For Quick Alerts
ALLOW NOTIFICATIONS  
For Daily Alerts

ಕುಂಭ ರಾಶಿಗೆ ಶನಿ ಸಂಚಾರ: ಹೀಗೆ ಮಾಡಿದರೆ ಕಷ್ಟ ಕಾರ್ಪಣ್ಯ ದೂರಾಗುವುದು

|

ವೈದಿಕ ಶಾಸ್ತ್ರದ ದೃಷ್ಟಿಯಿಂದ ಶನಿ ಗ್ರಹದ ರಾಶಿ ಪರಿವರ್ತನೆ ತುಂಬಾನೇ ಮಹತ್ವವಾದದ್ದು. ಏಕೆಂದರೆ ಶನಿ ಒಂದು ರಾಶಿಯನ್ನು ಪ್ರವೇಶಿಸಿದಾಗ ಅದು ಆ ರಾಶಿಯಲ್ಲಿ ಎರಡೂವರೆ ವರ್ಷ ಇರುವುದರಿಂದ ಅದರ ಪ್ರಭಾವ ಕೂಡ ದೀರ್ಘವಾಗಿರುತ್ತೆ.

ಆದ್ದರಿಂದ ಕೆಟ್ಟ ಪರಿಣಾಮವಿರುವ ರಾಶಿಯವರು ದೀರ್ಘಾವಧಿ ಕಷ್ಟ ಅನುಭವಿಸುವಂತಾಗುವುದು. ಶನಿಯ ಕೆಟ್ಟ ದೃಷ್ಟಿ ಇದ್ದಾಗ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗುವುದು. 2023ರಲ್ಲಿ ಶನಿಯು ರಾಶಿ ಬದಲಾಯಿಸಲಿದೆ, 30 ವರ್ಷಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸಲಿದೆ. ಈ ಸಂಚಾರ ಜನವರಿ 17, 2023ಕ್ಕೆ ನಡೆಯಲಿದೆ.

ಶನಿಯು ಕುಂಭ ರಾಶಿಯಲ್ಲಿರುವಾಗ ಕೆಲವೊಂದು ಪರಿಹಾರಗಳನ್ನು ಮಾಡಿದರೆ ಶನಿಯ ಕೆಟ್ಟ ದೃಷ್ಟಿ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು, ಕಷ್ಟಗಳು ದೂರಾಗುವುದು, ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗುವುದು.

30 ವರ್ಷದ ಬಳಿಕ 2023ರಲ್ಲಿ ಕುಂಭ ರಾಶಿಗೆ ಶನಿ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವ

ಶನಿಯು ಕುಂಭ ರಾಶಿಯಲ್ಲಿರುವಾಗ ಮಾಡಬೇಕಾದ ಪರಿಹಾರಗಳು

ಶನಿಯ ಕೃಪೆಗೆ ಪರಿಹಾರಗಳು

ಶನಿಯ ಕೃಪೆಗೆ ಪರಿಹಾರಗಳು

1. ಶನಿಯೆಂದರೆ ಕತ್ತಲೆಯೆಂದರೆ ಪರಿಗಣಿಸಲಾಗಿದೆ. ಸೂರ್ಯ ಬೆಳಕು, ಇದೀಗ 30 ವರ್ಷಗಳ ಬಳಿಕ ಶನಿಯು ಸೂರ್ಯ ಅಧಿಪತಿಯಾಗಿರುವ ಕುಂಭ ರಾಶಿ ಪ್ರವೇಶಿಸಲಿದೆ. ಶನಿ ಕುಂಭ ರಾಶಿಯಲ್ಲಿರುವಾಗ ನೀವು ಪ್ರತಿದಿನ ಓಂ ಗ್ರಿಣಿ ತ್ವಷ್ಟರ್ ಆದಿತ್ಯ ಅಂತ ಪಠಿಸಿ.

2. ಶನಿಯ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಲು ಗಣಪತಿಯನ್ನು ಆರಾಧಿಸಿ. ಓಂ ಗಣಪತೆಯೇ ನಮಃ ಮಂತ್ರ ಪ್ರತಿದಿನ ಹೇಳಿ.

3. ಶನಿವಾರ ಶನಿದೇವಾಲಯ ಹಾಗೂ ಶಿವನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಕಷ್ಟಗಳು ದೂರಾಗುವುದು.

ಶಿವನ ಆರಾಧಿಸಿ

ಶಿವನ ಆರಾಧಿಸಿ

4. ಶಿವನನ್ನು ಆರಾಧಿಸುವಾಗ ಪ್ರತಿದಿನ ಅಗರಬತ್ತಿ, ಧೂಪ ಹಚ್ಚಿ, ಏಕೆಂದರೆ ಕುಂಭ ರಾಶಿಯ ದೇವರು ಶಿವ. ಆದ್ದರಿಂದ ಶಿವನ ಆರಾಧಿಸಿ.

5. ಶಿವ ವಾಯು ತತ್ತ್ವದ ದೇವರು, ಆದ್ದರಿಂದ ಕಾಳಹಸ್ತೀಶ್ವೇರ ದೇವಾಲಯಕ್ಕೆ ಹೋಗಿ ಬಂದರೆ ಒಳ್ಳೆಯದು. ಇದು ಎಲ್ಲಿದೆ?

