For Quick Alerts
ALLOW NOTIFICATIONS  
For Daily Alerts

ಈ ರಾಶಿಚಕ್ರಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚು

|

ಕೋವಿಡ್-19 ಸಾಂಕ್ರಾಮಿಕವು ಖಂಡಿತವಾಗಿಯೂ ಅಭೂತಪೂರ್ವ ರೀತಿಯಲ್ಲಿ ಸಾಮಾನ್ಯತೆಯ ಭೂದೃಶ್ಯವನ್ನೇ ಬದಲಿಸಿದೆ. ಇದರಿಂದಾಗಿ ಜನಸಾಮಾನ್ಯರ ಜೀವನ ಸಾಕಷ್ಟು ಸವಾಲುಗಳನ್ನು ಎದುರಿಸುವಂತಾಗಿದೆ. ಕೊರೋನ ವೈರಸ್ ನ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳುವುದನ್ನು ಮುಂದುವರಿಸುತ್ತಿರುವಂತೆಯೇ, ಕೋವಿಡ್-19 ಕಾಯಿಲೆಗೆ ಲಸಿಕೆಗಳು ಮತ್ತು ಔಷಧಗಳನ್ನು ತಯಾರಿಸಲು ವಿಶ್ವದಾದ್ಯಂತದ ವಿಜ್ಞಾನಿಗಳು ಅವಿರತ ಪ್ರಯತ್ನದಲ್ಲಿದ್ದಾರೆ.

ಆದರೆ, ನಾವು ತಜ್ಞರನ್ನು ನಂಬುವುದಾದರೆ, ಮಾನವರಿಗೆ ಸರಿಹೊಂದುವ ಲಸಿಕೆ ಅಭಿವೃದ್ಧಿಯಾಗಲು ಕೆಲವು ವರ್ಷಗಳೇ ತೆಗೆದುಕೊಳ್ಳಬಹುದು ಅಥವಾ ಅದಕ್ಕಿಂತಲೂ ಹೆಚ್ಚು ಅವಧಿ ಬೇಕಾಗಬಹುದು. ಆದ್ದರಿಂದ, ತಕ್ಷಣಕ್ಕೆ ಈ ವೈರಸ್ ಗೆ ಲಸಿಕೆ ಇಲ್ಲದಿರುವುದರಿಂದ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜೊತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ಅವುಗಳನ್ನು ಉಳಿಸಿಕೊಳ್ಳುವುದು ನಮಗಿಂದು ಹೆಚ್ಚು ನಿರ್ಣಾಯಕವಾಗಿದೆ.

ಪ್ರಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ರಾಶಿಚಕ್ರಗಳು

ಹಾಗಾದರೆ, ಜ್ಯೋತಿಷ್ಯ ಬ್ರಹ್ಮಾಂಡವು ನಿಮ್ಮ ಅಂತರ್ಗತ ಪ್ರತಿರಕ್ಷೆ/ ರೋಗನಿರೋಧಕ ಶಕ್ತಿಯ ಮೇಲೆ ಸ್ವಲ್ಪ ಬೆಳಕು ಚೆಲ್ಲುತ್ತದೆ ಎಂದು ನಾವು ಹೇಳಿದರೆ ನಂಬುವಿರೆ? ರಾಶಿಚಕ್ರ ಜಗತ್ತು ನಿಮ್ಮ ಮನೋಧರ್ಮಗಳು, ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳ ಮೇಲೆ ಸೂಕ್ಷ್ಮ ನೋಟವನ್ನು ಬೀರುವಂತೆಯೇ, ಆಂತರ್ಯದಿಂದ ಬಲವಾಗಿರುವ ರಾಶಿಚಕ್ರ ಚಿಹ್ನೆಗಳನ್ನು ಸಹ ಪಟ್ಟಿ ಮಾಡುತ್ತದೆ. ಪ್ರಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ರಾಶಿಚಕ್ರ ಚಿಹ್ನೆಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ!

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನಿಗೂಢ ಮತ್ತು ಸಿಡುಕಿನ ವೃಶ್ಚಿಕ ರಾಶಿಯವರು ಹೆಚ್ಚಾಗಿ, ಉತ್ತಮ ಆರೋಗ್ಯವನ್ನು ಅನುಭವಿಸುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅಪಾಯವನ್ನು ಎದುರಿಸುವವರಾಗಿದ್ದರೂ ಕೂಡ ಕೆಲವು ಅಪಾಯಕಾರಿ ಸಂದರ್ಭಗಳಲ್ಲಿ ಕುಗ್ಗುತ್ತಾರೆ. ಆದರೂ ಆಶ್ಚರ್ಯಕರ ರೀತಿಯಲ್ಲಿ ಅವರು ಯಾವುದೇ ಸಂದರ್ಭಗಳಿಂದ ಪಾರಾಗಬಲ್ಲರು (ಯಾವಾಗಲೂ).

