For Quick Alerts
ALLOW NOTIFICATIONS  
For Daily Alerts

ಅ.2ಕ್ಕೆ ಕನ್ಯಾ ರಾಶಿಯಲ್ಲಿ ಮಾರ್ಗಿಯಾಗುವ ಬುಧ: ದ್ವಾದಶ ರಾಶಿಗಳಲ್ಲಿ ಯಾರಿಗೆ ಅದೃಷ್ಟ, ಯಾರೆಲ್ಲಾ ಹುಷಾರಾಗಿರಬೇಕು

|

ಜ್ಯೋತಿಷ್ಯದಲ್ಲಿ ಯಾವುದೇ ಗ್ರಹ ಹಿಮ್ಮಖವಾಗಿ ಚಲಿಸಿದಾಗ ಅದನ್ನು ಶುಭ ಎಂದು ಪರಿಗಣಿಸುವುದಿಲ್ಲ, ಬುಧ ಕೂಡ ಹಿಮ್ಮುಖ ಚಲನೆಯಲ್ಲಿದೆ, ಅಕ್ಟೋಬರ್‌ 2ಕ್ಕೆ ನೇರವಾಗಿ ಚಲಿಸಲಿದೆ. ಹೀಗೆ ಬುಧ ನೇರವಾಗಿ ಚಲಿಸಲಾರಂಭಿಸಿದಾಗ ಫಲಿತಾಂಗಳು ಶುಭವಾಗಲಿದೆ. ಹಿಮ್ಮಖ ಚಲನೆಯಲ್ಲಿದ್ದಾಗ ಎದುರಿಸಿದ ತೊಂದರೆಗಳು ದೂರಾಗುವುದು.

Mercury Direct in Virgo 02 October 2022 Effects and Remedies on Zodiac Signs in Kannada

ಇನ್ನು ಬುಧ ನೇರ ಚಲನೆಯಲ್ಲಿದ್ದಾಗ ನಿಮ್ಮ ರಾಶಿಯಲ್ಲಿ ಅದರ ಸ್ಥಾನ ಸರಿಯಾದ ಸ್ಥಾನದಲ್ಲಿ ಇರದಿದ್ದರೆ ಆಗ ಬುಧನ ಪ್ರಭಾವ ಅಷ್ಟು ಮಂಗಳಕರವಾಗಿರುವುದಿಲ್ಲ. ಇದೀಗ ಬುಧ ನೇರ ಚಲನೆ ಆರಂಭಿಸಿದ ಮೇಲೆ ಯಾವೆಲ್ಲಾ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರ ಮೂರನೇ ಮತ್ತು ಆರನೇ ಮನೆಯ ಅಧಿಪತಿಯಾಗಿರುವ ಬುಧ ನಿಮ್ಮ ಆರನೇ ಮನೆಯಲ್ಲಿ ಅಂದರೆ ದೈನಂದಿನ ಆದಾಯ, ಸಾಲ ಮತ್ತು ಶತ್ರು ಮನೆಯಲ್ಲಿ ಇರಲಿದೆ. ಈ ಸ್ಥಾನ ನಿಮಗೆ ಅನುಕೂಲಕರವಾಗಿದೆ.

ನೀವು ಆರೋಗ್ಯ ಜೀವನದಲ್ಲಿ ಹೆಚ್ಚು ಹೊಸ ಧನಾತ್ಮಕತೆಯನ್ನು ಅನುಭವಿಸುತ್ತೀರಿ. ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಈ ಅವಧಿಯಲ್ಲಿ ಚೇತರಿಕೆ ಕಾಣುವಿರಿ. ವೃತ್ತಿ ಜೀವನದಲ್ಲೂ ಯಾವುದೇ ಸಮಸ್ಯೆಗಳಿಲ್ಲ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬುಧನ ಈ ಸ್ಥಾನವು ನಿಮ್ಮ ಆರೋಗ್ಯ, ಜೀವನ ಮತ್ತು ಶಿಕ್ಷಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ .

