For Quick Alerts
ALLOW NOTIFICATIONS  
For Daily Alerts

Shukra Gochar 2022: ಕರ್ಕ ರಾಶಿಗೆ ಶುಕ್ರ ಸಂಚಾರ: ಆಗಸ್ಟ್‌ 7ರಿಂದ 8 ರಾಶಿಗಳಿಗೆ ಶುಕ್ರದೆಸೆ, 4 ರಾಶಿಯವರು ಹುಷಾರಾಗಿರಬೇಕು

|

ವೈದಿಕ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ರಾಶಿ ಬದಲಾವಣೆ ತುಂಬಾನೇ ಮುಖ್ಯವಾಗಿರುತ್ತದೆ. ಏಕೆಂದರೆ ಈ ರಾಶಿ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುವುದು. ಈ ಆಗಸ್ಟ್‌ 7ಕ್ಕೆ ಶುಕ್ರನು ಕರ್ಕ ರಾಶಿಗೆ ಪ್ರವೇಶಿಸಲಿದೆ. ಶುಕ್ರನು ನಮ್ಮ ರಾಶಿಯಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ ನಮಗೆ ಶುಕ್ರದೆಸೆ, ಅದೇ ದುರ್ಬಲ ಸ್ಥಾನದಲ್ಲಿದ್ದರೆ ಅದು ನಮ್ಮ ಸಂಬಂಧ, ಸೌಕರ್ಯ ಎಲ್ಲದರ ಮೇಲೂ ಪ್ರಭಾವ ಬೀರುವುದು.

Shukra Gochar 2022

ಈ ಶುಕ್ರ ಸಂಚಾರ ದ್ವಾದಶ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂದು ನೋಡೋಣ:

ಮೇಷ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೇಷ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೇಷ ರಾಶಿಯ 2ನೇ ಮತ್ತು 7ನೇ ಮನೆಯ ಅಧಿಪತಿಯಾಗಿರುವ ಶುಕ್ರನು ಈ ಸಂಚಾರ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಆರ್ಥಿಕವಾಗಿ ಒಳ್ಳೆಯದಾಗಲಿದೆ, ನಿಮ್ಮ ಕುಟುಂಬದ ಸಹಾಯದಿಂದಾಗಿ ನೀವು ಖುಷಿಯಾಗುವಿರಿ

ಮೇಷ ರಾಶಿಯ ಜನರ ಪ್ರೀತಿಯ ಜೀವನವು ಸ್ವಲ್ಪ ಬದಲಾಗಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ಜನರು ತುಂಬಾ ಭಾವುಕರಾಗಬಹುದು. ಸಣ್ಣ ವಿಷಯಗಳು ಅವರಿಗೆ ತೊಂದರೆ ನೀಡಬಹುದು. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧದಲ್ಲಿ ಕೆಲವು ಸಮಸ್ಯೆಗಳಿರಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿದ್ದರೂ, ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು.

ಪರಿಹಾರ: ಹನುಮಾನ್‌ ಚಾಲೀಸ ಪಠಿಸಿ

ವೃಷಭ ರಾಶಿ: ಈ ಅವಧಿ ಅನುಕೂಲಕರವಾಗಿದೆ

ವೃಷಭ ರಾಶಿ: ಈ ಅವಧಿ ಅನುಕೂಲಕರವಾಗಿದೆ

ವೃಷಭ ರಾಶಿಯ ಮೊದಲ ಹಾಗೂ 6ನೇ ಮನೆಯ ಅಧಿಪತಿಯಾಗಿರುವ ಶುಕ್ರ ನಿಮ್ಮ ಮೂರನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಭಾವನೆಗಳಲ್ಲಿ ಬದಲಾವಣೆಯಾಗಬೇಕಾಗಿದೆ. ಆರ್ಥಿಕವಾಗಿ ಈ ಸಮಯ ನಿಮಗೆ ಅನುಕೂಲಕರವಾಗಿದೆ. ವೃತ್ತಿ ಬದುಕಿನಲ್ಲಿ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿದೆ:

ಪ್ರೇಮ ಜೀವನದಲ್ಲಿ ಖುಷಿಯಾಗಿರುವಿರಿ ವೈವಾಹಿಕ ಜೀವನ ಕೂಡ ಚೆನ್ನಾಗಿರಲಿದೆ. ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಿದೆ. ಆದರೆ ಅನಾರೋಗ್ಯವಿದ್ದರೆ ಅದರಿಂದ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.

