For Quick Alerts
ALLOW NOTIFICATIONS  
For Daily Alerts

ಸಂತಾನ ಬಯಸುವ ದಂಪತಿಯ ಮಿಲನಕ್ಕೆ 'ಗರ್ಭದಾನ ಸಂಸ್ಕಾರ' ಮುಹೂರ್ತ ಸೂಕ್ತ, ಏಕೆ?

|

ನಮ್ಮಲ್ಲಿ ಮದುವೆಯಾದ ಬಳಿಕ ಮೊದಲ ಬಾರಿಗೆ ಹೆಣ್ಣು-ಗಂಡು ಕೂಡಲು ಪ್ರಸ್ತ ಅಂತ ಮಾಡುವ ಆಚರಣೆ ಇದೆ. ಈ ಪ್ರಸ್ತ ಸಮಯಕ್ಕೆ ದಿನಾಂಕ, ದಿನ, ಸಮಯ ಎಲ್ಲಾ ನೋಡಿ ಇಡಲಾಗುವುದು. ಹೆಣ್ಣು-ಗಂಡು ಒಂದು ಶುಭ ಗಳಿಗೆಯಲ್ಲಿ ಕೂಡುವುದರಿಂದ ಹುಟ್ಟುವ ಮಗುವಿನಲ್ಲಿ ಯೋಗ್ಯವಾದ ಗುಣಗಳಿರುತ್ತದೆ ಎಂದು ಹೇಳಲಾಗುತ್ತದೆ.

Why to follow garbhadana Sanskar to get pregnent

ಆದ್ದರಿಂದಲೇ ಗ್ರಹಣ ಸಮಯದಲ್ಲಿ ಲೈಂಗಿಕ ಚಟುವಟಿಕೆ ನಡೆಸಬಾರದು, ನವ ದಂಪತಿ ಆಷಾಢದಲ್ಲಿ ಜೊತೆಗಿರಬಾರದು ಎಂದೆಲ್ಲಾ ಹೇಳುತ್ತಾರೆ. ಮಕ್ಕಳನ್ನು ಪಡೆಯುವುದಕ್ಕಿಂತ ಯೋಗ್ಯ ಸಂತಾನ ಪಡೆಯಬೇಕೆಂಬ ಉದ್ದೇಶದಿಂದ ಗರ್ಭಧಾನ ಸಂಸ್ಕಾರ ವಿಧಾನವನ್ನು ರೂಪಿಸಲಾಗಿದೆ.

ಈ ನಿಯಮ ಪಾಲಿಸುವುದು ಏಕೆ ಮುಖ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕಾಗಿ ಇರುವ ಮುಹೂರ್ತಗಳೇನು, ಯಾವ ಸಮಯದಲ್ಲಿ ಗರ್ಭಧಾನ ವರ್ಜಿತ ಎಂದು ಗರ್ಭಧಾನ ಸಂಸ್ಕಾರ ವಿಧಾನದಲ್ಲಿ ಹೇಳಲಾಗಿದೆ ಎಂಬ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಗರ್ಭಧಾನ ಸಂಸ್ಕಾರ ಎಂದರೇನು?

ಗರ್ಭಧಾನ ಸಂಸ್ಕಾರ ಎಂದರೇನು?

ಶಾಸ್ತ್ರೋಕ್ತ ವಿಧಾನದಿಂದ ಪತಿ ಪತ್ನಿಯರ ಮಿಲನವಾಗುವುದೇ ಗರ್ಭದಾನ ಸಂಸ್ಕಾರವಾಗಿದೆ. ಯೋಗ್ಯ ಸಂತಾನೋತ್ಪತ್ತಿ ಪಡೆಯುವುದೇ ಈ ಮಿಲನದ ಉದ್ದೇಶವಾಗಿದೆ. ಈ ರೀತಿ ಮಿಲನಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವೊಂದು ಮುಹೂರ್ತಗಳನ್ನು ನಿರ್ಣಯಿಸಿದ್ದಾರೆ.

 ಯೋಗ್ಯ ಸಂತಾನ ಪಡೆಯಲು ಶುಭ ಮುಹೂರ್ತ

ಯೋಗ್ಯ ಸಂತಾನ ಪಡೆಯಲು ಶುಭ ಮುಹೂರ್ತ

ಸೂಕ್ತ ತಿಥಿಗಳು - ಕೃಷ್ಣಪಕ್ಷದಲ್ಲಿ 1,2,3,5,7,10 ಮತ್ತು ಶುಕ್ಲಪಕ್ಷದಲ್ಲಿ 2,3,5,7,10,12,13 ರಿಕ್ತ ತಿಥಿಗಳು 4,9,14

ಸೂಕ್ತ ವಾರಗಳು : ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಸೂಕ್ತವಾಗಿವೆ.