ಪರಿಹಾರ: ಹಸುಗಳಿಗೆ ಪ್ರತಿದಿನ ಹಸಿರು ಮೇವನ್ನು ತಿನ್ನಿಸಿ ಅಥವಾ ಪ್ರತಿದಿನ ಬುಧ ಬೀಜ ಮಂತ್ರ ಪಠಿಸಿ.

 ವೃಷಭ ರಾಶಿ: ನಿಮಗೆ ಅನುಕೂಲಕರವಾಗಿದೆ

ವೃಷಭ ರಾಶಿ: ನಿಮಗೆ ಅನುಕೂಲಕರವಾಗಿದೆ

ವೃಷಭ ರಾಶಿಯವರಿಗೆ ಬುಧನು ಅವರ ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು ಈ ಸಂಚಾರ ಅವಧಿಯಲ್ಲಿ ನಿಮ್ಮ ಐದನೇ ಮನೆಯಲ್ಲಿರುತ್ತದೆ. ಜಾತಕದಲ್ಲಿರುವ ಈ ಮನೆಯಿಂದ ಶಿಕ್ಷಣ, ಪ್ರೇಮ ಸಂಬಂಧಗಳು, ಮಕ್ಕಳು ಇತ್ಯಾದಿಗಳನ್ನು ಕಂಡುಹಿಡಿಯುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಈ ಮನೆಯಲ್ಲಿ ಬುಧದ ಮಾರ್ಗವು ನಿಮಗೆ ಅನುಕೂಲಕರವಾಗಿರುತ್ತದೆ. ಕಳೆದ ಕೆಲವು ದಿನಗಳಿಂದ ತಮ್ಮ ಶಿಕ್ಷಣದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳ ಎಲ್ಲಾ ಅಡೆತಡೆಗಳು ದೂರಾಗುವುದು. ಬುಧ ಸಂಕ್ರಮಣ ಸ್ಥಾನವು ವಿಶೇಷವಾಗಿ ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷಾ ಕೋರ್ಸ್‌ನಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶುಭವಾಗಿರುತ್ತದೆ.

ಪ್ರೇಮ ಜೀವನದಲ್ಲಿ ತಪ್ಪು ಗ್ರಹಿಕೆಯ ಸಾಧ್ಯತೆ ಇದೆ. ಅಲ್ಲದೆ, ನಿಮ್ಮ ನಡುವಿನ ಉತ್ತಮ ಸಂವಹನ ಮತ್ತು ಸ್ಪಷ್ಟವಾದ ಸಂಭಾಷಣೆಯ ಮೂಲಕ ನಿಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ. ಆರ್ಥಿಕವಾಗಿಯೂ ಈ ಸಮಯವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಅ

ಪರಿಹಾರ: ಬಡವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ದಾನ ಮಾಡಿ.

ಮಿಥುನ ರಾಶಿ: ಈ ಅವಧಿ ಅನುಕೂಲಕರ

ಮಿಥುನ ರಾಶಿ: ಈ ಅವಧಿ ಅನುಕೂಲಕರ

ಮಿಥುನ ರಾಶಿಯವರಿಗೆ, ಬುಧ ಲಗ್ನದ ಮತ್ತು ಅವರ ನಾಲ್ಕನೇ ಮನೆಯ ಅಧಿಪತಿ. ಇದು ಮನೆ ಜೀವನ, ಮನೆ, ವಾಹನ, ಆಸ್ತಿ ಇತ್ಯಾದಿಗಳನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಬುಧ ನಿಮ್ಮ ಕುಟುಂಬದಲ್ಲಿ ಮತ್ತೆ ಸಂತೋಷವನ್ನು ತುಂಬುತ್ತಾನೆ. ಯಾವುದೇ ಆಸ್ತಿ ಅಥವಾ ಯಾವುದೇ ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದ ಮಿಥುನ ರಾಶಿಯವರಿಗೆ ಈ ಅವಧಿಯು ತುಂಬಾ ಅನುಕೂಲಕರವಾಗಿರುತ್ತದೆ. ಕೌಟಂಬಿಕ ಜೀವನದಲ್ಲಿ ತಾಯಿಯ ಬೆಂಬಲ ಇರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ವೃತ್ತಿಜೀವನದಲ್ಲಿಯೂ ನೀವು ಈ ಅವಧಿಯಲ್ಲಿ ಹೊಸದನ್ನು ಕಲಿಯಬಹುದು, ಆದ್ದರಿಂದ ಈ ಅವಕಾಶದ ಸರಿಯಾದ ಪ್ರಯೋಜನವನ್ನು ಪಡೆದುಕೊಳ್ಳಿ.