ಪರಿಹಾರ: ದುರ್ಗಾ ಸಪ್ತಾಷ್ಟಮಿಯಂದು ದುರ್ಗೆಗೆ ಕೆಂಪು ಹೂಗಳನ್ನು ಅರ್ಪಿಸಿ.

ಮಿಥುನ ರಾಶಿ: ಆರ್ಥಿಕ ಸಂಪತ್ತು ವೃದ್ಧಿಸಲಿದೆ

ಮಿಥುನ ರಾಶಿ: ಆರ್ಥಿಕ ಸಂಪತ್ತು ವೃದ್ಧಿಸಲಿದೆ

ಮಿಥುನ ರಾಶಿಯವರ 12ನೇ ಮತ್ತು 5ನೇ ಮನೆಯ ಅಧಿಪತಿಯಾಗಿರುವ ಶುಕ್ರ ಈ ಅವಧಿಯಲ್ಲಿ 2ನೇ ಮನೆಗೆ ಸಂಚರಿಸಲಿದೆ.

ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸಂಪತ್ತು ಹೆಚ್ಚಲಿದೆ, ಕುಟುಂಬದಲ್ಲೂ ಖುಷಿ, ನೆಮ್ಮದಿ ಇರಲಿದೆ. ಈ ಸಮಯದಲ್ಲಿ ನೀವು ಶುಭ ಕಾರ್ಯಗಳನ್ನು ಮಾಡಬಹುದು, ವಿವಾಹಿತರು ಮಕ್ಕಳ ವಿಷಯದಲ್ಲಿ ಶುಭ ಸುದ್ದಿ ಪಡೆಯಬಹುದು. ಆರೋಗ್ಯ ಸ್ಥಿತಿಯೂ ಸುಧಾರಿಸಲಿದೆ.

ಪರಿಹಾರ: ಗಣೇಶನಿಗೆ ಗರಿಕೆಯನ್ನು ಅರ್ಪಿಸಿ ಸಂಜೆ ಹೊತ್ತಿನಲ್ಲಿ ದೀಪ ಹಚ್ಚಿ.

ಕರ್ಕ ರಾಶಿ: ರಾಜಕಾರಣಿಗಳಿಗೆ ಒಳ್ಳೆಯ ಸಮಯ

ಕರ್ಕ ರಾಶಿ: ರಾಜಕಾರಣಿಗಳಿಗೆ ಒಳ್ಳೆಯ ಸಮಯ

ಕರ್ಕ ರಾಶಿಯ 11ನೇ ಹಾಗೂ 4ನೇ ಮನೆಯ ಅಧಿಪತಿಯಾಗಿರುವ ಶುಕ್ರ ಈ ಸಂಕ್ರಮಣ ಅವಧಿಯಲ್ಲಿ ನಿಮ್ಮ ಲಗ್ನ ಮನೆಯಲ್ಲಿ ಇರಲಿದೆ. ರಾಜಕಾರಣಿಗಳು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯಲಿದ್ದಾರೆ, ಈ ಅವಧಿಯಲ್ಲಿ ಆದಾಯ ಹೆಚ್ಚಾಗುವುದಿಲ್ಲ, ಆದರೆ ಖರ್ಚು ಹೆಚ್ಚಾಗಲಿದೆ, ಪ್ರೇಮಿಗಳ ಹಾಗೂ ವಿವಾಹಿತರ ಜೀವನ ಚೆನ್ನಾಗಿರಲಿದೆ

ಪರಿಹಾರ: ನಿಮ್ಮ ಕುಲದೇವರನ್ನು ಪ್ರಾರ್ಥಿಸಿ.

