For Quick Alerts
ALLOW NOTIFICATIONS  
For Daily Alerts

ವಿದಾಯದ ವೇಳೆಯಲ್ಲಿ ನೀ ಸಾಗುವ ದಾರಿಯಲ್ಲಿ: ಗಾಯಕ ಕೆಕೆ ಕುರಿತ ಆಸಕ್ತಿಕರ ಸಂಗತಿಗಳು

|

'ವಿದಾಯದ ವೇಳೆಯಲ್ಲಿ ನೀ ಸಾಗುವ ದಾರಿಯಲ್ಲಿಈ ನೆನಪೆಂಬ ನೆರಳು ಬಂದಿ ಹೋಗು, ಹನಿಯೇ ಇರದೆ ಮಳೆಯೊಂದು ಬಂದಿ ಹೋಗು...' ಕೆಕೆ ಹಾಡಿದ ಈ ಸಾಲುಗಳು ಅವರ ಅಭಿಮಾನಿಗಳನ್ನು ಈಗ ತುಂಬಾನೇ ಕಾಡ್ತಾ ಇದೆ.

ಸಂಗೀತ ಲೋಕದಲ್ಲಿ ನೆನ್ನೆಯವರಿಗೂ ಮಿಂಚಿದ್ದ ಕೃಷ್ಣಕುಮಾರ್‌ ಕುನ್ನಥ್‌ ಅಲಿಯಾಸ್‌ ಕೆಕೆ ಇನ್ನಿಲ್ಲ ಎಂಬುವುದನ್ನು ಸಂಗೀತ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೋಲ್ಕತ್ತಾದಲ್ಲಿ ಲೈವ್‌ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಮಧುರ ಕಂಠದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಕೆಕೆ ಸಂಗೀತ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಕುಸಿದು ಹೋದರು, ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ವೈದ್ಯರು ಕೆಕೆ ಇನ್ನಿಲ್ಲ ಎಂಬ ಕಟು ಸತ್ಯ ತಿಳಿಸಿದರು.

ಕೆಕೆ ವಯಸ್ಸು 53, ನೋಡಲು ಕಟ್ಟು ಮಸ್ತಾದ ದೇಹದಿಂದ ಅವರನ್ನು ನೋಡಿದರೆ 35-40 ಇರಬಹುದು ಎನ್ನುತ್ತಿದ್ದರು ಅಷ್ಟು ಸದೃಢವಾದ ಮೈಕಟ್ಟು ಹೊಂದಿದ್ದರು. ಅವರ ಸಾವಿಗೆ ಕಾರ್ಡಿಯಾಕ್‌ ಅರೆಸ್ಟ್‌ ಕಾರಣವಾಗಿರಬಹುದು ಎಂದು ಪ್ರಾರಂಭದಲ್ಲಿ ಸಂಶಯಿಸಲಾಗಿದೆ, ಅವರ ತಲೆ ಹಾಗೂ ಮುಖಕ್ಕೆ ಪೆಟ್ಟಾಗಿದ್ದು ಅಸ್ವಾಭಾವಿಕ ಸಾವೆಂದು ನ್ಯೂ ಮಾರ್ಕೆಟ್‌ ಪೋಲೀಸ್‌ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಬುಧವಾರ ಅಟೋಸ್ಪೈ ಮಾಡಿದ ಬಳಿಕ ನಿಜವಾದ ಕಾರಣ ತಿಳಿಯಲಿದೆ. ಪ್ರಧಾನಿ ಸೇರಿ ಇಡೀ ದೇಶ ಈ ಗಾಯಕನ ಸಾವಿಗೆ ಸಂತಾಪ ಸೂಚಿಸಿದೆ.

ಕೆಕೆ ಗಾಯಕನ ಕುರಿತು ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಇಲ್ಲಿ ನೀಡಿದ್ದೇವೆ ನೋಡಿ:

ಈ ಗಾಯಕ ಸಂಗೀತವನ್ನು ಕಲಿತಿಲ್ಲ

ಈ ಗಾಯಕ ಸಂಗೀತವನ್ನು ಕಲಿತಿಲ್ಲ

ಕೆಕೆ ಶಾಸ್ತ್ರೀಯವಾಗಿ ಯಾವುದೇ ಸಂಗೀತ ಕಲಿತಿಲ್ಲ, ಆದರೆ ಅವರಿಗೆ ಸಂಗೀತ ವರವಾಗಿ ಸಿಕ್ಕಿದೆ. ಖ್ಯಾತ ಗಾಯಕ ಕಿಶೋರ್‌ ಕುಮಾರ್‌ ಸಂಗೀತವನ್ನು ಕೇಳಿ ತಾನೂ ಹಾಡಬೇಕು ಎಂಬ ಸ್ಪೂರ್ತಿ ಪಡೆದಿದ್ದರು. ಸಂಗೀತವನ್ನು ಕೇಳುತ್ತಾ ಕಲಿತರೇ ವಿನಃ ಯಾವುದೇ ಸಂಗೀತ ಶಾಲೆಗೆ ಅವರು ಹೋಗಿಲ್ಲ ಎಂಬುವುದಾಗಿ ಅವರು ಹೇಳಿದ್ದಾರೆ.