ಪರಿಹಾರ: ತುಳಸಿ ಗಿಡವನ್ನು ಪ್ರತಿನಿತ್ಯ ಪೂಜಿಸಿ .

ಕರ್ಕ ರಾಶಿ: ವೃತ್ತಿ ಜೀವನ ಚೆನ್ನಾಗಿರುತ್ತೆ

ಕರ್ಕ ರಾಶಿ: ವೃತ್ತಿ ಜೀವನ ಚೆನ್ನಾಗಿರುತ್ತೆ

ಕರ್ಕ ರಾಶಿಯವರಹನ್ನೆರಡನೇ ಮತ್ತು ಮೂರನೇ ಮನೆಯ ಅಧಿಪತಿಯಾಗಿರುವ ಬುಧ ನಿಮ್ಮ ಮೂರನೇ ಮನೆಯಲ್ಲಿದೆ. ಜಾತಕದಲ್ಲಿ ಮೂರನೇ ಮನೆಯು ನಿಮ್ಮ ಒಡಹುಟ್ಟಿದವರು, ಹವ್ಯಾಸಗಳು, ಕಡಿಮೆ ದೂರ ಪ್ರಯಾಣ, ಸಂವಹನ ಕೌಶಲ್ಯ ಇತ್ಯಾದಿಗಳನ್ನು ಪ್ರತಿನಿಧಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬುಧನು ಈ ಮನೆಯಲ್ಲಿರುವುದರಿಂದ ನಿಮ್ಮ ಸಹೋದರ ಸಹೋದರಿಯರೊಂದಿಗಿನ ಸಂಬಂಧದಲ್ಲಿನ ಎಲ್ಲಾ ಸಮಸ್ಯೆಗಳು ಮತ್ತು ತಪ್ಪುಗ್ರಹಿಕೆಗಳನ್ನು ತೊಡೆದುಹಾಕಲು ಸಾಧ್ಯವಾಗುವುದು . ವೃತ್ತಿ ಜೀವನ ಚೆನ್ನಾಗಿರುತ್ತದೆ, ನಿಮ್ಮ ಅಭಿಪ್ರಾಯಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಲು ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ: ಪ್ರತಿದಿನ 108 ಬಾರಿ "ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪಿಸಿ.

ಸಿಂಹ ರಾಶಿ: ಹಣಕಾಸು ದೃಷ್ಟಿಯಿಂದ ಒಳ್ಳೆಯದು

ಸಿಂಹ ರಾಶಿ: ಹಣಕಾಸು ದೃಷ್ಟಿಯಿಂದ ಒಳ್ಳೆಯದು

ಸಿಂಹ ರಾಶಿಯವರಿಗೆ ಬುಧ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಈಗ ಬುಧವು ಈ ಅವಧಿಯಲ್ಲಿ ಕುಟುಂಬ, ಉಳಿತಾಯ ಮತ್ತು ಮಾತಿನ ಎರಡನೇ ಮನೆಯಲ್ಲಿ ಸ್ಥಿತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ನಿಮ್ಮ ಮಾತು ಮತ್ತು ಸಂವಹನದ ಮೂಲಕ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗುವುದು.

ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಅವಧಿಯು ವಿಶೇಷವಾಗಿ ಒಳ್ಳೆಯದು. ಕೌಟಂಬಿಕ ಜೀವನ ಆಹ್ಲಾದಕರವಾಗಿರುತ್ತದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ.

ಪರಿಹಾರ: ತುಳಸಿ ಗಿಡವನ್ನು ಪೂಜಿಸಿ.

