For Quick Alerts
ALLOW NOTIFICATIONS  
For Daily Alerts

ಡಿ. 14ಕ್ಕೆ ಸಂಪೂರ್ಣ ಸೂರ್ಯಗ್ರಹಣ: ಇದರ ವಿಶೇಷತೆ ಏನು?

|

ಮನು‌ಷ್ಯ ಸಂಕುಲವನ್ನು ಬೆಚ್ಚಿಬೀಳಿಸಿದ 2020ನೇ ಇಸವಿ ಅಂತೂ ಮುಗಿಯುವ ಕಾಲ ಹತ್ರ ಬರುತ್ತವೆ. ಅಪಾರ ಸಾವು-ನೋವು, ಕಷ್ಟ-ನಷ್ಟ ಕಂಡ ಈ ವರ್ಷ ಕಳೆದು ಹೊಸ ವರ್ಷಕ್ಕಾಗಿ ಇಡೀ ಜಗತ್ತು ಕಾಯ್ತಾ ಇರುವ ಈ ಸಂದರ್ಭದಲ್ಲಿ ಸೌರಮಂಡಲದ ಮತ್ತೊಂದು ವಿಸ್ಮಯಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ.

solar eclipse

ಅದೇ ಡಿಸೆಂಬರ್ 14, 2020 ರಂದು ನಡೆಯುವ ಸಂಪೂರ್ಣ ಸೂರ್ಯಗ್ರಹಣ. ಇದು ಈ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ.

ಸೂರ್ಯಗ್ರಹಣ ಅಂದ್ರೇನು?

ಸೂರ್ಯಗ್ರಹಣ ಅಂದ್ರೇನು?

ಸೂರ್ಯ, ಚಂದ್ರ ಮತ್ತು ಭೂಮಿಯು ಒಂದು ಸಾಲಿನಲ್ಲಿರುವಾಗ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬರುತ್ತಾನೆ ಮತ್ತು ಆದ್ದರಿಂದ ಭೂಮಿಯ ಮೇಲೆ ನೆರಳು ಹಾಕುವ ಸಮಯ. ಇದು ಸೂರ್ಯನ ಭಾಗಶಃ ಅಥವಾ ಪೂರ್ಣ ಗ್ರಹಣಕ್ಕೆ ಕಾರಣವಾಗುತ್ತದೆ. ಈ ವಿದ್ಯಮಾನವನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ 2 ರಿಂದ 5 ಸೂರ್ಯಗ್ರಹಣಗಳು ಸಂಭವಿಸುತ್ತವೆ, ಪ್ರತಿಯೊಂದೂ ಸೀಮಿತ ಪ್ರದೇಶದಲ್ಲಿ ಮಾತ್ರ ಗೋಚರಿಸುತ್ತದೆ. ಆದ್ದರಿಂದ, ಹೆಚ್ಚಾಗಿ ಕ್ಯಾಲೆಂಡರ್ ವರ್ಷಗಳಲ್ಲಿ 2 ಸೂರ್ಯಗ್ರಹಣಗಳಿವೆ. ಒಂದೇ ವರ್ಷದಲ್ಲಿ ಸಂಭವಿಸಬಹುದಾದ ಗರಿಷ್ಠ ಸೂರ್ಯಗ್ರಹಣಗಳು 5, ಆದರೆ ಇದು ಅಪರೂಪ. ನಾಸಾ ಲೆಕ್ಕಾಚಾರದ ಪ್ರಕಾರ, ಕಳೆದ 5,000 ವರ್ಷಗಳಲ್ಲಿ ಕೇವಲ 25 ವರ್ಷಗಳಲ್ಲಿ 5 ಸೂರ್ಯಗ್ರಹಣಗಳಾಗಿವೆ. ಈ ಹಿಂದೆ 1935 ರಲ್ಲಿ ಸಂಭವಿಸಿದ್ದು, ಮುಂದಿನ ಬಾರಿ 2206 ರಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಸೂರ್ಯ ಗ್ರಹಣ ೩ ವಿಧಗಳಲ್ಲಿ ಸಂಭವಿಸುತ್ತದೆ. ಸೂರ್ಯ ಪೂರ್ಣ ಮರೆಯಾದಾಗ ಅದನ್ನು ಪೂರ್ಣ ಸೂರ್ಯಗ್ರಹಣ, ಭಾಗಶಃ ಮರೆಯಾದರೆ ಪಾರ್ಶ್ವ ಸೂರ್ಯ ಗ್ರಹಣ, ಸೂರ್ಯನ ಅಂಚುಗಳು ಗೋಚರಿಸಿದರೆ ಕಂಕಣ ಸೂರ್ಯಗ್ರಹಣವೆಂದು ಕರೆಯಲಾಗುವುದು. ಈ ತಿಂಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ.

ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ?:

ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ?:

ಡಿಸೆಂಬರ್ 14 ರಂದು ನಡೆಯುವ ಸೂರ್ಯಗ್ರಹಣ ದಕ್ಷಿಣ ಅಮೆರಿಕಾ, ದಕ್ಷಿಣ ಆಫ್ರಿಕಾ ಮತ್ತು ಪೆಸಿಫಿಕ್ ಮಹಾಸಾಗರದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಈ ಸಂಪೂರ್ಣ ಸೂರ್ಯಗ್ರಹಣವು ಚಿಲಿ ಮತ್ತು ಅರ್ಜೆಂಟೀನಾದ ಕೆಲವು ಭಾಗಗಳಲ್ಲಿ ಮಧ್ಯಾಹ್ನ ಗೋಚರಿಸುತ್ತದೆ. ದಕ್ಷಿಣ ದಕ್ಷಿಣ ಅಮೆರಿಕಾ, ನೈಋತ್ಯ ಆಫ್ರಿಕಾ ಮತ್ತು ಅಂಟಾರ್ಕ್ಟಿಕಾದ ಕೆಲವು ಪ್ರದೇಶಗಳು ಭಾಗಶಃ ಸೂರ್ಯಗ್ರಹಣವನ್ನು ನೋಡುತ್ತವೆ.

ಸೂರ್ಯಗ್ರಹಣದ ಸಮಯ:

ಸೂರ್ಯಗ್ರಹಣದ ಸಮಯ:

ಈ ಸಂಪೂರ್ಣ ಸೂರ್ಯ ಗ್ರಹಣವು ಬೆಳಗ್ಗೆ 07:03 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12: 23 ಕ್ಕೆ ಕೊನೆಗೊಳ್ಳಲಿದೆ. ಅಂದ್ರೆ ಸುಮಾರು ೫ ಗಂಟೆಗಳ ಕಾಲ ಈ ವಿದ್ಯಮಾನ ಸಂಭವಿಸಲಿದೆ. ಸೂರ್ಯನನ್ನು ಚಂದ್ರನ ನೆರಳಿನಿಂದ ಸಂಪೂರ್ಣವಾಗಿ ಮರೆಮಾಡಲಾಗುವ ಸಮಯ ೧.೦೨ ಆಗಿದೆ. ಇದು ಸುಮಾರು ೨ ನಿಮಿ‌ಷ ೧೦ ಸೆಕೆಂಡುಗಳ ಕಾಲ ಇರುತ್ತದೆ.

ಸೂರ್ಯಗ್ರಹಣದಂದು ಅನುಸರಿಸಬೇಕಾದ ನಿಯಮಗಳು :

ಸೂರ್ಯಗ್ರಹಣದಂದು ಅನುಸರಿಸಬೇಕಾದ ನಿಯಮಗಳು :

ಹಿಂದೂ ಧರ್ಮದ ಪ್ರಕಾರ, ಜನರು ಸೂರ್ಯಗ್ರಹಣ ಸಮಯದಲ್ಲಿ ಕೆಲವು ನಿಯಮಗಳನ್ನು ಅನುಸರಿಸುತ್ತಾರೆ. ಅನೇಕ ಜನರು ಗ್ರಹಣ ಸಮಯದಲ್ಲಿ ತೀಕ್ಷ್ಣವಾದ ವಸ್ತುವನ್ನು ಬಳಸುವುದಿಲ್ಲ ಮತ್ತು ಅನೇಕರು ಸೂರ್ಯಗ್ರಹಣ ಸಮಯದಲ್ಲಿ ತಿನ್ನಲು ಇಷ್ಟಪಡುವುದಿಲ್ಲ. ಆದಾಗ್ಯೂ, ಗ್ರಹಣಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ತಿನ್ನಬೇಕು ಎಂದು ಹೇಳಲಾಗುತ್ತದೆ. ಗರ್ಭಿಣಿಯರು ಸೂರ್ಯಗ್ರಹಣ ಸಮಯದಲ್ಲಿ ಮನೆಯ ಹೊರಗೆ ಹೋಗದಂತೆ ಸೂಚಿಸಲಾಗುತ್ತದೆ. ಇದರಿಂದ, ಸೂರ್ಯನ ಹಾನಿಕಾರಕ ಕಿರಣಗಳು ಮಹಿಳೆ ಮತ್ತು ಭ್ರೂಣದ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರತಿಯೊಬ್ಬರು ಗ್ರಹಣ ಸಮಯದಲ್ಲಿ ಸೂರ್ಯನನ್ನು ನೇರವಾಗಿ ನೋಡುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ಸೂರ್ಯನ ಕಿರಣಗಳ ತೀವ್ರತೆಯು ಕಣ್ಣಿನಲ್ಲಿರುವ ಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ರೆಟಿನಾದ ಸುಡುವಿಕೆಗೆ ಕಾರಣವಾಗುತ್ತದೆ. ಗ್ರಹಣ ಸಮಯದಲ್ಲಿ ಸ್ನಾನ ಮಾಡಬೇಡಿ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ.

English summary

Solar Eclipse is on 14th December 2020: Date, Time, Sutaka Kaal, Significance

Here we give complete details of Solar Eclipse is on 14th December, Read on,
X
Desktop Bottom Promotion