For Quick Alerts
ALLOW NOTIFICATIONS  
For Daily Alerts

ಇಂದು ಸೋಮಾವತಿ ಅಮಾವಾಸ್ಯೆ: ಇದರ ಮಹತ್ವ ಹಾಗೂ ಪ್ರಯೋಜನಗಳು

|

ಇಂದು ಸೋಮಾವತಿ ಸೋಮಾವತಿ ಅಮಾವಾಸ್ಯೆ, ಇತರ ಅಮಾವಾಸ್ಯೆಗಿಂತ ಈ ಅಮವಾಸ್ಯೆ ತುಂಬಾ ವಿಶೇಷವಾದದ್ದು. ಇದು ವರ್ಷದ ಮೊದಲ ಹಾಗೂ ಕೊನೆಯ ಸೋಮಾವತಿ ಅಮವಾಸ್ಯೆಯಾಗಿದೆ. ಅಮಾವಾಸ್ಯೆ ಸೋಮಾವಾರದಂದು ಬಂದರೆ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುವುದು.

ಈ ಸೋಮಾವತಿ ಅಮವಾಸ್ಯೆಗೆ ಪಿತೃಗಳಿಗೆ ಭೋಜನ, ಜ ಅರ್ಪಿಸಬೇಕು, ಈ ದಿನ ಪಿತೃರನ್ನು ಸಂತೃಪ್ತ ಗೊಳಿಸಲು ಸೂಕ್ತ ಏಕೆ, ಈ ದಿನ ಏನು ಮಾಡಬೇಕು, ಹಣ, ಸಂಪತ್ತು ವೃದ್ಧಿಗೆ ಈ ದಿನ ಯಾವ ದೇವರನ್ನು ಪೂಜಿಸಬೇಕು ಮುಂತಾದ ಮಾಹಿತಿ ಇಲ್ಲಿದೆ:

ಪಿತೃ ಕಾರ್ಯಗಳಿಗೆ ಅಮಾವಾಸ್ಯೆ ಸರ್ವಶ್ರೇಷ್ಠ

ಪಿತೃ ಕಾರ್ಯಗಳಿಗೆ ಅಮಾವಾಸ್ಯೆ ಸರ್ವಶ್ರೇಷ್ಠ

ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಅದರಲ್ಲೂ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ತುಂಬಾನೇ ಪುಣ್ಯ ಸಿಗುತ್ತದೆ, ಇಲ್ಲದಿದ್ದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಬೇಕು, ನಂತರ ಪೂರ್ವಜರಿಗೆ ಭೋಜನ, ವಸ್ತ್ರ ಜಲದಾನ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ.

ಈ ಬಾರಿ ಸೋಮಾವತಿ ಅಮಾವಾಸ್ಯೆ ಕುಂಭ ಮೇದ ಎರಡನೇ ಸ್ನಾನ ಕೂಡ ಬಂದಿರುವುದರಿಂದ ಈ ಅಮವಾಸ್ಯೆಗೆ ಮತ್ತಷ್ಟು ಮಹತ್ವ ಬಂದಿದೆ.

ಪಿತೃರನ್ನು ಸಂತೃಪ್ತಗೊಳಿಸುವುದು ಹೇಗೆ?

ಪಿತೃರನ್ನು ಸಂತೃಪ್ತಗೊಳಿಸುವುದು ಹೇಗೆ?

ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ನೀಡಿ, ಮನೆಯಲ್ಲಿಯೇ ಭೋಜನ ಮಾಡಿ ಅವರಿಗೆ ಭೋಜನ ಹಾಗೂ ಜಲವನ್ನು ಅರ್ಪಿಸಲಾಗುವುದು. ಅಲ್ಲದೆ ಈ ದಿನ ಮನೆಯಲ್ಲಿರುವ ಹಿರಿಯ ಸದಸ್ಯರ ಸೇವೆಯಿಂದಲೂ ಪಿತೃರನ್ನು ಸಂತೃಪ್ತಗೊಳಿಸಬಹುದು.

ಈ ಅಮಾವಾಸ್ಯೆ ಆಚರಿಸುವುದರಿಂದ ದೊರೆಯುವ ಪ್ರಯೋಜನಗಳು

ಈ ಅಮಾವಾಸ್ಯೆ ಆಚರಿಸುವುದರಿಂದ ದೊರೆಯುವ ಪ್ರಯೋಜನಗಳು

ಈ ಅಮವಾಸ್ಯೆಯಂದು ಪಿತೃಗಳ ಆಶೀರ್ವಾದ ಸಿಕ್ಕರೆ ನಮ್ಮೆಲ್ಲಾ ದೋಷಗಳಿಂದ ಮುಕ್ತಿ ಸಿಗುವುದು. ಅಲ್ಲದೆ ಈ ದಿನ ಬೆಳಗ್ಗೆ ಮತ್ತು ಸಂಜೆ ಲಕ್ಷ್ಮೀಯನ್ನು ಪೂಜಿಸಬೇಕು. ಇದರಿಂದ ಸಂಪತ್ತು ವೃದ್ಧಿಯಾಗುವುದು.

ಧಾರ್ಮಿಕ ಕಾರ್ಯ ಹಾಗೂ ದಾನ ಮಾಡಬೇಕು

ಧಾರ್ಮಿಕ ಕಾರ್ಯ ಹಾಗೂ ದಾನ ಮಾಡಬೇಕು

ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಸೋಮಾವತಿ ಅಮಾವಾಸ್ಯೆ ಬಂದರೆ ಆ ದಿನ ನಾವು ದಾನ ಮಾಡುವುದರಿಂದ, ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಬರುತ್ತದೆ. ಇಂಥ ದಿನಗಳಲ್ಲಿ ಜಾತ್ರೆಗಳನ್ನು ಮಾಡಲಾಗಿತ್ತು, ಆದರೆ ಈ ವರ್ಷ ಕೊರೊನ ಕಾರಣ ಜಾತ್ರೆಯ ಸಡಗರ ಇರಲ್ಲ.

English summary

Significance And Benefits Of Somavati Amavasya

Here are significance and benefits of Somavati amavasya, Read on..
X
Desktop Bottom Promotion