ನಕ್ಷತ್ರಗಳು : ಸ್ವಾತಿ, ಅನುರಾಧಾ, ಉತ್ತರಾಷಾಢ, ಶ್ರವಣ, ಧನಿಷ್ಠ, ಮೃಗಶಿರಾ, ರೋಹಿಣಿ, ಉತ್ತರಾ, ಫಾಲ್ಗುಣಿ, ಹಸ್ತ, ಶತಭಿಷಾ, ಉತ್ತರಾಭಾದ್ರಪದ ಈ ಹನ್ನೊಂದು ನಕ್ಷತ್ರಗಳು ಸೂಕ್ತವಾಗಿವೆ. ಇವುಗಳ ಅಭಾವದಲ್ಲಿ, ಅಶ್ವಿನಿ, ಪುನರ್ವಸು, ಪುಷ್ಯ ಮತ್ತು ಚಿತ್ತಾ ನಕ್ಷತ್ರಗಳನ್ನು ಪರಿಗಣಿಸಬಹುದು.

ಯೋಗ್ಯ ಸಂತಾನ ಪಡೆಯಲು ಯಾವಾಗ ವರ್ಜಿತ

ಯೋಗ್ಯ ಸಂತಾನ ಪಡೆಯಲು ಯಾವಾಗ ವರ್ಜಿತ

ಷಷ್ಠಿ, ಅಷ್ಟಮಿ, ಏಕಾದಶಿ, ಪೌರ್ಣಮಿ, ಅಮಾವಾಸ್ಯೆ ತಿಥಿಗಳು ವರ್ಜವಾಗಿವೆ. ಇದಲ್ಲದೆ, ತಂದೆ-ತಾಯಿಯ ಶ್ರಾದ್ಧ ತಿಥಿಗಳು, ತಿಥಿ ಗಂಡಾಂತ ಸಮಯ ವರ್ಜಿತವಾಗಿರುತ್ತದೆ. ಪತ್ನಿಯರ ಜನ್ಮ ನಕ್ಷತ್ರ ವರ್ಜಿತವಾಗಿವೆ. ಜನ್ಮ ನಕ್ಷತ್ರದಿಂದ 7, 10, 16, 19 ಮತ್ತು 25ನೆಯ ವಧ ತಾರೆಗಳು ವರ್ಜಿತವಾಗಿವೆ. ಪತಿ ಪತ್ನಿ ಇಬ್ಬರ ಜನ್ಮ ನಕ್ಷತ್ರದಿಂದ ವಧ ತಾರೆಗಳನ್ನು ನೋಡಬೇಕು ಹಾಗೂ ಸೂರ್ಯ ಮಂಗಲ, ಶನಿ , ರಾಹು-ಕೇತುಗಳು ಗೋಚಾರದಲ್ಲಿರುವ ನಕ್ಷತ್ರಗಳು ಕೂಡಾ ಮತ್ತು ನಕ್ಷತ್ರ ಗಂಡಾಂತರ ಕಾಲ ವರ್ಜಿತವಾಗಿದೆ.

ಯಾವ ಸಮಯದಲ್ಲಿ ಮಿಲನಕ್ರಿಯೆ ನಡೆಸಬಾರದು?

ಯಾವ ಸಮಯದಲ್ಲಿ ಮಿಲನಕ್ರಿಯೆ ನಡೆಸಬಾರದು?