ಗಾಯಕವಾಗುವ ಮೊದಲು ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು

ಗಾಯಕವಾಗುವ ಮೊದಲು ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು

ಇವರು 1994ರಲ್ಲಿ ಮುಂಬಯಿಗೆ ಹೋಗಿ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದರು, ಅದಕ್ಕೂ ಮುಂಚೆ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು. ಕಷ್ಟದ ದಿನಗಳಲ್ಲಿ ನನ್ನ ಪತ್ನಿಯ ಬೆಂಬಲದಿಂದಲೇ ನನಗೆ ಗಾಯಕನಾಗಲು ಸಾಧ್ಯವಾಯಿತು ಎಂಬುವುದಾಗಿ ಹೇಳಿಕೊಂಡಿದ್ದರು.

ತಡಪ್‌ ತಡಪ್ ಹಾಡು ಇವರ ಮೊದಲ ಹಾಡಲ್ಲ

ತಡಪ್‌ ತಡಪ್ ಹಾಡು ಇವರ ಮೊದಲ ಹಾಡಲ್ಲ

ಸಲ್ಮಾನ್‌ ಖಾನ್‌ ಸಿನಿಮಾ ಹಮ್‌ ದಿಲ್‌ ಡೆ ಚುಕೆ ಸನಾಂನಲ್ಲಿರುವ ತಡಪ್‌ ತಡಪ್‌ ಹಾಡು ತುಂಬಾನೇ ಜನಪ್ರಿಯವಾಯಿತು, ಆ ಹಾಡು ಹಾಡಿದ ಗಾಯಕ ಬೇರೆ ಯಾರೂ ಅಲ್ಲ ಕೆಕೆ ಆಗಿದ್ದರು, ಅಲ್ಲಿಂದ ಅವರ ಅದೃಷ್ಟವೇ ಬದಲಾಯಿತು. ಅದಕ್ಕಿಂತ ಮೊದಲು ಚೋದ್‌ ಆಯೇ ಹಮ್ ಹೋ ಗಲಿಯಾನ್ ಎಂಬ ಹಾಡಿನಲ್ಲಿ ಹರಿಹರನ್‌ ಜೊತೆ ಸಹಗಾಯಕರಾಗಿದ್ದರು.

3500ಕ್ಕೂ ಜಿಂಗಲ್ಸ್‌ ಹಾಡಿದ್ದಾರೆ, ಕನ್ನಡದಲ್ಲೂ ಹಾಡುಗಳನ್ನು ಹಾಡಿದ್ದಾರೆ

3500ಕ್ಕೂ ಜಿಂಗಲ್ಸ್‌ ಹಾಡಿದ್ದಾರೆ, ಕನ್ನಡದಲ್ಲೂ ಹಾಡುಗಳನ್ನು ಹಾಡಿದ್ದಾರೆ

ಬಹುಪರಾಕ್‌ನಲ್ಲಿ ಸ್ನೇಹ ಎಂಬುವುದು, ಏಳು ಬಣ್ಣದ ಪ್ರೀತಿ ಇದು ಏಳು ಮಲ್ಲಿಗೆ ತೂಕವಿದು (ಲವ್ ಚಿತ್ರ) ಒಂದು ಹಾಡು ಮೆಲ್ಲೆ ಕೇಳಿ ಬಂತು(ಆರ್ಯನ್), ಕಣ್ಣ ಹನಿಯೊಂದಿಗೆ (ಮನಸಾರೆ), ನಡೆದಾಡುವ ಕಾಮನ ಬಿಲ್ಲೆ (ಪರಿಚಯ), ವಿದಾಯದ ವೇಳೆಯಲ್ಲಿ (ಮಳೆ ಬರಲಿ ಮಜು ಇರಲಿ) ಹೀಗೆ ಕನ್ನಡದಲ್ಲಿಯೂ ಇವರು ತಮ್ಮ ಹಾಡುಗಳ ಮೂಲಕ ಕನ್ನಡಿಗರ ಮನಕ್ಕೆ ಹತ್ತಿರವಾಗಿದ್ದರೆ.

English summary

KK aka Krishnakumar Kunnath dies at 53: Interesting facts about Bollywood singer in Kannada

KK aka Krishnakumar Kunnath dies at 53: Interesting facts about Bollywood singer in Kannada, read on...
Story first published: Wednesday, June 1, 2022, 12:51 [IST]
X
Desktop Bottom Promotion