ಕನ್ಯಾ ರಾಶಿ: ಸಂಗಾತಿ ಜೊತೆಗಿನ ಮನಸ್ತಾಪ ದೂರಾಗುವುದು

ಕನ್ಯಾ ರಾಶಿ: ಸಂಗಾತಿ ಜೊತೆಗಿನ ಮನಸ್ತಾಪ ದೂರಾಗುವುದು

ಕನ್ಯಾ ರಾಶಿಯವರಿಗೆ ಬುಧ ಲಗ್ನ ಮತ್ತು 10ನೇ ಮನಯ ಅಧಿಪತಿ. ಕನ್ಯಾ ರಾಶಿಯಲ್ಇಯೇ ಬುಧ ಸಂಚಾರವಾಗಿರುವುದರಿಂ ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದರಿಂದ ನಿಮಗೆ ಏನೇ ಆರೋಗ್ಯ ಸಮಸ್ಯೆಗಳು, ಕಿರಿಕಿರಿ ಮತ್ತು ಗೊಂದಲದಲ್ಲಿದ್ದರೂ, ನೀವು ಬುಧದ ಪ್ರಭಾವದಿಂದ ಅವುಗಳಿಂದ ಮುಕ್ತಿ ಪಡೆಯುತ್ತೀರಿ.

ಬುಧನು ನಿಮ್ಮ ರಾಶಿಯಲ್ಲಿ ತನ್ನ ಉಚ್ಛ ಸ್ಥಾನದಲ್ಲಿರುತ್ತಾನೆ. ಇದರ ಪರಿಣಾಮವಾಗಿ, ವ್ಯಾಪಾರಸ್ಥರ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ ಮತ್ತು ಅವರು ಎಲ್ಲಾ ರೀತಿಯ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ಇದಲ್ಲದೆ, ಬುಧನು ಈ ಸಮಯದಲ್ಲಿ ನಿಮ್ಮ ಏಳನೇ ಮನೆಯನ್ನೂ ನೋಡುತ್ತಿದ್ದಾನೆ. ಆದ್ದರಿಂದ, ಯಾವುದೋ ಕಾರಣಕ್ಕಾಗಿ ನಿಮ್ಮ ಸಂಗಾತಿ ಅಥವಾ ವ್ಯಾಪಾರ ಪಾಲುದಾರರೊಂದಿಗೆ ತರ್ಕ ಉಂಟಾಗಿದ್ದರೆ ಈ ಅವಧಿಯಲ್ಲಿ ಪರಿಸ್ಥಿತಿ ತಿಳಿಯಾಗಲಿದೆ.

ಪರಿಹಾರ: ಪಚ್ಚೆಯನ್ನು ಪಂಚಧಾತು ಅಥವಾ ಚಿನ್ನದ ಉಂಗುರದಲ್ಲಿ ಧರಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು.

ತುಲಾ ರಾಶಿ: ಖರ್ಚಿನ ಬಗ್ಗೆ ಜಾಗ್ರತೆ

ತುಲಾ ರಾಶಿ: ಖರ್ಚಿನ ಬಗ್ಗೆ ಜಾಗ್ರತೆ

ತುಲಾ ರಾಶಿಯವರಿಗೆ ಬುಧ ಹನ್ನೆರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಬುಧ 12ನೇ ಮನೆಯಲ್ಲಿರುವಾಗ ನೀವು ಯಾವುದೇ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ವಿದೇಶದಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಬಯಸುತ್ತಿದ್ದರೆ ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ, ಆಮದು-ರಫ್ತಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುವವರು, ಅವರು ತಮ್ಮ ವ್ಯವಹಾರದಿಂದ ಅನುಕೂಲಕರ ಅವಕಾಶಗಳನ್ನು ಬಳಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಬಹುದು. ಹನ್ನೆರಡನೇ ಮನೆಯು ಖರ್ಚು ಮತ್ತು ನಷ್ಟಗಳ ಮನೆಯಾಗಿರುವುದರಿಂದ, ಈ ಅವಧಿಯಲ್ಲಿ ಬುಧವು ನಿಮ್ಮ ಖರ್ಚು ಅಥವಾ ನಷ್ಟವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬಹುದು. ಈ ಕಾರಣದಿಂದಾಗಿ ನಿಮ್ಮ ವೆಚ್ಚಗಳು ಮತ್ತು ನಷ್ಟಗಳ ಬಗ್ಗೆ ಮೊದಲಿನಿಂದಲೂ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ.

