Just In
- 50 min ago
Horoscope Today 28 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 12 hrs ago
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- 13 hrs ago
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- 15 hrs ago
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
Don't Miss
- Movies
ಬಾಕ್ಸಾಫೀಸ್ನಲ್ಲಿ 'ಪಠಾಣ್' ಬಿರುಗಾಳಿ: ಮೂರೇ ದಿನಕ್ಕೆ ಹಲವು ದಾಖಲೆಗಳು ಉಡೀಸ್
- News
ಜನವರಿ 28ರಂದು 300 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬುಧ ರಾಶಿಗೆ ಧನು ಸಂಚಾರ: ಈ 5 ರಾಶಿಗಳಿಗೆ ತುಂಬಾನೇ ಅದೃಷ್ಟದ ಸಮಯವಿದು
ಡಿಸೆಂಬರ್ 3ಕ್ಕೆ ಧನು ರಾಶಿಗೆ ಬುಧ ಸಂಕ್ರಮಣವಾಗಿದೆ. ಧನು ರಾಶಿಯಲ್ಲಿ ಬುಧ ಸಂಕ್ರಮಣವನ್ನು ತುಂಬಾ ಶುಭವೆಂದು ಪರಿಗಣಿಸಲಾಗುವುದು. ಬುಧನು ನಮ್ಮ ಸಂವಹನ ಕೌಶಲ್ಯ, ಬೌಧಿಕ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಬುಧ ಅನುಕೂಲಕ ಸ್ಥಾನದಲ್ಲಿದ್ದರೆ ಮತ್ತಷ್ಟು ಒಳ್ಳೆಯದು. ಅದೇ ಅದರ ಸ್ಥಾನ ಸರಿಯಾದ ಸ್ಥಾನದಲ್ಲಿರದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ.
ಧನು ರಾಶಿಗೆ ಬುಧ ಸಂಚಾರ ಸಿಂಹ, ಕನ್ಯಾ, ಮೇಷ, ಕುಂಭ, ವೃಶ್ಚಿಕ ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ, ಈ ರಾಶಿಯವರಿಗೆ ಈ ಅವಧಿ ತುಂಬಾನೇ ಅದೃಷ್ಟಕರ ಎಂದು ಹೇಳಬಹುದು. ಈ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ವಿವರವಾಗಿ ನೋಡೋಣ:

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬುಧ ಗ್ರಹದ ಅನುಗ್ರದಿಂದ ಈ ಅವಧಿ ವಿಶೇಷವಾಗಿರುತ್ತದೆ. ಈ ಸಂಕ್ರಮಣ ನಿಮಗೆ ಲಾಭ ತರಲಿದೆ. ಷೇರು ಮಾರುಕಟ್ಟೆಗೆ ಸಂಬಂಧಿಸಿದವರಿಗೆ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಈ ಸಮಯದಲ್ಲಿ ಮಾಡಿದ ಹೂಡಿಕೆಯಿಂದ ಲಾಭವನ್ನು ನೀವು ಭವಿಷ್ಯದಲ್ಲಿ ಪಡೆಯುತ್ತೀರಿ. ಗಣಿತ, ಸಮೂಹ ಸಂವಹನ, ಬರವಣಿಗೆ ಇತರ ಕೋರ್ಸ್‌ಗಾಗಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ತುಂಬಾನೇ ಅನುಕೂಲಕರವಾಗಿದೆ, ನಿಮ್ಮ ಜ್ಞಾಪಕಶಕ್ತಿ ಹೆಚ್ಚಾಗುವುದು. ಇದರ ಪರಿಣಾಮವಾಗಿ ಅವರ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಪ್ರೇಮಿಗಳಿಗೆ ಪರಸ್ಪರ ಮತ್ತಷ್ಟು ಅರಿಯಲು ಸಹಾಯವಾಗುವುದು. ಇನ್ನು ದಂಪತಿ ಮಗುವಿನ ಕಡೆಯಿಂದ ಸಿಹಿ ಸುದ್ದಿ ಪಡೆಯಬಹುದು.

