹ್ಯಾಮ್, ಮತ್ತು ಡೊಮ್ ಪೆರಿಗ್ನಾನ್ ಬನ್ (ಚಿನ್ನ ಲೇಪಿತ ಬನ್ ಗಳಿಂದ ಪ್ರೇರಣೆ) ಮೊದಲಾದ ಉತ್ತಮ ಗುಣಮಟ್ಟದ ಪದಾರ್ಥಗಳ ಸಂಯೋಜನೆಯೇ ಈ ಕಾಸ್ಟ್ಲಿಯೆಸ್ಟ್ ಬರ್ಗರ್. ಪದಾರ್ಥಗಳು ಒಂದಕ್ಕೊಂದು ಚೆನ್ನಾಗಿ ಪೂರಕವಾಗಿದ್ದು, ತುಂಬಾ ರುಚಿಯಾಗಿದೆ ಎಂದು ಬರ್ಗರ್ ತಯಾರಿಸಿದ ವೀನ್ ಹೇಳಿದ್ದಾರೆ.

ಬೇಕಿದ್ದಲ್ಲಿ ಎರಡು ವಾರಗಳ ಮೊದಲೇ ಬುಕ್ ಮಾಡಿ:

ಬೇಕಿದ್ದಲ್ಲಿ ಎರಡು ವಾರಗಳ ಮೊದಲೇ ಬುಕ್ ಮಾಡಿ:

ಇಂತಹ ದುಬಾರಿ ಬರ್ಗರ್ ಸಾಮಾನ್ಯ ಜನರಿಗಂತೂ ಕೊಳ್ಳು ಸಾಧ್ಯವೇ ಇಲ್ಲ, ಆದರೂ ನಿಮಗೇನಾದರೂ ಬೇಕಿದ್ದರೆ, ತಿನ್ನುವ ಮನಸ್ಸಾಗಿದ್ದರೆ, ನೆದರ್ ಲ್ಯಾಂಡ್ ನ ಡಿ ಡಾಲ್ಟನ್ ರೆಸ್ಟೋರೆಂಟ್ ಗೆ ಹೋಗಿ ಸವಿಯಬಹುದು. ಆದರೆ ಹೋಗುವ ಎರಡು ವಾರಗಳ ಮೊದಲೇ ಅಂದಾಜು ರೂ. 65,728 ಅಡ್ವಾನ್ಸ್ ಹಣ ಕಟ್ಟಿ ಬುಕ್ ಮಾಡಿ ಹೋಗಬೇಕು. ಇಷ್ಟು ಕಟ್ಟಿ ತಿನ್ನುವ ಶಕ್ತಿ ನಿಮಗಿದ್ದರೆ, ನೀವು ಈ ಬರ್ಗರ್ ಟೇಸ್ಟ್ ನೋಡಿ, ನಮಗೂ ತಿಳಿಸಿ.

Read more about: insync ಭಾರತ
English summary

Worlds most expensive burger which Cost Rs 4.5 lakh; Here is What's In It in Kannada

Here we talking about Worlds most expensive burger which Cost Rs 4.5 lakh; Here is What's In It in Kannada, read on
Story first published: Wednesday, July 28, 2021, 9:00 [IST]
X