For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು

|

ಬಣ್ಣಗಳು ನಮ್ಮ ಜೀನವದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ಪ್ರತಿಯೊಂದು ಬಣ್ಣಕ್ಕೂ ಅದರದ್ದೇ ಆದ ಮಹತ್ವ ಹೊಂದಿರುತ್ತದೆ. ಯಾವ ಬಣ್ಣ , ಯಾವ ವಿಷಯಗಳಿಗೆ ಸೂಕ್ತ ಎಂಬುದು ಕೆಲವರಿಗೆ ಗೊಂದಲವಿರುತ್ತದೆ.

ಒಂದು ಬಣ್ಣ ಆರೋಗ್ಯವನ್ನು ಸೂಚಿಸಿದರೆ, ಮತ್ತೊಂದು ಬಣ್ಣ ಶಾಂತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಬಣ್ಣಗಳಿಗೆ ವಾಸ್ತುವಿನಲ್ಲೂ ಸಾಕಷ್ಟು ಪ್ರಾಮುಖ್ಯತೆ ಇದೆ. ನಾವು ವಾಸಿಸುವ ಮನೆ ಯಾವ ಬಣ್ಣ ಹೊಂದಿದರೆ, ಜೀವನದಲ್ಲಿ, ಕುಟುಂಬದಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬುದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ಹಾಗಾದ್ರೆ ಬನ್ನಿ ನಿಮ್ಮ ಮನೆಗೆ ಯಾವ ಬಣ್ಣ ಕೊಟ್ಟರೆ ಉತ್ತಮ ಲಾಭ ನಿಮ್ಮದಾಗುತ್ತದೆ ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ಹೇಳಿದ್ದೇವೆ, ಓದಿ

ವಾಸ್ತು ಪ್ರಕಾರ ಮನೆಗೆ ಸೂಕ್ತವಾದ ಬಣ್ಣಗಳು ಇಲ್ಲಿವೆ.

 ನೀಲಿ:

ನೀಲಿ:

ನೀಲಿ ಎಂಬುದು ಆಕಾಶದ ಬಣ್ಣ . ಇದು ಭಾವನೆ, ಸ್ಫೂರ್ತಿ, ಭಕ್ತಿ ಮತ್ತು ಸತ್ಯವನ್ನು ಪ್ರತಿನಿಧಿಸುತ್ತದೆ. ಇದು ಕರುಣೆಯನ್ನು ಬಿಂಬಿಸುವ ಬಣ್ಣ ಮತ್ತು ಮೈ ಕೈ ನೋವನ್ನು ಕಡಿಮೆ ಮಾಡುತ್ತದೆ. ಅದನ್ನು ಬಳಸಲು ಉತ್ತಮ ದಿಕ್ಕು ಪಶ್ಚಿಮ. ಆಗ್ನೇಯದಲ್ಲಿ ಈ ಬಣ್ಣವನ್ನು ಬಳಸಬೇಡಿ, ಏಕೆಂದರೆ ಇದು ಬೆಂಕಿಯ ದಿಕ್ಕು. ಅಡಿಗೆಮನೆ, ರೆಸ್ಟೋರೆಂಟ್, ಕಚೇರಿ ಅಥವಾ ಅಂಗಡಿಗಳಲ್ಲಿ ಇದನ್ನು ಬಳಸುವುದನ್ನು ತಪ್ಪಿಸಿ. ಆದರೆ, ನಿಮ್ಮ ಮಗುವಿನ ಮಲಗುವ ಕೋಣೆಗೆ ಇದು ಒಳ್ಳೆಯದು.

ಇಂಡಿಗೊ -:

ಇಂಡಿಗೊ -:

ಇಂಡಿಗೊ ಒಬ್ಬರ ಆಂತರಿಕ ಆತ್ಮದೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸುತ್ತದೆ. ಆಧ್ಯಾತ್ಮಿಕ ಗುಣಗಳನ್ನು ಹೆಚ್ಚಿಸುವುದಲ್ಲದೇ, ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಶೌಚಾಲಯ ಮತ್ತು ಅಡುಗೆ ಮನೆಗಳನ್ನು ಹೊರತುಪಡಿಸಿ ಎಲ್ಲಿಯಾದರೂ ಇದನ್ನು ಬಳಸಬಹುದು. ಇದು ಧ್ಯಾನ ಮತ್ತು ಅಧ್ಯಯನ ಪ್ರದೇಶಗಳಿಗೆ ಸೂಕ್ತವಾಗಿದೆ. ಬಿಳಿ ಅಥವಾ ಹಳದಿ ಬಣ್ಣದೊಂದಿಗೆ ಉತ್ತಮ ಸಂಯೋಜನೆಯನ್ನು ಮಾಡುತ್ತದೆ.

ಪಿಂಕ್:

ಪಿಂಕ್:

ಇದು ಪ್ರೀತಿಯೊಂದಿಗೆ ಸಂಬಂಧ ಹೊಂದಿದ್ದು, ಹೊಸದಾಗಿ ಮದುವೆಯಾದ ದಂಪತಿಗಳಿಗೆ ಗುಲಾಬಿ ಬಣ್ಣವು ಹೆಚ್ಚು ಸೂಕ್ತವಾಗಿರುತ್ತದೆ. ಯಾವಾಗಲೂ ಜಗಳವಾಡುವ ದಂಪತಿಗಳು ಈ ಬಣ್ಣವನ್ನು ಬಳಸಬೇಕು. ಶೀಘ್ರದಲ್ಲೇ ಕೋಪಗೊಳ್ಳುವವರು ಸಹ ಇದರ ಲಾಭ ಪಡೆಯುತ್ತಾರೆ. ಈ ಬಣ್ಣವನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಬಳಸಬಹುದು.

ನೇರಳೆ:

ನೇರಳೆ:

ಭಕ್ತಿ ಮತ್ತು ಜ್ಞಾನದ ಬಣ್ಣ ನೇರಳೆ. ಇದು ಬುದ್ಧಿಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಸ್ಥಿರಗೊಳಿಸುತ್ತದೆ. ಪೂಜೆ ಮತ್ತು ಅಧ್ಯಯನ ಸೂಕ್ತವಾಗಿರುವ ಕೊಠಡಿಗಳಲ್ಲಿ ನೇರಳೆ ಬಣ್ಣ ಬಹಳ ಸೂಕ್ತವಾಗಿರುತ್ತದೆ.

English summary

Vastu For Home Colour: Tips To Choose Right Colour To Your House

Here we told about Vastu for Home Colour: Tips to Choose right colour to your House, read on
Story first published: Thursday, January 21, 2021, 17:43 [IST]
X
Desktop Bottom Promotion