ಪರಿಹಾರ: ಮನೆಯ ಸ್ತ್ರೀಯರನ್ನು ಗೌರವಿಸಿ.

ವೃಶ್ಚಿಕ ರಾಶಿ: ನಿಮಗೆ ತುಂಬಾ ಶುಭವಾಗಿದೆ

ವೃಶ್ಚಿಕ ರಾಶಿ: ನಿಮಗೆ ತುಂಬಾ ಶುಭವಾಗಿದೆ

ವೃಶ್ಚಿಕ ರಾಶಿಯವರಿಗಡ ಬುಧ ಹನ್ನೊಂದು ಮತ್ತು ಎಂಟನೇ ಮನೆಯ ಅಧಿಪತಿ. ಈಗ ಅದು ನಿಮ್ಮ ಹನ್ನೊಂದನೇ ಮನೆಯಲ್ಲಿ ಇರಲಿದೆ. ಜಾತಕದಲ್ಲಿ, ಹನ್ನೊಂದನೇ ಮನೆಯು ಆರ್ಥಿಕ ಲಾಭ, ಆಸೆ, ಹಿರಿಯ ಒಡಹುಟ್ಟಿದವರು, ತಂದೆ ಇತ್ಯಾದಿಗಳ ಸಂಕೇತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬುಧನು ತನ್ನದೇ ಆದ ಹನ್ನೊಂದನೇ ಮನೆಯಲ್ಲಿ ಹಾದುಹೋಗುವುದರಿಂದ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುವುದರ ಜೊತೆಗೆ ಅವರ ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಇದಲ್ಲದೇ ಕಳೆದ ಕೆಲವು ದಿನಗಳಿಂದ ನಿಮ್ಮ ಜೀವನದಲ್ಲಿ ಹೆಚ್ಚಿದ್ದ ಅನಿಶ್ಚಿತತೆಗಳು ಈಗ ಸಂಪೂರ್ಣವಾಗಿ ಕೊನೆಗೊಳ್ಳಲಿವೆ. ಏಕೆಂದರೆ ಈ ಅವಧಿಯು ನಿಮ್ಮ ಆಸೆಗಳನ್ನು ಪೂರೈಸುವಲ್ಲಿ ಸಹಾಯ ಮಾಡುತ್ತದೆ.

ಈ ಸಮಯವು ವೃಶ್ಚಿಕ ರಾಶಿಯವರಿಗೆ ತಮ್ಮ ಅಣ್ಣ ಮತ್ತು ಚಿಕ್ಕಪ್ಪನ ಬೆಂಬಲವನ್ನು ನೀಡುವಂತೆ ಮಾಡುತ್ತದೆ. ಅಲ್ಲದೆ, ಇದು ನಿಮ್ಮ ಹಣವನ್ನು ಮರಳಿ ಪಡೆಯಲು ಸಾಧ್ಯವಾಗುವ ಅವಧಿಯಾಗಿದೆ. ವೈಯಕ್ತಿಕ ಜೀವನದಲ್ಲಿನ ಸಂದರ್ಭಗಳು ಸಹ ನಿಮಗೆ ಆಹ್ಲಾದಕರವಾಗಿರುತ್ತದೆ. ಕನ್ಯಾ ರಾಶಿಯಲ್ಲಿ ಬುಧ ಸಂಕ್ರಮಿಸುವುದು ವೃಶ್ಚಿಕ ರಾಶಿಯವರಿಗೆ ಶುಭ ಫಲ ನೀಡಲಿದೆ ಎನ್ನಬಹುದು.

ಪರಿಹಾರ: ಸಹೋದರನಿಗೆ ಹಸಿರು ಬಣ್ಣದ ವಸ್ತುವನ್ನು ಉಡುಗೊರೆಯಾಗಿ ನೀಡಿ.