ಸಿಂಹ ರಾಶಿ: ಈ ಅವಧಿಯಲ್ಲಿ ಹುಷಾರಾಗಿರಿ

ಸಿಂಹ ರಾಶಿ: ಈ ಅವಧಿಯಲ್ಲಿ ಹುಷಾರಾಗಿರಿ

ಸಿಂಹ ರಾಶಿಯವರ ಮೂರನೇ ಮತ್ತು 10ನೇ ಮನೆಯ ಅಧಿಪತಿಯಾಗಿರುವ ಶುಕ್ರ ಈ ಸಂಕ್ರಮಣ ಸಮಯದಲ್ಲಿ 12ನೇ ಮನೆಯಲ್ಲಿ ಇರಲಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಅನುಕೂಲಕರವಾಗಿದೆ, ಕೌಟಂಬಿಕ ಜೀವನದಲ್ಲಿ ಕೆಲ ಸಮಸ್ಯೆ ಎದುರಾಗಬಹುದು, ಸಂಗಾತಿ ಜೊತೆ ಮಾತನಾಡುವಾಗ ನಿಮ್ಮ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು. ಈಸಮಯದಲ್ಲಿ ಅನಾರೋಗ್ಯದಿಂದಾಗಿ ಸಾಲ ಹೆಚ್ಚಲಿದೆ. ಈ ಅವಧಿಯಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು.

ಪರಿಹಾರ: ದುರ್ಗೆಯನ್ನು ಪೂಜಿಸಿ.

ಕನ್ಯಾ ರಾಶಿ: ಹಣದ ವಿಷಯದಲ್ಲಿ ರಿಸ್ಕ್‌ ಬೇಡ

ಕನ್ಯಾ ರಾಶಿ: ಹಣದ ವಿಷಯದಲ್ಲಿ ರಿಸ್ಕ್‌ ಬೇಡ

ಕನ್ಯಾ ರಾಶಿಯ ಎರಡನೇ ಹಾಗೂ ಒಂಭತ್ತನೇ ಮನೆಯ ಅಧಿಪತಿಯಾಗಿರುವ ಶುಕ್ರನು ನಿಮ್ಮ ಹನ್ನೊಂದನೇ ಮನೆಯಲ್ಲಿ ಇರಲಿದೆ.

ಕನ್ಯಾ ರಾಶಿಯ ವ್ಯಾಪಾರ ವರ್ಗದ ಜನರು ಶುಕ್ರನ ಸಂಚಾರದಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ಹಣದ ವಿಷಯದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಬೇಡಿ. ನೀವು ಹಣವನ್ನು ಹೂಡಿಕೆ ಮಾಡಲು ಮನಸ್ಸು ಮಾಡುತ್ತಿದ್ದರೆ, ಇಂದು ಎಲ್ಲೋ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಸಾಧ್ಯವಾದರೆ, ಸದ್ಯಕ್ಕೆ ಹೂಡಿಕೆ ಮಾಡುವುದನ್ನು ತಪ್ಪಿಸಿ, ಆಗ ಅದು ನಿಮಗೆ ಒಳ್ಳೆಯದು. ಈ ಸಮಯದಲ್ಲಿ, ಆರೋಗ್ಯದ ವಿಷಯದಲ್ಲಿ ಅಜಾಗರೂಕರಾಗಬೇಡಿ, ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಪರಿಹಾರ: ದುರ್ಗೆ ಮಾತೆಯನ್ನು ಪೂಜಿಸಿ.

ತುಲಾ ರಾಶಿ: ಕರ್ಕ ರಾಶಿಯವರು ಹುಷಾರಾಗಿರಬೇಕು

ತುಲಾ ರಾಶಿ: ಕರ್ಕ ರಾಶಿಯವರು ಹುಷಾರಾಗಿರಬೇಕು

ತುಲಾ ರಾಶಿಯ ಲಗ್ನ ಹಾಗೂ ಎಂಟನೇ ಮನೆಯ ಅಧಿಪತಿಯಾಗಿರುವ ಶುಕ್ರ ನಿಮ್ಮ 10ನೇ ಮನೆಯಲ್ಲಿ ಇರಲಿದೆ.