ಕನ್ಯಾರಾಶಿ
ಕನ್ಯಾ ರಾಶಿಯವರಿಗೂ ಈ ಸಂಚಾರ ತುಂಬಾನೇ ಪ್ರಯೋಜನಕಾರಿಯಾಗಿದೆ. ಕುಟುಂಬದ ವಾತಾವರಣ ತುಂಬಾನೇ ಚೆನ್ನಾಗಿರುತ್ತದೆ. ನೀವು ತುಂಬಾ ಸಮಯದಿಂದ ಆಸ್ತಿ ಅಥವಾ ವಾಹನ ಖರೀದಿಸಬೇಕೆಂದು ಇದ್ದರೆ ಈ ಸಮಯ ನಿಮ್ಮ ಆಸೆಗೆ ತುಂಬಾನೇ ಪ್ರಬಲವಾಗಿದೆ. ನಿಮ್ಮ ಕೆಲಸ ಕಾರ್ಯಗಳು ಕೂಡ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆ. ನೀವು ರಿಯಲ್ ಎಸ್ಟೇಟ್ಸ್ ಬ್ಯುಸ್‌ನೆಸ್ ಮಾಡುತ್ತಿದ್ದರೆ ಈ ಸಮಯ ತುಂಬಾನೇ ಅನುಕೂಲಕರವಾಗಿದೆ. ಇನ್ನು ನೀವು ಏನಾದರೂ ಹೂಡಿಕೆ ಮಾಡಲು ಯೋಚಿಸಿದ್ದರೆ ಸಮಯ ಅನುಕೂಲಕರವಾಗಿದೆ.

ಮೇಷ ರಾಶಿ
ಡಿಸೆಂಬರ್‌ನಲ್ಲಿ ಬುಧ ಧನು ರಾಶಿಗೆ ಪ್ರವೇಸಿರುವುದರಿಂದ ಈ ಅವಧಿ ನಿಮಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ವೃತ್ತಿಪರವಾಗಿ ನೋಡುವುದಾದರೆ ಧನು ರಾಶಿಗೆ ಬುಧ ಸಂಚಾರದ ಈ ಅವಧಿ ತತ್ವಜ್ಞಾನಿಗಳು, ಮಾರ್ಗದರ್ಶಕರು, ಸಲಹೆಗಾರರು ಮತ್ತು ಶಿಕ್ಷಕರಿಗೆ ತುಂಬಾನೇ ಫಲಪ್ರದವಾಗಿದೆ. ವಿದ್ಯಾರ್ಥಿಗಳಿಗೂ ಈ ಅವಧಿ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ಪ್ರಯತ್ನಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ.
ಕುಂಭ ರಾಶಿ

ಕುಂಭ ರಾಶಿ
ಬುಧ ಸಂಕ್ರಮಣದಿಂದ ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ವೃದ್ಧಿಯಾಗುವ ಸಾಧ್ಯತೆ ಇದೆ. ನೀವು ಈ ಅವಧಿಯಲ್ಲಿ ಮಾಡುವ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ಪ್ರೇಮಿಗಳಿಗೂ ಈ ಅವಧಿ ಅನುಕೂಲಕರವಾಗಿದೆ. ನಿಮಗೆ ಹಣದ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ನೀವು ಹಾಕಿರುವ ಕಠಿಣ ಶ್ರಮಕ್ಕೆ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೂ ಈ ಅವಧಿ ಫಲಪ್ರದವಾಗಿರುತ್ತದೆ.

ವೃಶ್ಚಿಕ ರಾಶಿ
ಈ ಅವಧಿಯಲ್ಲಿ ನಿಮ್ಮ ಮಾತೇ ನಿಮಗೆ ಬಂಡವಾಳವಾಗಲಿದೆ. ನಿಮ್ಮ ವ್ಯವಹಾರಗಳಲ್ಲಿ ಲಾಭ ಸಿಗುವುದರಿಂದ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಸ್ವಂತ ವ್ಯವಹಾರ ನಡೆಸುತ್ತಿರುವವರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ .
ಬುಧ ಗ್ರಹದಿಂದ ಮತ್ತಷ್ಟು ಸಿಗಲು ಈ ಪರಿಹಾರಗಳು ಸಹಕಾರಿ
* ಬುಧ ಗ್ರಹದ ಮತ್ತಷ್ಟು ಪ್ರಯೋಜನಗಳನ್ನು ಪಡೆಯಲು ದುರ್ಗೆಯನ್ನು ಪ್ರತಿನಿತ್ಯ ಪೂಜಿಸಿ, ಇದರಿಂದ ನೀವು ಮಾಡುತ್ತಿರುವ ವ್ಯವಹಾರ ಹಾಗೂ ಕಾರ್ಯಗಳಲ್ಲಿ ಫಲ ಸಿಗಲಿದೆ.
* ಬುಧವಾರ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. ಇದರಿಂದಾಗಿ ಬುಧ ಗ್ರಹದ ಮತ್ತಷ್ಟು ಅನುಕೂಲ ಸಿಗಲಿದೆ.
* ಪ್ರತಿ ಬುಧವಾರ ಗಣಪತಿಗೆ ಗರಿಕೆ ಅರ್ಪಿಸಿ ಪೂಜಿಸಿ.
* 'ಓಂ ಬ್ರಾನ್ ಬ್ರೌನ್: ಬುಧಾಯ ನಮಃ' ಮಂತ್ರ ಜಪಿಸಿ.
* ಬುಧವಾರ ಗಣಪತಿ ದೇವನಿಗೆ ಸಿಂಧೂರ ಅರ್ಪಿಸಿ.