For Quick Alerts
ALLOW NOTIFICATIONS  
For Daily Alerts

ಈ 3 ರಾಶಿಯವರಿಗೆ ಈಗ ಲಕ್ಷ್ಮಿ ನಾರಾಯಣ ಯೋಗ, ತುಂಬಾನೇ ಅದೃಷ್ಟದ ಸಮಯ

|

ಜ್ಯೋತಿಷ್ಯದಲ್ಲಿ ವಿವಿಧ ರೀತಿಯ ಯೋಗಗಳ ಬಗ್ಗೆ ಹೇಳಲಾಗಿದೆ. ಗ್ರಹಗಳ ಸಂಯೋಗವಾದಾಗ ಈ ರೀತಿಯ ಯೋಗ ರೂಪುಗೊಳ್ಳುವುದು. ಈ ಡಿಸೆಂಬರ್‌ನಲ್ಲಿ ಧನು ರಾಶಿಗೆ ಎರಡು ಪ್ರಮುಖ ಗ್ರಹಗಳ ಸಂಚಾರವಾಗಿದೆ. ಡಿಸೆಂಬರ್‌ 3ಕ್ಕೆ ನಮ್ಮ ಬೌಧಿಕ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಬುಧ ಸಂಚಾರ ಮಾಡಿದರೆ, ಡಿಸೆಂಬರ್ 5ಕ್ಕೆ ನಮ್ಮ ಸಂಪತ್ತು, ಐಶ್ವರ್ಯದ ಮೇಲೆ ಪ್ರಭಾವ ಬೀರುವ ಶುಕ್ರನ ಸಂಚಾರವಾಗಿದೆ. ಆದ್ದರಿಂದಾಗಿ ಧನು ರಾಶಿಯಲ್ಲಿ ಈ ಎರಡು ಗ್ರಹಗಳ ಸಂಚಾರವಾಗಿದೆ.

Sukra Gochar 2022

ಕೆಲವೊಂದು ರಾಶಿಯಲ್ಲಿ ಬುಧ ಹಾಗೂ ಶುಕ್ರ ಗ್ರಹದ ಸಂಯೋಜನೆಯಾದಾಗ ಲಕ್ಷ್ಮೀ ನಾರಾಯಣ ಯೋಗ ಏರ್ಪಡುತ್ತದೆ. ಆದರೆ ಈ ಯೋಗ ಕೆಲವು ರಾಶಿಗಳಿಗಷ್ಟೇ ಇರುತ್ತದೆ. ಬುಧ ಹಾಗೂ ಶುಕ್ರ ರಾಶಿಗಳಲ್ಲಿ ಯಾವ ಸ್ಥಾನದಲ್ಲಿದೆ ಅದರ ಮೇಲೆ ಈ ಯೋಗ ರೂಪುಗೊಳ್ಳುವುದು. ಬುಧ ಹಾಗೂ ಶುಕ್ರ ಯಾವ ರಾಶಿಗಳಲ್ಲಿ ಪ್ರಬಲ ಸ್ಥಾನದಲ್ಲಿರುತ್ತದೋ ಆಗ ಲಕ್ಷ್ಮಿ ನಾರಾಯಣ ಯೋಗ ಏರ್ಪಡುವುದು.

ಈ ಡಿಸೆಂಬರ್‌ನಲ್ಲಿ 3 ರಾಶಿಗಳ ಮೇಲೆ ಲಕ್ಷ್ಮಿ ನಾರಾಯಣ ಯೋಗ ಏರ್ಪಟ್ಟಿದೆ, ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಲಕ್ಷ್ಮಿ ನಾರಾಯಣ ಯೋಗದ ಪ್ರಯೋಜನಗಳು:

ಲಕ್ಷ್ಮಿ ನಾರಾಯಣ ಯೋಗದ ಪ್ರಯೋಜನಗಳು:

ಎಲ್ಲಾ 9 ಗ್ರಹಗಳ ವಿಶೇಷ ಮಹತ್ವವನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಕಾಲಕಾಲಕ್ಕೆ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುವುದರ ಜೊತೆಗೆ, ಎಲ್ಲಾ ಗ್ರಹಗಳು ಸಹ ಒಂದು ಅಥವಾ ಇನ್ನೊಂದು ರಾಶಿಯಲ್ಲಿ ಇತರ ಗ್ರಹಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತವೆ. ಈ ಗ್ರಹಗಳ ಮೈತ್ರಿಯು ಎಲ್ಲಾ ಸ್ಥಳೀಯರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತಹ ಎರಡು ಗ್ರಹಗಳ ಸಂಯೋಜನೆಯು ಈ ತಿಂಗಳು ರೂಪುಗೊಳ್ಳಲಿದೆ.

ಲಕ್ಷ್ಮೀ ನಾರಾಯಣ ಯೋಗವು ಅತ್ಯಂತ ಮಂಗಳಕರವಾದ ಯೋಗವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ಬುಧ ಮತ್ತು ಶುಕ್ರ ಗ್ರಹಗಳ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳುತ್ತದೆ. ಈ ಎರಡು ಗ್ರಹಗಳ ಸಂಯೋಜನೆಯು ಸ್ಥಳೀಯರನ್ನು ರೋಮ್ಯಾಂಟಿಕ್ ಮತ್ತು ಕಲಾತ್ಮಕ ಸ್ವಭಾವವನ್ನಾಗಿ ಮಾಡುತ್ತದೆ.

ಬುಧವನ್ನು ಬುದ್ಧಿವಂತಿಕೆ ಮತ್ತು ಹಾಸ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಶುಕ್ರವು ಸೌಂದರ್ಯ, ಆನಂದ ಮತ್ತು ಐಷಾರಾಮಿ ಅಂಶವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಯೋಗವು ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುವ ಯೋಗವಾಗಿದೆ. ವ್ಯಕ್ತಿಯು ಕೆಲವು ವಿಶೇಷ ಕಲೆಗಳಲ್ಲಿ ಪ್ರವೀಣನಾಗುತ್ತಾನೆ. ಐದನೇ ಮನೆಯಲ್ಲಿ ರೂಪುಗೊಂಡ ಲಕ್ಷ್ಮೀ ನಾರಾಯಣ ಯೋಗದ ಪ್ರಭಾವದಿಂದಾಗಿ, ವ್ಯಕ್ತಿಯು ಪಂಡಿತನಾಗುತ್ತಾನೆ.

ಜಾತಕದಲ್ಲಿ ಲಕ್ಷ್ಮೀ ನಾರಾಯಣ ಯೋಗವಿದ್ದಾಗ ಆ ರಾಶಿಯವರು ಸಾಧನೆ ಮಾಡುತ್ತಾರೆ. ಈ ಯೋಗವು ಶಿಕ್ಷಣ ಮತ್ತು ಜ್ಞಾನದ ವಿಷಯದಲ್ಲಿ ವಿಶೇಷ ಯಶಸ್ಸನ್ನು ನೀಡುತ್ತದೆ. ತಮ್ಮ ಸಾಧನೆಯಿಂದ ಖ್ಯಾತಿಯನ್ನು ಪಡೆಯುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗ ಉಂಟಾಗಿದೆ, ಇದರಿಂದ ನಿಮಗೆ ವಿಶೇಷ ಲಾಭಗಳಾಗಲಿವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ಅವರು ಮಕ್ಕಳಿಂದ ಸಂತೋಷವನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ನಿಮ್ಮ ಜೊತೆಗಿರುವುದರಿಂದ ಚಿಂತಿಸಬೇಕಾಗಿಲ್ಲ. ಜಾತಕದ ಐದನೇ ಮನೆಯಲ್ಲಿ ಈ ಯೋಗದ ಸೃಷ್ಟಿಯಿಂದಾಗಿ, ನಿಮ್ಮ ಮಕ್ಕಳ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಾಗುವುದು. ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾನೇ ಅನುಕೂಲಕರವಾಗಿದೆ.

 ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲೂ ಲಕ್ಷ್ಮಿ ನಾರಾಯಣ ಯೋಗ ಏರ್ಪಟ್ಟಿದೆ. ಧನು ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗದಿಂದ ವಿಶೇಷ ಲಾಭಗಳು ದೊರೆಯಲಿವೆ. ಈ ರಾಶಿಯ ನಾಲ್ಕನೇ ಮನೆಯಲ್ಲಿ ಅಂದರೆ ಶಾರೀರಿಕ ಸುಖ ಮತ್ತು ತಾಯಿಯ ಸ್ಥಾನದಲ್ಲಿ ಈ ಸಂಚಾರ ನಡೆಯುತ್ತಿದೆ. ಈ ಅವಧಿಯಲ್ಲಿ ನೀವು ದೈಹಿಕವಾಗಿ ತುಂಬಾ ಚೆನ್ನಾಗಿರುತ್ತೀರಿ.

ಅಲ್ಲದೆ, ಈ ಸಮಯದಲ್ಲಿಈ ರಾಶಿಯವರು ಹೊಸ ವಾಹನ ಅಥವಾ ಇತರ ಚರ ಹಾಗೂ ಸ್ಥಿರ ಆಸ್ತಿಯನ್ನು ಖರೀದಿಸಲು ಮನಸ್ಸು ಮಾಡಬಹುದು. ಈ ಸಮಯವನ್ನು ಹೂಡಿಕೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಅಲ್ಲದೆ, ಈ ಸಮಯದಲ್ಲಿ ನೀವು ತಾಯಿಯ ಮೂಲಕ ಹಣವನ್ನು ಪಡೆಯುತ್ತೀರಿ. ಈ ಅವಧಿ ನಿಮಗೆ ಯೋಗದ ಬೆಂಬಲವಿದೆ.

 ಧನು ರಾಶಿ

ಧನು ರಾಶಿ

ಧನು ರಾಶಿಯಲ್ಲಿ ಬುಧ ಹಾಗೂ ಶುಕ್ರ ಸಂಚಾರವಾಗಿದ್ದು ಆ ಎರಡೂ ಗ್ರಹಗಳು ನಿಮ್ಮ ಲಗ್ನ ಮನೆಯಲ್ಲಿದೆ. ಈ ಎರಡೂ ಗ್ರಹಗಳ ಸಂಯೋಗದಿಂದಾಗಿ ಧನು ರಾಶಿಯವರಲ್ಲೂ ಲಕ್ಷ್ಮಿ ನಾರಾಯಣ ಯೋಗ ಏರ್ಪಟ್ಟಿದೆ. ಲಕ್ಷ್ಮೀ ನಾರಾಯಣ ಯೋಗ ಇರುವುದರಿಂದ ಈ ರಾಶಿಯವರಿಗೆ ವಿಶೇಷ ಲಾಭವೂ ಸಿಗಲಿದೆ. ಈ ಯೋಗದ ರಚನೆಯಿಂದಾಗಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ ಧನು ರಾಶಿಯ ಲಗ್ನ ಮನೆಯಲ್ಲಿ ಈ ಯೋಗವು ಸೃಷ್ಟಿಯಾಗುವುದರಿಂದ ಈ ಅವಧಿಯಲ್ಲಿ ನಿಮ್ಮ ಆತ್ಮಸ್ಥೈರ್ಯವು ಹೆಚ್ಚುತ್ತದೆ , ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

English summary

Sukra Gochar 2022: In This December Formed Laxminarayan Yoga For These Zodiac Signs

Sukra Gochar 2022: In This December Budha And Shukra Formed Laxminarayan Yoga For These Zodiac Signs,
Story first published: Wednesday, December 7, 2022, 21:32 [IST]
X
Desktop Bottom Promotion