ಇದು ಎದುರಿಗೆ ಸಂಪೂರ್ಣ ಅದೃಷ್ಟವೆಂದು ತೋರುತ್ತದೆಯಾದರೂ, ವೃಶ್ಚಿಕ ರಾಶಿಯವರ ಜೀವನಶೈಲಿಯಾಗಿದ್ದು ಯಾವುದೇ ಪರಿಸ್ಥಿತಿಯನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ. ಈ ರಾಶಿಯವರು ಅತಿಯಾಗಿ ತಿನ್ನುವವರಲ್ಲ, ಅವರಿಗೆ ಸಾಕು ಎನಿಸಿದ ನಂತರವೂ ವೃಶ್ಚಿಕ ರಾಶಿಯವರು ಪುನಃ ತಿನ್ನುವುದನ್ನು ವಿರಳವಾಗಿ ಕಾಣುತ್ತೀರಿ. ಹೆಚ್ಚುವರಿಯಾಗಿ, ಈ ರಾಶಿಚಕ್ರ ಚಿಹ್ನೆಯವರಿಗೆ ವ್ಯಾಯಾಮ ಮಾಡಲು ಪ್ರೇರೇಪಿಸದಿದ್ದರೂ ಸಹ, ಅವರು ಸಾಮಾನ್ಯವಾಗಿ, ಅವರಿಗೆ ಸಾಧ್ಯವಾದಾಗಲೆಲ್ಲ ನಡೆಯುವುದು, ಮೆಟ್ಟಿಲುಗಳನ್ನು ಏರಿವುದು ಇಂಥ ಚಟುವಟಿಕೆಯನ್ನು ಮಾಡಬಲ್ಲರು.

ಕನ್ಯಾರಾಶಿ

ಕನ್ಯಾರಾಶಿ

ಈ ಕನ್ಯಾ ರಾಶಿಯ ಚಿಹ್ನೆಯ ಸೂಕ್ಷ್ಮ ವರ್ತನೆಯಿಂದ ಮೋಸ ಹೋಗಬೇಡಿ ಏಕೆಂದರೆ ಇದು ಸಾಮಾನ್ಯವಾಗಿ ಜ್ಯೋತಿಷ್ಯ ಬ್ರಹ್ಮಾಂಡದ ಆರೋಗ್ಯಕರ ರಾಶಿಚಕ್ರ ಚಿಹ್ನೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈ ರಾಶಿಯವರು ಕಂಗಾಲಾಗುವ ಪ್ರವೃತ್ತಿಯವರಲ್ಲದ್ದರಿಂದ ಅವರು ಸಾಮಾನ್ಯವಾಗಿ ಗಂಭೀರ ಕಾಯಿಲೆಗಳಿಗೆ ಬಲಿಯಾಗುವುದಿಲ್ಲ. ಆದ್ದರಿಂದ, ಕನ್ಯಾರಾಶಿಯವರು ಪೂರ್ಣ ಪ್ರಮಾಣದ ಶೀತದ ಲಕ್ಷಣಗಳನ್ನು ಗುರುತಿಸುವ ಮೊದಲೇ ಅವರು ಬೆಚ್ಚಗಿನ ನೀರನ್ನು ಕುಡಿಯಲು ಪ್ರಾರಂಭಿಸುತ್ತಾರೆ ಎಂದು ನೀವು ನಿರೀಕ್ಷಿಸಬಹುದು. ಅಂತಿಮವಾಗಿ, ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿರುವುದು ಕನ್ಯಾರಾಶಿಯವರ ಟ್ರೇಡ್ಮಾರ್ಕ್ ಅಭ್ಯಾಸವಾಗಿದ್ದು ಅದು ಅವರನ್ನು ಆರೋಗ್ಯಕರವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿರಿಸುತ್ತದೆ.

ವೃಷಭ ರಾಶಿ

ವೃಷಭ ರಾಶಿ

ಈ ರಾಶಿಚಕ್ರದಲ್ಲಿ ಜನಿಸಿದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲವಾಗಿರುತ್ತಾರೆ. ಅವರು ವಿರಳವಾಗಿ ಅನಾರೋಗ್ಯದ ಸಂದರ್ಭದಲ್ಲಿ ಸಿಲುಕಿಕೊಳ್ಳುತ್ತಾರೆ ಮತ್ತು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ, ಅವರು ತಮ್ಮ ಜೀವನದಲ್ಲಿ ಎಲ್ಲವನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನು ನೋಡಿಯೇ ಅವರು ಎಷ್ಟು ಪ್ರಬಲರು ಎಂಬುದನ್ನು ಗುರುತಿಸಬಹುದು. ಅವರು ಸಾಮಾನ್ಯವಾಗಿ ಅನಾರೋಗ್ಯದ ನಂತರ ಬೇಗನೆ ಚೇತರಿಸಿಕೊಳ್ಳುತ್ತಾರೆ ಮತ್ತು ಅವರ ದೈಹಿಕ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ರಾಶಿಯವರು ತಮ್ಮ ದೇಹದ ಮೇಲೆ ನಿಯಂತ್ರಣ ಹೊಂದಲು ಇಷ್ಟಪಡುತ್ತಾರೆ ಮತ್ತು ಅತ್ಯುತ್ತಮ ಆರೋಗ್ಯವನ್ನು ಹೊಂದಿದ್ದಾರೆ.

English summary

Zodiac Signs Who Have Strongest Immunity

Here we are discussing about Zodiac Signs Who Have Strongest Immunity. what if we told you that astrological universe can actually shed some light on your inherent immunity? Read more.
Story first published: Monday, May 18, 2020, 14:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X