ಧನು ರಾಶಿ: ವೃತ್ತಿ ಜೀವನಕ್ಕೆ ಶುಭ ಸಮಯ

ಧನು ರಾಶಿ: ವೃತ್ತಿ ಜೀವನಕ್ಕೆ ಶುಭ ಸಮಯ

ಧನು ರಾಶಿಯವರಿಗೆ ಬುಧನು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ. ಈಗ ಅಕ್ಟೋಬರ್ 2 ರಂದು, ಬುಧವು ನಿಮ್ಮ ವೃತ್ತಿ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಯಲ್ಲಿ ಸಾಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಬುಧದ ಈ ಸ್ಥಾನದಲ್ಲಿ, ನಿಮ್ಮ ವೃತ್ತಿಜೀವನದಲ್ಲಿ ಮುಂದುವರಿಯಲು ಹಾಗೂ ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಹೊಸ ಚೈತನ್ಯದಿಂದ ಕೂಡಿರುತ್ತೀರಿ. ಏಕೆಂದರೆ ನಿಮ್ಮ ರಾಶಿಯಲ್ಲಿ ಬುಧದ ಈ ಸ್ಥಾನವು ನಿಮಗೆ ಕೆಲಸದ ಕ್ಷೇತ್ರದಲ್ಲಿ ಸಾಕಷ್ಟು ಲಾಭವನ್ನು ತರುತ್ತದೆ. ಈ ಸಮಯದಲ್ಲಿ, ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಪ್ರೋತ್ಸಾಹ ಮತ್ತು ಬೆಂಬಲವನ್ನು ಸಹ ಪಡೆಯುತ್ತೀರಿ. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಈ ಸಮಯದಲ್ಲಿ ಬುಧವು ನಿಮ್ಮ ತಾಯಿಯ ನಾಲ್ಕನೇ ಮನೆಯನ್ನು ನೋಡುತ್ತಾನೆ. ಈ ಸಮಯದಲ್ಲಿ ಕುಟುಂಬದ ವಾತಾವರಣವು ಶಾಂತವಾಗಿ ಮತ್ತು ಅನುಕೂಲಕರವಾಗಿ ಕಾಣುತ್ತದೆ. ಒಟ್ಟಿನಲ್ಲಿ ಧನು ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಈ ಶುಭ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಪರಿಹಾರ: ವ್ಯವಹಾರದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದು ನಿಮಗೆ ಉತ್ತಮವಾಗಿರುತ್ತದೆ.

ಮಕರ ರಾಶಿ: ತಂದೆಯ ಆರೋಗ್ಯದ ಕಡೆ ಗಮನ ನೀಡಿ

ಮಕರ ರಾಶಿ: ತಂದೆಯ ಆರೋಗ್ಯದ ಕಡೆ ಗಮನ ನೀಡಿ

ಮಕರ ರಾಶಿಯವರಿಗೆ ಬುಧ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಈಗ ಬುಧನು ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ ಚಲಿಸಲಿದ್ದಾನೆ. ಈ ಜಾತಕ ಮನೆಯು ಧರ್ಮ, ತಂದೆ, ದೂರ ಪ್ರಯಾಣ, ತೀರ್ಥಕ್ಷೇತ್ರ, ಅದೃಷ್ಟ ಇತ್ಯಾದಿಗಳ ಮನೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬುಧದ ಈ ಸ್ಥಾನವು ಮಕರ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ. ಈ ಅವಧಿಯಲ್ಲಿ ನಿಮ್ಮ ತಂದೆಯು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ತಂದೆಯ ಆರೋಗ್ಯದ ಕಡೆ ಗಮನಹರಿಸಿ.

ಪರಿಹಾರ: ಹಸಿರು ಧಾನ್ಯಗಳನ್ನು ದಾನ ಮಾಡಿ.