ಇದು ಆಂಧ್ರಪ್ರದೇಶದ ಚಿತ್ತೂರ್‌ನಲ್ಲಿದೆ. ಉತ್ತರದಲ್ಲಿ ದುರ್ಗಾಂಬಿಕಾ, ದಕ್ಷಿಣದಲ್ಲಿ ಕಣ್ಣಪ್ಪರ್ ಮತ್ತು ಪೂರ್ವದಲ್ಲಿ ಕುಮಾರಸ್ವಾಮಿ ಎಂಬ ಮೂರು ಬೆಟ್ಟಗಳಿಂದ ಆವರಿಸಿರುವ ಶ್ರೀ ಕಾಳಹಸ್ತೀಶ್ವರ ದೇವಸ್ಥಾನ ತಿರುಪತಿಗೆ ಸಮೀಪದಲ್ಲಿದೆ.

6. ಇನ್ನು ಶನಿ ಕುಂಭ ರಾಶಿಯಲ್ಲಿರುವಾಗ ಮಾಡಬಹುದಾದ ಮತ್ತೊಂದು ಅತ್ಯುತ್ತಮವಾದ ಪರಿಹಾರವೆಂದರೆ ಗಿಡಗಳನ್ನು ನೆಡುವುದು. ನಿಮ್ಮ ನಕ್ಷತ್ರಕ್ಕೆ ಹೊಂದುವ ಗಿಡಗಳನ್ನು ನೆಟ್ಟು ಪೋಷಿಸಿ.

ಉದಾಹರಣೆಗೆ ಭರಣಿಯವರು ನೆಲ್ಲಿಕಾಯಿ ಗಿಡ, ಮಾಘ ನಕ್ಷತ್ರದವರು ಅರಳಿ ಮರ ಹೀಗೆ ನಿಮ್ಮ ನಕ್ಷತ್ರಕ್ಕೆ ಹೊಂದುವ ಗಿಡವನ್ನು ನೆಟ್ಟು ಪೋಷಿಸಿ..

ವಿಷ್ಣು ಸಹಸ್ರನಾಮ

ವಿಷ್ಣು ಸಹಸ್ರನಾಮ

7. ಕುಂಭ ರಾಶಿ ದ್ವಾದಶಗಳಲ್ಲಿ 11ನೇ ರಾಶಿ, ಜ್ಯೋತಿಷ್ಯದಲ್ಲಿ 11ನೇ ಮನೆಯನ್ನು ಕೇಳಿಸಿಕೊಳ್ಳುವ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಕಿವಿ ಕೇಳಿಸಿದವರಿಗೆ ಕಿವಿ ಕೇಳಿಸಲು ನೆರವಾಗುವ ಸಾಧನಗಳನ್ನು ದಾನ ಮಾಡಿ ಅಥವಾ ಅವರು ಬಡವರಾಗಿದ್ದರೆ ಆಪರೇಷನ್‌ಗೆ ನೆರವಾಗಿ.

8. ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಕೇಳಿ.

9. ಶನಿ ಪ್ರದೋಷ ದಿನ ಶನಿ ದೇವಾಲಯದಲ್ಲಿ ಹೆಜ್ಜೆ ಮೇಲೆ ಹೆಜ್ಜೆಯಂತೆ 8 ಹೆಜ್ಜೆಗಳನ್ನು ಇಡಿ.

ಶನಿ ಸಾಡೇಸಾತಿ ಇರುವವರು ಈ ಪರಿಹಾರಗಳನ್ನೂ ಮಾಡಿ

ಶನಿ ಸಾಡೇಸಾತಿ ಇರುವವರು ಈ ಪರಿಹಾರಗಳನ್ನೂ ಮಾಡಿ

* ಶನಿವಾರ ಎಳ್ಖೆಣ್ಣೆ ಅಥವಾ ಸಾಸಿವೆಯೆಣ್ಣೆ ದೀಪ ಹಚ್ಚಿ.

* ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅರಳಿ ಮರಕ್ಕೆ ಸುತ್ತು ಹಾಕಿ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ದೀಪ ಹಚ್ಚಿ.

* ಮಂಗಳವಾರ ಹಾಗೂ ಶನಿವಾರ ತಪ್ಪದೆ ಹನುಮಂತನ ದೇವಾಲಯ ಹಾಗೂ ಶನಿ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ.

* ಬಡವರಿಗೆ ಎಳ್ಳು, ಎಳ್ಳೆಣ್ಣೆ, ಕಪ್ಪು ಕಂಬಳಿ ದಾನ ಮಾಡಿ.

* ಈ ದಿನ ಕಪ್ಪು ಬಟ್ಟೆ ಧರಿಸಿ

* ಬಡವರನ್ನು ನಿಂದಿಸುವುದು ಮಾಡಬಾರದು

 ಶನಿ ಮಂತ್ರಗಳನ್ನು ಪಠಿಸಿ

ಶನಿ ಮಂತ್ರಗಳನ್ನು ಪಠಿಸಿ

ಶನಿ ಗಾಯತ್ರಿ ಮಂತ್ರ

ಓಂ ಶನೈಶ್ಚರಾಯ ವಿದ್ಮಯೇ

ಸೂರ್ಯಪುತ್ರಾಯ ದಹಿಮಹಿ

ತನ್ನೊ ಮಂಡಾ ಪ್ರಚೋದಾಯತ್

ಶನಿ ಧ್ಯಾನ ಮಂತ್ರ

ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ

ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ

English summary

Saturn Transit In Aquarius in 2023: Remedies To Do In Kannada

Saturn Transit In Aquarius in 2023: Do These Remedies To Reduce Problem In Life, read on,
X
Desktop Bottom Promotion