ಸ್ತ್ರೀ ಮುಟ್ಟಾದಾಗ, ಗ್ರಹಣ, ಸಂಕ್ರಾಂತಿ ದಿನಗಳು, ಸಂದ್ಯಾಕಾಲ, ಹಗಲು, ಗುರು-ಶುಕ್ರಾಸ್ತ ಸಮಯ, ಮಲಮಾಸ, ಅಷ್ಟಮ ಹಾಗೂ ದ್ವಾದಶಗಳಲ್ಲಿ ಚಂದ್ರನಿರುವ ಸಮಯ, ಮಹಿಳೆಯ ಜನ್ಮ ರಾಶಿಯಿಂದ ಚತುರ್ಥ ಈ ಸಮಯದಲ್ಲಿ ಗಂಡ-ಹೆಂಡತಿ ಕೂಡಬಾರದು. ಈ ಸಮಯದಲ್ಲಿ ಕೂಡಿದರೆ ಒಳ್ಳೆಯ ಗುಣವಿರುವ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

ಲಗ್ನ : ಎಲ್ಲಾ ಲಗ್ನಗಳು ಮಿಲನಕ್ಕೆ ಶುಭವಾಗಿವೆ. ಆದರೆ ಜನ್ಮರಾಶಿ ಅಥವಾ ಜನ್ಮ ಲಗ್ನದಿಂದ ಅಷ್ಟಮ ಲಗ್ನ ವರ್ಜಿತವಾಗಿದೆ ಮತ್ತು ಪಾಪಗ್ರಹಯುಕ್ತ ಲಗ್ನವು ವರ್ಜಿತವಾಗಿರುವುದರಿಂದ ಯೋಗ ಸಂತಾನ ಪಡೆಯಲು ಯೋಗ್ಯವಲ್ಲ. ಕೇಂದ್ರ (1,4,7,10) ಮತ್ತು ತ್ರಿಕೋಣ (5,9) ಭಾವಗಳಲ್ಲಿ ಬುಧ, ಗುರು, ಶುಕ್ರಾದಿ ಶುಭಗ್ರಹಗಳು ಇರುವಾಗ ಮತ್ತು ಚಂದ್ರ ಮತ್ತು ಪಾಪಗ್ರಹಗಳು 3,6,11ರಲ್ಲಿ ಇದ್ದರೆ ಉಪಯುಕ್ತವಿರುತ್ತದೆ. ಅಷ್ಟಮ ಭಾವವು ಗ್ರಹರಹಿತವಾಗಿರಬೇಕು. ವಿಶೇಷವಾಗಿ ಮಂಗಲನು ಇರಬಾರದು ಮತ್ತು ಲಗ್ನ ಗಂಡಾಂತರವಿರಬಾರದು.

ನವಾಂಶ : ನವಾಂಶದಲ್ಲಿ ಎಲ್ಲಾ ನವಾಂಶಗಳು ಶುಭವಾಗಿವೆ. ಆದರೆ ನವಾಂಶ ಕುಂಡಲಿಯಲ್ಲಿ ಚಂದ್ರ ವಿಷಮ ರಾಶಿಯಲ್ಲಿ ಇರಬೇಕು. ಜೊತೆಗೆ ಲಗ್ನದ ವಿಷಯದಲ್ಲಿ ಹೇಳಲಾದ ಎಲ್ಲ ವರ್ಜಿತ ಅಂಶಗಳನ್ನು ಗಮನಿಸಬೇಕು

ಈ ರೀತಿ ಜ್ಯೋತಿಷ್ಯಶಾಸ್ತ್ರವು ತಮ್ಮ ಚೊಚ್ಚಲ ಮಗುವನ್ನು ಪಡೆಯಲು ನಿರೀಕ್ಷೆ ಮಾಡುವವರು ಯಾವ ಸಮಯದಲ್ಲಿ ಕೂಡುವುದು ಒಳ್ಳೆಯದು ಎಂಬ ಮುಹೂರ್ತ ಮಾಡಿದೆ. ಪ್ರತಿಯೊಬ್ಬರಿಗೂ ತಮಗೆ ಹುಟ್ಟುವ ಮಕ್ಕಳು ಉತ್ತಮವಾಗಿರಬೇಕು, ಆರೋಗ್ಯವಾಗಿ, ಗುಣಶೀಲರಾಗಿ ಇರಬೇಕೆಂದು ಬಯಸುವುದು ಸಹಜ. ಅಲ್ಲದೆ ಮೊದಲ ಮಗು ಒಳ್ಳೆಯ ಸಮಯದಲ್ಲಿ ರೂಪವಾದರೆ ಉಳಿದ ಮಕ್ಕಳಿಗೂ ಗರ್ಭವೂ ಪವಿತ್ರವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

Why to follow garbhadana Sanskar to get pregnent

Every parents wants to have healthy and good character kids, Here more information why to follow to garbhasanskar to get pregnent, Read.
Story first published: Saturday, July 4, 2020, 17:29 [IST]
X
Desktop Bottom Promotion