ಶುಕ್ರನು ಕರ್ಕಾಟಕ ರಾಶಿಯನ್ನು ಪ್ರವೇಶಿಸುವುದರಿಂದ, ತುಲಾ ರಾಶಿಯವರ ಕುಟುಂಬ ಜೀವನವು ಸ್ವಲ್ಪ ಹೋರಾಟವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಅಲ್ಲದೆ, ಈ ಸಮಯದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಿರುವ ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಲು ಪ್ರಯತ್ನಿಸಿ. ಉದ್ಯೋಗ ವೃತ್ತಿಪರರು ಮತ್ತು ವ್ಯಾಪಾರಸ್ಥರಿಗೆ ಈ ಅವಧಿಯಲ್ಲಿ ಅನೇಕ ಸವಾಲುಗಳು ಬರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯವು ನಿಮ್ಮ ಮೇಲೆ ಟೋಲ್ ತೆಗೆದುಕೊಳ್ಳಬಹುದು. ಹಾಗಾಗಿ ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ.

ಪರಿಹಾರ: ಪ್ರತಿದಿನ ಗಾಯತ್ರಿ ಮಂತ್ರ ಪಠಿಸಿ.

 ವೃಶ್ಚಿಕ ರಾಶಿ: ಈ ಅವಧಿ ಅದೃಷ್ಟಕರವಾಗಿದೆ

ವೃಶ್ಚಿಕ ರಾಶಿ: ಈ ಅವಧಿ ಅದೃಷ್ಟಕರವಾಗಿದೆ

ವೃಶ್ಚಿಕ ರಾಶಿಯ 12ನೇ ಹಾಗೂ 7ನೇಮನೆಯ ಅಧಿಪತಿಯಾಗಿರುವ ಶುಕ್ರ ನಿಮ್ಮ ರಾಶಿಯ 9ನೇ ಮನೆಯಲ್ಲಿ ಇರಲಿದೆ. ಆರ್ಥಿಕ ದೃಷ್ಟಿಯಿಂದ ಈ ಸಮಯ ಒಳ್ಳೆಯದಿದೆ,ಅದೃಷ್ಟದ ಬಲ ಜೊತೆಗಿರುವುದರಿಂದ ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತೆ, ವೈವಾಹಿಕ ಜೀವನದಲ್ಲಿ ಖುಷಿ ಇರುತ್ತದೆ, ವಿದ್ಯಾರ್ಥಿಗಳಿಗೂ ಈ ಸಮಯ ಅನುಕೂಲಕರವಾಗಿದೆ.

ಪರಿಹಾರ: ಅವಿವಾಹಿತ ಮಹಿಳೆಯರಿಗೆ ಬಿಳಿ ವಸ್ತ್ರ ನೀಡಿ.

ಧನು ರಾಶಿ: ಈ ಅವಧಿಯಲ್ಲಿ ಹುಷಾರಾಗಿರಬೇಕು

ಧನು ರಾಶಿ: ಈ ಅವಧಿಯಲ್ಲಿ ಹುಷಾರಾಗಿರಬೇಕು

ಧನು ರಾಶಿಯವರಲ್ಲಿಶುಕ್ರ 11ನೇ ಹಾಗೂ 6ನೇ ಮನೆಯ ಅಧಿಪತಿಯಾಗಿದ್ದು, ಈ ಸಮಯದಲ್ಲಿ ಶುಕ್ರ ನಿಮ್ಮ 9ನೇ ಮನೆಗೆ ಸಾಗಲಿದೆ

ಕರ್ಕಾಟಕ ರಾಶಿಯಲ್ಲಿ ಶುಕ್ರನ ಪ್ರವೇಶದಿಂದಾಗಿ ಧನು ರಾಶಿಯವರು ಈ ಅವಧಿಯಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಅಲ್ಲದೆ, ಈ ಅವಧಿಯಲ್ಲಿ ಯಾರಿಂದಲೂ ಹಣವನ್ನು ಸಾಲ ಪಡೆಯಬೇಡಿ, ಇಲ್ಲದಿದ್ದರೆ ನಿಮ್ಮ ಕಷ್ಟಗಳು ಹೆಚ್ಚಾಗಬಹುದು. ಅಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ನೀವು ಹಣದ ನಷ್ಟದ ಸಮಸ್ಯೆಯನ್ನು ಸಹ ಎದುರಿಸಬಹುದು. ಈ ಸಮಯದಲ್ಲಿ ಪ್ರತಿಯೊಂದು ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಈ ಸಮಯದಲ್ಲಿ, ವಿದ್ಯಾರ್ಥಿಗಳು ಅಡೆತಡೆಗಳನ್ನು ಎದುರಿಸಬಹುದು.