ಕುಂಭ ರಾಶಿ: ಸವಾಲಿನಿಂದ ಕೂಡಿರುತ್ತದೆ

ಕುಂಭ ರಾಶಿ: ಸವಾಲಿನಿಂದ ಕೂಡಿರುತ್ತದೆ

ಕುಂಭ ರಾಶಿಯವರಿಗೆ ಬುಧನು ಐದನೇ ಮತ್ತು ಎಂಟನೇ ಮನೆಯ ಅಧಿಪತಿ. ಈಗ ಬುಧನು ಈ ಸಮಯದಲ್ಲಿ ನಿಮ್ಮ ಎಂಟನೇ ಮನೆಯಲ್ಲಿ ಚಲಿಸುತ್ತಿದ್ದಾನೆ. ಜಾತಕದಲ್ಲಿ ಎಂಟನೇ ಮನೆ ದೀರ್ಘಾಯುಷ್ಯ, ಹಠಾತ್ ಘಟನೆಗಳು, ರಹಸ್ಯ ಇತ್ಯಾದಿಗಳನ್ನು ಪ್ರತಿನಿಧಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬುಧನು ಈ ಮನೆಯಲ್ಲಿ ಹಿಮ್ಮೆಟ್ಟಿಸಿದಾಗ, ನಿಮ್ಮ ಜೀವನದಲ್ಲಿ ತುಂಬಾ ಸವಾಲಿನ ಸನ್ನಿವೇಶಗಳು ಹುಟ್ಟಿವೆ.

ಆದರೆ ಇದರ ಹೊರತಾಗಿಯೂ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮಅಜಾಗರೂಕತೆಯಿಂದ, ನೀವು ಚರ್ಮದ ಸಮಸ್ಯೆಗಳಿಗೆ ಗುರಿಯಾಗಬಹುದು. ಕೆಲವರಿಗೆ ಈ ಸಮಯದಲ್ಲಿ ಬೆನ್ನು ಮತ್ತು ಕೈ ನೋವಿನ ಸಮಸ್ಯೆಯೂ ಕಾಡಬಹುದು. ಆದರೆ, ಈ ಬುಧ ಸಂಕ್ರಮಣವು ಸಂಶೋಧನೆ/ಪಿಎಚ್‌ಡಿ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಪರಿಹಾರ: ಮಂಗಳಮುಖಿಯರಿಗೆ ಹಸಿರು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿ.

ಮೀನ ರಾಶಿ : ನಿಮಗೆ ಅನುಕೂಲಕರವಾಗಿದೆ

ಮೀನ ರಾಶಿ : ನಿಮಗೆ ಅನುಕೂಲಕರವಾಗಿದೆ

ಮೀನ ರಾಶಿಯವರಿಗೆ ಬುಧನು ನಾಲ್ಕನೇ ಮತ್ತು ಏಳನೇ ಅಧಿಪತಿ. ಈಗ, ಈ ಸಮಯದಲ್ಲಿ ಅದು ನಿಮ್ಮ ಮದುವೆ, ಜೀವನ ಸಂಗಾತಿ ಮತ್ತು ವ್ಯಾಪಾರ ಪಾಲುದಾರಿಕೆಯ ಏಳನೇ ಮನೆಯಲ್ಲಿ ನಿಮ್ಮ ರಾಶಿಚಕ್ರದ ಮೂಲಕ ಹೋಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮೀನ ರಾಶಿಯವರಿಗೆ ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಬುಧದ ಈ ಸ್ಥಾನವು ಸಾಮಾನ್ಯಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಹೊಂದುತ್ತೀರಿ. ಅಲ್ಲದೆ, ನೀವು ವೈಯಕ್ತಿಕ ಜೀವನದಲ್ಲಿಯೂ ಸಂತೋಷವಾಗಿರುತ್ತೀರಿ.

ಈ ಸಮಯದಲ್ಲಿ ನಿಮ್ಮ ಎಲ್ಲಾ ಚಿಂತೆಗಳನ್ನು ತೊಡೆದುಹಾಕಲು ಸಾಧ್ಯವಾಗುವುದು. ಏಕೆಂದರೆ ಕನ್ಯಾರಾಶಿಯಲ್ಲಿ ಬುಧ ಸಂಚಾರವು ನಿಮ್ಮ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅನುಕೂಲಕರವಾಗಿದೆ.

ಪರಿಹಾರ: ಬುಧ ಬೀಜ ಮಂತ್ರ ಪಠಿಸಿ

English summary

Mercury Direct in Virgo 02 October 2022 Effects and Remedies on Zodiac Signs in Kannada

Mercury Direct in Virgo will take place on October 02, 2022. Let us now know in detail the astrological effect and remedies of Mercury Direct in Virgo on all the zodiac signs.
X
Desktop Bottom Promotion