ಪರಿಹಾರ: ಹನುಮಾನ್‌ ಚಾಲೀಸ ಪಠಿಸಿ

 ಮಕರ ರಾಶಿ:ಈ ಅವಧಿ ಅನುಕೂಲಕರವಾಗಿದೆ

ಮಕರ ರಾಶಿ:ಈ ಅವಧಿ ಅನುಕೂಲಕರವಾಗಿದೆ

ಮಕರ ರಾಶಿಯ 10ನೇ ಮತ್ತು 5ನೇ ಮನೆಯ ಅಧಿಪತಿಯಾಗಿರುವ ಶುಕ್ರ ನಿಮ್ಮ 7ನೇ ಮನೆಗೆ ಸಾಗಲಿದೆ. ಈ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ, ಬ್ಯುಸ್‌ನೆಸ್‌ ಅಭಿವೃದ್ಧಿಯಾಗುವುದು, ಹೂಡಿಕೆಯಿಂದ ಹಣ ಗಳಿಸುವಿರಿ, ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಏನಾದರೂ ಕಾಯಿಲೆ ಇದ್ದರೆ ಈ ಅವಧಿಯಲ್ಲಿ ಅದರಿಂದ ಮುಕ್ತರಾಗುತ್ತೀರಿ

ಪರಿಹಾರ: ಶಿವನಿಗೆ ರುದ್ರಾಭಿಷೇಕ ಮಾಡಿ.

ಕುಂಭ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಕುಂಭ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಕುಂಭ ರಾಶಿಯ 9ನೇ ಹಾಗೂ 4ನೇ ಮನೆಯ ಅಧಿಪತಿಯಾಗಿರುವ ಶುಕ್ರ ಈ ಅವಧಿಯಲ್ಲಿ 6ನೇ ಮನೆಯಲ್ಲಿ ಇರಲಿದೆ.

ಕುಂಭ ರಾಶಿಯವರು ಈ ಅವಧಿಯಲ್ಲಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ಶ್ರಮಿಸಬೇಕಾಗುತ್ತದೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಆದ್ದರಿಂದ ಆದಷ್ಟು ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ವಿವಾಹಿತರು ತಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು.

ಪರಿಹಾರ: ದುರ್ಗೆ ಮಂತ್ರ ಪಠಿಸಿ

ಮೀನ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೀನ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೀನ ರಾಶಿಯ 3 ಹಾಗೂ 8ನೇ ಮನೆಯ ಅಧಿಪತಿಯಾಗಿರುವ ಶುಕ್ರ ನಿಮ್ಮ 5ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಬ್ಯುಸ್‌ನೆಸ್‌ನಲ್ಲಿ ಯಶಸ್ಸು ಕಾಣುವಿರಿ. ವಿದ್ಯಾರ್ಥಿಗಳು ಓದಿನ ಕಡೆ ಗಮನ ನೀಡಲು ಸಾಧ್ಯವಾಗುವುದು, ವೈವಾಹಿಕ ಜೀವನ ಚೆನ್ನಾಗಿರುತ್ತದೆ, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತೆ,ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು.

ಪರಿಹಾತ: ಶುಕ್ರವಾರ ಹುಡುಗಿಯರಿಗೆ ಉಡುಗೊರೆ ನೀಡಿ.

English summary

Shukra Rashi Parivartan Venus Transit in Cancer on 07 August 2022 Effects And Remedies On 12 Zodiac Signs In Kannada

Shukra Rashi Parivartan 2022 In Kataka Rashi; Venus Transit in Cancer Effects on Zodiac Signs : The Venus Transit in Cancer will take place on 07 August 2022. Learn about remedies to perform in Kannada,
Story first published: Friday, August 5, 2022, 20:32 [IST]
X
Desktop Bottom Promotion